ಟಿಕೆಟ್ ಸಿಗದಿದ್ದರೂ ಬಿಜೆಪಿ ಬಿಡಲ್ಲ: ಎಸ್.ಎ.ರಾಮದಾಸ್
Team Udayavani, Feb 4, 2018, 6:35 AM IST
ಮೈಸೂರು: ನನಗೆ ಹೆತ್ತ ತಾಯಿ ಹಾಗೂ ಬಿಜೆಪಿ ಎರಡೂ ಒಂದೇ, ಹೀಗಾಗಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಾನು ಜೆಡಿಎಸ್ ಸೇರುತ್ತೇನೆಂಬುದು ವದಂತಿ ಅಷ್ಟೇ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 25 ವರ್ಷಗಳಿಂದಲೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ, ಸ್ವಯಂ ಸೇವಕನಾಗಿ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಎಲ್ಲೋ ಇದ್ದ ನನ್ನನ್ನು ಬಿಜೆಪಿ ಮಂತ್ರಿ ಮಾಡಿದ್ದು, ನಾನು ನನ್ನ ತಂದೆ-ತಾಯಿಯನ್ನು ಪ್ರೀತಿಸುವಷ್ಟೇ ಬಿಜೆಪಿಯನ್ನು ಪ್ರೀತಿಸುತ್ತೇನೆ. ಹೀಗಾಗಿ ಪಕ್ಷ ಬದಲಿಸುವ ಯಾವುದೇ ಪ್ರಶ್ನೆ ಇಲ್ಲ, ಜೀವನದ ಕೊನೆ ಉಸಿರು ಇರುವವರೆಗೂ ಪಕ್ಷ ಬಿಡುವುದಿಲ್ಲ. ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರೂ ಪûಾಂತರಿಯಾಗದೆ ಮಾತೃಪಕ್ಷದಲ್ಲಿಯೇ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.