ರಂಗದ ಮೇಲೆಯೇ ಜೀವನರಂಗದಿಂದ ನಿರ್ಗಮನ


Team Udayavani, Feb 4, 2018, 11:50 AM IST

Geethanandan11.jpg

ಒಂದು ಕಾರ್ಯಕ್ಷೇತ್ರದಲ್ಲಿ ತನ್ನನ್ನು ತಾನು ಸಮರ್ಪಿಸಿ ಕೊಂಡು ಬದುಕುವುದು ಮಹತ್ತರವಾದದ್ದೇ. ಆದರೆ, ಕೆಲವರದ್ದು ಎಂಥ ಸಮರ್ಪಣೆ ಎಂದರೆ ಅದೇ ಕಾರ್ಯಕ್ಷೇತ್ರದಲ್ಲಿ ಸಾಯಬೇಕೆಂದು ಬಯಸುತ್ತಾರೆ! ಆಫ್ರಿಕಾದಲ್ಲಿ ಪಾಪಾ ವೆಂಬಾ ಎಂಬ ಸುಪ್ರಸಿದ್ಧ ಸಂಗೀತಗಾರನೊಬ್ಬನಿದ್ದ. ವೇದಿಕೆಯ ಮೇಲೆ ಹಾಡುತ್ತಲೇ ತನ್ನ ಬದುಕಿಗೂ ಮಂಗಲಪದ ಹಾಡಿದ! ಜೀನ್‌ ರೋಶೆ ಫ್ರಾನ್ಸ್‌ನ ಗನ್ನತ್‌ ಅಂತರಾಷ್ಟ್ರೀಯ ಜನಪದ ಉತ್ಸವದ ರೂವಾರಿ. ಕಳೆದ ವರ್ಷ ಉತ್ಸವದ 44ನೆಯ ಆವೃತ್ತಿ ನಡೆಯುತ್ತಿದ್ದಾಗ ವೇದಿಕೆಯ ಮೇಲೆ ಕುಸಿದು ಬಿದ್ದು ಮರಣವನ್ನಪ್ಪಿದ ಶ್ರೇಷ್ಠ ಕಲಾನಿರ್ದೇಶಕ ಆತ. ಕೂಡಿಯಾಟ್ಟಂನ ಹಿಮ್ಮೇಳವಾದಕ ಸುಬ್ರಮಣಿಯನ್‌ ಪೊಟ್ಟಿ ತಮ್ಮ ಪತ್ನಿ ಮಾರ್ಗಿ ಸತಿ ವೇದಿಕೆಯ ಮೇಲೆ ಅಭಿನಯಿಸುತ್ತಿರುವಾಗ ಇಡಕ್ಕ ವಾದಕರಾಗಿದ್ದರು. ಅಂಥ ಸಂದರ್ಭದಲ್ಲೊಮ್ಮೆ ವೇದಿಕೆಯ ಮೇಲೆ ಕುಸಿದು ಬಿದ್ದು ಇಹಲೋಕವನ್ನು ತ್ಯಜಿಸಿದ್ದರು. ಇತ್ತೀಚೆಗೆ ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳದಲ್ಲಿಯೇ ಬಿದ್ದು ಕೊನೆಯುಸಿರೆಳೆದದ್ದು ಎಲ್ಲೆಡೆ ದೊಡ್ಡ ಸುದ್ದಿಯಾಗಿತ್ತು.

ಜಗತ್ತಿನಾದ್ಯಂತ ಅನೇಕ ಕಲಾವಿದರು ವೇದಿಕೆಯ ಮೇಲೆ ಮರಣ ಹೊಂದಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಅವರು ವೇದಿಕೆಯ ಮೇಲೆ ಸಾವಿರಾರು ಮಂದಿಯ ವೀಕ್ಷಣೆಯಲ್ಲಿ ಮೈಮರೆಯುವುದು ಮತ್ತು ತಾವು ಅಭಿನಯಿಸುವಷ್ಟು ಹೊತ್ತು ವಿಶ್ರಾಂತಿ ಪಡೆಯಲು ಅವಕಾಶವಿಲ್ಲದಿರುವುದು. ರಂಗದ ಮೇಲೆ ಹೋದ ಮೇಲೆ ಅದೊಂದು ರೀತಿಯಲ್ಲಿ ಬದ್ಧತೆಯ ದೀಕ್ಷೆ. ಪೂರ್ಣಗೊಳಿಸದೆ ಮರಳುವ ಹಾಗಿಲ್ಲ. ಜೊತೆಗೆ ವೇಷಭೂಷಣಗಳನ್ನು ಧರಿಸಿಕೊಂಡೇ ಕುಸಿದರೆ ತತ್‌ಕ್ಷಣ ಚಿಕಿತ್ಸೆಯೂ ಕಷ್ಟವೇ.

ಕಲಾಮಂಡಲಂ ಗೀತಾನಂದನ್‌ ವೇದಿಕೆಯ ಮೇಲೆ ಹಿಮ್ಮೇಳದವರಿಗೆ ಬಾಗಿ ನಮಿಸುತ್ತ “ಇಹಲೋಕದ ವೇಷ ಕಳಚಿದುದು’ ವಾಟ್ಸಾಪ್‌ನಲ್ಲಿ ವೈರಲ್‌ ಆಗಿತ್ತು. ವಿಶ್ವವಿಖ್ಯಾತ ಒಟ್ಟಂತುಳ್ಳಲ್‌ ಕಲಾವಿದ ಗೀತಾನಂದನ್‌ ಅವರ ಸಾವು ಘನತೆಯದ್ದಾಗಿದ್ದರೂ ವೀಡಿಯೋದಲ್ಲಿ ನೋಡಿದವರಿಗೆ ಆ ಘಟನೆ ಬಹುಕಾಲ ಕಾಡುವುದು ಖಚಿತ.

ಇತ್ತೀಚೆಗೆ, ಜನವರಿ 28ರಂದು ಗೀತಾನಂದನ್‌ ಅವರು ತ್ರಿಶೂರ್‌ ಜಿಲ್ಲೆಯ ಇರಿಂಞಾಲಕುಡದ ಸಮೀಪ ಅವಿತ್ತತೂರ್‌ನ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕಥಕಳಿಯ ಏಕವ್ಯಕ್ತಿ ಪ್ರದರ್ಶನವಾದ ಓಟ್ಟನ್‌ತುಳ್ಳಲ್‌ನ್ನು ಪ್ರದರ್ಶಿಸುತ್ತಿದ್ದರು. ಹೃದಯಸಂಬಂಧಿ ಕಾಯಿಲೆಯಿಂದಾಗಿ ಅವರು ಪ್ರದರ್ಶನದಲ್ಲಿ ಭಾಗವಹಿಸದಂತೆ ವೈದ್ಯರು ಸೂಚಿಸಿದ್ದರಂತೆ. ಆದರೆ, ಕಲೆೆಯ ಸೆಳೆತ ಎಂಬುದು ಅಫೀಮಿನಂತೆ. ಬೇಡವೆಂದರೂ ಮತ್ತೆ ಮತ್ತೆ ಸೆಳೆಯುತ್ತದೆ. ಜೊತೆಗೆ “ಸಾಯುವುದಿದ್ದರೆ ವೇದಿಕೆಯ ಮೇಲೆ’ ಎಂಬ ಸಾತ್ತಿ$Ìಕ ಸಂಕಲ್ಪವೂ ಇರುತ್ತದೆ. ಅಂತಕನ ದೂತರಿಗೆ ಕಿಂಚಿತ್ತೂ ಕರುಣೆಯಿಲ್ಲ. ಪ್ರದರ್ಶನ ಮುಗಿಯುವವರೆಗೂ ಕಾಯದೆ ಗೀತಾನಂದನ್‌ರನ್ನು ಕಾಣದ ಲೋಕಕ್ಕೆ ಕರೆದೊಯ್ದಿದ್ದಾರೆ.

“ಓಟ್ಟನ್‌ತುಳ್ಳಲ್‌’ ಎಂದರೆ ಏಕವ್ಯಕ್ತಿ ಪ್ರದರ್ಶಿಸುವ ಒಂದು ರೀತಿಯ ಕಾವ್ಯನಾಟಕ‌. ನಾಟ್ಯಶಾಸ್ತ್ರಕ್ಕೆ ಅನುಗುಣವಾದ ರಂಗಪ್ರಸ್ತುತಿ ಇದು. 18ನೆಯ ಶತಮಾನದಲ್ಲಿ ಕುಂಜನ್‌ ನಂಬಿಯಾರರಿಂದ ಈ ರಂಗಪ್ರಯೋಗ ರೂಪುಗೊಂಡಿತ್ತು. ಜವಹರಲಾಲ್‌ ನೆಹರೂರವರು ಇದನ್ನು ಮೆಚ್ಚಿ “ಬಡವನ ಕಥಕಳಿ’ ಎಂದು ಕೊಂಡಾಡಿದ್ದರಂತೆ. ಬಡತನದ ಹಿನ್ನೆಲೆಯ ಗೀತಾನಂದನ್‌ 1974ರಲ್ಲಿ ತ್ರಿಶೂರಿನ “ಕಲಾಮಂಡಲಂ’ಗೆ ವಿದ್ಯಾರ್ಥಿಯಾಗಿ ಸೇರಿದ್ದರು. 1983ರಿಂದ ಅಲ್ಲಿಯೇ ಗುರುಗಳಾಗಿ ಸೇರಿ 25 ವರ್ಷ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 9ರ ಹರೆಯದಲ್ಲಿಯೇ ತುಳ್ಳಲ್‌ ಕಲಾವಿದರಾಗಿ ರಂಗಪ್ರವೇಶಿಸಿದ ಗೀತಾನಂದನ್‌ರಿಗೆ ಸುಮಾರು 5000 ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಇದೆ. ಯುವಕರಲ್ಲಿ “ತುಳ್ಳಲ್‌’ ಕಲೆಯ ಬಗ್ಗೆ ಅಭಿಮಾನ, ಆಸಕ್ತಿ ಮೂಡಿಸುವುದರ ಜೊತೆಗೆ ಈ ಕಲೆಯನ್ನು ವಿಶ್ವಪರ್ಯಟನ ಮಾಡಿಸಿದ್ದರು. 1984ರಲ್ಲಿ ಫ್ರಾನ್ಸ್‌ನ ಹಲವೆಡೆಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿ ಅಲ್ಲಿನ ಸಹೃದಯರ ಮನಗೆದ್ದಿದ್ದರು. ಗೀತಾನಂದನ್‌ ಸಿನೆಮಾ ನಟರೂ ಹೌದು.

ಮೋಹನ್‌ಲಾಲ್‌ರಂಥ ನಟರೊಂದಿಗೆ ಅಭಿನಯಿಸಿದ್ದಲ್ಲದೆ, ಸುಮಾರು 30 ಸಿನೆಮಾಗಳಲ್ಲಿ ಅವರು ಪಾತ್ರವಹಿಸಿದ್ದರು. “ತುಳ್ಳಲ್‌’ ಕಲೆಯನ್ನು ಸಂಪ್ರದಾಯಕ್ಕಿಂತ ಭಿನ್ನವಾಗಿ ಸಂಗೀತಪ್ರಧಾನವಾಗಿ ಪ್ರಸ್ತುತಪಡಿಸಿದ ಅವರ ಪ್ರಯೋಗ ಯಶಸ್ವಿಯಾಗಿತ್ತು.
ಗೀತಾನಂದನ್‌ರ ಅಭಿನಯ ಪ್ರತಿಭೆಯನ್ನು ಕಂಡವರಿಗೆ ಅವರ ಸಾವನ್ನು ಅರಗಿಸಿಕೊಳ್ಳುವುದು ತುಂಬ ಕಷ್ಟ.

– ವಿ. ಜಯರಾಜನ್‌ ತ್ರಿಕ್ಕರಿಪುರ್‌

ಟಾಪ್ ನ್ಯೂಸ್

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.