ಸ್ಕೈವಾಕ್ ಲಿಫ್ಟ್ನಲ್ಲಿ ಸಿಲುಕಿ ಪರದಾಡಿದ ಸಾರ್ವಜನಿಕರು
Team Udayavani, Feb 4, 2018, 12:15 PM IST
ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಮೇಲ್ಸೇತುವೆ ಲಿಫ್ಟ್ ಬಾಗಿಲು ತೆರೆದುಕೊಳ್ಳದ ಹಿನ್ನೆಲೆಯಲ್ಲಿ ಲಿಫ್ಟ್ನೊಳಗಿದ್ದ ಮೂವರು ಪರದಾಡಿದ ಘಟನೆ ಶನಿವಾರ ನಡೆದಿದೆ.
ಎಲ್‌ಐಸಿ ಕೇಂದ್ರ ಕಚೇರಿ ಜಂಕ್ಷನ್ ರಸ್ತೆ ದಾಟಲು ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದ್ದು, ಎರಡು ಕಡೆಗಳಲ್ಲಿ ಲಿಫ್ಟ್ಗಳನ್ನು ಅಳವಡಿಸಲಾಗಿದೆ. ಆದರೆ, ಶನಿವಾರ ಸಂಜೆ 6.30ರ ಸುಮಾರಿಗೆ ಮೂವರು ಲಿಫ್ಟ್ನಲ್ಲಿ ಮೇಲ್ಸೇತುವೆ ಮೇಲ್ಭಾಗಕ್ಕೆ ತೆರಳಿದ್ದು, ಈ ವೇಳೆ ಬಾಗಿಲುಗಳು ತೆರೆದುಕೊಳ್ಳದೆ ಸುಮಾರು 20 ನಿಮಿಷ ಆತಂಕಕ್ಕೆ ಒಳಗಾದರು.
ಇದರಿಂದ ಲಿಫ್ಟ್ನಲ್ಲಿ ಸಿಲುಕಿದವರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಯಾವುದೇ ಆಪರೇಟರ್ ಹಾಗೂ ತುರ್ತು ಸಂದರ್ಭದಲ್ಲಿ ಕರೆ ಮಾಡಬೇಕಾದವರ ಸಂಖ್ಯೆ ಇಲ್ಲದೆ ತೊಂದರೆ ಅನುಭವಿಸಿದ್ದಾರೆ. ಕೊನೆಗೆ ಲಿಫ್ಟ್ ಬಾಗಿಲುಗಳನ್ನು ಬಡಿಯಲಾರಂಭಿಸಿದ್ದು, ಮೇಲ್ಸೇತುವೆಯಲ್ಲಿ ನಡೆದು ಹೋಗುತ್ತಿದ್ದವರು ಶಬ್ದ ಕೇಳಿ ಕೂಡಲೇ ಪಾಲಿಕೆಯ ಕೇಂದ್ರ ಕಚೇರಿಗೆ ದೂರು ನೀಡಿದ್ದಾರೆ.
ಎಚ್ಚೆತ್ತ ಪಾಲಿಕೆ ಸಿಬ್ಬಂದಿ, ಲಿಫ್ಟ್ ದುರಸ್ತಿ ಸಿಬ್ಬಂದಿಯನ್ನು ಕರೆತಂದು ಬಾಗಿಲುಗಳನ್ನು ತೆಗೆಸಿದ್ದಾರೆ. ಸುಮಾರು 20 ನಿಮಿಷಗಳು ಲಿಫ್ಟ್ನಲ್ಲಿ ಸಿಲುಕಿದ್ದ ಮೂವರು ಹೊರಬಂದ ನಿಟ್ಟುಸಿರು ಬಿಟ್ಟಿದ್ದು, ಕಳಪೆ ಲಿಫ್ಟ್ ಅಳವಡಿಕೆ ಮಾಡಿದ ಗುತ್ತಿಗೆದಾರರ ವಿರುದ್ಧ ಹರಿಹಾಯ್ದಿದಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗದಂತೆ ಎಚ್ಚರ ವಹಿಸುವಂತೆ ಪಾಲಿಕೆ ಸಿಬ್ಬಂದಿಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.