ಅಂಡರ್-19 ವಿಶ್ವಕಪ್ ಐಸಿಸಿ ತಂಡದಲ್ಲಿ ಭಾರತದ ಐವರು
Team Udayavani, Feb 5, 2018, 6:25 AM IST
ದುಬಾೖ: ಭಾರತದ 4ನೇ ಜಯಭೇರಿಯೊಂದಿಗೆ ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಗಿದಿದೆ. ಸಂಪ್ರದಾಯದಂತೆ, ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರ ತಂಡವನ್ನು ಐಸಿಸಿ ಪ್ರಕಟಿಸಿದೆ.
ಇದರಲ್ಲಿ ನಾಯಕ ಪೃಥ್ವಿ ಶಾ, ಶುಭಂ ಗಿಲ್ ಸೇರಿದಂತೆ ಭಾರತದ ಸರ್ವಾಧಿಕ 5 ಮಂದಿ ಆಟಗಾರರು ಸ್ಥಾನ ಸಂಪಾದಿಸಿದ್ದಾರೆ.
ಉಳಿದ ಮೂವರು ಭಾರತೀಯರೆಂದರೆ ಆರಂಭಕಾರ ಮನ್‌ಜೋತ್ ಕಾಲ್ರಾ , ಬೌಲರ್‌ಗಳಾದ ಅನುಕೂಲ್ ರಾಯ್ ಮತ್ತು ಕಮಲೇಶ್ ನಾಗರಕೋಟಿ. ರಾಯ್ ಈ ಕೂಟದಲ್ಲಿ ಸರ್ವಾಧಿಕ 14 ವಿಕೆಟ್ ಸಂಪಾದಿಸಿದ ಮೂವರು ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. 14 ವಿಕೆಟ್ ಕಿತ್ತ ಉಳಿದಿಬ್ಬರೆಂದರೆ ಕೆನಡಾದ ಫೈಸಲ್ ಜಮಖಂಡಿ ಮತ್ತು ಅಫ್ಘಾನಿಸ್ಥಾನದ ಕೈಸ್ ಅಹ್ಮದ್.
ವಾನ್ ಟಂಡರ್ ನಾಯಕ
ಅಚ್ಚರಿಯೆರಂದರೆ ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ ಅವರಿಗೆ ಈ ತಂಡದ ನಾಯಕತ್ವ ಲಭಿಸದಿರುವುದು. ಇದು ದಕ್ಷಿಣ ಆಫ್ರಿಕಾದ ರೆನಾರ್ಡ್ ವಾನ್ ಟಂಡರ್ ಪಾಲಾಗಿದೆ. ದಕ್ಷಿಣ ಆಫ್ರಿಕಾದರೇ ಆದ ವಾಂಡಿಲ್ ಮಕ್ವೆ ಟು ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.
“ವಾನ್ ಟಂಡರ್ 6 ಪಂದ್ಯಗಳಿಂದ 348 ರನ್ ಬಾರಿಸಿದ್ದಾರೆ. ಕೀನ್ಯಾ ವಿರುದ್ಧ ಅವರು 143 ರನ್ ಹೊಡೆದಿದ್ದರು. ಹೀಗಾಗಿ ನಾಯಕರ ಆಯ್ಕೆಯ ವೇಳೆ ವಾನ್ ಟಂಡರ್ ಅವರನ್ನೇ ಪರಿಗಣಿಸಲಾಯಿತು’ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಟಾಪ್-3 ಯಾದಿಯಲ್ಲಿ ಭಾರತದ ಮೂವರೇ ಅಲಂಕರಿಸಿದ್ದಾರೆ. ಪೃಥ್ವಿ ಶಾ-ಮನ್‌ಜೋತ್ ಕಾಲ್ರಾ ಆರಂಭಿಕರಾಗಿದ್ದು, ವನ್‌ಡೌನ್‌ನಲ್ಲಿ ಶುಭಮನ್ ಗಿಲ್ ಇದ್ದಾರೆ. ಕಾಲ್ರಾ ಫೈನಲ್‌ನಲ್ಲಿ ಅಜೇಯ 101 ರನ್ ಬಾರಿಸಿ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಗಿಲ್ ಕ್ರಮವಾಗಿ 63, ಅಜೇಯ 90, 86, ಅಜೇಯ 102 ಹಾಗೂ 31 ರನ್ ಸಹಿತ ಒಟ್ಟು 372 ರನ್ ಪೇರಿಸಿದ್ದರು. ಈ ಸರಣಿಯ ಸರ್ವಾಧಿಕ ರನ್ ಸಾಧಕರ ಯಾದಿಯಲ್ಲಿ ಗಿಲ್ ಅವರಿಗೆ ದ್ವಿತೀಯ ಸ್ಥಾನ. ವೆಸ್ಟ್ ಇಂಡೀಸಿನ ಅಲಿಕ್ ಅತನೇಜ್ 418 ರನ್ನುಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ. ಆದರೆ ಅತನೇಜ್ ಅವರಿಗೆ ಐಸಿಸಿ ತಂಡದ ಯಾದಿಯಲ್ಲಿ ಲಭಿಸಿರುವುದು 12ನೇ ಆಟಗಾರನ ಸ್ಥಾನ.
ಐಸಿಸಿ ಅಂಡರ್-19 ಸಾಧಕರ ತಂಡ
1. ಪೃಥ್ವಿ ಶಾ (ಭಾರತ, 261 ರನ್)
2. ಮನ್‌ಜೋತ್ ಕಾಲ್ರಾ (ಭಾರತ, 252 ರನ್)
3. ಶುಭಮನ್ ಗಿಲ್ (ಭಾರತ, 372 ರನ್)
4. ಫಿಲ್ ಅಲೆನ್ (ನ್ಯೂಜಿಲ್ಯಾಂಡ್, 338 ರನ್)
5. ರೆನಾರ್ಡ್ ವಾನ್ ಟಂಡರ್ (ದಕ್ಷಿಣ ಆಫ್ರಿಕಾ, ನಾಯಕ, 348 ರನ್)
6. ವಾಂಡಿಲ್ ಮಕೆಟುÌ (ವಿ.ಕೀ., 184 ರನ್, 11 ಕ್ಯಾಚ್)
7. ಅನುಕೂಲ್ ರಾಯ್ (ಭಾರತ, 14 ವಿಕೆಟ್)
8. ಕಮಲೇಶ್ ನಾಗರಕೋಟಿ (ಭಾರತ, 9 ವಿಕೆಟ್)
9. ಗೆರಾಲ್ಡ್ ಕೋಝಿ (ದಕ್ಷಿಣ ಆಫ್ರಿಕಾ, 8 ವಿಕೆಟ್)
10. ಕೈಸ್ ಅಹ್ಮದ್ (ಅಫ್ಘಾನಿಸ್ಥಾನ, 14 ವಿಕೆಟ್)
11. ಶಾಹೀನ್ ಅಫ್ರಿದಿ (ಪಾಕಿಸ್ಥಾನ, 12 ವಿಕೆಟ್)
12. ಅಲಿಕ್ ಅತನೇಜ್ (ವೆಸ್ಟ್ ಇಂಡೀಸ್, 418 ರನ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.