ಪೈ ಇಂಟರ್‌ನ್ಯಾಷನಲ್‌ನಿಂದ 30 ಲಕ್ಕಿ ಗ್ರಾಹಕರಿಗೆ ಹುಂಡೈ ಕಾರು


Team Udayavani, Feb 5, 2018, 12:26 PM IST

pai.jpg

ಬೆಂಗಳೂರು: ಪೈ ಇಂಟರ್‌ನ್ಯಾಷನಲ್‌ ಮೆಗಾ ಫೆಸ್ಟಿವಲ್‌ ಸೇಲ್‌ನ ಲಕ್ಕಿ ಡ್ರಾ ಮೂಲಕ ಆಯ್ಕೆಯಾದ 30 ಅದೃಷ್ಟಶಾಲಿ ಗ್ರಾಹಕರಿಗೆ ಭಾನುವಾರ ಹ್ಯುಂಡೈ ಕಾರುಗಳನ್ನು ಬಹುಮಾನವಾಗಿ ನೀಡಲಾಯಿತು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್‌ ಪೈ ಅವರು ಅದೃಷ್ಟಶಾಲಿಗಳಿಗೆ ಬಹುಮಾನಗಳನ್ನು ವಿತರಿಸಿದರು. 

ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ 10 ಅದೃಷ್ಟಶಾಲಿ ಗ್ರಾಹಕರಿಗೆ ಮೆಗಾ ಬಂಪರ್‌ ಕೊಡುಗೆಯಾಗಿ “ಹ್ಯುಂಡೈ ಎಕ್ಸೆಂಟ್‌’, 10 ಗ್ರಾಹಕರಿಗೆ ಸೂಪರ್‌ ಬಂಪರ್‌ ಕೊಡುಗೆಯಾಗಿ “ಹ್ಯುಂಡೈ ಗ್ರಾಂಡ್‌ ಐ10′ ಹಾಗೂ 10 ಮಂದಿಗೆ ಬಂಪರ್‌ ಕೊಡುಗೆಯಾಗಿ “ಹ್ಯುಂಡೈ ಇಯಾನ್‌’ ಕಾರುಗಳನ್ನು ನೀಡಲಾಯಿತು.

ಇದರೊಂದಿಗೆ 320 ಗ್ರಾಹಕರಿಗೆ ಮೊದಲ ಬಹುಮಾನವಾಗಿ 50 ಸಾವಿರ ರೂ. ಹಾಗೂ 2ನೇ ಬಹುಮಾನವಾಗಿ 320 ಮಂದಿಗೆ 25 ಸಾವಿರ ಮೌಲ್ಯದ ಉಚಿತ ಶಾಪಿಂಗ್‌ ಕೂಪನ್‌ಗಳನ್ನು ನೀಡಲಾಯಿತು. ಈ ವೇಳೆ ಮಾತನಾಡಿದ ಸಂಸ್ಥೆಯ ಎಂಡಿ ರಾಜಕುಮಾರ್‌ ಪೈ, ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಲಕ್ಕಿ ಡ್ರಾ ಬಹುಮಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಈ ಹಿಂದೆ ವರ್ಷಕ್ಕೆ ಒಮ್ಮೆ ಮಾತ್ರ ಈ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೀಗ ವರ್ಷಕ್ಕೆ 4 ಬಾರಿ ನಡೆಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ದೊಡ್ಡ ಮೊತ್ತದ ಉಡುಗೊರೆ ಗ್ರಾಹಕರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಲಕ್ಕಿ ಡ್ರಾ ನಡೆಸಲಾಗುತ್ತಿದ್ದು, ಪಾರದರ್ಶಕ ರೀತಿಯಲ್ಲಿ ಅದೃಷ್ಟಶಾಲಿಗಳ ಆಯ್ಕೆ ಮಾಡಲಾಗುತ್ತದೆ. 2000ರಲ್ಲಿ ಕೇವಲ 1 ಮಳಿಗೆಯೊಂದಿಗೆ ಆರಂಭಗೊಂಡ ಸಂಸ್ಥೆ,

ಇಂದು ರಾಜ್ಯದಲ್ಲಿ 94 ಮಳಿಗೆಗಳು, ತೆಲಂಗಾಣದಲ್ಲಿ 20 ಹಾಗೂ ಆಂಧ್ರದಲ್ಲಿ 1 ಮಳಿಗೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಿದೆ. ಅದರಂತೆ ಮುಂದಿನ ಆರ್ಥಿಕ ವರ್ಷದಲ್ಲಿ ಮಳಿಗೆಗಳ ಸಂಖ್ಯೆಯನ್ನು 150ಕ್ಕೆ ಹೆಚ್ಚಿಸುವ ಗುರಿಯಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ 1,800 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದರು.

ಜನರಿಗೆ ಕೈಗೆಟುಕುವ ದರದಲ್ಲಿ ಗೃಹಬಳಕೆ ವಸ್ತುಗಳನ್ನು ತಲುಪಿಸುವ ಉದ್ದೇಶ ಸಂಸ್ಥೆಯದಾಗಿದೆ. ಗ್ರಾಹಕರು, ಸಿಬ್ಬಂದಿ, ವಿತರಕರು ಸೇರಿ ಸಂಸ್ಥೆಗೆ ಸೇರುವ ಎಲ್ಲರ ಹಿತ ಕಾಪಾಡುವ ಹೊಣೆಯಿದೆ. ಅದರಂತೆ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಹಾಗೂ ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಂಸ್ಥೆ ತೊಡಗಿಕೊಂಡಿದೆ.

ಪ್ರಮುಖವಾಗಿ ಶಿಕ್ಷಣ, ಹಿರಿಯ ನಾಗರಿಕರು ಹಾಗೂ ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕಿ ಮೀನಾ ರಾಜಕುಮಾರ್‌ ಪೈ, ನಿರ್ದೇಶಕರಾದ ಗುರುಪ್ರಸಾದ್‌ ಪೈ, ಅಜಿತ್‌ಕುಮಾರ್‌ ಪೈ, ಪುಷ್ಪಾ ಪೈ ಹಾಗೂ ಉತ್ತಮ್‌ ಕುಮಾರ್‌ ಪೈ ಹಾಜರಿದ್ದರು.

ಹೊಸ ವರ್ಷದ ಲಕ್ಕಿ ಡ್ರಾ: ಹೊಸ ವರ್ಷದ ಸೂಪರ್‌ ಸೇಲ್‌ ಅವಧಿಯ ಕ್ರಿಸ್‌ಮಸ್‌, ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಸೇಲ್‌ಗ‌ಳ ಲಕ್ಕಿ ಡ್ರಾದ ಅದೃಷ್ಟಶಾಲಿ ಆಯ್ಕೆಯನ್ನು ಭಾನುವಾರ ನಡೆಸಲಾಯಿತು. ಮೊದಲ ಬಹುಮಾನವಾಗಿ 100 ಅದೃಷ್ಟಶಾಲಿಗಳಿಗೆ 1 ಲಕ್ಷ ರೂ. ಮೌಲ್ಯದ ಬಂಗಾರ, 2ನೇ ಬಹುಮಾನವಾಗಿ 100 ಗ್ರಾಹಕರಿಗೆ 50 ಸಾವಿರ ರೂ. ಮೌಲ್ಯದ ಬಂಗಾರ, 3ನೇ ಬಹುಮಾನವಾಗಿ 100 ಮಂದಿಗೆ, 5 ಸಾವಿರ ರೂ. ಮೌಲ್ಯದ ಬಂಗಾರ, 4ನೇ ಬಹುಮಾನವಾಗಿ 5 ಸಾವಿರ ಗ್ರಾಹಕರಿಗೆ ಹಾಗೂ 5ನೇ ಬಹುಮಾನವಾಗಿ 50 ಸಾವಿರ ಮಂದಿಗೆ 500 ರೂ.ಗಳ ಉಚಿತ ಶಾಪಿಂಗ್‌ ಕೂಪನ್‌ಗಳಿಗೆ ವಿಜೇತರನ್ನು ಆಯ್ಕೆ ಮಾಡಲಾಯಿತು.

ಟಾಪ್ ನ್ಯೂಸ್

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

1-horoscope

Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

sanjeev-ramya

Ramya: ಗೆಳೆಯನ ಜತೆಗಿನ ರಮ್ಯಾ ಫೋಟೋ ವೈರಲ್‌

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.