ಪರಿಸರ ಮಾಲಿನ್ಯಕ್ಕಿಂತ ಮಾತಿನ ಮಾಲಿನ್ಯ ಹೆಚ್ಚು
Team Udayavani, Feb 5, 2018, 12:27 PM IST
ಬೆಂಗಳೂರು: ಪರಿಸರ ಮಾಲಿನ್ಯಕ್ಕಿಂತ ಮಾತಿನ ಮಲಿನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಲೇಖಕಿ ಡಾ.ವಿಜಯಾ ಬೇಸರ ವ್ಯಕ್ತಪಡಿಸಿದರು. ನಗರದ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಭಾನುವಾರ ಸಾವಣ್ಣ ಪ್ರಕಾಶನ ಹಮ್ಮಿಕೊಂಡಿದ್ದ ಪ್ರಕಾಶ್ ರೈ ಅವರ “ಇರುವುದೆಲ್ಲವ ಬಿಟ್ಟು…’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲರೂ ಪರಿಸರ ಮಾಲಿನ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ವಾಸ್ತವವಾಗಿ ಇದಕ್ಕಿಂತ ಮಾತಿನ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಮಲೀನತೆಯನ್ನು ಗೂಡಿಸಿಹಾಕುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಯುವ ಮನಸ್ಸುಗಳು ಒಂದಾಗಬೇಕಿದೆ ಎಂದು ಸೂಚ್ಯವಾಗಿ ಹೇಳಿದರು.
ಅಸಾಹಿತ್ಯಿಕದಿಂದ ಸಾಹಿತ್ಯ: ಕವಿ ಜಯಂತ್ ಕಾಯ್ಕಿಣಿ ಮಾತನಾಡಿ, ಬದುಕು ಅಸಾಹಿತ್ಯಿಕವಾಗಿದ್ದು, ಅದನ್ನು ವಿಚಾರಪರತೆಯಿಂದ ಸಾಹಿತ್ಯಿಕಗೊಳಿಸಬೇಕು. ಆಗ ಮಾತ್ರ ಆ ಸಾಹಿತ್ಯ ಸಜೀವಗೊಳ್ಳುತ್ತದೆ. ಅಸಾಹಿತ್ಯಿಕ ಬದುಕನ್ನು ವಿವಿಧ ರೀತಿಗಳಲ್ಲಿ ಹಿಡಿದಿಡುವ ಪ್ರಯತ್ನ ಯಾವಾಗಲೂ ನಡೆಯುತ್ತಿರುತ್ತದೆ.
ಈ ಅನುಭವದಿಂದಲೇ ಸಾಹಿತ್ಯ ಬರಬೇಕು. ಹೀಗೆ ರೂಪುಗೊಳ್ಳುವ ಸಾಹಿತ್ಯ ಸಜೀವವಾಗಿರುತ್ತದೆ. ಇಲ್ಲದಿದ್ದರೆ, ಒತ್ತಾಯಪೂರ್ವಕವಾದ ಸಾಹಿತ್ಯ ಹೊರಬರುತ್ತದೆ ಎಂದು ಹೇಳಿದರು. ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಪುಸ್ತಕ ಬಿಡುಗಡೆ ಮಾಡಿದರು. ನಟರಾದ ಸುದೀಪ್, ಶ್ರುತಿ ಹರಿಹರನ್, ಅಚ್ಯುತ ಮಾತನಾಡಿದರು. ನಟ ಪ್ರಕಾಶ್ ರೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ
Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು
1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್ ಹುಕುಂ ಚೀಟಿ
Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ
GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.