ಹೂವು ಹೊನ್ನು! ಕೈ ಹಿಡಿದ ಸುಗಂಧರಾಜ, ಸೇವಂತಿಗೆ 


Team Udayavani, Feb 5, 2018, 3:05 PM IST

sugandaraja.jpg

ಬರ ಮತ್ತು ಬಿರುಬಿಸಿಲಿಗೆ ಹೆಸರಾದ ಪ್ರದೇಶ ಜಗಳೂರು. ಇಲ್ಲಿ ನೀರು ಸಿಗದ ಕಾರಣದಿಂದ ಕೃಷಿಯಿಂದ ಏನೇನೂ ಲಾಭವಿಲ್ಲ ಎಂಬ ಮಾತು ದಶಕಗಳಿಂದಲೂ ಪ್ರಚಲಿತವಿದೆ. ಇಂಥ ಊರಿನಲ್ಲಿ ಪ್ರಯೋಗಶೀಲನೊಬ್ಬ ಒಂದೊಂದೇ ಪ್ರಯೋಗ ಮಾಡಿ ಯಶಸ್ವೀ ಕೃಷಿಕನಾಗಿದ್ದಾನೆ. ಹೂವಿನಿಂದ ಹೊನ್ನು ಬೆಳೆಯಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾನೆ.

ಕೊಟ್ರೇಶ್‌ ಓದಿದ್ದು ಮೂರನೆಯ ತರಗತಿಯವರೆಗೆ ಮಾತ್ರ. ಏಕೆ ಶಾಲೆಗೆ ಹೋಗಬೇಕು? ಎನ್ನುವ ವಿಷಯವೇ ಅರ್ಥವಾಗದ ವಯಸ್ಸಿನಲ್ಲಿ ನೆರೆಹೊರೆಯ ಬಾಲಕರೊಂದಿಗೆ ಬ್ಯಾಗನ್ನೇರಿಸಿ ಈತ ಶಾಲೆಗೆ ಹೊರಟು ನಿಲ್ಲುತ್ತಿದ್ದರು. ಆ ದಿನಗಳಲ್ಲೇ ಕೃಷಿ ಭೂಮಿಯ ಸಾಗುವಳಿಯೊಂದಿಗೆ ಇತರರ ಜಮೀನನ್ನೂ ಲಾವಣಿಗೆ ಪಡೆದು ಬೇಸಾಯ ಮಾಡುತ್ತಿದ್ದ ತಂದೆ, ಕೃಷಿಯೆಡೆಗೆ ಈ ಬಾಲಕನ ಗಮನ ಸೆಳೆದರು. ಎರಡು ಎತ್ತು, ನಾಲ್ಕು ಎಮ್ಮೆ ಮನೆಯಲ್ಲಿದ್ದವು. ಭರ್ತಿ ಹಾಲು ಹಿಂಡುವ ಎಮ್ಮೆಗಳು. ಹಾಲನ್ನು ಮಾರಲು ಮನೆ ಮನೆಗೆ ತೆರಳಬೇಕಿತ್ತು. ಈ ಕಾರಣಕ್ಕೇ ಶಾಲೆಗೆ ಗುಡ್‌ ಬೈ ಹೇಳಿ ಕೃಷಿ
ಕಮತದೊಂದಿಗೆ ಹೈನುರಾಸುಗಳ ಚಾಕರಿಕೆ ಮಾಡುತ್ತಾ ಹದಿನೈದು ವರ್ಷ ಕಳೆದು ಬಿಟ್ಟರು ಬಾಲಕ ಕೊಟ್ರೇಶ್‌.

ಶಾಲೆಯ ಓದು ನೆನಗುದಿಗೆ ಬಿತ್ತು. ನೆಲದ ಮಣ್ಣಿನ ಓದು ತಲೆಗೆ ಹತ್ತಿತು. ಯಾವಾಗ ಬೀಜ ಬಿತ್ತಬೇಕು, ಮಳೆಯ ಹದ ನೋಡಿ ಬೀಜ ಬಿತ್ತುವುದೆಂದರೇನು? ದೊಡ್ಡ ಮಳೆ ದಾಟಿದಾಗ ಹಿಂಗಾರಿನಲ್ಲಿ ಯಾವ ತಳಿಯ ಬೀಜ ಬಿತ್ತಿದರೆ ಕೈತುಂಬ ಧಾನ್ಯ ಸಿಗಬಲ್ಲದು. ಹೀಗೆ ಕೃಷಿಯ ಅರಿವಿನ ಹರವು ಜಾಸ್ತಿಯಾಗಿತ್ತು.

ಕೃಷಿಯ ಒಡನಾಟದಲ್ಲಿಯೇ ಬೆಳೆದ ಕೊಟ್ರೇಶ್‌(34) ಜಗಳೂರು ತಾಲೂಕಿನ ಉದ್ದಘಟ್ಟ ಗ್ರಾಮದವರು. ತಂದೆಯ ಪಾರಂಪರಿಕ ಕೃಷಿಗೆ ವಿದಾಯ ಹೇಳಿ ಹೊಸ ಕೃಷಿ ಪದಟಛಿತಿಗೆ ತನ್ನ ಭೂಮಿಯನ್ನು ಅಣಿಗೊಳಿಸಬೇಕು ಅಂದುಕೊಂಡಿದ್ದರು. “ಬರದ ನಾಡು ಜಗಳೂರಿನಲ್ಲಿ ಮಳೆಯೇ ಕಡಿಮೆ. ಮಳೆಯಾಶ್ರಯದಲ್ಲಿ ಭಿನ್ನ ಕೃಷಿ ಮಾಡಿ, ಗೆಲ್ಲುವುದು ಕಷ್ಟ. ಇದ್ದುದರಲ್ಲಿಯೇ ತೃಪ್ತಿಪಡು’ ಎಂದು ಹಲವರು ಸಲಹೆ ನೀಡಿದ್ದರು.

ಇಷ್ಟಾದರೂ, ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಹುಚ್ಚು ಹತ್ತಿಸಿಕೊಂಡ ಕೊಟ್ರೇಶ್‌ ಹಣ ಹೊಂದಿಸಲು ಕೆಲಸಕ್ಕಾಗಿ
ಅಲೆಯತೊಡಗಿದರು. ಹಲವು ದಿನಗಳ ಕಾಲ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೃಷಿ ಇಲಾಖೆಯಲ್ಲಿ ಭೂ
ಚೇತನ ಕಾರ್ಯಕ್ರಮದ ಅನುಷ್ಠಾನಕ್ಕೆ ಹಳ್ಳಿ ಹಳ್ಳಿಗಳನ್ನು ಸುತ್ತಿ ಕೆಲಸ ನಿರ್ವಹಿಸಲು ಜನರೊಬ್ಬರು ಬೇಕಾಗಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದಾಗ, ಆ ಕೆಲಸ ಗಿಟ್ಟಿಸಿಕೊಂಡಿದ್ದರು. ವರ್ಷದಲ್ಲಿ ಆರು ತಿಂಗಳು ಕೆಲಸ. ಉಳಿಕೆ ದಿನಗಳಲ್ಲಿ ಮನೆಯ ಕೃಷಿ ಕೆಲಸ ಮಾಡಿಕೊಂಡು ದಿನ ದೂಡುತ್ತಿದ್ದರು. ಎಂಟು ಹಳ್ಳಿಗಳನ್ನು ಸುತ್ತಿ ರೈತರಿಗೆ ಸಾವಯವ ಕೃಷಿಯ ಬಗ್ಗೆ, ಸಾವಯವ ಔಷಧಿಗಳ ಬಗ್ಗೆ ಮಾಹಿತಿ ನೀಡುವುದು ಇವರ ಕೆಲಸ. ಪ್ರತಿಯಾಗಿ ಮಾಸಿಕ 4,500 ರೂ ಸಂಬಳ ಪಡೆದುಕೊಳ್ಳುತ್ತಿದ್ದರು.

ಆದರೂ ಲಕ್ಷ ರೂಪಾಯಿ ಗಳಿಸಿ ಬೋರ್‌ವೆಲ್‌ ಕೊರೆಸುವ ಕನಸು ಸುಲಭವಾಗಿ ಕೈಗೆಟುಕುವಂತಿರಲಿಲ್ಲ.
ತಂದೆಯ ಅಕಾಲಿಕ ಮರಣದ ನಂತರ ಕೃಷಿಯ ಸಂಪೂರ್ಣ ಜವಾಬ್ದಾರಿ ಇವರ ಹೆಗಲಿಗೆ ಬಿತ್ತು. 1,20,000 ರೂ. ಕೈಗಡ
ಪಡೆದುಕೊಂಡು ಬೋರ್‌ವೆಲ್‌ ಕೊರೆಸುವ ದೃಢ ಮನಸ್ಸು ಮಾಡಿದರು. ತಾನು ದುಡಿದು ಕೂಡಿಟ್ಟ 30,000 ರೂ.
ಜೊತೆಯಾಗಿಸಿ ಬೋರ್‌ವೆಲ್‌ ಕೊರೆಸಿದರು. ಒಂದೂವರೆ ಇಂಚು ನೀರು ಒಸರಿತು.

ಜೋಳ ಬೆಳೆಯುತ್ತಿದ್ದ ಭೂಮಿಯಲ್ಲಿ ಮೊದಲ ಬಾರಿಗೆ ಬೀಜದ ಸೌತೆ ಕೃಷಿ ನಲಿಯಿತು. ಮೂರು ತಿಂಗಳಲ್ಲಿ 10,000
ರೂಪಾಯಿ ಲಾಭದೊಂದಿಗೆ ಇಳುವರಿ ಕೈ ಸೇರಿತ್ತು. ‘ಒಂದೂವರೆ ಇಂಚು ನೀರಿನಲ್ಲಿ ತರಕಾರಿ ಕೃಷಿ ಕಷ್ಟಸಾಧ್ಯ ಹೂನ ಕೃಷಿ ಪ್ರಯತ್ನಿಸಿ ನೋಡು, ದಿನವೂ ಆದಾಯ ಎಂದು ಕೈ ಸೇರುತ್ತದೆ. ಸ್ವಲ್ಪ ನೀರಿದ್ದರೂ ಹೂವಿನ ಕೃಷಿ ಮಾಡಬಹುದು. ಆತ್ಮೀಯರೊಬ್ಬರು ಸಲಹೆ ನೀಡಿದರು. ಅವರ ಮಾತಿಗೆ ಒಪ್ಪಿ ಚಳ್ಳಕೆರೆಯಿಂದ ಆರು ಕ್ವಿಂಟಾಲ್‌ ಸುಗಂಧರಾಜ ಗಡ್ಡೆಗಳನ್ನು ತಂದು ಕಾಲೆಕರೆಯಲ್ಲಿ ಊರಿದರು. ಸುಗಂಧರಾಜ ಕೃಷಿಯಲ್ಲಿ ಮೂರು ವರ್ಷದ ಅನುಭವ ಪಡೆದಿರುವ ಕೊಟ್ರೇಶ್‌ ಗಡ್ಡೆಗಳನ್ನು ಕಿತ್ತು ಬೇರೆ ಕಾಲೆಕರೆಯಲ್ಲಿ ನಾಟಿ ಮಾಡಿದ್ದಾರೆ. ಹೊಸ ಮಣ್ಣಿನಲ್ಲಿ ಹುಲುಸಾಗಿ ಎದ್ದ ಗಿಡಗಳು ಭರ್ತಿ ಹೂ ಇಳುವರಿ ನೀಡುತ್ತಿವೆ.

ದಿನವೂ ಹೂ ಕೊಯ್ಲು ಮಾಡುತ್ತಾರೆ. ಪ್ರತಿ ಕೊಯ್ಲಿನಿಂದ ಎರಡೂವರೆ ಕೆ.ಜಿ ಹೂ ಸಿಗುತ್ತಿದೆ. ಕಿಲೋ ಹೂಗೆ 70-110 ರೂ. ದರ ಸಿಗುತ್ತಿದೆ. ಅಕ್ಕಪಕ್ಕದ ಹೊಲಗಳಲ್ಲಿ ಬೆಳೆಯಿದ್ದಾಗ ಸುಗಂಧ ರಾಜದ ಕೃಷಿ ತಾಕಿಗೆ ಹುಳುಗಳು ಬೀಳುವುದು ಜಾಸ್ತಿ. ವಾರಕ್ಕೊಮ್ಮೆ ಸಿಂಪರಣೆ ಬೇಕೆ ಬೇಕು. ಬೆಳೆ ಇಲ್ಲದಾಗ ತಿಂಗಳಿಗೊಮ್ಮೆ ಸಿಂಪಡಿಸುವುದೂ ಇದೆ. ಸುಗಂಧರಾಜ ಗಡ್ಡೆಗಳೂ
ಇವರಿಗೆ ಆದಾಯ ತಂದುಕೊಟ್ಟಿದೆ. ಸ್ಥಳ ಬದಲಾುಸುವಾಗ ಅಗೆದ ಗಡ್ಡೆಗಳನ್ನು ತಮಗೆಷ್ಟು ಬೇಕೋ ಅಷ್ಟು ಇಟ್ಟುಕೊಂಡು
ಉಳಿಕೆಯನ್ನು ಮಾರಿದ್ದರು. ಆಗ ಕ್ವಿಂಟಾಲ್‌ಗೆ 1500 ದಂತೆ 15 ಕ್ವಿಂಟಾಲ್‌ ಗೆಡ್ಡೆಗಳು ಮಾರಾಟವಾಗಿದ್ದವು ಎನ್ನುತ್ತಾರೆ ಕೊಟ್ರೇಶ್‌. ಸುಗಂಧ ಹೂವಿನ ಕೃಷಿ ಇವರಲ್ಲಿ ಹೊಸ ಆಸೆಯೊಂದನ್ನು ಹುಟ್ಟು ಹಾಕಿತು. ಇದರೊಂದಿಗೆ ಗುಲಾಬಿ ಕೃಯನ್ನು
ಜೊತೆಯಾಗಿಸಿಕೊಂಡರೆ ಹೇಗೆಂದು ಆಲೋಚಿಸಿದರು. ತಡ ಮಾಡದೇ ಸಜಾìಪುರದ ನರ್ಸರಿಗೆ ತೆರಳಿ ಬಟನ್ಸ್‌ ತಳಿಯ
1000 ಗಿಡಗಳನ್ನು ತಂದಿಳಿಸಿಕೊಂಡರು. ಮುಕ್ಕಾಲು ಎಕರೆಯಲ್ಲಿ ಗಿಡದಿಂದ ಗಿಡಕ್ಕೆ ಮೂರೂವರೆ ಅಡಿ, ಸಾಲಿನಿಂದ ಸಾಲಿಗೆ ನಾಲ್ಕು ಅಡಿಯಂತೆ ನಾಟಿ ಮಾಡಿದರು. ಕಳೆ ನಿಯಂತ್ರಣ, ಗೊಬ್ಬರ ಉಣಿಕೆ, ವಾರ ವಾರದ ಸಿಂಪರಣೆಯ ಪರಿಣಾಮ ಬಟನ್ಸ್‌ ಗಿಡಗಳು ಹೂವರಳಿಸಿ ನಿಂತವು. ಮೂರು ತಿಂಗಳಿನಿಂದ ಹೂವು ಕೊಯ್ಲಿಗೆ ಆರಂಭ. ಪ್ರಾರಂಭದಲ್ಲಿ ಐದು ಕಿ.ಗ್ರಾಂ ವರೆಗೆ ಹೂವು ಸಿಗುತ್ತಿತ್ತು. ಈಗ ಗಿಡ ನೆಟ್ಟು ವರ್ಷ ಕಳೆದಿದೆ. ದಿನಕ್ಕೆ 15 ಕೆಜಿ ಹೂವು ಸಿಗುತ್ತಿದೆ. ಕಿಲೋ ಹೂಗೆ ದಿನ ನಿತ್ಯದ ದರದಲ್ಲಿ ವ್ಯತ್ಯಾಸವಾಗುತ್ತದೆ. 60-250 ರೂಪಾಯಿ ವರೆಗೆ ಸಿಗುತ್ತದೆ.

ಕಾಲೆಕರೆಯಲ್ಲಿ ಬಣ್ಣದ ಸೇವಂತಿಗೆ ಕೃಷಿ ಮಾಡುತ್ತಿದ್ದಾರೆ. ಸ್ವತಃ ಗಿಡಗಳನ್ನು ತಯಾರಿಸಿಕೊಳ್ಳುತ್ತಾರೆ. ಅರ್ಧ ಅಡಿ ಎತ್ತರ ಮೂರು ಅಡಿ ಅಗಲ, ಅಗತ್ಯದ್ದಷ್ಟು ಉದ್ದದ ಹುಡಿ ಮಣ್ಣಿನ ಏರು ಮಡಿ ತಯಾರಿಸಿ ಸೇವಂತಿಗೆ ಬೀಜ ಚೆಲ್ಲುತ್ತಾರೆ. ಬೆಳೆದುನಿಂತ ಗಿಡಗಳನ್ನು ಹದಗೊಳಿಸಿದ ಭೂಮಿಯಲ್ಲಿ ಗಿಡದಿಂದ ಗಿಡ ಮೂರು ಅಡಿ, ಸಾಲಿನಿಂದ ಸಾಲು ನಾಲ್ಕು ಅಡಿಗೆ ಒಂದರಂತೆ ನಾಟಿ ಮಾಡುತ್ತಾರೆ. ಎರಡೂವರೆ ತಿಂಗಳಿಗೆ ಹೂವು ಕೊಯ್ಲಿಗೆ ಸಿಗುತ್ತಿದೆ. ಎಂಟು ತಿಂಗಳ ವರೆಗೆ ಯತೇಚ್ಚ ಇಳುವರಿ ಲಭ್ಯ. ಗೊಬ್ಬರ ಉಣಿಕೆ, ಔಷಧಿ ಸಿಂಪರಣೆಯಂತಹ ಕೆಲಸಗಳನ್ನು ಅಚ್ಚುಕಟ್ಟಾಗಿ ಪೂರೈಸಿದರೆ ಹತ್ತು ತಿಂಗಳ ವರೆಗೂ ಹೂವು ಹರಿಯಬಹುದು. ನಾಟಿ ಮಾಡಿದ ಗಿಡಗಳು ಆರು ತಿಂಗಳಿರುವಾಗ ಬೇರೆಡೆಯಲ್ಲಿರುವ ಇನ್ನೊಂದು ಕಾಲೆಕರೆಯನ್ನು ಹದಗೊಳಿಸಲು ಆರಂಭಿಸುತ್ತಾರೆ. ಏರು ಮಡಿ ತಯಾರಿಸಿ ಬೀಜ ಉದುರಿಸಿ ಇಡುತ್ತಾರೆ. ಗಿಡ ನಾಟಿಗೆ ಸಿದ್ದಗೊಂಡಾಗ ಕಿತ್ತು ನಾಟಿ ಮಾಡುತ್ತಾರೆ.

ಹೊಸ ಕೃಷಿ ತಾಕಿನಲ್ಲಿಯ ಗಿಡಗಳಲ್ಲಿ ಹೂವು ಆರಂಭಗೊಳ್ಳುವ ವೇಳೆಗೆ ಹಳೆಯ ಕಾಲೆಕರೆಯಲ್ಲಿನ ಸೇವಂತಿಗೆ ಅಳಿಯುವ
ಹಂತದಲ್ಲಿರುತ್ತದೆ. ಹೊಸ ತಾಕಿನಿಂದ ಇಳುವರಿ ಸರಳವಾದಾಗ ಹಳೆಯ ಗಿಡಗಳನ್ನು ಕಿತ್ತೂಗೆದು ಆ ಭೂಮಿಯಲ್ಲಿ ಮನೆ ಅಗತ್ಯ ಪೂರೈಕೆಯ ಸೊಪ್ಪು ತರಕಾರಿ ಬೆಳೆದುಕೊಳ್ಳುತ್ತಾರೆ. ಇವರ ಹೂವಿನ ಜಾಣ್ಮೆ ಮೆಚ್ಚಲು ಇನ್ನೊಂದು ಕಾರಣವಿದೆ.
ದೀಪಾವಳಿಯ ಸಂದರ್ಭ ಕೊಯ್ಲಿಗೆ ಬರುವಂತೆ ಖಾಲಿ ಜಮೀನುಗಳಲ್ಲೆಲ್ಲಾ ಚಂಡು ಹೂನ ಗಿಡ ಊರುವ ಜಾಣ್ಮೆ
ತೋರುತ್ತಾರೆ. ಕಳೆದ ವರ್ಷದ ಹಬ್ಬದ ವೇಳೆ 37,000 ರೂ. ಆದಾಯ ಗಳಿಸಿದ್ದನ್ನು ನೆನಪಿಸಿಕೊಂಡರು.

ಕೊಯ್ಲು ಮಾಡಿದ ಹೂವುಗಳನ್ನು ಚಿತ್ರದುರ್ಗ ಮಾರುಕಟ್ಟೆಗೆ, ಜಗಳೂರಿನ ಕೆಲವು ವ್ಯಾಪಾರಸ್ಥರಿಗೆ ತಲುಪಿಸುವುದೂ ಇದೆ. ಬಿರು ಬೇಸಿಗೆಯಲ್ಲಿ ಜಗಳೂರಿನಲ್ಲಿ ಬರದ್ದೇ ಮಾತು. ಬರ ತಂದೊಡ್ಡುವ ವ್ಯಥೆ ಮಾತಿನಲ್ಲಿ ಸಹಜವೆಂಬಂತೆ ವರ್ಗಾವಣೆಯಾಗುತ್ತಿರುತ್ತದೆ. ಇವುಗಳ ಪರಿವಿಲ್ಲದೇ ಹಸಿರು ಉಳಿಸಿಕೊಂಡ ಜಮೀನಿನಲ್ಲಿ ಹೂವು ಬಿಡುಸುವಲ್ಲಿ ಮಗ್ನರಾಗಿರುತ್ತಾರೆ ಕೊಟ್ರೇಶ್‌.

– ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.