ಬಾಳು ಬೆಳಗಿದ ಬಾಳೆ
Team Udayavani, Feb 5, 2018, 3:10 PM IST
ಸಾಗರ ತಾಲೂಕಿನ ಬೊಮ್ಮತ್ತಿಯ ಯುವ ರೈತ ಕೃಷ್ಣಮೂರ್ತಿ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಇವರು ಜಿ.9 ಮತ್ತು ಏಲಕ್ಕಿ ತಳಿಯ ಬಾಳೆ.
ಕೃಷಿ ಹೇಗೆ?
ತ್ಯಾಗರ್ತಿ ರಸ್ತೆಯ ಬೊಮ್ಮತ್ತಿ ತಿರುವಿನಿಂದ ಉಳ್ಳೂರು ಸಂಪರ್ಕ ದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಕೃಷ್ಣಮೂರ್ತಿಯವರ ಹೊಲವಿದೆ. ಇವರು 2016 ರ ಆಗಸ್ಟ್ 3 ನೇ ವಾರದಲ್ಲಿ ಬಾಳೆ ಗಿಡದ ನಾಟಿ ಮಾಡಿದ್ದರು. 2 ಎಕರೆ ವಿಸ್ತೀರ್ಣದ ತಮ್ಮ ಖಷ್ಕಿ ಭೂಮಿಯಲ್ಲಿ 1500 ಜಿ.9 ಬಾಳೆ ಮತ್ತು 500 ಏಲಕ್ಕಿ ತಳಿಯ ಬಾಳೆ ನಾಟಿ ಮಾಡಿದ್ದರು. ಇದಕ್ಕಿಂತ ಎರಡು ವರ್ಷ ಹಿಂದೆ ಕೊಳವೆ ಬಾವಿ ಕೊರೆಸಿ ಶುಂಠಿ ಕೃಷಿಗೆ ಕೈ ಹಾಕಿದ್ದರು. ಇಡೀ ಹೊಲವನ್ನು ಟ್ರಾÂಕ್ಟರ್ ನಿಂದ ಉಳುಮೆ ಮಾಡಿ ಹದಗೊಳಿಸಿದರು. ನಂತರ 1.5 ಅಡಿ ಅಗಲ, 1.5 ಅಡಿ ಆಳವಿರುವ ಗುಂಡಿಗಳನ್ನು ಮಾಡಿಸಿ ಅದಕ್ಕೆ ಥಿಮೆಟ್ ಮತ್ತು ಸಗಣಿ ಗೊಬ್ಬರ ಹಾಕಿ ಕಾಡಿನ ಒಣ ಎಲೆಗಳನ್ನು ಹಾಕಿಸಿದರು. ಗಿಡದಿಂದ ಗಿಡಕ್ಕೆ 6 ಅಡಿ ಅಂತರವಿರುವಂತೆ ಸಾಲು ಗುಂಡಿ ತೋಡಿಸಿದರು. ಸಾಗರದ ಹಕ್ರೆಯಲ್ಲಿರುವ ಅಂಗಾಂಶ ಕಸಿಯ ಜಿ9 ಬಾಳೆ ಸಸಿಗಳನ್ನು ತಲಾ 12 ರೂ.ನಂತೆ ನರ್ಸರಿಯಲ್ಲಿ ಖರೀದಿಸಿ ಒಟ್ಟು 1500 ಬಾಳೆ ಸಸಿ ನೆಟ್ಟರು. ನಂತರ ಪ್ರತಿ 25 ದಿನಕ್ಕೆ ಒಮ್ಮೆಯಂತೆ 19:19:19 ಕಾಂಪ್ಲೆಕ್ಸ್ ಗೊಬ್ಬರವನ್ನು ದ್ರವ ರೂಪದಲ್ಲಿ ಎಲ್ಲಾ ಗಿಡಗಳಿಗೂ ನೀಡಿದರು. ಗಿಡ ನೆಟ್ಟು ಸುಮಾರು 9 ತಿಂಗಳಿಗೆ ಅಂದರೆ 2017ರ ಮೇ ಅಂತ್ಯದ ಸುಮಾರಿಗೆ ಬಾಳೆ ಗಿಡಗಳು ಹೂಬಿಟ್ಟು ಗೊನೆ ನೀಡಲು ಆರಂಭಿಸಿದವು. ಗೊನೆ ಬಿಟ್ಟ ಮೂರು ತಿಂಗಳ ಅಂತ್ಯದಲ್ಲಿ ಮೊದಲ ಫಸಲು ಕಟಾವಿಗೆ ಬಂದಿತು.
ಲಾಭ ಹೇಗೆ?
ಇವರು 2 ಎಕರೆ ವಿಸ್ತೀರ್ಣದ ಹೊಲದಲ್ಲಿ 1500 ಜಿ.9 ಬಾಳೆ ಸಸಿ ಬೆಳೆಸಿದ್ದಾರೆ.
ಪ್ರತಿ ಮರದಿಂದ ಸರಾಸರಿ 25 ರಿಂದ 30 ಕಿ.ಗ್ರಾಂ.ತೂಕದ ಬಾಳೆ ಗೊನೆ ದೊರೆತಿದೆ. ಕಿ.ಗ್ರಾಂ.ಗೆ ಸರಾಸರಿ ರೂ.13 ರೂ.ನಂತೆ ಬಾಳೆ ಗೊನೆ ಮಾರಾಟವಾಗಿದೆ.
ಮೊದಲ ಕಟಾವಿನಲ್ಲಿ 40 ಟನ್ ಮಾರಾಟವಾಗಿದೆ. ಇದರಿಂದ ಇವರಿಗೆ ರೂ.5 ಲಕ್ಷದ 50 ಸಾವಿರ ಆದಾಯ ದೊರೆತಿದೆ. ಬಾಳೆ ಸಸಿ ನೆಡುವಿಕೆ, ಗಿಡ ಖರೀದಿ, ನೀರಾವರಿ ವ್ಯವಸ್ಥೆ, ಕೂಲಿ ವೆಚ್ಚ, ಗೊಬ್ಬರ ನೀಡುವಿಕೆ, ಕಟಾವಿನ ಕೂಲಿ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ಸುಮಾರು ರೂ.2 ಲಕ್ಷ ಹಣ ಖರ್ಚಾಗಿದೆ. ಆದರೂ ಸುಮಾರು ರೂ.3 ಲಕ್ಷದ 50 ಸಾವಿರ ರೂ. ಲಾಭ ದೊರೆತಿದೆ. ಇವರು ಕೃಷಿ ಮಾಡಿದ 500 ಏಲಕ್ಕಿ ಬಾಳೆ ಗಿಡದಿಂದ 10 ಟನ್ ಫಸಲು ದೊರೆತಿದೆ. ಏಲಕ್ಕಿ ಬಾಳೆ ಕ್ವಿಂಟಾಲ್‌ಗೆ ರೂ.2500 ರಂತೆ ಮಾರಾಟವಾಗಿದ್ದು ಇದರಿಂದ ಇವರಿಗೆ ರೂ.2 ಲಕ್ಷದ 50 ಸಾವಿರ ಆದಾಯ ದೊರೆತಿದೆ. ಕೃಷಿ ವೆಚ್ಚ ಸುಮಾರು 1 ಲಕ್ಷ ತಗುಲಿದ್ದು ನಿವ್ವಳ 1 ಲಕ್ಷದ 50 ಸಾವಿರ ಲಾಭ ದೊರೆತಿದೆ.
ಬಾಳೆ ಗಿಡಗಳ ಮೊದಲ ಫಸಲು ಇದಾಗಿದ್ದು ಗೊನೆ ಬಲಿತ ನಂತರ ಕಡಿದ ಬಾಳೆಯ ಬುಡಗಳಿಂದ ಇನ್ನೊಂದು ಗಿಡ ಬೆಳೆಯುತ್ತಿದೆ. ಅದರ ಮೂಲಕ ಮುಂದಿನ ಫಸಲು 2018 ರ ಜೂನ್ ಸುಮಾರಿಗೆ ಎರಡನೇ ಪಸಲು ದೊರೆಯಲಿದೆ. ಎರಡನೇ ಫಸಲಿನಲ್ಲಿ ಗಿಡ ನೆಡುವಿಕೆ, ಗಿಡ ಖರೀದಿ ,ನೀರಾವರಿ ವ್ಯವಸ್ಥೆ ಅಳವಡಿಕೆ, ಹೆಚ್ಚು ಗೊಬ್ಬರ ನೀಡುವಿಕೆ ಇತ್ಯಾದಿ ಖರ್ಚು ಇಲ್ಲದ ಕಾರಣ ಲಾಭದ ಪ್ರಮಾಣ ಅಧಿಕವಾಗಲಿದೆ. ಈ ವರ್ಷ ಮಲೆನಾಡಿನ ಕೃಷಿಕರು ಶುಂಠಿ, ಜೋಳ,ರಬ್ಬರ್ ಇತ್ಯಾದಿ ಹಲವು ವಾಣಿಜ್ಯ ಬೆಳೆಗಳ ದರ ಕುಸಿತದಿಂದ ನಷ್ಟ ಅನುಭಸುತ್ತಿದ್ದಾರೆ.ಆದರೆ ಬಾಳೆ ಕೃಷಿಯಿಂದ ಕೃಷ್ಣಮೂರ್ತಿ ಲಾಭದ ನಗು ಚೆಲ್ಲಿದ್ದಾರೆ.
ಮಾಹಿತಿಗೆ-9482949149
– ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.