ಸರ್ಕಾರಿ ಅಧಿಕಾರಿಗಳು ಜನ ಸೇವಕರಾಗಿ
Team Udayavani, Feb 5, 2018, 4:28 PM IST
ರಾಮನಗರ: ಸರ್ಕಾರಿ ಅಧಿಕಾರಿಗಳು ಜನ ಸೇವಕರಾಗಿದ್ದು, ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಸುವಂತೆ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿ, ತದನಂತರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್‌ಟಿಐ ಒಂದು ಉತ್ಕೃಷ್ಟ ಕಾಯ್ದೆ. ಸಾರ್ವಜನಿಕರಿಗೆ ಅಗತ್ಯರುವ ಅಥವಾ ಅವರು ಬಯಸುವ ಮಾಹಿತಿಯನ್ನು ಸರ್ಕಾರಿ ಇಲಾಖೆಗಳು ತಮ್ಮಲ್ಲಿ ಲಭ್ಯದ್ದಲ್ಲೀ 30 ದಿನದೊಳಗೆ ನೀಡುವಂತೆ ಕಾಯ್ದೆ ತಿಳಿಸಿದೆ. ಹೊಸದಾಗಿ ಮಾಹಿತಿಯನ್ನು ಸೃಷ್ಟಿಸಿ ನೀಡುವ ಅಗತ್ಯವಿಲ್ಲ.
ಇರುವ ಮಾಹಿತಿಯನ್ನೇ ಅಥವಾ ದಾಖಲಾತಿಗಳನ್ನೇ ನಿಗದಿ ಪಡಿಸಲಾದ ಶುಲ್ಕ ಭರಿಸಿಕೊಂಡು ಅವಧಿಯೊಳಗೆ ನೀಡುವಂತೆ ತಿಳಿಸಿದ ಅವರು ಕಾಲಕಾಲಕ್ಕೆ ಕಾಯ್ದೆಯಲ್ಲಾಗುವ ಬದಲಾವಣೆಗಳನ್ನು ಓದಿಕೊಂಡು ಅಪ್‌ಡೇಟ್ ಆಗುವಂತೆ ಸೂಚಿಸಿದರು.
ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೊದಲು ಕಾಯ್ದೆಯಡಿ ದಾಖಲಾದ ಅರ್ಜಿಗಳನ್ನು ಸ್ಪಷ್ಟವಾಗಿ ಓದಿಕೊಳ್ಳಬೇಕು. ಅದಕ್ಕೆ ಪ್ರತ್ಯೇಕ ಕಡತವನ್ನಿರಿಸುವುದು ಉತ್ತಮ. ಕಾಯ್ದೆಯ 4(1)ಎ ಹಾಗೂ 4(1)ಬಿ ಯ ಮಾಹಿತಿಯನ್ನು ಸಂಪೂರ್ಣವಾಗಿ ಸಿದ್ಧಪಡಿಸಿಟ್ಟುಕೊಂಡಿರಬೇಕು, ಅಲ್ಲದೇ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿವರ ಹಾಗೂ ದೂರವಾಣಿಯ ಸಂಖ್ಯೆಯ ವಿವರದ ಫಲಕವನ್ನು ನಮೂದಿಸಿರಬೇಕು ಎಂದರು.
ಸಭೆಯಲ್ಲಿ ಹಾಜರಿದ್ದ ಅಪರ ಜಿಲ್ಲಾಧಿಕಾರಿ ಡಾ.ಪ್ರಶಾಂತ್ ಅವರನ್ನು ಕುರಿತು ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಸುವ ವಿಧಾನವನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿದರು.
59 ಪ್ರಕರಣ ಇತ್ಯರ್ಥ: ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲೆಗೆ ಸಂಬಂಧಿಸಿದ 66 ವಿವಿಧ ಪ್ರಕರಣಗಳ ವಿಚಾರಣೆಯನ್ನು ಇದೇ ವೇಳೆ ನಡೆಸಲಾಯಿತು. ಅವುಗಳ ಪೈಕಿ 59 ಪ್ರಕರಣಗಳು ಸ್ಥಳದಲ್ಲಿಯೇ ಇತ್ಯರ್ಥಗೊಂಡವು. ಉಳಿದ 7 ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಯಿತು.
ಬೆಂಗಳೂರಿನ ವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಬಿ. ಕೆಂಪೇಗೌಡ ಮಾತನಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾತಿ ಹಕ್ಕು ಕಾಯ್ದೆಯ ಅರ್ಜಿದಾದರರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.