ವಿಶ್ವ ಬಂಟ ಸಮ್ಮಿಲನ-2018: ಸಿದ್ಧತೆಗಾಗಿ ಪೂರ್ವಭಾವಿ ಸಭೆ
Team Udayavani, Feb 5, 2018, 5:15 PM IST
ಮುಂಬಯಿ: ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಫೆ. 24ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಲಿರುವ ಒಂದು ದಿನದ ಅದ್ದೂರಿ ಕಾರ್ಯಕ್ರಮ ವಿಶ್ವ ಬಂಟ ಸಮ್ಮಿಲನ-2018 ಇದರ ಆಯೋಜನೆಯ ಸಿದ್ಧತೆಗಾಗಿ ಪೂರ್ವಭಾವಿ ಸಭೆಯು ಫೆ. 3ರಂದು ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಗೌರವ ಉಪಸ್ಥಿತಿಯಲ್ಲಿ ಬಂಟರ ಸಂಘದಲ್ಲಿ ಜರಗಿತು.
ಸಭೆಯಲ್ಲಿ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡುತ್ತ, ವಿಶ್ವ ಬಂಟ ಸಮ್ಮಿಲನವು ಇದೇ ಮೊದಲ ಬಾರಿಗೆ ಮುಂಬಯಿಯಲ್ಲಿ ಜರಗಲಿದ್ದು, ವಿಶ್ವದ ಎಲ್ಲಾ ಬಂಟ ಸಂಘ ಸಂಸ್ಥೆಗಳ, ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆಂದು ನುಡಿದರು. ಸಮ್ಮಿಲನದ ಯಶಸ್ಸಿಗಾಗಿ ಮುಂಬಯಿಯ ಎಲ್ಲಾ ಬಂಟ ಸಂಘ ಸಂಸ್ಥೆಗಳು ಒಂದಾಗಿ ಸಹಕರಿಸಬೇಕೆಂದು ಅವರು ವಿನಂತಿಸಿದರು. ಕಾರ್ಯಕ್ರಮವು ವ್ಯವಸ್ಥಿತವಾಗಿ ನಡೆಯಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಕಾರ್ಯಾಧ್ಯಕ್ಷರುಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ವಿಶ್ವ ಬಂಟರ ಸಮ್ಮಿಲನದ ಮುಖ್ಯ ಉದ್ದೇಶ ಬಂಟರ ಸ್ನೇಹ ಸೌಹಾರ್ದತೆ, ಏಕತೆಯನ್ನು ಬೆಳೆಸುವುದರ ಜೊತೆಗೆ ಗ್ರಾಮೀಣ ಮಟ್ಟದ ಬಂಟ ಸಂಘಟನೆಗಳನ್ನು ಬಲಗೊಳಿಸಿ ಗ್ರಾಮಗಳಲ್ಲಿ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಬಂಟ ಕುಟುಂಬಗಳಿಗೆ ಸಹಾಯ ಒದಗಿಸುವುದಕ್ಕಾಗಿ ನಿಧಿ ಸಂಗ್ರಹಿಸುವ ಬೃಹತ್ ಕಾರ್ಯಯೋಜನೆ ಇದಾಗಿದೆ. ದಾನಿಗಳು ಈ ಉತ್ತಮ ಕಾರ್ಯಕ್ಕಾಗಿ ಸಂಪೂರ್ಣ ಸಹಕಾರ ನೀಡುವರೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಅಭಿಮಾನದ ಸಂಗತಿ: ಪಯ್ಯಡೆ
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಮಾತನಾಡಿ, ವಿಶ್ವ ಬಂಟ ಸಮ್ಮಿಲನ ಮುಂಬಯಿಯ ಬಂಟರ ಭವನದಲ್ಲಿ ನಡೆಯುವುದು ಬಂಟರ ಸಂಘಕ್ಕೆ ಗೌರವ ಹಾಗೂ ಅಭಿಮಾನದ ಸಂಗತಿಯಾಗಿದೆ. ಬಂಟರನ್ನು ಒಂದೇ ವೇದಿಕೆಗೆ ತಂದು ಬಂಟರಲ್ಲಿ ಏಕತೆಯನ್ನು ತರಲು ಶ್ರಮಿಸುತ್ತಿರುವ ಐಕಳ ಹರೀಶ್ ಶೆಟ್ಟಿ ಅವರ ಪರಿಕಲ್ಪನೆಯ ಈ ಸಮಾರಂಭಕ್ಕೆ ಬಂಟರ ಸಂಘವು ಸರ್ವ ರೀತಿಯಲ್ಲಿ ಸಹಕಾರ ನೀಡಲಿದೆ ಎಂಬ ಆಶ್ವಾಸನೆಯನ್ನು ನೀಡಿದರು. ವೇದಿಕೆಯಲ್ಲಿ ಬಂಟರ ಸಂಘದ ಗೌರವ ಕೋಶಾಧಿಕಾರಿ ಸಿಎ ಸಂಜೀವ ಶೆಟ್ಟಿ, ವಿಶ್ವಸ್ತರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಉಳೂ¤ರು ಮೋಹನದಾಸ್ ಶೆಟ್ಟಿ, ಬಂಟರವಾಣಿ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಶ್ವ ಬಂಟರ ಸಮ್ಮಿಲನದ ಯಶಸ್ಸಿಗಾಗಿ ಈ ಕೆಳಗಿನ ಸಮಿತಿಗಳನ್ನು ರಚಿಸಲಾಯಿತು.ಸಂಪೂರ್ಣ ಕಾರ್ಯಕ್ರಮದ ಉಸ್ತುವಾರಿ
ಚಂದ್ರಹಾಸ್ ಕೆ. ಶೆಟ್ಟಿ (ಉಪಾಧ್ಯಕ್ಷರು, ಬಂಟರ ಸಂಘ), ಸಿಎ ಸಂಜೀವ ಶೆಟ್ಟಿ (ಗೌ.ಪ್ರ. ಕಾರ್ಯದರ್ಶಿ), ಪ್ರವೀಣ್ ಬಿ. ಶೆಟ್ಟಿ (ಗೌರವ ಕೋಶಾಧಿಕಾರಿ), ಮಹೇಶ್ ಎಸ್. ಶೆಟ್ಟಿ (ಜೊತೆ ಕಾರ್ಯದರ್ಶಿ), ಗುಣಪಾಲ್ ಶೆಟ್ಟಿ ಐಕಳ (ಜೊತೆ ಕೋಶಾಧಿಕಾರಿ), ರಂಜನಿ ಸುಧಾಕರ ಹೆಗ್ಡೆ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ), ಉಮಾ ಕೃಷ್ಣ ಶೆಟ್ಟಿ (ಉಪಕಾರ್ಯಾಧ್ಯಕ್ಷೆ), ಚಿತ್ರಾ ಆರ್. ಶೆಟ್ಟಿ (ಗೌ. ಕಾರ್ಯದರ್ಶಿ), ಆಶಾ ವಿ. ರೈ(ಕೋಶಾಧಿಕಾರಿ), ಮನೋರಮಾ ಎಸ್. ಬಿ. ಶೆಟ್ಟಿ (ಜೊತೆ ಕಾರ್ಯದರ್ಶಿ), ರತ್ನಾ ಪಿ. ಶೆಟ್ಟಿ (ಜೊತೆ ಕೋಶಾಧಿಕಾರಿ).
ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರುಗಳು:
ಉಳೂ¤ರು ಮೋಹನ್‌ದಾಸ್ ಶೆಟ್ಟಿ (ಸಂಚಾಲ ಕರು), ಶಾಂತಾರಾಮ ಬಿ. ಶೆಟ್ಟಿ (ಕಾರ್ಯಕ್ರಮದ ಕಾರ್ಯಾಧ್ಯಕ್ಷರು), ಇಂದ್ರಾಳಿ ದಿವಾಕರ ಶೆಟ್ಟಿ (ಸ್ವಾಗತ ಸಮಿತಿ), ಅಶೋಕ್ ಪಕ್ಕಳ, ಸನ್ನಿಧಿ ಹರೀಶ್ ಶೆಟ್ಟಿ (ಕಾರ್ಯಕ್ರಮ ನಿರೂಪಣೆ), ಕರ್ನೂರು ಮೋಹನ್ ರೈ, ಹರೀಶ್ ವಾಸು ಶೆಟ್ಟಿ, ರವೀಂದ್ರನಾಥ ಭಂಡಾರಿ (ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ), ವಿಜಯಕುಮಾರ್ ಶೆಟ್ಟಿ ( ಕಾರ್ಯಕ್ರಮದ ವೇದಿಕೆ), ಕೃಷ್ಣ ವಿ. ಶೆಟ್ಟಿ (ಕ್ಯಾಟರಿಂಗ್), ಪ್ರೇಮನಾಥ ಮುಂಡ್ಕೂರು (ಪತ್ರಿಕಾ ಪ್ರಚಾರ), ನವೀನ್ ಶೆಟ್ಟಿ ಇನ್ನ ಬಾಳಿಕೆ (ಅಲಂಕಾರ), ಪ್ರವೀಣ್ ಶೆಟ್ಟಿ ವರಂಗ, ಪ್ರಸನ್ನ ಶೆಟ್ಟಿ (ಸೌಂಡ್, ಲೈಟ್, ಇಲ್‌ಇಡಿ), ರಾಜೀವ್ ಭಂಡಾರಿ, ಕರುಣಕಾರ ಶೆಟ್ಟಿ ಕಲ್ಲಡ್ಕ (ಸ್ಮರಣಿಕೆ), ವಿಠಲ ಎಸ್. ಶೆಟ್ಟಿ (ಸಭಾಗೃಹ ಆಸನದ ವ್ಯವಸ್ಥೆ), ಶರತ್ ವಿ. ಶೆಟ್ಟಿ (ಯುವ ಸಮನ್ವಯಕರು), ಗಿರೀಶ್ ತೆಳ್ಳಾರ್ (ವಿಶ್ವ ಯುವ ಬಂಟ ಸಮನ್ವಯಕರು) ಗೌತಮ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಕಿಶೋರ್ ಕುಮಾರ್ ಕುತ್ಯಾರ್ (ಅತಿಥಿ ಉಪಚಾರ), ದಿವಾಕರ ಶೆಟ್ಟಿ ಅಡ್ಯಾರ್, ವೇಣುಗೋಪಾಲ್ ಇನ್ನಂಜೆ (ವೇದಿಕೆ ವ್ಯವಸ್ಥೆ).
ಸಲಹಾ ಸಮಿತಿ: ಕರ್ನಿರೆ ವಿಶ್ವನಾಥ ಶೆಟ್ಟಿ (ಗೌರವ ಕಾರ್ಯಾಧ್ಯಕ್ಷರು) ಮತ್ತು ಎರ್ಮಾಳ್ ಹರೀಶ್ ಶೆಟ್ಟಿ (ಕಾರ್ಯಾಧ್ಯಕ್ಷರು).
ಸಲಹಾ ಸಮಿತಿ ಸದಸ್ಯರು: ಜಗದೀಶ್ ಶೆಟ್ಟಿ ನಂದಿಕೂರು, ತಾಳಿಪಾಡಿ ಭಾಸ್ಕರ ಶೆಟ್ಟಿ, ಆದರ್ಶ್ ಶೆಟ್ಟಿ ಹಾಲಾಡಿ (ನವಿಮುಂಬಯಿ), ರವೀಂದ್ರ ಎಸ್. ಶೆಟ್ಟಿ, ವಿಜಯ್ ಭಂಡಾರಿ, ಮಹೇಶ್ ಶೆಟ್ಟಿ ತೆಳ್ಳಾರ್(ಜೋಗೇಶ್ವರಿ-ದಹಿಸರ್), ಡಾ| ಆರ್. ಕೆ. ಶೆಟ್ಟಿ (ಅಂಧೇರಿ-ಬಾಂದ್ರಾ), ಕರುಣಾಕರ ವಿ. ಶೆಟ್ಟಿ (ಡೊಂಬಿವಲಿ), ಸತೀಶ್ ಎನ್. ಶೆಟ್ಟಿ, ಸುಬ್ಬಯ್ಯ ಶೆಟ್ಟಿ (ಭಿವಂಡಿ-ಬದ್ಲಾಪುರ),ಜಯಂತ್ ಆರ್. ಪಕ್ಕಳ (ವಸಾಯಿ-ಡಹಾಣು),ಗಿರೀಶ್ ಆರ್. ಶೆಟ್ಟಿ ತೆಳ್ಳಾರ್, ಅರುಣೋದಯ್ ರೈ (ಮೀರಾ-ಭಾಯಂದರ್),ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಅಂಗಡಿಗುತ್ತು ಪ್ರಸಾದ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿಂಜೆ (ಸಿಟಿ ರೀಜನ್), ಸಿಎ ವಿಶ್ವನಾಥ ಶೆಟ್ಟಿ (ಕುರ್ಲಾ-ಭಾಂಡುಪ್), ಅಡ್ವೊಕೇಟ್ ಸುಭಾಷ್ ಶೆಟ್ಟಿ, ಸಿಎ ಸುರೇಂದ್ರ ಶೆಟ್ಟಿ (ಬೋಂಬೆ ಬಂಟ್ಸ್ ಅಸೋಸಿಯೇಶನ್), ವಸಂತ್ ಎನ್. ಶೆಟ್ಟಿ ಪಲಿಮಾರು (ಮುಲುಂಡ್ ಬಂಟ್ಸ್), ಅಶೋಕ್ ಅಡ್ಯಂತಾಯ, ಮರಾಠ ಸುರೇಶ್, ಸುರೇಶ್ ಎನ್. ಶೆಟ್ಟಿ (ಥಾಣೆ ಬಂಟ್ಸ್), ಸಿಎ ಐ.ಆರ್. ಶೆಟ್ಟಿ (ಜವಾಬ್), ಅರವಿಂದ್ ಶೆಟ್ಟಿ (ಮೀರಾ-ಡಹಾಣು), ಶಶಿಧರ್ ಶೆಟ್ಟಿ (ವಸಾಯಿ- ಡಹಾಣು), ಸಂತೋಷ್ ರೈ. ಬೆಳ್ಳಿಪಾಡಿ (ಬಂಟ್ಸ್ ಫೋರಂ), ದಿವಾಕರ ಶೆಟ್ಟಿ ಕುರ್ಲಾ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ (ಕುರ್ಲಾ).
ಮಾರ್ಗದರ್ಶಕರು: ಎಸ್. ಎಂ. ಶೆಟ್ಟಿ (ಎಸ್.ಎಂ.ಡೈ), ಅಡ್ವೊಕೇಟ್ ಆರ್. ಸಿ. ಶೆಟ್ಟಿ, ಮೇರ್ಕಳ ತ್ಯಾಂಪಣ್ಣ ಶೆಟ್ಟಿ, ಭುಜಂಗ ಎಂ. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಪ್ರಭಾಕರ ಎಲ್. ಶೆಟ್ಟಿ, ರಘುರಾಮ ಶೆಟ್ಟಿ ಅವೆನ್ಯೂ, ರವೀಂದ್ರ ಅರಸ, ಶಾಂತಾರಾಮ ಶೆಟ್ಟಿ ಸನ್‌ಸಿಟಿ, ಕೃಷ್ಣ ವೈ. ಶೆಟ್ಟಿ, ಡಾ| ಮನೋಹರ್ ಹೆಗ್ಡೆ, ಮುಂಡಪ್ಪ ಎಸ್. ಪಯ್ಯಡೆ, ಧನಂಜಯ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ, ಡಾ| ಸುನೀತಾ ಶೆಟ್ಟಿ, ಜಯ ಎ. ಶೆಟ್ಟಿ, ಭಾಸ್ಕರ ಶೆಟ್ಟಿ ಕಾಶಿಮೀರಾ, ಬೊಳ್ನಾಡು ಚಂದ್ರಹಾಸ ರೈ, ರವಿರಾಜ್ ಹೆಗ್ಡೆ ಥಾಣೆ, ಸಿಎ ಸದಾಶಿವ ಶೆಟ್ಟಿ, ರಾಘು ಪಿ. ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬಿ., ಮಹೇಶ್ ಶೆಟ್ಟಿ ತೆಳ್ಳಾರ್, ಮುದ್ರಾಡಿ ಅಪ್ಪಣ್ಣ ಎಂ. ಶೆಟ್ಟಿ, ಪಾಂಡುರಂಗ ಶೆಟ್ಟಿ ಇವರು ಮಾರ್ಗದರ್ಶಕರುಗಳಾಗಿ ಆಯ್ಕೆಯಾದರು.
ಚಿತ್ರ-ವರದಿ: ಪ್ರೇಮನಾಥ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.