ಮೊದಲ ಪ್ರೇಯಸಿಯ ಮರೆತುಬಿಡಿ
Team Udayavani, Feb 6, 2018, 12:35 PM IST
ನಿಮ್ಮ ಬದುಕಿನ ಹಾದಿಯಲ್ಲಿ ಮೊದಲ ಪ್ರೇಯಸಿ ಚೆಲ್ಲಿದ ನೆನಪುಗಳನ್ನು ಒಗೆಯಲು ಹಲವು ಗುಟ್ಟುಗಳಿವೆ. ಮೊದಲು ನಿಮ್ಮ ಪ್ರೇಯಸಿ ನೀಡಿದ ಉಡುಗೊರೆಗಳನ್ನು ಯಾರಿಗಾದರೂ ಕೊಟ್ಟು ಬಿಡಿ. ನಿಮ್ಮ ಪ್ರೇಮ ಪತ್ರಗಳನ್ನು ಯಾವುದಾದರೂ ಟ್ರಂಕಿಗೆ ಹಾಕಿ, ಮನೆಯ ಯಾವುದಾದರೂ ಮೂಲೆಯಲ್ಲಿ ಇಟ್ಟುಬಿಡಿ…
ಪ್ರೀತಿ, ಪ್ರೇಮ, ಲವ್, ಕಾಜಲ್, ಇಷ್R, ಪ್ಯಾರ್… ಪ್ರಪಂಚದ ಯಾವುದೇ ಭಾಷೆಯಲ್ಲಿ ಇದಕ್ಕೆ ಏನೇ ಸಮಾನಾರ್ಥಕ ಪದ ಇದ್ದರೂ ಅದು ಅತ್ಯಂತ ಮಧುರ. ಕೇಳಲು ಕಿವಿಗೂ ಇಂಪು ಮತ್ತು ಅದು ಜಗತ್ತಿನ ಅತಿ ಶಕ್ತಿಯುತ ಪದ. ಈ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿಯೆನ್ನುವ ಮೋಹದ ಬಲೆಗೆ ಸಿಲುಕಿರುತ್ತಾನೆ. ಕೆಲವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು, ಮತ್ತೆ ಕೆಲವರು ತಮ್ಮ ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರಷ್ಟೇ.
ಮೊದಲ ಗೆಳತಿಯನ್ನು ನೋಡಿದಾಗ ಆಕೆಯ ಮೇಲೆ ಉಂಟಾದ ಪ್ರೀತಿ ಅಪಾರ. ಅದಕ್ಕೆ ಬೆಲೆ ಕಟ್ಟಲಾಗದು. ಈ ಪ್ರಪಂಚದ ಶೇ.99ರಷ್ಟು ಮಂದಿ ಮೊದಲ ಪ್ರೀತಿಯಲ್ಲಿ ಫೇಲ್ ಆಗಿರುತ್ತಾರೆ. ಕೆಲವೇ ಕೆಲವರಷ್ಟೇ ಅದರಲ್ಲಿ ಯಶ ಕಂಡಿರುತ್ತಾರಷ್ಟೇ. ಇನ್ನುಳಿದಂತೆ ಬಹಳಷ್ಟು ಮಂದಿ ತಮ್ಮ ಬಾಳಸಂಗಾತಿಯನ್ನಾಗಿ ಸ್ವೀಕರಿಸುವುದು, ಎರಡನೇ ಪ್ರೇಯಸಿಯನ್ನೇ! ಆದರೂ ಮೊದಲ ಪ್ರೇಯಸಿಯ ನೆನಪುಗಳನ್ನು ಅಳಿಸಲಾಗದು. ಅವು ಜೀವನಪೂರ್ತಿ ಕಾಡುವಂಥವು. ಪ್ರೀತಿಯ ಎರಡಕ್ಷರವು ಕೊಡುವ ಅನುಭವ ನೂರು ಜನ್ಮಗಳಿಗೂ ಮರೆಯಲು ಸಾಧ್ಯವಿಲ್ಲ. ಪ್ರೀತಿ ನೀಡುವ ಸಿಹಿಯ ನೋವು ಕಹಿಯ ಸುಖ-ದುಃಖ… ಎಲ್ಲವೂ ಪ್ರೀತಿಯ ಒಂದು ಭಾಗ. ಒಟ್ಟಿನಲ್ಲಿ ಪ್ರೀತಿಯಲ್ಲಿ ವೈಫಲ್ಯ ಕಂಡ ಮನಸ್ಸು ಮಾತ್ರ, ಒಡೆದ ಕನ್ನಡಿಯಂತೆ ನುಚ್ಚುನೂರಾಗಿರುತ್ತದೆ.
ಮೊದಲ ಪ್ರೇಯಸಿ ನಮ್ಮಿಂದ ದೂರವಾದಾಗ ಅವಳ ಮುದ್ದಾದ ನೆನಪುಗಳು ಕಾಡುವುದು ಸಹಜ. ಹಾಗೆಯೇ ಅವಳ ಜೊತೆ ನೋಡಿದ ಸಿನಿಮಾ, ಅವಳೊಂದಿಗೆ ತಿರುಗಾಡಿದ ಪಾರ್ಕ್, ಕ್ಲಾಸ್‌ನಲ್ಲಿ ಮಾಡಿದ ಕೀಟಲೆಗಳು ಸಿಹಿಯಾದ ನೆನಪುಗಳು, ಅಲೆಅಲೆಯಾಗಿ ಎದೆಗೆ ಅಪ್ಪಳಿಸುತ್ತಲೇ ಇರುತ್ತವೆ. ಥರಹೇವಾರಿ ನೋವನ್ನು ಉಣಿಸುತ್ತಲೇ ಇರುತ್ತವೆ.
ಮೋಸ ಹೋದ ಹುಡುಗರು ತಮ್ಮ ಮೊದಲ ಪ್ರೇಯಸಿ ಬರುವಿಕೆಗಾಗಿ ಭಗೀರಥ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಅದು ಅವರ ಪಾಲಿಗೆ ದೊಡ್ಡ ಕಾಲಹರಣ. ತಮ್ಮ ಅಮೂಲ್ಯ ಜೀವನ ಎಡವುತ್ತಿದೆ ಅಂತ ಅವರಿಗೆ ಆ ಕ್ಷಣ ಅನ್ನಿಸುವುದೇ ಇಲ್ಲ. ಅವಳ ಮರೆಯುವಿಕೆಗಾಗಿ ಸಿಗರೇಟ್ ಮತ್ತು ಆಲ್ಕೋಹಾಲ್‌ಗೆ ಗುಲಾಮರಾಗಿ, ಬಾರ್‌ನಲ್ಲಿ ಮತ್ತನ್ನು ಏರಿಸಿಕೊಳ್ಳುತ್ತಾರೆ. ರಸ್ತೆಯಲ್ಲಿ ರೋಡ್ ರೋಮಿಯೋ ಆಗಿ ಬದುಕನ್ನೇ ಬೀದಿಪಾಲು ಮಾಡಿಕೊಳ್ಳುತ್ತಾರೆ. ಅವನನ್ನೇ ನಂಬಿಕೊಂಡಿರುವ ತನ್ನ ಕುಟುಂಬವನ್ನು ಕರಾಳ ಬದುಕಿಗೆ ತಳ್ಳುತ್ತಾರೆ. ಅವಳಿಗಾಗಿ ಕೊನೆಯವರೆಗೂ ಕಾಯುವುದರಲ್ಲಿ ಅರ್ಥವಿಲ್ಲ. ಅವಳ ನೆನಪನ್ನು ಅಲ್ಲಿಗೆ ಬಿಟ್ಟು ಬಿಡುವುದೇ ಉತ್ತಮ.
ಹೀಗೆಲ್ಲ ಆದಾಗ ಕೊರಗಿ ಕೂರುವುದರಲ್ಲಿ ಅರ್ಥವೇ ಇಲ್ಲ. ಮೊದಲು ಆ ಹುಡುಗಿಗೆ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ, ಆಕೆ ನಿಮ್ಮ ಬದುಕನ್ನು ಮತ್ತೂಮ್ಮೆ ಆರಂಭಿಸಲು ಕಾರಣ ಆದವಳು. ಮುಂದೆ ಹೀಗೆಲ್ಲ ಎಡವಬೇಡ, ನಿನ್ನ ದಾರಿ ಬೇರೆಯೇ ಇದೆ, ಸಾಧನೆಯ ಹಾದಿಯಲ್ಲಿ ನೀನು ಸಾಗಬೇಕು ಎನ್ನುವ ಸಣ್ಣ ಸೂಚನೆಯನ್ನೂ ಅವಳು ಕೊಟ್ಟಿದ್ದಾಳೆಂದೇ ಭಾವಿಸಬೇಕು. ಇದನ್ನು ನೀವು ಅರ್ಥಮಾಡಿಕೊಳ್ಳದೇ ಹೋದರೆ, ದುಃಖಪಡುತ್ತಲೇ ಇರಬೇಕಾಗುತ್ತದೆ. ನೀವು ಒಂದು ಗೌರವಿತ ಸ್ಥಾನಕ್ಕೆ ಹೋಗಿದ್ದೇ ಆದಲ್ಲಿ, ಮೊದಲ ಪ್ರೇಯಸಿಗಿಂತ ಸೌಂದರ್ಯವತಿ, ಗುಣವಂತೆ, ಪ್ರವೀಣೆ ನಿಮ್ಮ ಜತೆಯಾಗುವುದು ನಿಶ್ಚಿತ.
ನಿಮ್ಮ ಬದುಕಿನ ಹಾದಿಯಲ್ಲಿ ಮೊದಲ ಪ್ರೇಯಸಿ ಚೆಲ್ಲಿದ ನೆನಪುಗಳನ್ನು ಒಗೆಯಲು ಹಲವು ಗುಟ್ಟುಗಳಿವೆ. ಮೊದಲು ನಿಮ್ಮ ಪ್ರೇಯಸಿ ನೀಡಿದ ಉಡುಗೊರೆಗಳನ್ನು ಯಾರಿಗಾದರೂ ಕೊಟ್ಟು ಬಿಡಿ. ನಿಮ್ಮ ಪ್ರೇಮ ಪತ್ರಗಳನ್ನು ಯಾವುದಾದರೂ ಟ್ರಂಕಿಗೆ ಹಾಕಿ, ಮನೆಯ ಯಾವುದಾದರೂ ಮೂಲೆಯಲ್ಲಿ ಇಟ್ಟುಬಿಡಿ. ಸಾಧ್ಯವಾದಷ್ಟು ನಿಮ್ಮ ಜೀವನದ ಗುರಿಯತ್ತ ಚಿತ್ತ ಹರಿಸಿ. ವಿದ್ಯಾರ್ಥಿಗಳಾದರೆ ಓದಿನ ಕಡೆಗೆ, ಉದ್ಯೋಗಿಯಾಗಿದ್ದರೆ ಕೆಲಸದ ಕಡೆಗೆ ಗಮನ ಕೊಡಿ. ನೀವು ಮಾಡುತ್ತಿರುವ ಕಾರ್ಯವನ್ನು ಆಕೆಗಿಂತ ಹೆಚ್ಚು ಪ್ರೀತಿಸಿ. ಅಲ್ಲಿ ನಿಮಗೆ ಯಶಸ್ಸು ಕಾದಿರುತ್ತದೆ.
ಪ್ರತಿ ಹುಡುಗರ ತಂದೆ- ತಾಯಿಯಂದಿರು, “ಹುಡುಗಿಯರನ್ನು ಚುಡಾಯಿಸಬೇಡಿ, ನೊಯಿಸಬೇಡಿ’ ಎಂದು ಹೇಳುವರು. ಅದೇ ರೀತಿ ಹುಡುಗಿಯರ ತಂದೆ ತಾಯಿಯರು, “ಹುಡುಗರ ಜೀವನದಲ್ಲಿ ಆಟವಾಡಬೇಡಿ’ ಎಂದು ಹೇಳಿದರೆ ಎಷ್ಟೋ ಹುಡುಗರ ಜೀವನ ಸುಖಕರವಾಗಿರುತ್ತದೆ. ನನ್ನ ಮಾತುಗಳು ನಿಮಗೆ ಕಹಿಯಾದರೆ ಕ್ಷಮಿಸಿ.
– ಅನಿಲ್ ಕುಮಾರ್ ಬಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.