ಜಾಗ ಸಮತಟ್ಟು :ನಿಟ್ಟುಸಿರು ಬಿಟ್ಟ ಹೆದ್ದಾರಿ ಪ್ರಯಾಣಿಕರು
Team Udayavani, Feb 7, 2018, 10:50 AM IST
ಬೆಳ್ತಂಗಡಿ: ಮಂಗಳೂರು – ಚಿಕ್ಕಮಗಳೂರು ರಾ.ಹೆ. ಮಧ್ಯೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಸೇತುವೆಗೆ ಅನುದಾನ ಮಂಜೂರಾಗಿ ಕಾಮಗಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಮೃತ್ಯುಂಜಯ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುವ ಜಾಗವನ್ನು ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ.
ಸುಮಾರು 76 ವರ್ಷಗಳ ಹಳೆ ಸೇತುವೆ ಸಂಪೂರ್ಣ ಶಿಥಿಲ ಗೊಂಡಿದ್ದು, ಸೇತುವೆ ಮೇಲಿನ ರಸ್ತೆಯ ಡಾಮರು ಕಿತ್ತು ಹೋಗಿ, ವಾಹನ ಸಂಚಾರಕ್ಕೆ ತೀವ್ರ ತೊಡ ಕಾಗುತ್ತಿದೆ. ಶಿರಾಡಿ ಘಾಟಿ ರಸ್ತೆಯ ಕಾಮಗಾರಿ ನಡೆಯುತ್ತಿರುವ ಕಾರಣ ಎಲ್ಲ ವಾಹನಗಳು ಚಾರ್ಮಾಡಿ ರಸ್ತೆಯನ್ನೇ ಅವಲಂಬಿಸಿದ್ದು, ಅಗಲ ಕಿರಿದಾಗಿರುವ ನಿಡಿಗಲ್ ಸೇತುವೆ ಮೇಲೆ ದಿನಂಪ್ರತಿ ಬ್ಲಾಕ್ ಆಗುತ್ತಿದೆ. ಸೇತುವೆ ಬದಿಯ ತಡೆಬೇಲಿಯೂ ತುಂಡಾಗಿರುವ ಕಾರಣ ಅಪಾಯ ಆಹ್ವಾನಿಸುತ್ತಿದೆ. ಸೇತುವೆ ಮೇಲಿನ ಗುಂಡಿಗೆ ತೇಪೆ ಕಾರ್ಯ ನಡೆಸಲಾಗಿದೆ.
ಆತಂಕದಲ್ಲಿ ಪ್ರಯಾಣಿಕರು
ಬೆಂಗಳೂರು ಸಹಿತ ಹಲವು ಜಿಲ್ಲೆಗಳಿಂದ ಧರ್ಮಸ್ಥಳ, ಕಟೀಲು, ಉಡುಪಿ ಇತ್ಯಾದಿ ಕ್ಷೇತ್ರಗಳಿಗೆ ಆಗಮಿಸುವ ಯಾತ್ರಿಕರಿಗೆ ನಿಡಿಗಲ್ ಸೇತುವೆ ಪ್ರಮುಖ ಕೊಂಡಿಯಾಗಿದ್ದು, ಇದು ಹಲವು ದಶಕಗಳ ಹಿಂದಿನ ನಿರ್ಮಾಣವಾಗಿದ್ದರಿಂದ ಕುಸಿತ ಭೀತಿ ಪ್ರಯಾಣಿಕರನ್ನು ಕಾಡುತಿತ್ತು.
19 ಕೋ.ರೂ. ಮಂಜೂರು
ಬಂಟ್ವಾಳ- ಚಾರ್ಮಾಡಿ ರಾ.ಹೆ.ಯ ಮಣಿಹಳ್ಳ, ನಿಡಿಗಲ್ ಮತ್ತು ಚಾರ್ಮಾಡಿಯ 3 ಸೇತುವೆ ನಿರ್ಮಾಣಕ್ಕೆ 19 ಕೋ.ರೂ. ಅನುದಾನ ಮಂಜೂರುಗೊಂಡಿದ್ದು, ನಿಡಿಗಲ್ ಸೇತುವೆ ಕಾಮಗಾರಿಗೆ ಚಾಲನೆ ದೊರಕಿದೆ.
ಉದಯವಾಣಿ ವರದಿ
ಉದಯವಾಣಿ ಪತ್ರಿಕೆ ಹಲವು ವರ್ಷಗಳಿಂದ ಸರಕಾರದ ಗಮನ ಸೆಳೆದಿತ್ತು. ಶಾಸಕರು ಅನೇಕ ಬಾರಿ ಈ ಸೇತುವೆ ರಚನೆಗೆ ಅನುದಾನ ಒದಗಿಸುವಂತೆ ಮನವಿ ಮಾಡಿದ್ದರು. ಈಗ ಕೊನೆಗೂ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಅನುದಾನ ಮಂಜೂರುಗೊಂಡು ಕಾಮಗಾರಿಗೆ ಚಾಲನೆ ದೊರಕಿದೆ. ಮರಗೋಡಿ ಕನ್ಸ್ಟ್ರಕ್ಷನ್ಸ್ ಸಂಸ್ಥೆ ಇದರ ಗುತ್ತಿಗೆ ವಹಿಸಿಕೊಂಡಿದ್ದು, ಮಳೆಗಾಲ ಹೊರತುಪಡಿಸಿ 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.
ಗುರು ಮುಂಡಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.