ಸಬ್‌ಅರ್ಬನ್‌ಗೆ ಕೋಟಿ ರೂ. ಮೀಸಲು
Team Udayavani, Feb 7, 2018, 12:12 PM IST
ಬೆಂಗಳೂರು: ಉಪನಗರ ರೈಲು ಯೋಜನೆಯನ್ನು 50:50ರ ಪಾಲುದಾರಿಕೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಅನುಮೋದನೆ ನೀಡಿದ್ದು, ಈ ಸಂಬಂಧ ಮುಂಗಡವಾಗಿ ಒಂದು ಕೋಟಿ ರೂ. ಮೀಸಲಿಟ್ಟಿದೆ. ಈ ಮೂಲಕ ಬೆಂಗಳೂರಿಗರ ದಶಕದ ಕನಸು ಕೊನೆಗೂ ನನಸಾಗಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ನಂತರ ಮಂಗಳವಾರ ರೈಲ್ವೆ “ಪಿಂಕ್ ಬುಕ್’ ಅನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಉದ್ದೇಶಿತ ಉಪನಗರ ರೈಲು ಯೋಜನೆ ಬಗ್ಗೆ ಅದರಲ್ಲಿ ಉಲ್ಲೇಖಗೊಂಡಿದೆ. ಅದರಂತೆ ಯೋಜನೆಗೆ ತಗಲುವ ವೆಚ್ಚವನ್ನು ಶೇ.50 ಕೇಂದ್ರ ಮತ್ತು ಶೇ.50ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲಿದೆ. 160 ಕಿ.ಮೀ. ವ್ಯಾಪ್ತಿಯಲ್ಲಿ ಉಪನಗರ ರೈಲ್ವೆ ಜಾಲ ವಿಸ್ತಾರಗೊಳ್ಳಲಿದೆ.
12,061 ಕೋಟಿ?: 17 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. ಆದರೆ, ರೈಲ್ವೆ ಪಿಂಕ್ ಬುಕ್‌ನಲ್ಲಿ 12,061 ಕೋಟಿ ರೂ. ಯೋಜನೆ ಎಂದು ಉಲ್ಲೇಖೀಸಲಾಗಿದೆ. 160 ಕಿ.ಮೀ ಉದ್ದದ ಈ ಯೋಜನೆ ಮುಂದಿನ ಹಂತಗಳಲ್ಲಿ 440 ಕಿ.ಮೀ. ವ್ಯಾಪ್ತಿಗೆ ವಿಸ್ತರಣೆ ಆಗಲಿದೆ.
ಇನ್ನು ಈಚೆಗೆ ದೇಶದ ಉಪನಗರ ರೈಲು ಯೋಜನೆಗಳಿಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ರೈಲ್ವೆ ಇಲಾಖೆ ರೂಪಿಸಿತ್ತು. ಅದರಂತೆ ಯೋಜನಾ ವೆಚ್ಚವನ್ನು ಶೇ. 80ರಷ್ಟು ರಾಜ್ಯ ಸರ್ಕಾರ ಹಾಗೂ ಉಳಿದ ಶೇ. 20ರಷ್ಟು ಮಾತ್ರ ಕೇಂದ್ರ ಸರ್ಕಾರ ಭರಿಸಲಿದೆ ಎಂದು ಸೂಚಿಸಲಾಗಿತ್ತು. ಇದು ಸರ್ಕಾರದ ಮೇಲಿನ ಆರ್ಥಿಕ ಹೊರೆಗೆ ಕಾರಣವಾಗಿತ್ತು. ಹಾಗಾಗಿ, ಯೋಜನೆ ಅನುಷ್ಠಾನದ ಮೇಲೆ ಇದರ ಪರಿಣಾಮ ಉಂಟಾಗಿತ್ತು.
ಇದಾದ ನಂತರ ಈಚೆಗೆ ರೈಲ್ವೆ ಸಚಿವರು, ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಐದು ಕಡೆ ಫ್ಲೋರ್ ಸ್ಪೇಸ್ ಇಂಡೆಕ್ಸ್ ನಗರದ ಪ್ರಮುಖ ಐದು ಕಡೆಗಳಲ್ಲಿ ಫ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್ಎಸ್‌ಐ)ಗೆ ಅನುಮತಿ ನೀಡಿದರೆ, 50:50ರ ಅನುಪಾತದಲ್ಲಿ ಯೋಜನೆ ಅನುಷ್ಠಾನದ ಷರತ್ತು ವಿಧಿಸಿದ್ದರು. ಈಗ ಇದಾವುದರ ಆತಂಕವೂ ಇಲ್ಲ. ಬಜೆಟ್‌ನಲ್ಲಿಯೇ ಇದನ್ನು ಸಚಿವ ಅರುಣ್ ಜೇಟ್ಲಿ ಘೋಷಿಸುವ ಮೂಲಕ ಗೊಂದಲಕ್ಕೆ ತೆರೆಎಳೆದಿದ್ದಾರೆ. ಜತೆಗೆ ಪಿಂಕ್ ಬುಕ್‌ನಲ್ಲಿ ಹಣ ಒಂದು ಕೋಟಿ ರೂ. ಮೀಸಲಿಟ್ಟಿದ್ದಾರೆ.
ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. ಜ್ಞಾನಭಾರತಿಯಲ್ಲಿ ಸುಮಾರು 30 ಎಕರೆ ಹಾಗೂ ಎನ್‌ಜಿಎಫ್ನಲ್ಲಿ 40 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈಗ ಬಿಎಂಆರ್‌ಸಿ ಮಾದರಿಯಲ್ಲೇ ತ್ವರಿತವಾಗಿ ಸಬ್ ಅರ್ಬನ್‌ಗೆ ಎಸ್‌ಪಿವಿ (ಸ್ಪೇಷಲ್ ವೇಹಿಕಲ್ ಪರ್ಪಸ್) ನಿರ್ಮಿಸಬೇಕು ಎಂದು ಪ್ರಜಾರಾಗ್ ವೇದಿಕೆ ಸದಸ್ಯ ಸಂಜೀವ್ ದ್ಯಾಮಣ್ಣವರ ತಿಳಿಸಿದ್ದಾರೆ.
ಸ್ವಾಗತಾರ್ಹ: ಸಬ್ ಅರ್ಬನ್ ಯೋಜನೆ ಜತೆಗೆ 535 ಕೋಟಿ ರೂ. ವೆಚ್ಚದ ಯಶವಂತಪುರ-ಹೊಸೂರು ಜೋಡಿ ಮಾರ್ಗ, 250 ರೂ.ಗಳಲ್ಲಿ ಡೆವಲಪ್‌ಮೆಂಟ್ ಕೋಚಿಂಗ್ ಟರ್ಮಿನಲ್, ಆಟೋಮೆಟಿಕ್ ಸಿಗ್ನಲಿಂಗ್, ಆಧುನೀಕರಣ, ಸ್ಟೇಬಲಿಂಗ್ ಲೈನ್‌ಗಳಿಗೆ ಅನುಮೋದನೆ ನೀಡಲಾಗಿದೆ. ಮೆಮು ಶೆಡ್ ಮೇಲ್ದರ್ಜೆಗೇರಿಸಲು 26 ಕೋಟಿ ರೂ., ಚಿಕ್ಕಬಾಣಾವರ-ಹುಬ್ಬಳ್ಳಿ ಮಾರ್ಗಕ್ಕೆ 10 ಕೋಟಿ ರೂ.,
ಬೈಯಪ್ಪನಹಳ್ಳಿ 3ನೇ ಕೋಚಿಂಗ್ ಟರ್ಮಿನಲ್‌ಗೆ 45 ಕೋಟಿ ರೂ. ನೀಡಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ರಾಜ್ಯದ ರೈಲ್ವೆಗೆ ಸಮರ್ಪಕ ಅನುದಾನ ದೊರಕಿದೆ ಎಂದು ಕರ್ನಾಟಕ ರೈಲ್ವೆ ವೇದಿಕೆ ಸದಸ್ಯ ಟಿ.ಪಿ. ಲೋಕೇಶ್ ಅಭಿಪ್ರಾಯಪಡುತ್ತಾರೆ. ಆದರೆ, 500 ಕೋಟಿ ವೆಚ್ಚದಲ್ಲಿ ಕಂಟೋನ್ಮೆಂಟ್-ವೈಟ್‌ಫೀಲ್ಡ್ ನಡುವಿನ ಚತುಷ್ಪಥ ಮಾರ್ಗ ನಿರ್ಮಾಣದ ಪ್ರಸ್ತಾವನೆ ಬಗ್ಗೆ ಪ್ರಸ್ತಾಪ ಆಗದಿರುವುದು ಬೇಸರ ತಂದಿದೆ.
ರೈಲ್ವೆ ವಿದ್ಯುದ್ದೀಕರಣಕ್ಕೆ ಹೆಚ್ಚು ಒತ್ತು
ಹುಬ್ಬಳ್ಳಿ: ಕೇಂದ್ರ ಸರಕಾರ ಮಂಡಿಸಿದ 2018-19ನೇ ಸಾಲಿನ ಮುಂಗಡ ಪತ್ರದಲ್ಲಿ ನೈಋತ್ಯ ರೈಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ವಿದ್ಯುದ್ದೀಕರಣ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ತಿಳಿಸಿದರು.
ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸಬ್ ಅರ್ಬನ್ ನೆಟ್‌ವರ್ಕ್ 160 ಕಿ.ಮೀ. ನಿರ್ಮಾಣಕ್ಕೆ 17,000 ಕೋಟಿ ರೂ. ಹಾಗೂ 2 ಡಬ್ಲಿಂಗ್ ಪ್ರಾಜೆಕ್ಟ್ಗಳಿಗೆ 545 ಕೋಟಿ ರೂ. ಘೋಷಿಸಲಾಗಿದೆ ಎಂದರು.
ಹೊಸಪೇಟೆ-ಸ್ವಾಮಿಹಳ್ಳಿ (59 ಕಿ.ಮೀ), ಬಿರೂರ-ತಾಳಗುಪ್ಪ (161 ಕಿ.ಮೀ.), ಮೈಸೂರು-ಹಾಸನ-ಮಂಗಳೂರು (347 ಕಿ.ಮೀ), ಮೈಸೂರು-ಚಾಮರಾಜನಗರ (61 ಕಿ.ಮೀ), ಕಡೂರು-ಚಿಕ್ಕಮಗಳೂರು (46 ಕಿ.ಮೀ.), ಚಿಕ್ಕಬಾಣಾವರ-ಹಾಸನ (166 ಕಿ.ಮೀ.), ಬಂಗಾರಪೇಟೆ-ಯಲಹಂಕ (149 ಕಿ.ಮೀ) ಸೇರಿ ಒಟ್ಟು 989 ಕಿ.ಮೀ. 919.44 ಕೋಟಿ ರೂ. ವೆಚ್ಚದಲ್ಲಿ ಇಲೆಕ್ಟ್ರಿಫಿಕೇಶನ್ ಮಾಡಲಾಗುವುದು ಎಂದರು.
ಗದಗ-ಕೋಟುಮಚಗಿ-ನರೇಗಲ್ಲ-ಗಜೇಂದ್ರಗಡ-ಹನುಮಸಾಗರ-ಇಳಕಲ್ಲ-ಲಿಂಗಸೂಗೂರು-ಕೃಷ್ಣಾ (216 ಕಿ.ಮೀ.) ಹಾಗೂ ಚಂದರಗಾಂವ-ಕನಸೌಲಿಮ್, ಸಲೆಮ್-ಚನ್ನಸಂದ್ರ, ಸಲೆಮ್-ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ-ಚನ್ನಸಂದ್ರದಲ್ಲಿ 4 ಫ್ಲೈಓವರ್‌ಗೆ ಸಮೀಕ್ಷೆ ಕಾರ್ಯಕ್ಕೆ ಅನುಮತಿ ಸಿಕ್ಕಿದೆ ಎಂದರಲ್ಲದೇ 5 ರೈಲ್ ಓವರ್ ಬ್ರಿಡ್ಜ್, 23 ರೈಲ್ ಅಂಡರ್ ಬ್ರಿಡ್ಜ್ ನಿರ್ಮಿಸಲು 131.89 ಕೋಟಿ ರೂ. ಘೋಷಿಸಲಾಗಿದೆ ಎಂದರು.
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಬಾರಿ 3,353 ಕೋಟಿ ರೂ. ಅನುದಾನ ನೀಡಲಾಗಿದ್ದು, 2009ರಿಂದ 2014ರವರೆಗೆ ನೀಡಲಾದ ಅನುದಾನಕ್ಕೆ ಹೋಲಿಸಿದರೆ ಶೇ.301 ಪಟ್ಟು ಹೆಚ್ಚು ಮೊತ್ತ ಮೀಸಲಿಟ್ಟಂತಾಗಿದೆ.
-ಪಿಯೂಷ್ ಗೋಯಲ್, ರೈಲ್ವೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.