ರಿಷಭ ರಾಣಿ ಪ್ರಗತಿ


Team Udayavani, Feb 7, 2018, 4:55 PM IST

rishbaha.jpg

ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರಗಳ ನಿರ್ದೇಶಕರಲ್ಲೊಬ್ಬರು ಕಿರಿಕ್‌ ಪಾರ್ಟಿ ನಿರ್ದೇಶಕ ರಿಷಭ್‌ ಶೆಟ್ಟಿ. ಅವರು ನಿಜಕ್ಕೂ “ಪ್ರಗತಿ’ ಪರ. ಅವರ ಯಾವುದೇ ಸಿನಿಮಾ ನೋಡಿ ಈ ಮಾತನ್ನು ಹೇಳುತ್ತಿಲ್ಲ. ಪತಿರಾಯರು ಯಾವತ್ತೂ ಪತ್ನಿ ಪರ ಅಲ್ಲವೇ? ಅಂತಾರಾಷ್ಟ್ರೀಯ ಮಟ್ಟದ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಪ್ರಗತಿ ರಿಷಭ್‌ ಶೆಟ್ಟಿ ಈಗ ಪೂರ್ಣ ಪ್ರಮಾಣದ ಕಾಸ್ಟೂಮ್‌ ಡಿಸೈನರ್‌.

ಸಹಿಪ್ರ ಪಾಠ ಶಾಲೆ ಕಾಸರಗೋಡು, ಬೆಲ್‌ಬಾಟಂ, ಕಥಾ ಸಂಗಮ ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ವಸ್ತ್ರವಿನ್ಯಾಸದಲ್ಲಿ ಕೋರ್ಸ್‌ ಕೂಡ ಮಾಡುತ್ತಿದ್ದಾರೆ. ತೆರೆ ಮೇಲೆ ಬರುವುದಕ್ಕಿಂತ ತೆರೆ ಹಿಂದೆ ಕೆಲಸ ಮಾಡುವುದೇ ಥ್ರಿಲ್ಲಿಂಗ್‌ ಆಗಿರುತ್ತದೆ ಎಂಬುದು ಇವರ ಸ್ಟೇಟ್‌ಮೆಂಟ್‌. 

ನಮ್ಮಿಬ್ಬರದ್ದು ಸಿಂಪಲ್ಲಾಗೊಂದ್‌ ಲವ್‌ ಸ್ಟೋರಿ: ರಿಷಭ್‌ ಮತ್ತು ನನ್ನ ಲವ್‌ ಸ್ಟೋರಿ ಮೀಡಿಯಾದಲ್ಲಿ ಚಿತ್ರವಿಚಿತ್ರ ತಿರುವುಗಳನ್ನು ಪಡೆದುಕೊಂಡಿದೆ. ನಮ್ಮದು ತುಂಬಾ ಸಿಂಪಲ್‌ ಲವ್‌ ಸ್ಟೋರಿ. ನಾವೊಂದಷ್ಟು ಜನ ಫ್ರೆಂಡ್ಸ್‌ “ರಿಕ್ಕಿ’ ಚಿತ್ರ ನೋಡಲು ಮಾಲ್‌ಗೆ ಹೋಗಿದ್ದಾಗ ರಿಷಭ್‌ ಮತ್ತು ನಟ ಪ್ರಮೋದ್‌ ಥಿಯೇಟರ್‌ ವಿಸಿಟ್‌ಗೆ ಬಂದಿದ್ದರು.

ನಾವು ಅವರ ಜೊತೆ ಮಾತನಾಡುವಾಗ, ನನ್ನ ಫ್ರೆಂಡ್ಸ್‌ ನಿಮ್ಮ ಮುಂದಿನ ಚಿತ್ರದಲ್ಲಿ ಇವಳಿಗೆ ಛಾನ್ಸ್‌ ಕೊಡಿ ಇವಳು ಡಬ್‌ಸ್ಮಾಶ್‌ ತುಂಬಾ ಚೆನ್ನಾಗಿ ಮಾಡ್ತಾಳೆ ಅಂತೆಲ್ಲಾ ಕೀಟಲೆ ಮಾಡಿದ್ರು. ರಿಷಭ್‌ರನ್ನು ಅಲ್ಲಿ ಮೀಟ್‌ ಮಾಡುವ ಮೊದಲೇ ನಾನು ಅವರ ಫೇಸ್‌ಬುಕ್‌ ಫ್ರೆಂಡ್‌ ಆಗಿದ್ದೆ. ಹಾಗಾಗಿ ಅವರಿಗೆ ನನ್ನನ್ನು ಎಲ್ಲೋ ನೋಡಿದ್ದೇನೆ ಅಂತ ಅನ್ನಿಸಿತಂತೆ.

ಮನೆಗೆ ಹೋಗಿ ಫೇಸ್‌ಬುಕ್‌ನಲ್ಲಿ ಹುಡುಕಾಡಿ ನನ್ನ ಪ್ರೊಫೈಲ್‌ ನೋಡಿದ್ದರು. ನನ್ನ ಫೋಟೊವನ್ನು ಅವರ ಮನೆಯವರಿಗೆಲ್ಲಾ ತೋರಿಸಿದರಂತೆ. ಆಮೇಲೆ ಅವರ ಮನೆಯವರು ನನ್ನ ಕುಟುಂಬಸ್ಥರ ಬಳಿ ಮದುವೆ ಪ್ರಪೋಸಲ್‌ ನೀಡಿದರು. ಮನೆಯವರೆಲ್ಲಾ ಒಪ್ಪಿದರು, ನಾನೂ ಒಪ್ಪಿದೆ. ಇಷ್ಟೇ ಆದದ್ದು.

* ಒಮ್ಮೆಲೇ ವಸ್ತ್ರ ವಿನ್ಯಾಸಕಿ ಆದಿರಿ. ಇದಕ್ಕಾಗಿ ಮೊದಲೇ ಏನಾದರೂ ತಯಾರಿ ಮಾಡಿದ್ರಾ?
ಪಿಯುಸಿ ಮುಗಿಯುತ್ತಿದಂತೆ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಮಾಡಬೇಕು ಅಂತ ಆಸೆ ಇತ್ತು. ಆದರೆ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ನ್ನು ಡಿಗ್ರಿ ಅಂತ ಪರಿಗಣನೆ ಮಾಡುವುದಿಲ್ಲ. ಅದಕ್ಕೆ ಮನೆಯಲ್ಲಿ ಡಿಗ್ರಿಗೆ ಸೇರು ಅಂತ ಹೇಳಿದರು. ಡಿಗ್ರಿ ಓದುತ್ತಿರುವಾಗಲೇ ವಿಪ್ರೊ ಕಂಪನಿಗೆ ಕ್ಯಾಂಪಸ್‌ ಸೆಲೆಕ್ಷನ್‌ ಆಯಿತು. ಕೆಲಸಕ್ಕೆ ಅಂತ ಹೇಗೂ ಬೆಂಗಳೂರಿಗೆ ಹೋಗುತ್ತೀನಿ ಅಲ್ಲಿ ಫ್ಯಾಷನ್‌ ಡಿಸೈನಂಗ್‌ ಕೋರ್ಸ್‌ಗೆ ಸೇರಬಹುದು ಅಂದೊRಂಡೆ.

ಆದರೆ ಕೆಲಸದ ಒತ್ತಡದಲ್ಲಿ ಅದು ಸಾಧ್ಯವಾಗಲೇ ಇಲ್ಲ. ಮದುವೆಯಾದ ಮೇಲೆ ಅದಕ್ಕೆ ಅವಕಾಶ ಸಿಕ್ಕಿದೆ. ಈಗ “ನಿಫ್ಟ್’ನಲ್ಲಿ ಡಿಸೈನಿಂಗ್‌ ಕೋರ್ಸ್‌ ಮಾಡುತ್ತಿದ್ದೇನೆ. ಇಷ್ಟು ಬೇಗ ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡುವ ಅವಕಾಶ ಸಿಗುತ್ತಿದೆ ಅಂತ ಅಂದುಕೊಂಡಿರಲಿಲ್ಲ. ಸಧ್ಯ 3 ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡ್ತಾ ಇದ್ದೀನಿ.

* ಸ.ಹಿ.ಪ್ರಾ. ಪಾಠ ಶಾಲೆ ಕಾಸರಗೋಡು ಚಿತ್ರಕ್ಕೆ ಎಲ್ಲಾ ಪಾತ್ರಗಳಿಗೂ ವಸ್ತ್ರವಿನ್ಯಾಸ ಮಾಡುವುದು ಕಷ್ಟ ಆಗುತ್ತಿಲ್ವಾ?
ಸ.ಹಿ.ಪ್ರಾ. ಪಾಠ ಶಾಲೆ ಕಾಸರಗೋಡು ಚಿತ್ರದಲ್ಲಿ ನಾನು ಎಲ್ಲಾ ಪಾತ್ರಗಳಿಗೂ ವಸ್ತ್ರವಿನ್ಯಾಸ ಮಾಡುತ್ತಿದ್ದೇನೆ. ಇದು ನನಗೆ ತುಂಬಾ ಚಾಲೆಂಜಿಂಗ್‌ ಆಗಿದೆ. 80ರ ದಶಕದಲ್ಲಿ ನಡೆದ ಕಥೆ ಇದಾಗಿರುತ್ತದೆ. ಇದಕ್ಕೆ ಎಲ್ಲಾ ಪಾತ್ರಗಳು 30 ವರ್ಷಗಳು ಹಿಂದಿನವರಂತೆ ಕಾಣುವಂತೆ ವಸ್ತ್ರ ವಿನ್ಯಾಸ ಮಾಡಬೇಕು.

ಜೊತೆಗೆ ವಸ್ತ್ರಗಳು ಕಾಸರಗೋಡು ಪರಿಸರದಲ್ಲಿ ಸಹಜವಾಗಿ ಕಾಣುವಂತೆ ಇರಬೇಕು. ಇದಕ್ಕಾಗಿ ಸಾಕಷ್ಟು ಹೋಂವರ್ಕ್‌ ಮಾಡಿದ್ದೇನೆ. ನಾನು ಮಾಡಿರುವ ವಸ್ತ್ರವಿನ್ಯಾಸ ಹೇಗೆ ತೆರೆಮೇಲೆ ಹೇಗೆ ಕಾಣುತ್ತದೆ ಎಂಬ ಕುತೂಹಲ ನನಗೂ ಇದೆ. ರಿಷಭ್‌ ನಿರ್ದೇಶಿಸುತ್ತಿರುವ ಕಥಾ ಸಂಗಮದ ಮೂರು ಕಥೆಗಳಿಗೂ ವಸ್ತ್ರ ವಿನ್ಯಾಸ ಮಾಡುತ್ತಾ ಇದ್ದೀನಿ. 

* ತೆರೆ ಮೇಲೆ ಕಾಣಿಸಿಕೊಳ್ಳುವುದು ಯಾವಾಗ?
ರಿಷಭ್‌ರನ್ನು ಮದುವೆಯಾಗುವ ಮೊದಲಿನಿಂದಲೂ ನನಗೆ ಸಿನಿಮಾದಲ್ಲಿ ತೆರೆಹಿಂದೆ ಏನೇನು ನಡೆಯುತ್ತವೆ ಎಂಬ ಬಗ್ಗೆಯೇ ಹೆಚ್ಚು ಆಸಕ್ತಿ ಇದ್ದಿದ್ದು. ಮದುವೆಯಾದ ಬಳಿಕ ಇದನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು. ಈಗಲೂ ನನಗೆ ತೆರೆಹಿಂದಿನ ಕೆಲಸವೇ ಆಸಕ್ತಿದಾಯಕ ಅಂತನಿಸುತ್ತೆ.

ರಿಷಭ್‌ರನ್ನು ಮೊದಲ ಬಾರಿಗೆ ಭೇಟಿಯಾದಾಗಲೂ ನಾನು ನನಗೆ ಕಾಸ್ಟೂಮ್‌ ಡಿಸೈನಿಂಗ್‌ನಲ್ಲಿ ಆಸಕ್ತಿ ಇದೆ ಅಂತಲೇ ಹೇಳಿದ್ದು. ನಟಿಸುವ ಆಸೆ ಇಲ್ಲವೇ ಇಲ್ಲ ಅಂತ ಅಲ್ಲ. ನಾನು ಮದುವೆಯಾಗಿರುವ ಹುಡುಗಿ. ನನಗೆ ತಕ್ಕನಾದ ಪಾತ್ರ ಸಿಕ್ಕರೆ ಖಂಡಿತ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ. ಇಲ್ಲದಿದ್ದರೆ ಇಲ್ಲ. 

* ವೃಷಭ್‌ ಫ್ರೆಂಡ್ಸ್‌ ಗ್ಯಾಂಗ್‌ನಲ್ಲಿ ನೀವೊಬ್ಬರೇ ಸಿನಿಮಾ ಹಿನ್ನಲೆ ಇಲ್ಲದವರು. ಅವರ ಗ್ಯಾಂಗ್‌ ಸದಸ್ಯರು ನಿಮ್ಮನ್ನು ಹೇಗೆ ಸ್ವಾಗತಿಸಿದರು?
ವೃಷಬ್‌ ಗ್ಯಾಂಗ್‌ನಲ್ಲಿ ಇರುವವರೆಲ್ಲರೂ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದವರೇ ಆದರೂ ನಾನು ಅವರಲ್ಲಿ ಒಬ್ಬಳು ಅಂತ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ರಕ್ಷಿತ್‌, ರಶ್ಮಿಕಾ, ಯಜ್ಞಾ ಶೆಟ್ಟಿ, ಶೀತಲ್‌ ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿರುವವರು. ನಾವೆಲ್ಲರೂ ಆಗಾಗ ಭೇಟಿಯಾಗುತ್ತಲೇ ಇರುತ್ತೇವೆ. ಟ್ರಿಪ್‌ ಹೋಗುತ್ತೇವೆ. ತುಂಬಾ ಮಜಾ ಮಾಡುತ್ತೇವೆ. ಅವರೂ ಸದಾ ಸಿನಿಮಾಗಳ ಬಗ್ಗೆಯೇ ಚೆರ್ಚೆ ಮಾಡುತ್ತಾ ಇರ್ತಾರೆ. 

* ನಿಮ್ಮಿಬ್ಬರ ಶಾಪಿಂಗ್‌ ಹೇಗಿರುತ್ತದೆ? 
ರಿಷಭ್‌ ಮದುವೆ ಶಾಪಿಂಗನ್ನೇ ಅರ್ಧ ಗಂಟೆಯಲ್ಲಿ ಮುಗಿಸಿದ್ದರು. ನಾನು ತಿಂಗಳುಗಟ್ಟಲೆ ಶಾಪಿಂಗ್‌ ಮಾಡಿದ್ದೆ. ಅವರು ಶಾಪಿಂಗ್‌ಗೆ ತುಂಬಾ ಕಡಿಮೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ನನಗೆ ಶಾಂಪಿಂಗ್‌ ಎಲ್ಲದ್ದಕ್ಕಿಂತ ಮುಖ್ಯ. ನನ್ನ ನಿರೀಕ್ಷೆಗೆ ತಕ್ಕ ವಸ್ತು ಸಿಗಲಿಲ್ಲ ಎಂದರೆ ಇಡೀ ದಿನ ಬೇಕಾದರೂ ಅದಕ್ಕಾಗಿ ಹುಡುಕಾಟ ನಡೆಸುತ್ತೇನೆ. ನನ್ನ ಜೊತೆ ಶಾಪಿಂಗ್‌ ಮಾಡುವಷ್ಟು ವೃಷಬ್‌ಗ ಬಿಡುವಿರುವುದಿಲ್ಲ. ಅವರು ಗಡಿಬಿಡಿಯಲ್ಲಿ ಶಾಪಿಂಗ್‌ ಮಾಡಿ ಕೊಂಡ ಬಟ್ಟೆಬರೆ ನನಗೆ ಇಷ್ಟ ಆಗಲ್ಲ. ಹೀಗಾಗಿ ನಾನು ಶಾಪಿಂಗ್‌ಗೆ ಹೋದಾಗ ಅವರಿಗೂ ನಾನೇ ಬಟ್ಟೆ, ಆ್ಯಕ್ಸಸರೀಸ್‌ ಖರೀದಿ ಮಾಡ್ತೀನಿ.

* ರಿಷಭ್‌ಗೆ ಪ್ರಿಯವಾದ ಅಡುಗೆಗಳಲ್ಲಿ ಯಾವ ಅಡುಗೆಗಳು ನಿಮಗೆ ಇಷ್ಟ ಆಗಲ್ಲ?
ನನಗೆ ನಾನ್‌ವೆಜ್‌ ಅಡುಗೆ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಸ್ಪೈಸಿ ಚಿಕನ್‌ ಪ್ರೈ, ಫಿಶ್‌ ಫ್ರೈ ತುಂಬಾ ಇಷ್ಟ. ನಾನ್‌ವೆಜ್‌ ಇಲ್ಲದಿದ್ದರೆ ನನಗೆ ಊಟ ಗಂಟಲಲ್ಲಿ ಇಳಿಯುವುದೇ ಇಲ್ಲ. ಆದರೆ ರಿಷಭ್‌ ಸಂಪೂರ್ಣ ತದ್ವಿರುದ್ಧ. ಅವರಿಗೆ ಸಿಹಿ ಅಡುಗೆ ಬಹಳ ಇಷ್ಟ. ವಾರಕ್ಕೊಮ್ಮೆ ಏನಾದರೂ ಸಿಹಿ ಅಡುಗೆ ಅವರಿಗಾಗಿ ತಯಾರಿಸಲೇ ಬೇಕು.

ನನಗೆ ಸಿಹಿ ಅಷ್ಟಕ್ಕಷ್ಟೇ. ನಾನು ಮೊದಲಿನಿಂದಲೂ ಬಹಳಾ ಫ‌ೂಡ್ಡಿ, ಪ್ರತಿ ದಿನ ಏನಾದರೂ ಜಂಕ್‌ ಫ‌ೂಡ್‌ ಬೇಕೇಬೇಕಿತ್ತು. ಈಗ ರಿಷಭ್‌ ಜೊತೆ ಸೇರಿ ಆರೋಗ್ಯಕರ ಆಹಾರ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಜಂಕ್‌ ಫ‌ುಡ್‌ಗೆ ಸ್ವಲ್ಪ ಕಡಿವಾಣ ಹಾಕಿದ್ದೇನೆ. 

* ಮದುವೆಗೂ ಮೊದಲು ಮತ್ತು ನಂತರ ನಿಮ್ಮಬ್ಬರ ಸಂಬಂಧದಲ್ಲಿ ಏನು ವ್ಯತ್ಯಾಸ ಆಗಿದೆ. 
ಮದುವೆಗೂ ಮೊದಲು ಅವರನ್ನು ಭೇಟಿಯಾಗುವುದೇ ನನಗೆ ಸಾಹಸದಂತಿರುತ್ತಿತ್ತು. ಸದಾ ಬ್ಯುಸಿ ಅಂತ ಹೇಳ್ತಾ ಇರೋರು. ಇವರನ್ನು ಮದುವೆಯಾದ ಮೇಲೆ ಏನು ಕಥೆ, ಆಗಲೂ ಇವರು ಹೀಗೇ ಬ್ಯುಸಿ, ಬ್ಯುಸಿ ಅಂತಾ ಇದ್ರೆ ಏನು ಮಾಡೋದು ಅಂತ ಯೋಚನೆ ಮಾಡ್ತಿದ್ದೆ.

ಈಗ ಒಂದೇ ಸೂರಿನ ಅಡಿ ಇರುವುದರಿಂದ ಅವರು ಎಷ್ಟು ಬ್ಯುಸಿ ಇರುತ್ತಾರೆ. ಅವರ ಕೆಲಸ ಹೇಗಿರುತ್ತದೆ ಎಂದು ಅರ್ಥ ಆಗಿದೆ. ಅವರು ಎಲ್ಲಾ ಅವರ ಕೆಲಸಗಳಲ್ಲಿ ನನ್ನನ್ನೂ ಸೇರಿಸಿಕೊಳ್ಳುತ್ತಾರೆ. ಇದರಿಂದ ಈಗ ಅವರೊಟ್ಟಿಗೆ ಹೆಚ್ಚು ಸಮಯ ಕಳೆಯಲು ಸಿಗುತ್ತಿದೆ. 

* ಅಡುಗೆ ತುಂಬಾ ಚನ್ನಾಗಿ ಮಾಡ್ತೀರ ಅಂತ ರಿಷಭ್‌ ಸರ್ಟಿಫಿಕೇಟ್‌ ಕೊಟ್ಟಿದಾರೆ!
ಮುಂಚೆ ಅಡುಗೆ ಮಾಡಲು ಸ್ವಲ್ಪವೂ ಬರ್ತಾ ಇರಲಿಲ್ಲ. ಮದುವೆಯಾದ ಮೇಲೆ ಎಲ್ಲಾ ಅಡುಗೆಯನ್ನೂ ಮಾಡಲು ಕಲಿತಿದ್ದೇನೆ. ಏನಾದರು ಗೊತ್ತಾಗಲಿಲ್ಲ ಎಂದರೆ ಯುಟ್ಯೂಬ್‌ ನೋಡಿ ಮಾಡುತ್ತೇನೆ.

* ಕಾಲೇಜ್‌ನಲ್ಲಿ ನಿಮಗೆ ರ್ಯಾಗ್‌ ಮಾಡ್ತಾ ಇದ್ರಾ?
ನಾನು ಓದಿದ್ದೆಲ್ಲಾ ಶಿವಮೊಗ್ಗದಲ್ಲಿ. ನಮ್ಮದು ತುಂಬಾ ಸಂಪ್ರದಾಯಸ್ಥ ಕುಟುಂಬ. ತಲೆತಗ್ಗಿಸಿಕೊಂಡು ಕಾಲೇಜ್‌ಗೆ ಹೋಗಬೇಕು, ತಲೆತಗ್ಗಿಸಿಕೊಂಡು ಮನೆಗೆ ಬರಬೇಕು ಅಂತ ಮನೆಯಲ್ಲಿ ಸ್ಟ್ರಿಕ್ಟ್ ಆಗಿ ಹೇಳಿದ್ದರು. ನಾನು ತಲೆತಗ್ಗಿಸಿಕೊಂಡೇ ಹೋದ್ರು ಹುಡುಗರು ರ್ಯಾಗ್‌ ಮಾಡಲು ಬಿಡುತ್ತಿರಲಿಲ್ಲ. ಕ್ಲಾಸ್‌ ನಡೆಯುವಾಗ ಕಿಟಕಿ ಬಳಿ ಬಂದು ಹೆಸರು ಕೂಗುತ್ತಿದ್ದರು. ತುಂಬಾ ಮುಜುಗರ ಆಗ್ತಾ ಇತ್ತು. ನಾನು ಕೆಲಸಕ್ಕೆ ಸೇರಿದ ಮೇಲೆಯೇ ತಲೆ ಎತ್ತಿಕೊಂಡು ಓಡಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದು. 

* ನಿಮ್ಮ ಗ್ಲೋಯಿಂಗ್‌ ತ್ವಚೆ ರಹಸ್ಯ ಏನು?
ಜಾನ್ಸನ್‌ ಬೇಬಿ ಉತ್ಪನ್ನಗಳು. ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಜಾನ್ಸನ್‌ ಬೇಬಿ ಸೋಪ್‌, ಪೌಡರ್‌, ಬಾಡಿಲೋಷನ್‌, ಶಾಂಪೂ ಬಿಟ್ಟು ನಾನು ಬೇರೆ ಯಾವ ಪ್ರಾಡಕ್ಟ್ಗಳನ್ನು ಬಳಸಿಯೇ ಇಲ್ಲ. ಮೊದಲಿಂದಲೂ ನನಗೆ ಪಾರ್ಲರ್‌ಗೆ ಹೋಗುವ ಅಭ್ಯಾಸವೇ ಇಲ್ಲ. ಈಗಲೂ ನನಗೆ ಪಾರ್ಲರ್‌ಗಳಿಗೆ ಹೋಗುವ ಮನಸ್ಸಾಗಲ್ಲ. ಈಗೀಗ ಕೆಲವೊಮ್ಮೆ ಯಾವುದರೂ ಕಾರ್ಯಕ್ರಮಕ್ಕೆ ಮೇಕಪ್‌ ಮಾಡಿಸಿಕೊಳ್ಳುತ್ತೇನೆ. ಆಗಲೂ ಬೇಸ್‌ ಪೌಡರ್‌ ಆಗಿ ಜಾನ್ಸನ್‌ ಬೇಬಿ ಪೌಡರ್ರೆà ಬಳಸುತ್ತೇನೆ. 

* ರಿಷಭ್‌ ಬೆಲ್‌ ಬಾಟಂ ಚಿತ್ರದಿಂದ ಹೀರೊ ಆಗಿ ಬಡ್ತಿ ಪಡೆದಿದ್ದಾರೆ. ನಿಮಗೆ ಏನನ್ನಿಸುತ್ತಿದೆ?
ರಿಷಭ್‌ ಚಿತ್ರರಂಗಕ್ಕೆ ಬಂದಿದ್ದೇ ಹೀರೊ ಆಗುವ ಕನಸ್ಸು ಹೊತ್ತುಕೊಂಡು. ಆದರೆ ಅವರು ನಿರ್ದೇಶಕರಾಗಿ ನೆಲೆ ನಿಂತರು. 10 ವರ್ಷಗಳ ಬಳಿಕ ಅವರ ಕನಸು ನನಸಾಗುತ್ತಿದೆ. ನನಗೆ ಮತ್ತು ನಮ್ಮ ಕುಟುಂಬದ ಎಲ್ಲರಿಗೂ ತುಂಬಾ ಖುಷಿ ಆಗಿದೆ. 

ನಾನೂ, ಅವರೂ ಒಳ್ಳೆ ಜೋಡಿ!: ನನಗೆ ಮೊದಲಿನಿಂದಲೂ ಸಿನಿಮಾ ಹುಚ್ಚು. ಐಟಿ ಕಂಪನಿಯಲ್ಲಿ ಕೆಲಸ ಮಾಡುವಾಗಲೂ ದಿನಾ ರಾತ್ರಿ 1 ಸಿನಿಮಾ ಆದರೂ ನೋಡಿ ಮಲಗುತ್ತಿದ್ದೆ. ಫ್ರೆಂಡ್ಸ್‌ ಜೊತೆಗೂ ಬರೀ ಸಿನಿಮಾ ಬಗ್ಗೆ ಹರಟುತ್ತಿದ್ದೆ. ವಾರಕ್ಕೆ ಒಂದು ಸಿನಿಮಾ ಕಡ್ಡಾಯವಾಗಿ ಸಿನಿಮಾಮಂದಿರದಲ್ಲಿ ನೋಡುತ್ತಿದ್ದೆ. ರಿಷಭ್‌ರನ್ನು ಮದುವೆಯಾದ ಬಳಿಕ ಜೀವನವೇ ಸಿನಿಮಾ ಥರ ಆಗಿದೆ.

ಇಬ್ಬರೂ ಸದಾ ಸಿನಿಮಾ ಬಗ್ಗೆಯೇ ಹರಟುತ್ತಿರುತ್ತೇವೆ. ಈ ವಿಷಯದಲ್ಲಿ ನನಗೆ ಅವರು ತುಂಬಾ ಒಳ್ಳೆಯ ಕಂಪನಿ. ನಾವು ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ಬಹಳ ಕಡಿಮೆ. ನಾನು ಅಷ್ಟೊಂದು ಸಿನಿಮಾಗಳನ್ನು ನೋಡಿರುವುದರಿಂದ ರಿಷಭ್‌ಗೆ ಸಿನಿಮಾ ಬಗ್ಗೆ ಏನಾದರೂ ಸಲಹೆ ನೀಡಲು ಮತ್ತು ವೀಕ್ಷಕರ ನಿರೀಕ್ಷೆಗಳನ್ನು ವಿವರಿಸಲು ಸಾಧ್ಯವಾಗುತ್ತದೆ. 

* ಚೇತನ ಜೆ.ಕೆ.

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.