ಈಗಲೂ ದೇವರ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ : ರವೀಂದ್ರನಾಥ್
Team Udayavani, Feb 7, 2018, 5:26 PM IST
ದಾವಣಗೆರೆ: ಇಂದಿನ ತಂತ್ರಜ್ಞಾನ, ಆಧುನಿಕ ಕಾಲದಲ್ಲೂ ಜನರಲ್ಲಿ ದೇವರ ಮೇಲಿನ ನಂಬಿಕೆ ಕಡಿಮೆ ಆಗಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.
ಹಳೆ ಪಿಬಿ ರಸ್ತೆಯ ಪಿಸಾಳೆ ಕಾಂಪೌಂಡ್‌ನಲ್ಲಿ ಮಂಗಳವಾರ ಗುಳ್ಳಮ್ಮದೇವಿ, ಬನ್ನಿಮಹಾಂಕಾಳಮ್ಮ, ಬಸವಣ್ಣ, ನಾಗರಕಟ್ಟೆ ದೇವರುಗಳ ಶಿಲಾಮೂರ್ತಿ ಪ್ರಾಣ ಪ್ರತಿಷ್ಟಾಪನಾ, ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಡಾಕ್ಟರ್‌ಗಳೇ ಇಲ್ಲದಂತಹ ಸಂದರ್ಭದಲ್ಲಿ ಕೆಲ ರೋಗಗಳು ಬಂದಾಗ ಗ್ರಾಮೀಣ ಜನರು ಶಕ್ತಿ ದೇವರಲ್ಲಿ ಮೊರೆ ಹೋಗುತ್ತಿದ್ದರು. ಈಗ ಸಾಕಷ್ಟು ಸಂಖ್ಯೆಯಲ್ಲೇ ಡಾಕ್ಟರ್‌ಗಳು ಇದ್ದಾರೆ. ಆದರೂ, ಈಗಲೂ ಜನರು ಕೂಡಾ ದೇವರ ಮೇಲೆ ಇಟ್ಟಿರುವಂತಹ ನಂಬಿಕೆ ಕಡಿಮೆಯಾಗಿಲ್ಲ ಎಂದರು. ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದಲೂ ಆರೋಗ್ಯ ಒಳಗೊಂಡಂತೆ ಅನೇಕ ಸಮಸ್ಯೆ ಬಂದಾಗ ದೇವರ ಮೊರೆ ಹೋಗುತ್ತಿದ್ದುದ್ದನ್ನ ಕಾಣಬಹುದು. ಈಗ ಸಹ ಅನೇಕರು ಅನೇಕ ಸಮಸ್ಯೆಗಳಿಗೆ ಪರಿಹಾರ ಕೋರಿ ದೇವರು-ದಿಂಡರ ಮೊರೆ ಹೋಗುತ್ತಾರೆ ಎಂದು ತಿಳಿಸಿದರು.
ದೊಡ್ಡ ಪಟ್ಟಣ, ನಗರಗಳಲ್ಲೂ ದೇವರಲ್ಲಿ ಮೊರೆ ಹೋಗುವುದು ಕಡಿಮೆ ಆಗಿಲ್ಲ. ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ಮುನ್ನ ದೇಗುಲಗಳಿಗೆ ಇಲ್ಲವೆ ದೇವರಿಗೆ ಪೂಜೆ ಸಲ್ಲಿಸಿಯೇ ಹೋಗುವುದು ವಾಡಿಕೆಯಂತೆ ಪಾಲಿಸುತ್ತಾರೆ. ದೇಗುಲಕ್ಕೆ ಹೋಗಿ ಬರುವುದರಿಂದ, ದೇವರ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇದೆ ಎಂದರು. ನಾವು ಸಣ್ಣವರಿದ್ದಾಗ ಕಾಲದಿಂದಲೂ ಗುಳ್ಳಮ್ಮನ ದೇವಸ್ಥಾನ ಇತ್ತು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಗುಳ್ಳಮ್ಮನ ದೇವಸ್ಥಾನ ತೆಗೆದು ಹಾಕಬೇಕಾಯಿತು. ಈಗ ಪಿಸಾಳೆ ಕಾಂಪೌಂಡಿನ ಜನರು ಒಂದಾಗಿ ಸುಂದರ ದೇವಸ್ಥಾನ ಕಟ್ಟಿಸಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಹಳೆ ಪಿಬಿರಸ್ತೆ ಅಗಲೀಕರಣದಿಂದಾಗಿ ರಸ್ತೆ ಮಧ್ಯೆಯಲ್ಲಿದ್ದ ಗುಳ್ಳಮ್ಮ ದೇವಸ್ಥಾನವನ್ನು ತೆರವುಗೊಳಿಸಲಾಗಿತ್ತು. ಈಗ ಪಿಸಾಳೆ ಕಾಂಪೌಂಡ್‌ನಲ್ಲಿ ಸುಂದರ ದೇವಾಲಯ ಕಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಚರ್ಚಿಸಿ
ಕಲ್ಯಾಣ ಮಂದಿರ ನಿರ್ಮಾಣಕ್ಕೆ ಸಹಾಯ ಕೋರುವುದಾಗಿ ತಿಳಿಸಿದರು. ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಅನಿತಾಬಾಯಿ, ಸದಸ್ಯ ಡಿ.ಕೆ. ಕುಮಾರ್, ಶ್ರೀ ಶ್ರೀನಿವಾಸ ಸೇವಾ ಸಂಘದ ಅಧ್ಯಕ್ಷ ಪಿ.ಆರ್.ನಾಗರಾಜ್ ಪಿಸಾಳೆ, ಪಿಸಾಳೆ ಸತ್ಯನಾರಾಯಣರಾವ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ್ ರಾವ್‌ಜಾಧವ್, ವಸಂತ್‌ರಾವ್ ಸಾಬಾಳೆ, ಮಾಲತೇಶ್‌ರಾವ್ ಜಾಧವ್, ಅಜೆಯ್‌ಕುಮಾರ್, ಅಜ್ಜಪ್ಪ ಪವಾರ್, ಗಿರಿರಾಜ್ ಪವಾರ್, ವಿಜಯ್ ಜಾಧವ್, ಪ್ರವೀಣ್ ಜಾಧವ್, ಪಿಸಾಳೆ ಕೃಷ್ಣ, ಬಾತಿ ಹೋಟೆಲ್ ಪ್ರವೀಣ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.