ಮಿತ್ತೂರು: ರೈಲ್ವೇ ಸೇತುವೆಯ ರಕ್ಷಣಾ ದ್ವಾರಕ್ಕೆ ಕಂಟೈನರ್ ಢಿಕ್ಕಿ
Team Udayavani, Feb 8, 2018, 8:15 AM IST
ವಿಟ್ಲ: ಮಾಣಿ-ಮೈಸೂರು ಹೆದ್ದಾರಿಯ ಇಡ್ಕಿದು ಗ್ರಾಮದ ಮಿತ್ತೂರು ರೈಲ್ವೇ ಮೇಲ್ಸೇತುವೆಯ ರಕ್ಷಣಾ ದ್ವಾರಕ್ಕೆ ಬೃಹತ್ ಗಾತ್ರದ ಕಂಟೈನರ್ ಲಾರಿಯೊಂದು ಬುಧವಾರ ಬೆಳಗ್ಗೆ ಢಿಕ್ಕಿ ಹೊಡೆದು ಹೆದ್ದಾರಿಗೆ ಅಡ್ಡ ನಿಂತ ಪರಿಣಾಮ ಸುಮಾರು ಎರಡು ತಾಸು ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಅಪಘಾತದಲ್ಲಿ ಲಾರಿ ಚಾಲಕ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ಲಾರಿಯು ಕಾರುಗಳನ್ನು ತುಂಬಿ ರುವ ಕಂಟೈನರನ್ನು ಹೊತ್ತು ಮೈಸೂರಿನಿಂದ ಪುತ್ತೂರು – ಮಾಣಿ ಮೂಲಕ ಮಂಗಳೂರಿಗೆ ತೆರಳುತ್ತಿತ್ತು.
ಘಟನೆಯ ವಿವರ
ಮಿತ್ತೂರಿನ ರೈಲ್ವೇ ಸೇತುವೆಗಿಂತ ಮೊದಲು ಮತ್ತು ಸೇತುವೆಯ ಮುಂದೆ ಎರಡು ರಕ್ಷಣದ್ವಾರಗಳಿವೆ. ಮಿತಿಮೀರಿದ ಗಾತ್ರದ ವಾಹನಗಳನ್ನು ತಡೆಯುವ ಉದ್ದೇಶದಿಂದ ಇಲಾಖೆ ಈ ರಕ್ಷಣಾ ದ್ವಾರಗಳನ್ನು ಸ್ಥಾಪಿಸಿದೆ. ಮೊದಲನೇ ರಕ್ಷಣಾ ದ್ವಾರ ದಾಟಿದ ಕಂಟೈನರ್ ರೈಲ್ವೇ ಸೇತುವೆಯನ್ನೂ ದಾಟಿ ಮುಂದಿನ ರಕ್ಷಣಾ ದ್ವಾರದ ಬಲಭಾಗಕ್ಕೆ ಢಿಕ್ಕಿ ಹೊಡೆಯಿತು. ರಕ್ಷಣಾ ದ್ವಾರದ ಕಬ್ಬಿಣದ ಬೀಮ್ ಲಾರಿಯ ಮೇಲೆ ಉರುಳಿ ಬಳಿಕ ನೆಲಕ್ಕೆ ಕುಸಿದಿದೆ. ಲಾರಿಯ ಮುಂಭಾಗ ಹಾನಿಗೀಡಾಗಿದ್ದು, ಗಾಜು ಪುಡಿಯಾಗಿದೆ.
ಅಪಘಾತ ಸಂಭವಿಸಿದ ಬಳಿಕ ಚಾಲಕನು ಲಾರಿಯನ್ನು ಹಿಂದಕ್ಕೆ ಚಲಾಯಿಸಿದ್ದರಿಂದ ಅದು ನಿಯಂತ್ರಣ ತಪ್ಪಿ ಸೇತುವೆಯ ಅಡಿಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ನಿಂತುಬಿಟ್ಟಿತು. ರೈಲ್ವೇ ಸೇತುವೆಗಾಗಲೀ ಸೇತುವೆಯ ಗೋಡೆಗಾಗಲೀ ಕಂಟೈನರ್ ತಾಗಿಲ್ಲ ಎನ್ನ ಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರೈಲು ಸೇತುವೆಯೇ ಕುಸಿದಿದೆ ಎಂದು ಸುದ್ದಿ ಹಬ್ಬಿದ್ದ ರಿಂದ ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದರು.
ಪರ್ಯಾಯ ಮಾರ್ಗ
ವಿಟ್ಲ ಹಾಗೂ ಪುತ್ತೂರು ಪೊಲೀಸರು ಸ್ಥಳ ಕ್ಕಾಗಮಿಸಿ ಪರ್ಯಾಯ ರಸ್ತೆಗಳ ಮೂಲಕ ಸಂಚಾರ ಸುಗಮ ವಾಗಿ ಸುವ ಕಾರ್ಯವನ್ನು ಮಾಡಿದರು. ಉಪ್ಪಿ ನಂಗಡಿ ಯಿಂದ ಕ್ರೇನ್ ತರಿಸಿ ಲಾರಿಯನ್ನು ಹಾಗೂ ಕಬ್ಬಿಣದ ಬೀಮ್ ಅನ್ನು ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ರಸ್ತೆ ತೆರವಾದ ಕೂಡಲೇ ವಾಹನಗಳು ನುಗ್ಗಲಾರಂಭಿ ಸಿದ್ದರಿಂದ ಮತ್ತೆ ಸ್ವಲ್ಪ ಕಾಲ ಸುಗಮ ಸಂಚಾರಕ್ಕೆ ತಡೆ ಯಾಯಿತು. ಸುಮಾರು ಎರಡು ತಾಸು ವಾಹನಗಳ ಸಂಚಾರಕ್ಕೆ ತಡೆಯಾಗಿತ್ತು.
ಕಂಟೈನರ್ ಎತ್ತರ ಹೆಚ್ಚಾಯಿತೇ ?
ಕಂಟೈನರ್ ಎತ್ತರ ಮಿತಿಗಿಂತ ಹೆಚ್ಚಿದ್ದ ಕಾರಣ ಅಪಘಾತ ಸಂಭವಿಸಿತು ಎಂದು ಹೇಳಲಾಗುತ್ತಿದ್ದರೂ ಮೊದಲಿನ ರಕ್ಷಣಾ ದ್ವಾರದ ಮೂಲಕ ಸುಗಮವಾಗಿ ಸಂಚರಿಸಿದೆ; ಸೇತುವೆಯನ್ನೂ ದಾಟಿದೆ. ಎರಡನೇ ರಕ್ಷಣಾ ದ್ವಾರಕ್ಕೆ ಢಿಕ್ಕಿ ಹೊಡೆಯಲು ಚಾಲಕನ ನಿದ್ದೆಯ ಮಂಪರು ಕಾರಣವಾಗಿರಬಹುದು ಅಥವಾ ಈ ಹಿಂದೆ ಯಾವುದೋ ವಾಹನ ತಾಗಿ ದ್ವಾರ ವಾಲಿಕೊಂಡಿರುವುದೂ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ರೈಲು ಸಂಚಾರ ಅಬಾಧಿತ
ಕಂಟೈನರ್ ರಕ್ಷಣಾ ದ್ವಾರಕ್ಕೆ ಢಿಕ್ಕಿ ಹೊಡೆದ ಪರಿಣಾಮ ರೈಲು ಹಳಿಗೆ ಏನಾದರೂ ಹಾನಿಯಾಗಿರ ಬಹುದೇ ಎಂಬ ಸಂಶಯವನ್ನು ನಿವಾರಿಸಲು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಲಾರಿ ಹಿಮ್ಮುಖ ಚಲಿಸುವಾಗ ಸೇತುವೆಯ ಗೋಡೆಗೆ ತಾಗಿದರೂ ಯಾವುದೇ ಹಾನಿ ಸಂಭವಿಸಿಲ್ಲ. ಬೆಳಗ್ಗೆ ಬೆಂಗಳೂರಿನಿಂದ ಬರುವ ಪ್ರಯಾಣಿಕ ರೈಲು ಮತ್ತು ಇತರ ಗೂಡ್ಸ್ ರೈಲುಗಳು ಎಂದಿನಂತೆಯೇ ಸಂಚರಿಸಿವೆ.
ಇಲಾಖೆಯ ನಿರ್ಲಕ್ಷ ಕಾರಣ ?
ರಕ್ಷಣಾ ದ್ವಾರವು ವಾಲಿಕೊಂಡಿದ್ದು ಬೀಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ರೈಲ್ವೇ ಇಲಾಖೆಗೆ ಈ ಹಿಂದೆ ದೂರು ನೀಡಿದ್ದರು. ಆದರೆ ಇಲಾಖೆಯ ನಿರ್ಲಕ್ಷ ಇಂದಿನ ಘಟನೆಗೆ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ. ಲಾರಿಯ ಮಿತಿಮೀರಿದ ಎತ್ತರವೇ ಅಪಘಾತಕ್ಕೆ ಕಾರಣ; ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ರೈಲ್ವೇ ಪೊಲೀಸ್ ಅಧಿಕಾರಿ ಆರ್.ಜೆ. ಚೌಹಾಣ್ ತಿಳಿಸಿದ್ದಾರೆ.
ವಿಟ್ಲದಲ್ಲಿ ಸಂಚಾರ ಅಸ್ತವ್ಯಸ್ತ
ಶಿರಾಡಿ ಘಾಟಿಯ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ನಿಮಿತ್ತ ಸಂಚಾರ ನಿಷೇಧಿಸಿರುವುದರಿಂದ ಮಾಣಿ- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಆ ಕಾರಣಕ್ಕೆ ಮತ್ತು ಕಂಟೈನರ್ ಢಿಕ್ಕಿ ಹೊಡೆದ ಪರಿಣಾಮ ಬುಧವಾರ ಬೆಳಗ್ಗೆಯೇ ರಸ್ತೆ ಸಂಚಾರ ಅಸ್ತವ್ಯಸ್ತತೆ ಹೆಚ್ಚಾಯಿತು. ವಿಟ್ಲದಲ್ಲಿ ಒಮ್ಮೆಲೇ ಲಾರಿ, ಬಸ್ ಗಳ ಸಂಖ್ಯೆ ಹೆಚ್ಚಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು.
ರಕ್ಷಣಾ ದ್ವಾರ ಕುಸಿತ; ಚಾಲಕನಿಗೆ ಗಾಯ
ಹೆದ್ದಾರಿಗಡ್ಡ ನಿಂತ ಕಂಟೈನರ್
2 ತಾಸು ಕಾಲ ಹೆದ್ದಾರಿ ಬಂದ್
ರೈಲ್ವೇ ಸೇತುವೆಗೆ ಅಪಾಯವಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.