ಮಾಲ್ಡೀವ್ಸ್‌ ಬಿಕ್ಕಟ್ಟು, ಭಾರತಕ್ಕೆ ಉಭಯ ಸಂಕಟ


Team Udayavani, Feb 8, 2018, 10:05 AM IST

maldives.jpg

ಲಕ್ಷದ್ವೀಪದ ಪಕ್ಕದಲ್ಲೇ ಇರುವ ಪುಟ್ಟ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಕಳೆದ ಒಂದು ವಾರದಿಂದೀಚೆಗೆ ಕ್ಷಿಪ್ರವಾಗಿ ನಡೆದಿರುವ ರಾಜಕೀಯ ಸ್ಥಿತ್ಯಂತರ ಭಾರತವನ್ನು ಉಭಯ ಸಂಕಟಕ್ಕೀಡು ಮಾಡಿದೆ. ಪ್ರಜಾತಂತ್ರ ರೀತಿಯಲ್ಲಿ ಆಯ್ಕೆಯಾಗಿದ್ದರೂ ಸದ್ಯಕ್ಕೆ ಸರ್ವಾಧಿಕಾರಿಯಾಗಿ ಬದಲಾಗಿರುವ ಅಧ್ಯಕ್ಷ ಅಬ್ದುಲ್‌ ಯಮೀನ್‌ ಅವರು ದೇಶವನ್ನು ತನ್ನ ಬಿಗಿಮುಷ್ಟಿಯಲ್ಲಿಟ್ಟು
ಕೊಳ್ಳಲು ನಡೆಸುತ್ತಿರುವ ದುಸ್ಸಾಹಸಗಳು ಆ ದೇಶವನ್ನು ಬಿಕ್ಕಟ್ಟಿನ ಪ್ರಪಾತಕ್ಕೆ ಕೆಡವಿದೆ. ಸದ್ಯ ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮತ್ತು ಅನೇಕ ವಿಪಕ್ಷ ನಾಯಕರ ಸಹಿತ ಹಲವು ಮಂದಿಯನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಗಿದೆ. ಭಾರತದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಉಂಟಾದ ಸ್ಥಿತಿಯೇ ಈಗ ಮಾಲ್ಡೀವ್ಸ್‌ನಲ್ಲಿ ಆಗಿದೆ. ಜನರ ಪ್ರತಿರೋಧದ ಧ್ವನಿಯನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ಇಡೀ ದೇಶ ಅಸಹನೆ ಮತ್ತು ಆಕ್ರೋಶದಿಂದ ಕುದಿಯುತ್ತಿದೆ. ಈ ಸಂದರ್ಭದಲ್ಲಿ ಸ್ವಯಂ ದೇಶಭ್ರಷ್ಟರಾಗಿ ಶ್ರೀಲಂಕಾದಲ್ಲಿ ಆಶ್ರಯ ಪಡೆದಿರುವ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಅವರು ಮಾಲ್ಡೀವ್ಸ್‌ ಬಿಕ್ಕಟ್ಟು ಬಗೆಹರಿಸಲು ಕೂಡಲೇ ಭಾರತ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ ಭಾರತದ ಪಾಲಿಗೆ ಇದು ಬಹಳ ನಾಜೂಕಿನ ಸಂದರ್ಭ. ಇನ್ನೊಂದು ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಾದ ಕ್ರಮ ಮಾತ್ರವಲ್ಲ ಅಪಾಯಕಾರಿ ನಡೆಯೂ ಆಗಬಹುದು. ಅಲ್ಲದೆ ಮಾಲ್ಡೀವ್ಸ್‌ ವ್ಯೂಹಾತ್ಮಕವಾಗಿಯೂ ಭಾರತಕ್ಕೆ ಬಹಳ ಮುಖ್ಯವಾಗಿರುವ ದೇಶ. ಈ ಕಾರಣಗಳಿಗಾಗಿ ಭಾರತ ಎಚ್ಚರಿಕೆಯ ಹೆಜ್ಜೆಯಿರಿಸುವುದು ಅಗತ್ಯ.

ಹಾಗೆಂದು ಮಾಲ್ಡೀವ್ಸ್‌ನ್ನು ಅದರ ಪಾಡಿಗೆ ಬಿಟ್ಟು ಬಿಡುವಂತೆಯೂ ಇಲ್ಲ. ಹಾಗೆ ಬಿಟ್ಟ ಕೂಡಲೇ ಚೀನ ಅಲ್ಲಿಗೆ ಧಾವಿಸುತ್ತದೆ. ಈಗಾಗಲೇ ಚೀನ ಮತ್ತು ಮಾಲ್ಡೀವ್ಸ್‌ ನಡುವೆ ವ್ಯಾಪಾರ ವಹಿವಾಟು ಸಂಬಂಧ ಬಹಳ ನಿಕಟವಾಗಿದೆ. ಮಾಲ್ಡೀವ್ಸ್‌ ಜತೆಗೆ ಚೀನ ಮುಕ್ತ ವಾಣಿಜ್ಯ ಒಪ್ಪಂದ ಮಾಡಿಕೊಂಡಿದೆ. ಭಾರತಕ್ಕೆ ಹತ್ತಿರವಾಗಿ ಹಿಂದು ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವುದರಿಂದ ಮಾಲ್ಡೀವ್ಸ್‌ನಲ್ಲಿ ತನ್ನದೊಂದು ನೆಲೆ ಸ್ಥಾಪಿಸಿಕೊಳ್ಳಲು ಚೀನ ಹಿಂದಿನಿಂದಲೂ ಪ್ರಯತ್ನಿಸುತ್ತಿದೆ. ಆಂತರಿಕ ಬಿಕ್ಕಟ್ಟಿನ ಲಾಭವೆತ್ತಿಕೊಂಡು ಚೀನ ತನ್ನ ಕಾರ್ಯ ಸಾಧಿಸಿಕೊಂಡರೆ ಭಾರತದ ಬಗಲಿಗೆ ಅಪಾಯ ಬಂದಂತಾಗುತ್ತದೆ. ಯಾವ ಕಾರಣಕ್ಕೂ ಮಾಲ್ಡೀವ್ಸ್‌ ಆಂತರಿಕ ವಿಚಾರದಲ್ಲಿ ಭಾರತ ಮೂಗು ತೂರಿಸಬಾರದು ಎಂದಿರುವ ಚೀನದ ಇಂದಿನ ಹೇಳಿಕೆಯೂ ಈ ದಿಕ್ಕಿನಲ್ಲಿಯೇ ಇದೆ. ಹೀಗಾಗಿಯೇ ಇದೀಗ ಉಭಯ ಸಂಕಟದ ಪರಿಸ್ಥಿತಿಯನ್ನು ಸೃಷ್ಟಿಸಿರುವುದು.

ರಾಜಕೀಯ ಬಿಕ್ಕಟ್ಟು ಮಾತ್ರ ಮಾಲ್ಡೀವ್ಸ್‌ ಸಮಸ್ಯೆಯಲ್ಲ. ಬರೀ 5 ಲಕ್ಷದಷ್ಟು ಜನಸಂಖ್ಯೆಯಿರುವ ಆ ದೇಶದಲ್ಲಿ ಮೂಲಭೂತವಾದವೂ ಬೇರೂರತೊಡಗಿದೆ. ಮಾಲ್ಡೀವ್ಸ್‌ನ ಸುಮಾರು 200 ಯುವಕರು ಐಸಿಸ್‌ ಸೇರಿರುವ ಗುಮಾನಿಯಿದೆ. ಜತೆಗೆ ಪಾಕಿಸ್ಥಾನದ ಲಷ್ಕರ್‌ ಉಗ್ರ ಸಂಘಟನೆಯೂ ತನ್ನದೊಂದು ಶಾಖೆಯನ್ನು ಅಲ್ಲಿ ತೆರೆದಿದೆ. ಆರ್ಥಿಕವಾಗಿಯೂ ಮಾಲ್ಡೀವ್ಸ್‌ ದುರ್ಬಲಗೊಂಡಿದೆ. ಹೀಗೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಆ ದೇಶಕ್ಕೆ ಬಾಹ್ಯ ನೆರವು ಅನಿವಾರ್ಯ. 

ಮಾಲ್ಡೀವ್ಸ್‌ನ ಸದ್ಯದ ಬಿಕ್ಕಟ್ಟಿಗೆ ಕಾರಣ ಮುಂಬರುವ ಅಕ್ಟೋಬರ್‌ನಲ್ಲಿ ನಡೆಯಲಿರುವ ಚುನಾವಣೆ ಎನ್ನಲಾಗುತ್ತಿದೆ. 2013ರ ಚುನಾವಣೆ ಯಲ್ಲಿ ಅಲ್ಪ ಬಹುಮತದಿಂದ ಅಧಿಕಾರಕ್ಕೇರಿರುವ ಯಮೀನ್‌ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಕ್ಷುಲ್ಲಕ ಕೇಸಿನಲ್ಲಿ ಜೈಲು ಪಾಲಾಗಿದ್ದ ಅವರ ವಿರೋಧಿ ನಶೀದ್‌ಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿರುವುದರಿಂದ ಕಂಗೆಟ್ಟಿರುವ ಯಮೀನ್‌ ಪ್ರಜಾತಂತ್ರವನ್ನೇ ದಮನಿಸಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ದೇಶದ ಪೊಲೀಸ್‌ ಪಡೆ ಮತ್ತು ಸೇನೆ ಅವರ ಬೆನ್ನಿಗೆ ನಿಂತಿರುವುದರಿಂದ ಈಗ ಅವರು ಆಡಿದ್ದೇ ಆಟವಾಗಿದೆ. 

ನಶೀದ್‌ ಆರೋಪ ಮುಕ್ತಗೊಳಿಸಿದ ಮತ್ತು 12 ವಿಪಕ್ಷ ಸಂಸದರ ಅನರ್ಹತೆಯನ್ನು ರದ್ದುಪಡಿಸಿದ ನ್ಯಾಯಾಧೀಶರನ್ನೇ ಭದ್ರತಾ ಪಡೆಯನ್ನು ಬಳಸಿ ಅವರು ಜೈಲಿಗಟ್ಟಿದ್ದಾರೆ. ಸಂಸದರ ಅನರ್ಹತೆ ರದ್ದಾದರೆ ತಕ್ಷಣವೇ ಯಮೀನ್‌ ಸರಕಾರ ಪತನಗೊಳ್ಳುವ ಸಾಧ್ಯತೆಯಿದೆ. ಹೀಗಾದರೆ ನಶೀದ್‌ ಬದಲು ತಾನು ಜೈಲಿಗೆ ಹೋಗುವ ಭೀತಿ ಯಮೀನ್‌ರನ್ನು ಕಾಡುತ್ತಿದೆ.

ಜಗತ್ತು ಈ ಹಿಂದೆಯೂ ಅಧಿಕಾರ ಲಾಲಸಿಗಳಾಗಿದ್ದ ಹಲವು ಸರ್ವಾಧಿಕಾರಿಗಳನ್ನು ಕಂಡಿದೆ. ಎಲ್ಲ ಸರ್ವಾಧಿಕಾರಿಗಳ ಅಂತ್ಯವೂ ದುರಂತಮಯವಾಗಿದ್ದರೂ ಸರ್ವಾಧಿಕಾರಿಗಳು ಮಾತ್ರ ಪಾಠ ಕಲಿಯುವುದಿಲ್ಲ ಅಥವಾ ಅಧಿಕಾರದ ಅಮಲು ಅವರಿಗೆ ಪಾಠ ಕಲಿಯಲು ಬಿಡುತ್ತಿಲ್ಲ. ಸದ್ಯಕ್ಕೆ ಯಮೀನ್‌ ಕೂಡ ಈ ಮಾದರಿಯ ಸರ್ವಾಧಿಕಾರಿಗಳ ಸಾಲಿಗೆ ಸೇರುವ ಲಕ್ಷಣ ಕಾಣಿಸುತ್ತಿದೆ.

ಟಾಪ್ ನ್ಯೂಸ್

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Chennai: ಲಾಟರಿ ಕಿಂಗ್‌ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

Forest

Forest: ಅರಣ್ಯದಲ್ಲಿ ನಿರಂತರ ಗಣಿಗಾರಿಕೆ: ಸರಕಾರ ಚರ್ಚಿಸಿ ನಿರ್ಧರಿಸಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.