ತೊಗರಿ ಖರೀದಿ ಕೇಂದ್ರ ಬಂದ್: ರೈತರ ಸಂಕಷ್ಟ
Team Udayavani, Feb 8, 2018, 10:37 AM IST
ಹಟ್ಟಿ ಚಿನ್ನದ ಗಣಿ: ಪಟ್ಟಣದ ಪಾಮನಕಲ್ಲೂರು ಕ್ರಾಸ್ ಬಳಿ ಇರುವ ಬೆಂಬಲ ಬೆಲೆ ತೊಗರಿ ಖರೀದಿ ಕೇಂದ್ರವನ್ನು ಚೀಲ ಮತ್ತು ದಾಸ್ತಾನಿಗೆ ಜಾಗೆ ಕೊರತೆಯಿಂದಾಗಿ ಕಳೆದ ನಾಲ್ಕು ದಿನಗಳಿಂದ ಬಂದ್ ಮಾಡಲಾಗಿದೆ. ಇದೀಗ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಮುಂದಿನ ಆದೇಶದವರೆಗೆ ತೊಗರಿ ಖರೀದಿ ಕೇಂದ್ರವನ್ನು ಬಂದ್ ಮಾಡುವಂತೆ ಆದೇಶಿಸಿದ್ದು ಇದು ಈಗಾಗಲೇ ಕೇಂದ್ರಕ್ಕೆ ತೊಗರಿಯನ್ನು ತೆಗೆದುಕೊಂಡ ಬಂದ ರೈತರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಒಂದೆಡೆ ತೊಗರಿ ಖರೀದಿ ಕೇಂದ್ರದ ಸಿಬ್ಬಂದಿಯಿಂದ ಅಸಮರ್ಪಕ ನಿರ್ವಹಣೆ, ಅವ್ಯವಹಾರದಿಂದ ಕಂಗೆಟ್ಟಿದ್ದ ರೈತರು ಕಳೆದ ನಾಲ್ಕು ದಿನಗಳಿಂದ ಕೇಂದ್ರಕ್ಕೆ ಬೀಗ ಜಡಿದಿದ್ದರಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ಹಟ್ಟಿ ತೊಗರಿ ಖರೀದಿ ಕೇಂದ್ರದಲ್ಲಿ 1188 ರೈತರು ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿಸಿದ್ದಾರೆ. ಕೇಂದ್ರದ ಸಿಬ್ಬಂದಿ ಸರದಿ ಪ್ರಕಾರ ರೈತರಿಂದ ತೊಗರಿ ಖರೀದಿಸದೇ ತಮಗೆ ಕಮೀಷನ್ ನೀಡಿದವರಿಂದ ಖರೀದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕೇಂದ್ರಕ್ಕೆ ಮೊದಲು ತೊಗರಿ ತಂದ ರೈತರ ಚೀಲಗಳು ಆವರಣದಲ್ಲೇ ಹಾಗೇ ಇವೆ.
ಮಾರುಕಟ್ಟೆಯಲ್ಲಿ ಮಾರಾಟ: ಕಳೆದ ನಾಲ್ಕು ದಿನಗಳಿಂದ ಕೇಂದ್ರಕ್ಕೆ ಬೀಗ ಜಡಿದಿದ್ದರಿಂದ ಕಂಗಾಲಾದ ತೊಗರಿ ತಂದ ರೈತರು ತಮ್ಮ ಬೆಳೆಗೆ ರಕ್ಷಣೆ ಇಲ್ಲದ್ದರಿಂದ ಅನಿವಾರ್ಯವಾಗಿ ಖಾಸಗಿ ವರ್ತಕರಲ್ಲಿ ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ. ಒಟ್ಟಾರೆ ಈ ಬಾರಿ ಈ ಭಾಗದಲ್ಲಿ ತೊಗರಿ ಬೆಳೆದ ರೈತರ ಸಂಕಷ್ಟಕ್ಕೆ ಕೊನೆ ಇಲ್ಲ ಎಂಬಂತಾಗಿದೆ.
ತೊಗರಿ ಖರೀದಿ ಇಂದಿನಿಂದ ಸ್ಥಗಿತ
ರಾಯಚೂರು: ಬೆಂಬಲ ಬೆಲೆ ಯೋಜನೆಯಡಿ ಡಿ.12ರಿಂದ 90 ದಿನಗಳ ಅವಧಿ ವರೆಗೆ 1,65,750 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ನಿರೀಕ್ಷಿತ ಗುರಿ ತಲುಪಿದ ಹಿನ್ನೆಲೆಯಲ್ಲಿ ಫೆ.8ರಿಂದ ತೊಗರಿ ಖರೀದಿ ಪ್ರಕ್ರಿಯೆ ತಾತ್ಕಲಿಕವಾಗಿ ಸ್ಥಗಿತಗೊಳಿಸುತ್ತಿದ್ದು, ಸರ್ಕಾರದ ಅನುಮತಿ ಮೇರೆಗೆ ಖರೀದಿ ದಿನಾಂಕ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನೋಂದಣಿ ಮಾಡಿದ ರೈತರಿಂದ ಖರೀದಿ ಪ್ರಕ್ರಿಯೆ ಜಾರಿಯಲ್ಲಿದ್ದು, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಪ್ರಮಾಣದಂತೆ, ಸುಮಾರು 89,110 ರೈತರಿಂದ 14,10,000 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ಇನ್ನೂ 2,47,500 ಕ್ವಿಂಟಲ್ ಮಾತ್ರ ತೊಗರಿ ಖರೀದಿ ಬಾಕಿ ಇದೆ. ಎರಡು ದಿನಗಳೊಳಗೆ ಖರೀದಿಸಲಾಗುವುದು. ಕೇಂದ್ರ ಸರ್ಕಾರವು ಜ.31ರಂದು ಹೆಚ್ಚುವರಿಯಾಗಿ ಅನುಮತಿಸಿರುವ ಪ್ರಮಾಣವನ್ನು ಬಾಕಿ ಉಳಿದಿರುವ ರೈತರಿಂದ ಖರೀದಿಸಿದರೂ ಇನ್ನೂ ಹೆಚ್ಚಿನ ಸಂಖ್ಯೆಯ ರೈತರು ಬಾಕಿ ಉಳಿಯುವರು. ಅವಶ್ಯವಿರುವ ಪ್ರಮಾಣ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೂಮ್ಮೆ ಕೋರಲಾಗುವುದು. ನಂತರ ತೊಗರಿ ಖರೀದಿ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಯಲಿನಲ್ಲಿ ತೊಗರಿ ಸಂಗ್ರಹಿಸಿಟ್ಟಿದ್ದು ಸೂಕ್ತ ರಕ್ಷಣೆ ಇಲ್ಲ. ಗಾಡಿ ಬಾಡಿಗೆ ಮಾಡಿ ತಂದು ಇಷ್ಟು ದಿನ ಕಾದು ಕುಳಿತಿದ್ದು ವ್ಯರ್ಥವಾಗಿದೆ. ರೈತರು ನಷ್ಟ ಅನುಭವಿಸುವಂತಾಗಿದೆ.
ಅಮರಪ್ಪ, ಮೇದಿನಾಪುರ ಗ್ರಾಮದ ರೈತ
ಎಪಿಎಂಸಿ ಉಪ ನಿರ್ದೇಶಕರಿಗೆ ಹಟ್ಟಿ ಕೇಂದ್ರದ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿದೆ. ಇಂದಿನಿಂದ ಕೇಂದ್ರವನ್ನು ಮುಂದಿನ ಆದೇಶ ಬರುವವರೆಗೂ ಬಂದ್ ಮಾಡಲಾಗುವುದು. ಈಗಾಗಲೇ ತೂಕ ಮಾಡಿಟ್ಟ ತೊಗರಿಯನ್ನು ಸಾಗಿಸಲು ವಾಹನ ವ್ಯವಸ್ಥೆ ಕಲ್ಪಿಸಲಾಗುವುದು.
ಡಾ| ಬಗಾದಿ ಗೌತಮ್, ಜಿಲ್ಲಾಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.