ಕರ್ನಾಟಕ-ಕೇರಳ ಗಡಿ ಭಾಗದ ರಸ್ತೆಯೆಂದೇ ನಿರ್ಲಕ್ಷ್ಯ
Team Udayavani, Feb 8, 2018, 10:39 AM IST
ಪುಣಚ : ಪುಣಚ ಗ್ರಾ.ಪಂ. ವ್ಯಾಪ್ತಿಯ ಕೇರಳ ಗಡಿ ಭಾಗದ ಕೊಲ್ಲಪದವು-ಸರವು, ಕೊಡೆಚ್ಚಡ್ಕ- ಆಬಡ್ಕ ಸಂಪರ್ಕಿಸುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಈ ರಸ್ತೆ ಅಭಿವೃದ್ಧಿಗೆ ಮೀನಮೇಷ ಎಣಿಸಲಾಗುತ್ತಿದೆ. ಹೊಂಡ-ಗುಂಡಿಗಳಿಂದಾವೃತ ವಾದ, ಡಾಮರು ಕಿತ್ತುಹೋಗಿರುವ ಈ ರಸ್ತೆಗೆ ಕಾಯಕಲ್ಪ ಒದಗಿಸಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.
ಡಾಮರು ಹಾಕಬೇಕು
ಕೊಲ್ಲಪದವು-ಸರವು 3 ಕಿ.ಮೀ. ರಸ್ತೆ ಭಾಗದಲ್ಲಿ ಸ್ವತ್ಛ ಗ್ರಾಮ ಯೋಜನೆಯಡಿ ರಸ್ತೆಗೆ ಡಾಮರು ಹಾಕಲಾಗಿದೆ. ಕೊಡೆಚ್ಚಡ್ಕ – ಆಬಡ್ಕ ರಸ್ತೆಯ 1 ಕಿ.ಮೀ. ಭಾಗದಲ್ಲಿ 8 ವರ್ಷಗಳ ಹಿಂದೆ ಜಲ್ಲಿ ಹಾಕಲಾಗಿದ್ದು, ಡಾಮರು ಹಾಕಿಲ್ಲ. ಈ ರಸ್ತೆ ಮೂಲಕ ತೊಂಡನಡ್ಕ ಮಾರ್ಗವಾಗಿ ಬಳಂತಿಮುಗೇರು, ಮೂಡಂಬೈಲು ಪ್ರದೇಶದ ಹಲವು ಮನೆಗಳನ್ನು ಸಂಪರ್ಕಿಸಲಾಗುತ್ತದೆ.
75ಕ್ಕೂ ಅಧಿಕ ಮನೆಯವರಿಗೆ ತೊಂದರೆ
ಸುಮಾರು 75ಕ್ಕೂ ಅಧಿಕ ಮನೆಯವರು ಈ ರಸ್ತೆಯನ್ನುಬಳಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು 3 ಮಿನಿ ಬಸ್‌ಗಳು ಈ ಭಾಗಕ್ಕೆ ಬರುತ್ತವೆ ಮಾತ್ರವಲ್ಲದೆ ಇತರ ವಾಹನಗಳೂ ಸಂಚರಿಸುತ್ತವೆ. ರಸ್ತೆ ತೀರಾ ಹದಗೆಟ್ಟಿದ್ದು, ಈ ಭಾಗಕ್ಕೆ ಹೋಗಲು ವಾಹನ ಚಾಲಕರು ಹಿಂದೇಟು ಹಾಕುವುದರಿಂದ ಮನೆಮಂದಿ ಪರದಾಡುವಂತಾಗಿದೆ.
ಗಡಿ ಭಾಗದ ನಿರ್ಲಕ್ಷ್ಯ!
ಕರ್ನಾಟಕ – ಕೇರಳ ಗಡಿ ಭಾಗದ ರಸ್ತೆಯಾದ್ದರಿಂದ ಈ ರಸ್ತೆ ನಿರ್ಲಕ್ಷ್ಯಕ್ಕೊಳಗಾಯಿತೇ ?ಅನುದಾನ ಮಂಜೂರಾಗಲಿಲ್ಲವೇ? ಈ ರಸ್ತೆ ಕೆಟ್ಟು ಹೋಗಿರುವ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ಇಲ್ಲವೇ? ಮಾಹಿತಿ ನೀಡಿದರೂ ಕಡೆಗಣಿಸಲ್ಪಟ್ಟಿದೆಯೇ? ಎಂದು ಪ್ರಶ್ನಿಸುವ ನಾಗರಿಕರು, ಈ ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ .
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.