ಜಿಎಸ್‌ಬಿ ಮಂಡಳ ಡೊಂಬಿವಲಿ ವಾರ್ಷಿಕ ಸಂಗೀತ ಮಹೋತ್ಸವ 

Team Udayavani, Feb 8, 2018, 11:58 AM IST

0602mum10.jpg

ಡೊಂಬಿವಲಿ: ಕಲಿಯುಗದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜ ಭಾರತರತ್ನ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರೋರ್ವ ಅವತಾರ ಪುರುಷರಾಗಿದ್ದಾರೆ ಎಂದು ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂಡಿತ್‌ ವಿನಾಯಕ ತೊರವಿ ನುಡಿದರು.

ಫೆ. 4 ರಂದು ಸಂಜೆ ಡೊಂಬಿವಲಿ ಪೂರ್ವದ ಎಸ್‌. ವಿ. ಜೋಶಿ ಮೈದಾನದಲ್ಲಿ ಜಿಎಸ್‌ಬಿ ಮಂಡಳ ಡೊಂಬಿವಲಿ ಇದರ ವಾರ್ಷಿಕ ಪಂಡಿತ್‌ ಭೀಮಸೇನ್‌ ಜೋಶಿ ಸಂಸ್ಮರಣ ಸಂಗೀತ ಮಹೋತ್ಸವದಲ್ಲಿ ಪಂಡಿತ್‌ ಭೀಮ್‌ಸೇನ್‌ ಜೋಶಿ ಸ್ಮೃತಿ ಪುರಸ್ಕಾರ ಸ್ವೀಕರಿಸಿದ ಮಾತನಾಡಿದ ಇವರು, ಮಹಾರಾಷ್ಟ್ರ ಸಾಂಸ್ಕೃತಿಕ ಹಾಗೂ ಕಲೆಯ ತವರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಡೊಂಬಿವಲಿ ಕಲಾ ಪ್ರೇಮಿಗಳು ನೀಡಿದ ಈ ಪುರಸ್ಕಾರವು ನನ್ನ ಪಾಲಿಗೆ ಗುರುವಿನ ಆಶೀರ್ವಾದದ ಪ್ರತೀಕವಾಗಿದೆ. ಈ ಪುರಸ್ಕಾರವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ. ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರಂತಹ ಕಲಾವಿದ ಮತ್ತೆ ಹುಟ್ಟಿಬರುವುದು ಅಸಾಧ್ಯದ ಮಾತಾಗಿದೆ. ಸಂಗೀತ ಕ್ಷೇತ್ರದಲ್ಲಿ ಕಿರಾಣಾ, ಗ್ವಾಲಿಯರ್‌ ಮೊದಲಾದ ಘರಾಣಿಗಳಲ್ಲಿ  ನಮ್ಮ ಪಾಲಿಗೆ ಭೀಮಸೇನ್‌ ಜೋಶಿ ಅವರ ಘರಾಣಿಯೇ ಶ್ರೇಷ್ಟವಾಗಿದ್ದು, ನನ್ನ ಸಾಧನೆಗೆ ನನ್ನ ತಂದೆ-ತಾಯಿಗಳ ಆಶೀರ್ವಾದ ಹಾಗೂ ಗುರು ಶ್ರೀ ಚಿದಂಬರರ ಆಶೀರ್ವಾದವೇ ಕಾರಣವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಂಬಯಿ ಫೋರಂ ಆರ್ಟಿಸ್ಟ್‌ನ ಪ್ರಮುಖರಾದ ಸುಧೀರ್‌ ನಾಯಕ್‌ ಅವರು, ಯಾವ ರೀತಿಯ ಕರ್ನಾಟಕದ ಧಾರವಾಡ ಹಾಗೂ ಪುಣೆಯ ಕಲಾವಿದರ ಪಾಲಿಗೆ ಪುಣ್ಯಕ್ಷೇತ್ರವೂ ಅದೇ ರೀತಿ ಡೊಂಬಿವಲಿಯೂ ಒಂದು ಪುಣ್ಯಕ್ಷೇತ್ರವಾಗಿದೆ. ಕಳೆದ 8 ವರ್ಷಗಳಿಂದ      ಇಲ್ಲಿಯ ಕಲಾರಸಿಕರ ಸಹಕಾರದಿಂದ ಸಂಸ್ಥೆಯು ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಲಾಗುತ್ತಿದೆ. 2022 ರಲ್ಲಿ ಪಂಡಿತ್‌ ಭೀಮ್‌ಸೇನ್‌ ಜೋವಿ ಅವರ ಜನ್ಮಶತಮಾನೋತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ನುಡಿದರು.

ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪಂಡಿತ್‌ ವಿನಾಯಕ ತೊರವಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಪಂಡಿತ್‌ ಭೀಮಸೇನ್‌ ಜೋಶಿ ಸಂಗೀತ ಸ್ಮೃತಿ ಪುರಸ್ಕಾರವನ್ನು ಪ್ರದಾನಿಸಲಾಯಿತು. ಕು| ಈಶಾ ಕಾಮತ್‌ ಸಮ್ಮಾನ ಪತ್ರ ವಾಚಿಸಿದರು.

ಮುಖ್ಯ ಅತಿಥಿಗಳಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಮಾಜಿ ವ್ಯವಸ್ಥಾಪಕೀಯ ನಿರ್ದೇಶಕ ಕೆ. ಆರ್‌. ಕಾಮತ್‌ ಹಾಗೂ ಗೌರವ ಅತಿಥಿಗಳಾಗಿ ಹಿರಿಯ ಸಂಗೀತ ಕಲಾವಿದ ಪಂಡಿತ್‌ ಮಧುಕರ ಜೋಶಿ, ಮುಂಬಯಿ ಜಿಎಸ್‌ಬಿ ಸೇವಾ ಮಂಡಳದ ಗೌರವ ಕಾರ್ಯದರ್ಶಿ ರಾಮನಾಥ ಕಿಣಿ, ಮುಂಬಯಿ ಜಿಎಸ್‌ಬಿ ಟೆಂಪಲ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಅವಧೂತ ಧಾಬೋಳ್ಕರ್‌, ಬ್ಲೇಸ್‌ ಜಿಎಸ್‌ಬಿ ಫಾರ್ಮ್ ವ್ಯವಸ್ಥಾಪಕೀಯ ನಿರ್ದೇಶಕ ಎಸ್‌. ಎನ್‌. ಕಾಮತ್‌, ವೈದ್ಯ ಡಾ| ವೈ. ಎಸ್‌. ಆಚಾರ್ಯ, ಮನೋಹರ ಪೈ ಮೊದಲಾದರು ಉಪಸ್ಥಿತರಿದ್ದರು. ಗಣಪತಿ ಸ್ತುತಿಯೊಂದಿಗೆ, ತಾಯಿ ಶಾರದಾಂಬೆ ಹಾಗೂ ಪಂಡಿತ್‌ ಭೀಮ್‌ಸàನ್‌ ಜೋಶಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಸಂಯೋಜಕ ವಿಶ್ವನಾಥ್‌ ಭಟ್‌ ಸ್ವಾಗತಿಸಿದರು ವಂದಿಸಿದರು. ರಮೇಶ್‌ ಪೈ ಅವರು ಅತಿಥಿಗಳನ್ನು ಪರಿಚಯಿಸಿದರು. ಸಂಗೀತ ಕಾರ್ಯಕ್ರಮ ನೀಡಿದ ರಾಜೇಶ್‌ ಪಡಿಯಾರ, ಕವಿತಾ ಶೆಣೈ, ಹಿಮ್ಮೇಳದಲ್ಲಿ ಸಹಕರಿಸಿದ ತಬಲ ವಾದಕರುಗಳಾದ ಪಂಡಿತ್‌ ಓಂಕಾರ್‌ ಗುಲ್ವಾಡಿ ಮತ್ತು ಶ್ರೀವತ್ಸ ಶರ್ಮಾ, ಹಾರ್ಮೋನಿಯಂ ವಾದಕ ಪ್ರಸಾದ್‌ ಕಾಮತ್‌, ಪಖ್ವಾಜ್‌ ವಾದಕ ಶಿವಾಜಿ ಬುಧಕರ ಮೊದಲಾದವರನ್ನು ಗೌರವಿಸಲಾಯಿತು.

ಗಾಯಕರಾದ ರಾಜೇಶ್‌ ಪಡಿಯಾರ್‌, ಕವಿತಾ ಶೆಣೈ ಅವರು ಕನ್ನಡ, ಮರಾಠಿ, ಹಿಂದಿ ಭಜನೆ ಹಾಗೂ ಅಭಂಗಗಳನ್ನು ಪ್ರಸ್ತುತಪಡಿಸಿದರು. ಪ್ರಶಸ್ತಿ ಪುರಸ್ಕೃತ ಪಂಡಿತ್‌ ವಿನಾಯಕ ತೋರವಿ ಅವರು ಕನ್ನಡ, ಮರಾಠಿ, ಹಿಂದಿ ಅಭಂಗಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. ಯುವ ಪ್ರತಿಭೆಗಳಾದ ದತ್ತಾತ್ರೇಯ ವೆಲಣRರ್‌, ಸಿದ್ದಾರ್ಥ್ ಬೆಳಮಗಿ, ರವೀಂದ್ರ ಶೆಣೈ, ಪದ್ಮನಾಭ ಪೈ, ಸುಧೀರ್‌ ಅವರು ಹಿಮ್ಮೇಳದಲ್ಲಿ ಸಹಕರಿಸಿದರು.

ಸುಧೀರ್‌ ನಾಯಕ್‌, ಯು. ಪದ್ಮನಾಭ ಪೈ, ರವೀಂದ್ರ ಶೆಣೈ ಕಾರ್ಯಕ್ರಮದ ಸಹಪ್ರಾಯೋಜಕರಾಗಿ ಸಹಕರಿಸಿದರು. ಅಮೇಯ ಬಾಳ ಕಾರ್ಯಕ್ರಮ ನಿರ್ವಹಿಸಿದರು. ಸಾರಸ್ವತ್‌ ಬ್ಯಾಂಕ್‌, ಬ್ಲಿಸ್‌ ಜಿವಿಎಸ್‌ ಫಾರ್ಮ್ ಹಾಗೂ ಜಿಎಸ್‌ಪಿ ಟೆಂಪಲ್‌ ಟ್ರಸ್ಟ್‌, ಎನ್‌ಕೆಜಿಎಸ್‌ಬಿ ಬ್ಯಾಂಕ್‌ ಅವರು ಪ್ರಾಯೋಜಕತ್ವವನ್ನು ವಹಿಸಿದ್ದರು. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಚಿತ್ರ-ವರದಿ:ಗುರುರಾಜ ಪೋತನೀಸ್‌

ಟಾಪ್ ನ್ಯೂಸ್

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.