ಜವಾಬ್‌ನ 21ನೇ ವಾರ್ಷಿಕೋತ್ಸವ ಮತ್ತು ಸ್ನೇಹ ಸಮ್ಮಿಲನ
Team Udayavani, Feb 8, 2018, 12:03 PM IST
ಮುಂಬಯಿ: ಜವಾಬ್ ಸಂಸ್ಥೆಯು ಎಲ್ಲಾ ಸಂಘಟನೆಗಳಿಗಿಂತ ವಿಭಿನ್ನವಾಗಿ ಗೋಚರಿಸುವ ಒಂದು ಮಹಾನ್ ಸಂಸ್ಥೆಯಾಗಿದೆ. ಬಂಟ ಸಮಾಜದ ಹೆಗ್ಗುರುತಾಗಿ ಜವಾಬ್ ಈಗಾಗಲೇ ಸಮಾಜ ಬಾಂಧವರ ಮನೆ-ಮನಗಳನ್ನು ಆಕರ್ಷಿ ಸುವಲ್ಲಿ ಯಶಸ್ವಿಯಾಗಿದೆ. 21 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆ ಅಪಾರವಾಗಿದೆ. ನಾಡಿನ ಸಂಸ್ಕೃತಿ – ಸಂಸ್ಕಾರಗಳು, ಬಂಟ ಸಮಾಜದ ಆಚಾರ – ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಸಂಸ್ಥೆಯು ಹಗಲಿರುಳು ಶ್ರಮಿಸುತ್ತಿದೆ. ಜವಾಬ್ ಸಮಾಜ ಬಾಂಧವರ ಅಶೋತ್ತರಗಳಿಗೆ ಸ್ಪಂದಿಸುತ್ತಿದ್ದು, ಪರಿವಾರದವರು ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಮುಂದಾಗಬೇಕು. ಉಳ್ಳವರು ಇಲ್ಲದವರು ಎಂದು ಭೇದಭಾವ ನಾವೆಲ್ಲರು ಮರೆತು ಒಂದೆಡೆ ಬೇರೆಯುವಂತಹ ಸನ್ನಿವೇಶವನ್ನು ಕಲ್ಪಿಸಿ, ಅಲ್ಲಿಂದ ತನ್ನ ವಿವಿಧೋದ್ದೇಶಗಳ ಬಗ್ಗೆ ಗಮನ ಹರಿಸಲು ಅನುಕೂಲವಾಗುವಂತೆ ಹಮ್ಮಿಕೊಂಡ ವಿಶಿಷ್ಟ ಔಚಿತ್ಯಪೂರ್ಣ ಕಾರ್ಯಕ್ರಮವೇ ಈ ವಾರ್ಷಿಕ ಸ್ನೇಹ ಸಮ್ಮಿಲನವಾಗಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ತುಂಬಿದ್ದು, ನಿಮ್ಮನ್ನೆಲ್ಲ ಕಂಡಾಗ ಸಂತೋಷವಾಗುತ್ತಿದೆ ಎಂದು ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಅವರು ನುಡಿದರು.
ಫೆ. 3 ರಂದು ಸಂಜೆ ಅಂಧೇರಿ ಪಶ್ಚಿಮದ ಲೋಖಂಡ್‌ವಾಲ ಕಾಂಪ್ಲೆಕ್ಸ್ ರೆಸಿಡೆಂಟಲ್ ಅಸೋಸಿಯೇಶನ್ ಮೈದಾನದಲ್ಲಿ ನಡೆದ ಜುಹೂ – ಅಂಧೇರಿ- ವಸೋìವಾ-ವಿಲೇಪಾರ್ಲೆ (ಜವಾಬ್) ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ನಮ್ಮ ಹಿರಿಯರು ಸ್ಥಾಪಿಸಿದ ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ಸಂಸ್ಥೆಯ ಎಲ್ಲಾ ಸಮಾಜಪರ ಯೋಜನೆಗಳ ಸದುಪಯೋಗವನ್ನು ಎಲ್ಲರು ಪಡೆದುಕೊಂಡು ನಮ್ಮ ಸಾಧನೆಗೆ ಫಲಸಿಕ್ಕಿದಂತಾಗುತ್ತದೆ. ಸಂಸ್ಥೆಯು ಯಕ್ಷಗಾನ, ತಾಳಮದ್ದಳೆ ಅದರಲ್ಲೂ ಭೂತಾರಾಧನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಪ್ರತಿಯೊಂದು ವಾರ್ಷಿಕೋತ್ಸವ ಸಂದರ್ಭದಲ್ಲಿ ಜುಮಾದಿ ದೈವದ ಭಂಡಾರ ಇಳಿಯುವ ಪ್ರಕ್ರಿಯೆಯು ಇಂದಿಗೂ ನಡೆಯುತ್ತಿದ್ದು, ಈ ಪದ್ಧತಿಯಿಂದ ಸಂಸ್ಥೆಯ ಕೀರ್ತಿ ಪತಾಕೆಯು ಎಲ್ಲೆಡೆ ಹಬ್ಬಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು.
ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕೆ. ಅವರು ಸಂಸ್ಥೆಯ ಗತವಾರ್ಷಿಕ ವರದಿಯನ್ನು ಮಂಡಿಸಿ, ಸಂಸ್ಥೆಯ ಅಭಿವೃದ್ಧಿಗೆ ನಾವೆಲ್ಲರು ಒಗ್ಗಟ್ಟಿನಿಂದ ಮುಂದುವರಿದು, ಸಂಘಟನೆಯನ್ನು ಇನ್ನಷ್ಟು ಬಲಪಡಿಸೋಣ ಎಂದರು.
ಜವಾಬ್‌ನ ಉಪಾಧ್ಯಕ್ಷ ಸಿಎ ಐ. ಆರ್. ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜವಾಬ್ ಪರಿಸರದ ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿದೆ. ನಾಡಿನ ಸಂಸ್ಕಾರ, ಸಂಸ್ಕೃತಿಗೆ ಒತ್ತು ನೀಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಮಾಜ ಬಾಂಧವರು ಒಮ್ಮತದಿಂದ ಕೂಡಿ ಬಾಳಿದಾಗ ಮಾತ್ರ ಸಂಘಟನೆಯ ಬೆಳವಣಿಗೆ ಇನ್ನಷ್ಟು ಸಾಧ್ಯವಾಗುತ್ತದೆ. ಆದ್ದರಿಂದ ನಾವೆಲ್ಲರು ಸಂಸ್ಥೆಯನ್ನು ಬಲಪಡಿಸೋಣ ಎಂದರು.
ನಿಕಟಪೂರ್ವ ಅಧ್ಯಕ್ಷ ಶಿವರಾಮ ನಾಯ್ಕ ಅವರು ಮಾತನಾಡಿ, ಜವಾಬ್ ಪರಿಸರದಲ್ಲಿರುವ ತಾವೆಲ್ಲರೂ ಒಂದೇ ಕುಟುಂಬದ ಸದಸ್ಯರೆನ್ನುವ ಭಾವನೆಯನ್ನು ಬೆಳೆಸಿ ಉಳಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಕಲೆಗಳನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವುದು ನಮ್ಮ ಧ್ಯೇಯವಾಗಿದೆ ಅಳಿವಿನೆಡೆಗೆ ಸರಿಯುತ್ತಿರುವ ನಮ್ಮ ಭಾಷೆ, ಆಚಾರ ವಿಚಾರ, ಜಾನಪದ ಕಲೆ, ನಮ್ಮ ಸಂಸ್ಕೃತಿ, ಸಂಸ್ಕಾರಗಳು ವಿಶಿಷ್ಟ ಪಾಕ ಪದ್ದತಿ, ಯಕ್ಷಗಾನ, ನಾಟಕ ಇತ್ಯಾದಿಗಳನ್ನು ಮೇಳೈಸಿ ಮುಂದಿನ ಜನಾಂಗಕ್ಕೆ ನಮ್ಮತನದ ಅರಿವನ್ನು ಮೂಡಿಸುವ ಪ್ರಯತ್ನವನ್ನು ಜವಾಬ್ ಮಾಡುತ್ತಿದೆ ಎಂದರು.
ಗೌರವ ಕೋಶಾಧಿಕಾರಿ ಅಶೋಕ್ ಕುಮಾರ್ ಆರ್. ಶೆಟ್ಟಿ , ಜೊತೆ ಕಾರ್ಯದರ್ಶಿ ಟಿ. ವಿಶ್ವನಾಥ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶೇಖರ್ ಹೆಗ್ಡೆ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಮಧುಕರ್ ಎ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧಕಿ ಸಿಮೋನ್ ಆಳ್ವ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಜವಾಬ್‌ನ ನೂತನ ವಿಶ್ವಸ್ತರಾಗಿ ನೇಮಕಗೊಂಡಿರುವ ಆಶೋಕ್ ಕುಮಾರ್ ರಾಜು ಶೆಟ್ಟಿ ಇವರನ್ನು ಗೌರವಿಸಲಾಯಿತು. ಕವಿತಾ ಐ. ಆರ್. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು, ಗಣ್ಯರನ್ನು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಗೌರವಿಸಲಾಯಿತು.
ಸಂಸ್ಥೆಯ ಪದಾಧಿಕಾರಿಗಳಾದ ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ ರಘು ಎಲ್ ಶೆಟ್ಟಿ, ಸದಸತ್ವ ನೋಂದಾವಣಿ ಕಾರ್ಯಾಧ್ಯಕ್ಷ ರಮೇಶ್ ಎಲ್. ಶೆಟ್ಟಿ, ಪ್ರಚಾರ ಮಾಧ್ಯಮ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಮಾಜಿ ಅಧ್ಯಕ್ಷರು ಹಾಗೂ ವಿಶ್ವಸ್ತರುಗಳಾದ ದಿವಾಕರ್ ಎಂ. ಶೆಟ್ಟಿ, ವಿ. ವಿವೇಕ್ ಶೆಟ್ಟಿ, ರಮೇಶ್ ಯು. ಶೆಟ್ಟಿ, ಆನಂದ್ ಪಿ. ಶೆಟ್ಟಿ, ರಘು ಎಲ್. ಶೆಟ್ಟಿ, ನಾಗೇಶ್ ಎನ್. ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಡಾ| ಸದಾನಂದ ವಿ. ಶೆಟ್ಟಿ , ಬಿ. ಡಿ. ಶೆಟ್ಟಿ, ವಿಶ್ವನಾಥ ಎಸ್. ಹೆಗ್ಡೆ, ಶಂಕರ್ ಟಿ. ಶೆಟ್ಟಿ, ಎನ್ ಸಿ. ಶೆಟ್ಟಿ, ಬಿ. ಶಿವರಾಮ ನಾಯ್ಕ ವಿಶ್ವಸ್ತರುಗಳಾದ ಗೀತಾ ಎಂ. ಶೆಟ್ಟಿ, ಜಯರಾಮ್ ಎಲ್. ಶೆಟ್ಟಿ, ಮಹೇಶ್ ಎಸ್. ಶೆಟ್ಟಿ, ಬಿ. ಆರ್. ಪೂಂಜ, ದಿವಾಕರ್ ಎಸ್. ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಸುಧಾಕರ ಶೆಟ್ಟಿ, ಸಿಎ ರವೀಂದ್ರ ಎಸ್. ಶೆಟ್ಟಿ, ರತ್ನಾಕರ ರೈ, ರಘುರಾಮ ಕೆ. ಶೆಟ್ಟಿ, ಶೇಖರ್ ಎ. ಶೆಟ್ಟಿ, ಪಾಂಡುರಂಗ ಎಸ್. ಶೆಟ್ಟಿ, ಸುಬ್ಬಯ್ಯ ವಿ. ಶೆಟ್ಟಿ, ಮನ್ ಮೋಹನ್ ಆರ್. ಶೆಟ್ಟಿ, ಭರತ್ ಶೆಟ್ಟಿ ಹಾಗೂ ಕಾರ್ಯಕಾರಿ ಸದಸ್ಯರೆಲ್ಲರೂ ಸಮಾರಂಭದ ಯಶಸ್ಸಿಗೆ ಸಹಕರಿಸಿದರು.
ತುಳುನಾಡಿನ ಧಾರ್ಮಿಕ ಸಂಸ್ಕೃತಿಯನ್ನು ಸಾರುವ ಭೂತಾರಾಧನೆಯ ಅಂಗವಾಗಿ ಭಂಡಾರವನ್ನು ಸಭಾಂಗಣದ ಮೂಲಕ ವೇದಿಕೆಗೆ ತಂದು ದೈವದರ್ಶನದ ಮೂಲಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ಸದಸ್ಯರು, ಸದಸ್ಯೆಯರು ಹಾಗೂ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ರಂಗಕರ್ಮಿ ನಂದಳಿಕೆ ನಾರಾಯಣ ಶೆಟ್ಟಿ ಅವರ ನಿರ್ದೇಶನದಲ್ಲಿ ರಾಮಾಯಣ ಕಿರು ಹಾಸ್ಯ ಪ್ರಹಸನ ಪ್ರದರ್ಶನಗೊಂಡಿತು.
ರೂಪಾ ಪ್ರಭಾಕರ ಶೆಟ್ಟಿ ಮತ್ತು ಅನುಪಮಾ ಶೈಲೇಶ್ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ತಶ್ವಿ, ಉನ್ನತಿ, ವೈಷ್ಣವಿ ಅವರು ಪ್ರಾರ್ಥನೆಗೈದರು. ಗೌರವ ಕೋಶಾಧಿಕಾರಿ ಅಶೋಕ್ ಕುಮಾರ್ ಆರ್. ಶೆಟ್ಟಿ ವಂದಿಸಿದರು.
ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ- ವರದಿ:ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.