ತ್ರಿಪುರದ ಮಂತ್ರವಾದಿ ಸರಕಾರಕ್ಕೆ ಈಗ ಕೊನೆಗಾಲ: ಪ್ರಧಾನಿ ಮೋದಿ
Team Udayavani, Feb 8, 2018, 3:46 PM IST
ಅಗರ್ತಲಾ : ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ “ಒಬ್ಬ ಮಂತ್ರವಾದಿ ಆತನ ಕರಾಳ ಯುಗದ ಆಳ್ವಿಕೆಗೆ ಈಗ ಕೊನೆಗಾಲ ಬಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಹೇಳಿದರು.
ಮಾಣಿಕ್ ಸರ್ಕಾರ ಅವರ ಸರಕಾರವನ್ನು “ಹೀರಾ” ಸರ್ಕಾರ್ ಬದಲಿಸಲಿದೆ; ಹೀರಾ ಎಂದರೆ ಹೈವೇ, ಐ-ವೇ (ಡಿಜಿಟಲ್ ಕನೆಕ್ಟಿವಿಟಿ) , ರೋಡ್ ವೇ ಮತ್ತು ಏರ್ ವೇ – ಎಂದು ಮೋದಿ ಬೃಹತ್ ಸಂಖ್ಯೆಯಲ್ಲಿ ನೆರಿದಿದ್ದ ಜನರನ್ನು ಉದ್ದೇಶಿಸಿ ಹೇಳಿದರು.
ತ್ರಿಪುರ ರಾಜ್ಯ ಇದೇ ಫೆ.18ರಂದು ಏಕ ಹಂತದ ರಾಜ್ಯ ವಿಧಾನಸಭಾ ಚುನಾವಣೆಯನ್ನು ಕಾಣುತ್ತಿದೆ.
ತ್ರಿಪುರದಲ್ಲಿನ್ನು ಅಭಿವೃದ್ಧಿಯ ಮಹಾ ಪರ್ವ ಆರಂಭವಾಗಲಿದೆ. ಇಲ್ಲೀಗ ಅಜ್ಞಾತ ಮಂತ್ರವಾದಿ ಸರಕಾರವಿದೆ ಎಂದು ಮೋದಿ ಹೇಳಿದರು.
ಸಿಪಿಐ ನೇತೃತ್ವದ ಮಾಣಿಕ್ ಸರ್ಕಾರ್ ಅವರ ಆಡಳಿತೆಯಲ್ಲಿ ಜನರು ಕನಿಷ್ಠ ವೇತನವನ್ನು ಪಡೆಯುತ್ತಿಲ್ಲ. ಈ ಸರಕಾರ ಜನರನ್ನು ವಂಚಿಸುತ್ತಿರುವ ಸರಕಾರವಾಗಿದೆ ಎಂದು ಮೋದಿ ಹೇಳಿದರು.
ಮೋದಿ ಅವರ ತ್ರಿಪುರ ಭೇಟಿಯ ಪ್ರಯುಕ್ತ ರಾಜ್ಯಾದ್ಯಂತ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜ್ಯ ಮತ್ತು ಕೇಂದ್ರದ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದೆ ಎಂದು ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.