ಕ್ವಿಲ್ಲಿಂಗ್‌ ಆಭರಣಗಳು


Team Udayavani, Feb 9, 2018, 8:15 AM IST

16.jpg

ಮಾರುಕಟ್ಟೆಯಲ್ಲಿ ಅದೆಷ್ಟೋ ಬಗೆಯ  ಆಭರಣಗಳು ಲಭ್ಯವಿದ್ದರೂ ಕೂಡ ಮಹಿಳೆಯ ಮನಸ್ಸು ಹೊಸದಾದ ಯಾವುದೋ ಬಗೆಯನ್ನು ಹುಡುಕುತ್ತಿರುತ್ತದೆ. ಎಷ್ಟೇ ಆಡ‌ಂಬರದ ಆಭರಣಗಳ ನಡುವೆಯೂ ಕೆಲವು ಅತಿ ಸರಳವಾದ ದುಬಾರಿಯಲ್ಲದ ಆಭರಣಗಳು ಮನಸೂರೆಗೊಳ್ಳುವಂತೆ ಮಾಡುತ್ತವೆ. ಏನೋ ಒಂದು ಹೊಸ ಬಗೆಯನ್ನು ಪ್ರಯತ್ನಿಸುವವರಿಗೆ ಸರಳವಾದ ಆಭರಣಗಳಲ್ಲಿಯೂ ಅಡಗಿರುವ ಫ್ಯಾಷನ್‌ ಹಿಂಟ… ದೊರೆಯುವುದಲ್ಲದೆ ಅವುಗಳನ್ನು ಬಳಸಿ ಸ್ಟೈಲ್ ಸ್ಟೇಟೆ¾ಂಟನ್ನು ಸೃಷ್ಟಿಸುವ ಕಲೆ ಕರಗತವಾಗಿರುತ್ತದೆ. ಕೆಲವು ಆಭರಣಗಳು ಹ್ಯಾಂಡಿಕ್ರಾಫr… ಆಗಿದ್ದರೂ ಅವುಗಳು ನೋಡಲು ದುಬಾರಿ ಆಭರಣಗಳನ್ನೂ ನಾಚಿಸುವಂತಿರುತ್ತವೆ. ಮತ್ತು ಬಹಳ ಸ್ಟೈಲಿಶ್‌ ಆದ ಲುಕ್ಕನ್ನು ಪಡೆಯುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಅಂತಹ ಆಭರಣಗಳಲ್ಲಿ ರನ್ನಿಂಗ್‌ ಟ್ರೆಂಡ್‌ ಎನಿಸಿರುವಂತಹದು ಕ್ವಿಲ್ಲಿಂಗ್‌ ಆಭರಣಗಳು. ಪೇಪರುಗಳು ಕೇವಲ ಬರೆಯಲು ಅಥವಾ ಕ್ರಾಫ‌ುrಗಳಿಗಷ್ಟೇ ಅಲ್ಲದೆ ಅವುಗಳಿಂದ ಸುಂದರವಾದ ಆಭರಣಗಳನ್ನು ತಯಾರಿಸಬಹುದಾಗಿದೆ ಎಂಬುದು ಫ್ಯಾಷನ್‌ ಲೋಕದ ಮತ್ತು ಕುಶಲತೆಯ ಬೆಳವಣಿಗೆಗೆ ಹಿಡಿದ ಕೈಗನ್ನಡಿಯಾಗಿದೆ.  ಸ್ವಲ್ಪ ದಪ್ಪದೆನಿಸುವ ಪೇಪರ್‌ ಅನ್ನು ನಿರ್ದಿಷ್ಟ ಅಳತೆಯ ಸ್ಟ್ರಿಪ್ಪುಗಳನ್ನಾಗಿ ಟ್ರಿಮ… ಮಾಡಿ ಅವುಗಳನ್ನು ಕೆಲವು ಪರಿಕರಗಳನ್ನು ಬಳಸಿ ರೋಲ… ಮಾಡಿ ನಂತರ ಬೇಕಾದ ಆಕಾರಗಳನ್ನು ನೀಡಿ ಆಭರಣಗಳನ್ನು ತಯಾರಿಸಲಾಗುತ್ತದೆ. ಈ ಬಗೆಯ ಕ್ವಿಲ್ಲಿಂಗ್‌ ಆಭರಣಗಳಲ್ಲಿ ಮುಖ್ಯವಾದವು: ಕ್ವಿಲ್ಲಿಂಗ್‌ ಕಿವಿಯಾಭರಣಗಳು, ನೆಕ್ಲೇಸುಗಳು, ಚಾಕರುಗಳು, ಲಾಂಗ್‌ಚೈನ್‌ ಪೆಂಡೆಂಟ… ಸೆಟ್ಟುಗಳು, ಕೀ ಚೈನುಗಳು, ಕ್ವಿಲ್ಲಿಂಗ್‌ ಝುಮ್ಕಾಗಳು, ಹೇರ್‌ ಬ್ಯಾಂಡುಗಳು, ಕ್ಲಿಪ್ಪುಗಳು ಇತ್ಯಾದಿ. ಅವುಗಳಲ್ಲಿ ಕೆಲವು ಬಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

1ಕ್ವಿಲ್ಲಿಂಗ್‌ ನೆಕ್ಲೇಸುಗಳು: ಕ್ವಿಲ್ಲಿಂಗ್‌ ಸ್ಟ್ರಿಪ್ಪುಗಳು ವಿವಿಧ ಅಳತೆಗಳ ಥಿಕೆ°ಸ್‌ ಅನ್ನು ಹೊಂದಿರುತ್ತವೆ. ಅವುಗಳನ್ನು ನೀಡಲ್ಲುಗಳ ಸಹಾಯದಿಂದ ರೋಲ… ಮಾಡಿ ಬೇಕಾದ ಆಕಾರಕ್ಕೆ ತಂದು ಬಗೆ ಬಗೆಯ ಮಣಿಗಳನ್ನು, ಹೂವಿನ ಎಸಳಿನಂತಹ ಆಕಾರಗಳನ್ನು, ಇತ್ಯಾದಿ ಆಕಾರಗಳನ್ನು ಮಾಡಿಕೊಂಡು ಅವುಗಳನ್ನು ಥೆಡ್‌ಗಳ ಸಹಾಯದಿಂದ ಪೋಣಿಸಿ ನೆಕ್ಲೇಸುಗಳನ್ನು ತಯಾರಿಸಲಾಗಿರುತ್ತದೆ. ವಿವಿಧ ಬಗೆಯ ಬೀಡುಗಳನ್ನೂ ಕೂಡ ಮಧ್ಯದಲ್ಲಿ ಬಳಸಿ ಈ ಬಗೆಯ ನೆಕ್‌ ಪೀಸುಗಳನ್ನು ತಯಾರಿಸಬಹುದಾಗಿದೆ. ಬೇಕಾದ ಆಕಾರಗಳ ಬೀಡುಗಳು ಮತ್ತು ಆಕಾರಗಳನ್ನು ಮಾಡಲು ಸಾಧ್ಯವಿರುವುದರಿಂದ ವಿವಿಧ ಬಗೆಗಳಲ್ಲಿ ನೆಕ್ಲೇಸುಗಳು ದೊರೆಯುತ್ತವೆ. ಸೀರೆಗಳೊಂದಿಗೆ ಅಥವಾ ಮಕ್ಕಳಿಗಾದರೆ ಟ್ರೆಡಿಶನಲ… ದಿರಿಸುಗಳೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ.
 
2ಸರಳ ಕ್ವಿಲ್ಲಿಂಗ್‌ ಕಿವಿಯಾಭರಣಗಳು: ಕ್ವಿಲ್ಲಿಂಗನ್ನು ಸರಳ ಆಕಾರಗಳಲ್ಲಿ ರೋಲ್ ಮಾಡಿಕೊಂಡು ಸುಂದರವಾದ  ಹ್ಯಾಂಗಿಂಗುಗಳನ್ನು  ತಯಾರಿಸಬಹುದಾಗಿದೆ. ನೋಡಲು ಸುಂದರವೂ ಸರಳವೂ ಮತ್ತು ಹಗುರವೂ ಆಗಿರುವ ಇವುಗಳು ದಿನನಿತ್ಯದ ಬಳಕೆಗೆ ಹೇಳಿಮಾಡಿಸಿದಂತಿರುತ್ತವೆ. ಇವುಗಳಲ್ಲಿ ಜ್ಯಾಮಿತೀಯ ಆಕೃತಿಗಳಾದ ತ್ರಿಕೋನ, ಚೌಕ ಆಕೃತಿಗಳುಳ್ಳ ಕಿವಿಯಾಭರಣಗಳು ದೊರೆಯುತ್ತವೆ. ಮಕ್ಕಳು ಮತ್ತು ಮಹಿಳೆಯರು ಎಲ್ಲರಿಗೂ ಹೊಂದುವಂತಿರುತ್ತವೆ.

3ಕ್ವಿಲ್ಲಿಂಗ್‌ ಹೇರ್‌ ಬ್ಯಾಂಡುಗಳು (ಮಕ್ಕಳಿಗಾಗಿ): ಕ್ವಿಲ್ಲಿಂಗ್‌ ಹೂವುಗಳನ್ನು ಮತ್ತು ಎಲೆಗಳನ್ನು ಬೇಕಾದ ಆಕಾರಗಳಲ್ಲಿ ತಯಾರಿಸಿ ಹೇರ್‌ಬ್ಯಾಂಡ್‌ಗೆ ಅಳವಡಿಸಿ ಬಳಸಬಹುದಾಗಿದೆ. ಕೇವಲ ಹೂವುಗಳಷ್ಟೇ ಅಲ್ಲದೆ ಚಿಕ್ಕ ಚಿಕ್ಕ ಡಾಲ್ ಫೇಸ್‌ ಅನ್ನು ಮಾಡಿಯೂ ಹೇರ್‌ಬ್ಯಾಂಡಿಗೆ ಜೋಡಿಸುವುದರ ಮೂಲಕ ಮಕ್ಕಳ ಮನಸ್ಸನ್ನು ಮುದಗೊಳಿಸಬಹುದು. 

4ಪೇಪರ್‌ ಕ್ವಿಲ್ಡ್‌ ರೋಸ್‌ ಯಿಯರಿಂಗುಗಳು: ಸ್ಟ್ರಿಪ್ಪುಗಳನ್ನು ಫೋಲ್ಡ… ಮಾಡುವುದರ ಮೂಲಕ ತಯಾರಿಸಬಹುದಾದ ರೋಸ್‌ ಯಿಯರಿಂಗುಗಳು ಬಹಳ ಸುಂದರವಾಗಿರುತ್ತವೆ. ಕೆಂಪು, ಹಳದಿ, ಬಿಳಿ, ಗುಲಾಬಿ ಇತ್ಯಾದಿ ಬಣ್ಣಗಳಲ್ಲಿ ಇವುಗಳನ್ನು ತಯಾರಿಸಿ ಧರಿಸಬಹುದಾಗಿದೆ. 

5ಫಿಂಗರ್‌ ರಿಂಗುಗಳು: ಸುಂದರವಾದ ಸಣ್ಣ ಸಣ್ಣ ಹೂಗಳ ಆಕೃತಿಗಳನ್ನು ತಯಾರಿಸಿಕೊಂಡು ಅವುಗಳನ್ನು ಬಳಸಿ ಫಿಂಗರ್‌ ರಿಂಗುಗಳನ್ನು ಕೂಡ ತಯಾರಿಸಲಾಗುತ್ತದೆ. ಬೇಕಾದ ಅಳತೆಗಳಲ್ಲಿ ರಿಂಗುಗಳನ್ನು ತಯಾರಿಸಿಕೊಳ್ಳಬಹುದು. ಇವುಗಳು ಸ್ವಲ್ಪ ಡೆಲಿಕೇಟ… ಆಗಿರುವುದರಿಂದ ಕಿವಿಯಾಭರಣಗಳಿಗೆ ಹೆಚ್ಚು ಸೂಕ್ತವೆನಿಸುತ್ತವೆ. 

6ಫ್ಲೋರಲ್‌ ಸ್ಟಡ್ಡುಗಳು: ಬಂಗಾರದ ಸ್ಟಡ್ಡುಗಳನ್ನೂ ನಾಚಿಸುವಂತಹ ಕ್ವಿಲ್ಲಿಂಗ್‌ ಸ್ಟಡ್ಡುಗಳು ದೊರೆಯುತ್ತವೆ. ಹಾಗೂ ಧರಿಸಿದಾಗ ಬಹಳ ಸುಂದರವಾದ ಲುಕ್ಕನ್ನು ನೀಡುತ್ತವೆ. ಬಹಳ ಹಗುರ ಮತ್ತು ಕಲರ್‌ಫ‌ುಲ್‌ ಆಗಿರುವುದರಿಂದ ದಿರಿಸಿಗೆ ಮ್ಯಾಚಿಂಗ್‌ ಆಗಿ ಧರಿಸಬಹುದಾಗಿದೆ. ಎಲ್ಲಾ ಬಗೆಯ ಬಟ್ಟೆಗಳಿಗೂ ಒಪ್ಪುವಂತಹ ಸ್ಟಡ್ಡುಗಳು ದೊರೆಯುವುದರಿಂದ ಒಮ್ಮೆ ಪ್ರಯೋಗಿಸಲೇಬೇಕಾದ ಟ್ರೆಂಡು ಇವಾಗಿದೆ.

7ಝುಮ್ಕಾಗಳು: ಸಿಲ್ಕ… ಥೆಡ್‌ ಝುಮ್ಕಾಗಳಂತೆ ಕ್ವಿಲ್ಲಿಂಗ್‌ ಝುಮ್ಕಾಗಳು ಹಗುರವಾಗಿರುವುದರಿಂದ ದೊಡ್ಡ ಗಾತ್ರದ ಝುಮ್ಕಾಗಳನ್ನೂ ಕೂಡ ಸುಲಭವಾಗಿ ಧರಿಸಬಹುದಾಗಿದೆ. ಕ್ವಿಲ್ಲಿಂಗ್‌ ಸ್ಟಿಪ್‌ ಅನ್ನು ರೋಲ… ಮಾಡಿ ಝುಮ್ಕಾ ಮೌಲ್ಡ…ನಲ್ಲಿ ಪ್ರಸ್‌Õ ಮಾಡಿ ಝುಮ್ಕಾ ಆಕಾರವನ್ನು ನೀಡಲಾಗುತ್ತದೆ. ನಂತರ ಇವುಗಳನ್ನು ವಿವಿಧ ಬಗೆಯ ಸ್ಟೋನುಗಳಿಂದ ಅಲಂಕಾರಗೊಳಿಸಬಹುದು.
   
8ಟ್ರೆಂಡಿ ಕ್ವಿಲ್ಲಿಂಗ್‌ ಬ್ರೇಸ್ಲೆಟ್ಸ…: ಮೆಟಲ್ ಬ್ರೇಸ್ಲೆಟ್, ಬೀಸ್ಟ್ ಬ್ರೇಸ್ಲೆಟ್ ಹೀಗೆ ಅನೇಕ ಬಗೆಯ ಬ್ರೇಸ್ಲೆಟ್ಟುಗಳನ್ನು ನೋಡಿರುತ್ತೇವೆ. ಅವುಗಳಂತೆಯೇ ಕ್ವಿಲ್ಲಿಂಗ್‌ ಬೀಡುಗಳು ಮತ್ತು ಲೂಪುಗಳನ್ನು ಬಳಸಿ ಅಂದವಾದ ಬ್ರೇಸ್ಲೆಟ್ಟುಗಳನ್ನು ತಯಾರಿಸಬಹುದಾಗಿದೆ. ಕ್ವಿಲ್ಲಿಂಗ್‌ ಬ್ರೇಸ್ಲೆಟ್ಟುಗಳು ಸ್ವಲ್ಪ ಡೆಲಿಕೇಟ… ಆಗಿರುವುದರಿಂದ ಬಳಸುವಾಗ ಸ್ವಲ್ಪ ಎಚ್ಚರಿಕೆಯ ಆವಶ್ಯಕತೆಯಿರುತ್ತದೆ. ಆದರೆ ಬಹಳ ಟ್ರೆಂಡಿ ಲುಕನ್ನು ಕೊಡುತ್ತವೆ.

9ಝುಮ್ಕಾ ಯಿಯರಿಂಗುಗಳು: ಝುಮ್ಕಾಗಳು ದೊಡ್ಡ ಗಾತ್ರದ ರಿಂಗಿನೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಇವುಗಳು ಫ್ಯೂಷನ್‌ವೇರುಗಳಾದ ಗಾಗ್ರ ಅಥವಾ ಲೆಹೆಂಗಾಗಳೊಂದಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ಸ್ಟೈಲಿಶ್‌ ಲುಕ್ಕನ್ನು ಕೊಡುವ ಇವುಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಸಿಂಗಲ… ಬಣ್ಣದ ಝುಮ್ಕಾಗಳು ಮತ್ತು ಮಲ್ಟಿ ಕಲರ್ಡ್‌ ಝುಮ್ಕಾಗಳು ಕೂಡ ದೊರೆಯುತ್ತವೆ.
 
10ಮಕ್ಕಳಿಗಾಗಿ ಕ್ವಿಲ್ಲಿಂಗ್‌ ರಾಖೀಗಳು ಮತ್ತು ಫ್ರೆಂಡಿಪ್‌ ಬ್ಯಾಂಡುಗಳು: ಬ್ರೇಸ್ಲೆಟ್ಗಳ ಮಾದರಿಯಲ್ಲಿಯೇ ಕ್ವಿಲ್ಲಿಂಗ್‌ ಪೆಂಡೆಂಟುಗಳನ್ನು ಬಳಸಿ ರಾಖೀಗಳು ಮತ್ತು ಫ್ರೆಂಡಿಪ್‌ ಬ್ಯಾಂಡುಗಳನ್ನು ತಯಾರಿಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ದೊರೆಯುವ ಅಥವ ತಯಾರಾಗುವ ಇವುಗಳು ಸುಂದರವಾಗಿರುತ್ತವೆ.

ಪ್ರಭಾ ಭಟ್‌

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.