ಟ್ರಂಕ್‌ನೊಳಗಿಂದ ಬಂದ ಹಾಡು
Team Udayavani, Feb 9, 2018, 9:10 AM IST
ಹಿರಿಯ ನಿರ್ದೇಶಕ, ನಿರ್ಮಾಪಕ ದಿವಂಗತ ಜಿ.ವಿ.ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮ ನಿರ್ದೇಶನದ “ಟ್ರಂಕ್’ ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ. ಇತ್ತೀಚೆಗೆ ಆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಹಿರಿಯ ಗೀತರಚನೆಕಾರ ಕೆ.ಕಲ್ಯಾಣ್ ಅವರು ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಹೊಸಬರ ತಂಡಕ್ಕೆ ಶುಭಹಾರೈಸಿದ್ದಾರೆ.
ನಿರ್ದೇಶಕಿ ರಿಷಿಕಾ ಶರ್ಮ ಅವರು ತಮ್ಮ ಮೊದಲ ಚಿತ್ರದ ಕುರಿತು ಅಂದು ಹೇಳಿದ್ದಿಷ್ಟು. “ಇದು ನಿಜ ಘಟನೆ ಇಟ್ಟುಕೊಂಡು ಮಾಡಿದ ಚಿತ್ರ. ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯ ಚಿತ್ರಣವಿದು. ಆ ಭಾಗದಲ್ಲಿರುವ ಮನೆಯೊಂದರಲ್ಲಿ ಒಂದು ಘಟನೆ ನಡೆದಿತ್ತು. ಅದೇ ಚಿತ್ರದ ಹೈಲೈಟ್. ಒಂದು ಟ್ರಂಕ್‌ನಿಂದ ಶುರುವಾಗುವ ಕಥೆ ಅದಾಗಿದ್ದು, ಇಪ್ಪತ್ತು ವರ್ಷದ ಹಿಂದೆ ನಡೆದಂತಹ ಕುತೂಹಲದ ಘಟನೆಯನ್ನು ಚಿತ್ರ ಮಾಡಲಾಗಿದೆ. ಒಂದು ಟ್ರಂಕ್ ಸುತ್ತ ನಡೆಯೋ ಘಟನೆಗಳೇ ಚಿತ್ರದ ಜೀವಾಳ. ಚಿತ್ರದಲ್ಲಿ ಟ್ರಂಕ್ ಕೇಂದ್ರಬಿಂದು. ಆ ಟ್ರಂಕ್‌ನೊಳಗೊಂದು ವಿಚಿತ್ರ ಘಟನೆ ನಡೆಯುತ್ತೆ. ಅದೇನೆಂಬುದನ್ನು ಸಿನಿಮಾದಲ್ಲೇ ನೋಡಬೇಕು. ಇಲ್ಲಿ ಇನ್ನೊಂದು ವಿಶೇಷವೆಂದರೆ, ನಿಜವಾದ ಘೋಸ್ಟ್ ಹಂಟರ್ ಕೂಡ ಕೆಲಸ ಮಾಡಿದ್ದಾರೆ. ತೆರೆಯ ಮೇಲೂ ಅವರೂ ಕಾಣಿಸಿಕೊಂಡಿದ್ದಾರೆ. ತಂತ್ರ, ಮಂತ್ರ ಇಲ್ಲದೆ, ಸೈನ್ಸ್ ಮೂಲಕ ಹೊಸತನ್ನು ಹೇಳಿದ್ದೇವೆ’ ಅಂದರು ರಿಷಿಕಾ ಶರ್ಮ.
ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಾಯಕ ನಿಹಾಲ್‌ಗೆ “ಟ್ರಂಕ್’ ಹೊಸ ಅನುಭವ ಕಟ್ಟಿಕೊಟ್ಟಿದೆಯಂತೆ. ಒಂದೂವರೆ ವರ್ಷ, ಈ ಟ್ರಂಕ್‌ನಲ್ಲೇ ಕಳೆದಿದ್ದಾರಂತೆ. “ಮಹಿಳೆಯೊಬ್ಬಳು ನಿರ್ದೇಶನ ಮಾಡಿದ ಚಿತ್ರ ಅಂತ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಎಲ್ಲವನ್ನೂ ಒಟ್ಟಿಗೆ ನಿರ್ವಹಿಸಿ, ಎಲ್ಲರನ್ನೂ ಒಂದೇ ಕಡೆ ಸೇರಿಸಿ, ನೀಟ್ ಸಿನಿಮಾ ಮಾಡಿದ್ದಾರೆ. ಅಷ್ಟೊಂದು ಕೆಲಸವನ್ನು ತುಂಬಾ ಸುಲಭವಾಗಿ ಮಾಡಿದ್ದಾರೆ. ಕನ್ನಡದಲ್ಲಿ ಇದೊಂದು ಸುದ್ದಿ ಮಾಡುವ ಚಿತ್ರವಾಗುತ್ತೆ’ ಎಂದರು ನಿಹಾಲ್. ಇನ್ನು ನಿರ್ಮಾಪಕ ರಾಜೇಶ್ ಭಟ್ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ಖುಷಿ ಇದೆಯಂತೆ. “ಇದು ಹಾರರ್ ಚಿತ್ರವಾದರೂ, ಕನ್ನಡದ ಮಟ್ಟಿಗೆ ಹೊಸ ಫೀಲ್ ಕೊಡುವ ಚಿತ್ರ’ ಎನ್ನುತ್ತಾರೆ ನಿರ್ಮಾಪಕರು. ಈ ಚಿತ್ರಕ್ಕೆ ಕಾರ್ತಿಕ್, ಗಣೇಶನ್ ಮತ್ತು ಪ್ರದೀಪ್ ಈ ಮೂವರು ಸೇರಿ ಸಂಗೀತ ನೀಡಿದ್ದಾರೆ. ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿರುವ ಅಲ್ವಿನ್ ಅವರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪ್ರದೀಪ್ ಗೀತೆ ರಚಿಸಿದ್ದಾರೆ. ಕುಮಾರ್ ತಮ್ಮ ಆದ್ಯ ಆಡಿಯೋ ಕಂಪೆನಿ ಮೂಲಕ ಮೊದಲ ಆಡಿಯೋ ಸಿಡಿ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ವೈಶಾಲಿ ದೀಪಕ್ ನಾಯಕಿ. ಉಳಿದಂತೆ ಅರುಣ ಬಾಲರಾಜ್, ರಂಗಭೂಮಿಯ ಹಿರಿಯ ಕಲಾವಿದೆ ಸುಂದರಶ್ರೀ ಸೇರಿದಂತೆ ಅನೇಕರು ನಟಿಸಿದ್ದಾರೆ. ಭಜರಂಗ್, ಸಂದೀಪ್ ಕ್ಯಾಮೆರಾ ಹಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.