ಪೆಟ್ ಕೋಕ್ ಸಾಗಣೆಗೆ ವಿಶೇಷ ವ್ಯವಸ್ಥೆ
Team Udayavani, Feb 9, 2018, 11:09 AM IST
ಸುರತ್ಕಲ್: ಪೆಟ್ ಕೋಕ್ ಧೂಳು ಸಾಗಣೆ ವೇಳೆ ಪರಿಸರಕ್ಕೆ ಸೇರಿ ನಾಗರಿಕರ ಆರೋಗ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ದೂರಿಗೆ ಸ್ಪಂದಿಸಿರುವ ಎಂಆರ್ ಪಿಎಲ್ ಸಂಸ್ಥೆ ಹೊಸ ಪರಿಹಾರವನ್ನು ಹುಡುಕಿದೆ.
ಅದರಂತೆ ದೇಶದ ಮಿನಿ ರತ್ನ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸ್ಥಾವರದೊಳಗೆ ಪೆಟ್‌ಕೋಕ್ ಸಾಗಿಸಲು 2018ರ ಡಿಸೆಂಬರ್‌ನಿಂದ ಗೂಡ್ಸ್ ರೈಲು ಸಂಚರಿಸಲಿದೆ.
ಈ ಹಿನ್ನೆಲೆಯಲ್ಲಿ ಸುಮಾರು 3.52 ಕಿ.ಮೀ. ವರೆಗೆ ರೈಲು ಹಳಿ (ರೈಲ್ವೇ ಸೈಡಿಂಗ್) ನಿರ್ಮಿಸುತ್ತಿದೆ. ಇದಕ್ಕಾಗಿ ಕೊಂಕಣ ರೈಲ್ವೇ ಜತೆ 2016ರ ಅಕ್ಟೋಬರ್ ನಲ್ಲಿ ಒಪ್ಪಂದ ಮಾಡಿಕೊಂಡಿರುವ ಎಂಆರ್‌ಪಿಎಲ್ 80.16 ಕೋ.ರೂ. ಪಾವತಿಸಿದೆ. ತೋಕೂರು ರೈಲ್ವೇ ಹಳಿ ಬಳಿಯಿಂದ ಎಂಆರ್‌ಪಿಎಲ್‌ವರೆಗೆ 3.52 ಕಿ.ಮೀ. ಉದ್ದದ ಹಳಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, 2018ರ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ.
ಪೆಟ್ ಕೋಕ್, ಪೊಲಿಪ್ರೊಪಿಲಿನ್, ಸಲ ರ್ ಬಿಟಮಿನ್ ಸಾಗಾಟಕ್ಕೆ ಈ ಹೊಸ ರೈಲ್ವೇ ಸಂಪರ್ಕ ಸಹಕಾರಿಯಾಗಲಿದೆ. ಇದರಿಂದ ಮಾಲಿನ್ಯಕಾರಕ ವಸ್ತುಗಳ ಸಾಗಣೆಗೆ ಬಳಸಲಾಗುತ್ತಿದ್ದ ಬೃಹತ್ ಗಾತ್ರದ ಲಾರಿಗಳಿಗೆ ವಿರಾಮ ಸಿಗಲಿದೆ. ಜತೆಗೆ ಹೆದ್ದಾರಿ ಮತ್ತು ಒಳ ರಸ್ತೆಯಲ್ಲಿ ವಾಹನ ಒತ್ತಡ ಗಣನೀಯವಾಗಿ ಕುಗ್ಗಲಿದೆ.
ಅತ್ಯಾಧುನಿಕ ಕಾಮಗಾರಿ
ಎಂಆರ್‌ಪಿಎಲ್ ಹಳಿ ಸಂಪರ್ಕ ಭಾಗದಲ್ಲಿ ನಾಲ್ಕು ಗ್ಯಾಸ್ ಪೈಪ್‌ಲೈನ್ ಸಾಗಣೆ ಸಹಿತ ಬಹುಪಯೋಗಿ 10 ಕಿರು
ಸೇತುವೆಗಳು ನಿರ್ಮಾಣವಾಗಲಿದೆ. ಈ ಪ್ರದೇಶ ನೀರು ನಿಲ್ಲುವ ಮತ್ತು ಒಸರುವ ಪ್ರದೇಶವಾದ ಕಾರಣ ಹಳಿ ನಿರ್ಮಾಣಕ್ಕೆ ರೈಲ್ವೇಯು ಅತ್ಯಾಧುನಿಕ ತಂತ್ರಜ್ಞಾನ ಬಳಸಲಿದೆ. ಟ್ರಕ್ಕುಗಳಲ್ಲಿ 20ರಿಂದ 25ಟನ್ ಮಾತ್ರ ಪೆಟ್ ಕೋಕ್ ಹೇರಲು ಅವಕಾಶವಿತ್ತು. ಆದರೆ ಗೂಡ್ಸ್ ವ್ಯಾಗನ್ ನಲ್ಲಿ 40ರಿಂದ 50 ಟನ್‌ಗೂ ಹೆಚ್ಚು ಸರಕು ಹಾಕಬಹುದಾಗಿದೆ. ಒಂದು ಬಾರಿಗೆ 1,400 ಟನ್‌ಗಳಷ್ಟು ಪೆಟ್ ಕೋಕ್‌ನ್ನು ಸಾಗಿಸಬಹುದು.
ಹಳಿ ನಿರ್ಮಾಣ
ಎಂಆರ್‌ಪಿಎಲ್ ಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹಳಿ ನಿರ್ಮಿಸಲಾಗುತ್ತಿದೆ. ನೇರವಾಗಿ ಸರಕನ್ನು ಕಂಪೆನಿಯ ಒಳಭಾಗದಲ್ಲೇ ಲೋಡ್ ಮಾಡಿ ಬೇರೆಡೆ ಒಯ್ಯಲಾಗುತ್ತದೆ. ಇದರಿಂದ ಸಮಯ ಉಳಿತಾಯದ ಜತೆಗೆ ಪರಿಸರ ಮಾಲಿನ್ಯ ತಪ್ಪಲಿದೆ.
– ಸುಧಾಕೃಷ್ಣ ಮೂರ್ತಿ
ಸಾರ್ವಜನಿಕ ಸಂಪರ್ಕಾಧಿಕಾರಿ,
ಕೊಂಕಣ ರೈಲ್ವೇ ಉಡುಪಿ
170 ಕೋ.ರೂ. ವೆಚ್ಚ
ಎಂಆರ್‌ಪಿಎಲ್‌ಗೆ ಸುಮಾರು 170 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಕಾಮಗಾರಿ ನಡೆಯುತ್ತಿದೆ. 80 ಕೋಟಿ ರೂ. ಮೊತ್ತದ ಹಳಿ ಕಾಮಗಾರಿಯನ್ನು ಕೊಂಕಣ ರೈಲ್ವೇ ನಿರ್ವಹಿಸುತ್ತಿದೆ. ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಪಿಎಲ್ ಸ್ವತಃ ರೈಲ್ವೇಗೆ ಬೇಕಾದ ಪೂರಕ ಕಾಮಗಾರಿಯನ್ನು ಕೈಗೊಳ್ಳುತ್ತಿದೆ. ಇದರಿಂದ ಪೆಟ್ ಕೋಕ್ ಮತ್ತಿತರ ಸರಕು ಸಾಗಣೆಗೆ ಅನುಕೂಲವಲ್ಲದೇ, ಲಾರಿಗಳ ಒತ್ತಡವೂ ತಗ್ಗಲಿದೆ.
– ಪ್ರಶಾಂತ್ ಬಾಳಿಗಾ
ಜನರಲ್ ಮ್ಯಾನೇಜರ್, ಕಾರ್ಪೊರೇಟ್ ಸಂಪರ್ಕ, ಎಂಆರ್‌ಪಿಎಲ್
ಲಕ್ಷ್ಮೀ ನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.