ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿದರೆ ಕ್ರಮ


Team Udayavani, Feb 9, 2018, 2:36 PM IST

9-Feb-14.jpg

ಸುಳ್ಯ : ನಕಲಿ ದಾಖಲೆ ಸಲ್ಲಿಸಿ ಜಾತಿ ಪ್ರಮಾಣ ಪಡೆದುಕೊಳ್ಳುವ ಅರ್ಜಿದಾರ ಹಾಗೂ ಪ್ರಮಾಣ ಪತ್ರ ನೀಡಿ ಲೋಪ ಎಸಗುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕ ಸಿ.ಬಿ. ವೇದಮೂರ್ತಿ ಎಚ್ಚರಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪ. ಜಾತಿ ಮತ್ತು ಪಂಗಡದ ಕುಂದು- ಕೊರತೆ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಮೀಸಲಾತಿ ಅಥವಾ ಇತರ ಸರಕಾರಿ ಸೌಲಭ್ಯಕ್ಕಾಗಿ ನಕಲಿ ಪ್ರಮಾಣ ಪತ್ರ ಪಡೆದುಕೊಳ್ಳುವ ಮತ್ತು ಸೌಲಭ್ಯಕ್ಕಾಗಿ ಸರಕಾರಕ್ಕೆ ಸಲ್ಲಿಸುವ ಪ್ರಕರಣಗಳು ಕಂಡು ಬಂದಿವೆ. ಇದಕ್ಕೆ ಅರ್ಜಿದಾರನ ಜತೆಗೆ ಆತನಿಗೆ ಸಹಕಾರ ನೀಡುವ ಗ್ರಾಮಕರಣಿಕ, ಕಂದಾಯ ನಿರೀಕ್ಷಕ, ತಹಶೀಲ್ದಾರ್‌ ವಿರುದ್ಧವೂ ಪ್ರಕರಣ ದಾಖಲಿಸುವ ಅವಕಾಶ ಇದೆ ಎಂದರು.

ದೂರು ನೀಡಿ
ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ಷೇಮಾಭಿವೃದ್ಧಿಗಾಗಿ ಸರಕಾರ ಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಮಂಜೂರುಗೊಳಿಸುವ ಅನುದಾನದ ಸಮರ್ಪಕ ವಿನಿಯೋಗ ಆಗದಿದ್ದರೆ ಆ ಬಗ್ಗೆ ದೂರು ಸಲ್ಲಿಸಬಹುದು. ಸೂಚಿತ ಸ್ಥಳದ ಬದಲು ಇನ್ನೊಂದು ಸ್ಥಳಕ್ಕೆ ಆ ಹಣ ಬಳಸಿದರೂ ಗಮನಕ್ಕೆ ತರುವಂತೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗ‌ಳಲ್ಲಿ ಸಮಸ್ಯೆ ಕಂಡು ಬಂದರೆ ದೂರು ಸಲ್ಲಿಸ ಬಹುದು. ಅಲ್ಲಿ ಮೂಲಭೂತ ವ್ಯವಸ್ಥೆ ಸಮರ್ಪಕವಾಗಿರಬೇಕು. ಸಮಸ್ಯೆ ತಿಳಿಸಿದಲ್ಲಿ ಸರಿಪಡಿಸಲು ಸಾಧ್ಯವಾಗುತ್ತದೆ ಎಂದರು.

ದಲಿತ ಮುಖಂಡ ಸಂಜಯ್‌ ಪೈಚಾರು ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ನ.ಪಂ. ಸದಸ್ಯ ಗೋಕುಲ್‌ದಾಸ್‌ ಚುನಾವಣೆಯಲ್ಲಿ ಗೆದ್ದಿದ್ದು, ದಾಖಲೆ ಸಹಿತ ದೂರು ಸಲ್ಲಿಸಿದರೂ, ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು. ಉತ್ತರಿಸಿದ ಸಿ.ಬಿ. ವೇದಮೂರ್ತಿ, ಆ ಪ್ರಕರಣ ಗಮನದಲ್ಲಿದೆ. ಜಿಲ್ಲಾಧಿಕಾರಿ ಮಟ್ಟದಲ್ಲಿ ತನಿಖೆ ಪ್ರಗತಿಯಲ್ಲಿದೆ. ತನಿಖೆ ನಡೆದು ತಪಿತಸ್ಥರೆಂದು ಕಂಡು ಬಂದರೆ ಅಧಿಕಾರಿಗಳಿಗೂ ಶಿಕ್ಷೆ ದೊರೆಯಲಿದೆ ಎಂದರು.

ತೊಡಿಕಾನ ಅಡ್ಯಡ್ಕದಲ್ಲಿ ಪರಿಶಿಷ್ಟ ಜಾತಿ ಕುಟುಂಬ 94ಸಿ ಅಡಿ ಮನೆ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದರೂ ಅರಣ್ಯ ಇಲಾಖೆ ತನ್ನ ವ್ಯಾಪ್ತಿ ಎಂದು ಅಡ್ಡಿಪಡಿಸುತ್ತಿದೆ ಎಂದು ಆನಂದ ಬೆಳ್ಳಾರೆ ನುಡಿದರು. ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷ ಅಚ್ಯುತ, ತಾಲೂಕಿನ ಮೂರು ಗ್ರಾಮಗಳಲ್ಲಿ 94 ಸಿಯಲ್ಲಿ ಅರ್ಜಿ ಸಲ್ಲಿಸಿದ ದಲಿತ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ
ಎಂದು ದೂರಿದರು.

ಗ್ರಾಮಸಭೆಗೆ ಅಧಿಕಾರಿಗಳ ಗೈರು
ಗ್ರಾಮಸಭೆಗಳಿಗೆ ಅಧಿಕಾರಿಗಳು ಬರುತ್ತಿಲ್ಲ. ಅವರು ಕಡ್ಡಾಯವಾಗಿ ಬಂದರೆ ಮಾತ್ರ ಜನರ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದ ಅಚ್ಯುತ, ಗುತ್ತಿಗಾರು ಪರಿಸರದ ಜನರ ಅನುಕೂಲಕ್ಕಾಗಿ 108 ಆ್ಯಂಬುಲೆನ್ಸ್‌ ಸೌಲಭ್ಯ ಒದಗಿಸಬೇಕು ಎಂದರು.

ದಾಸಪ್ಪ ಅಜ್ಜಾವರ ಮಾತನಾಡಿ, ನಗರದ ಪುರಭವನದಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಬಾಡಿಗೆ 7,000 ರೂ.ಗೆ ಏರಿಸುವ ಪ್ರಸ್ತಾಪ ಇದೆ. ಇದು ದುಬಾರಿ ಮೊತ್ತ ಎಂದರು. ಬಾಡಿಗೆಯ ಜತೆಗೆ ಹೆಚ್ಚುವರಿ ಹಣ ಪಾವತಿಸುವಂತೆಯೂ ಪೀಡಿಸಲಾಗುತ್ತಿದೆ ಎಂದು ಪ್ರಕಾಶ್‌ ಬಂಗ್ಲೆಗುಡ್ಡೆ ಆಪಾದಿಸಿದರು.

ನ.ಪಂ. ಅಧಿಕಾರಿ ಸುದೇವ್‌ ಅವರನ್ನು ಕರೆಸಿ, ಅಧೀಕ್ಷಕರು ವಿಚಾರಿಸಿದರು. ಉತ್ತರಿಸಿದ ಅಧಿಕಾರಿ, ಬಾಡಿಗೆ ಏರಿಸಿಲ್ಲ. 3,000 ರೂ. ಇದೆ. ಕೆಲವರು ಕಾರ್ಯಕ್ರಮ ಆದ ಅನಂತರ ಬಾಡಿಗೆ ಏಕೆ ಕೊಡಬೇಕು ಎಂದು ಪ್ರಶ್ನಿಸುತ್ತಾರೆ. ವಿದ್ಯುತ್‌ ಬಿಲ್‌ ಕಟ್ಟಬೇಕು. ಅಲ್ಲಿಗೆ ಮೂಲ ಸೌಕರ್ಯಯ ಅಗತ್ಯವಿದೆ ಎಂದರು. ಸಿ.ಬಿ. ವೇದಮೂರ್ತಿ, ನಿಗದಿಪಡಿಸಿದ 3,000 ರೂ. ಪಾವತಿಸಬೇಕು. ಇಲ್ಲದಿದ್ದರೆ ವಿದ್ಯುತ್‌ ಸಹಿತ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ. ಜನರು ಸಹಕರಿಸಬೇಕು ಎಂದರು.

ಕುಡಿಯಲು ನೀರಿಲ್ಲ
ಎಂ.ಕೆ. ತೇಜಕುಮಾರ್‌ ಮಾತನಾಡಿ, ಶಿರಾಡಿ ಮುಂಡಕಜೆಯ 11 ಮಲೆಕುಡಿಯ ಕುಟುಂಬಗಳಿಗೆ ಕುಡಿಯುವ ನೀರಿನ
ಸಂಪರ್ಕಕ್ಕಾಗಿ ಗುಡ್ಡಭಾಗದ ಒರತೆ ನೀರನ್ನು ಬಳಸಲು ಪೈಪ್‌ ಅಳವಡಿಸಲು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗಿದೆ. ಆ ಬೇಡಿಕೆ ಈಡೇರಿಲ್ಲ ಎಂದರು. ಕಾಸರಗೋಡಿನ ಜಾತಿ ಪ್ರಮಾಣಪತ್ರದ ನೆಪದಲ್ಲಿ ಗುತ್ತಿಗಾರಿನ ಶಿಕ್ಷಕಿ ಜಾಹ್ನವಿ ಅವರನ್ನು ಅಮಾನತು ಮಾಡಿರುವ, ನಗರಸಭೆಯ ಶಶ್ಮನಾ ಅವ್ಯವಸ್ಥೆ, ಬೆಳ್ಳಾರೆ ಸಮೀಪದಲ್ಲಿ ಅಂಬೇಡ್ಕರ್‌ ನಿಗಮದ ಬೋರ್‌ವೆಲ್‌ ಕೊರೆಯಲು ಅಡ್ಡಿ ಇತ್ಯಾದಿ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಅಹವಾಲು ಸಲ್ಲಿಸಲಾಯಿತು.

ತಹಶೀಲ್ದಾರ್‌ ಕುಂಞಮ್ಮ, ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಚಂದ್ರಶೇಖರ ಪೇರಾಲು, ಎಸ್‌ಐ ಮಂಜುನಾಥ, ಬೆಳ್ಳಾರೆ ಎಸ್‌ಐ ಈರಯ್ಯ, ಆರ್‌ಎಫ್‌ಒ ಸೌಮ್ಯಾ, ಕಂದಾಯ ನಿರೀಕ್ಷಕರಾದ ಆವಿನ್‌ ಕುಮಾರ್‌, ಹರೀಶ್‌ ಕುಮಾರ್‌ ಕೆ.ಕೆ. ಉಪಸ್ಥಿತರಿದ್ದರು. ಅಚ್ಯುತ ಮಲ್ಕಜೆ, ಉದಯ ಕುಮಾರ್‌ ಎಂ., ಶಂಕರ ಪೆರಾಜೆ, ಆನಂದ ಕಂಭಾರೆ, ಎಸ್‌. ಆರ್‌ ಶಿವರಾಮ ಉಪಸ್ಥಿತರಿದ್ದರು.

ಸ್ಥಾಯೀ ಸಮಿತಿಗೆ ಆಯ್ಕೆ
ಸುಳ್ಯ: ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ಅವರು ಪುನರಾಯ್ಕೆಯಾಗಿದ್ದಾರೆ. ತಾ.ಪಂ. ಸ್ಥಾಯಿ ಸಮಿತಿ ಆಯ್ಕೆ ವಿಶೇಷ ಸಭೆ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಚನಿಯ ಕಲ್ತಡ್ಕ ಅವರು ಹೆಸರು ಸೂಚಿಸಿದೊಡನೆ, ಸದಸ್ಯೆ ಪುಷ್ಪಾ ಮೇದಪ್ಪ ಅನುಮೋದಿಸಿದರು. ಸಮಿತಿ ಸದಸ್ಯರಾಗಿ ಯಶೋದಾ ಬಾಳೆಗುಡ್ಡೆ, ಪದ್ಮಾವತಿ ಕುಡೆಂಬಿ, ನಳಿನಾಕ್ಷಿ, ಉದಯ ಕೊಪ್ಪಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಹಣಕಾಸು ಮತ್ತು ಲೆಕ್ಕ ಪರಿಶೋಧನ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಚನಿಯ ಕಲ್ತಡ್ಕ, ಸದಸ್ಯರಾಗಿ ಪುಷ್ಪಾ ಮೇದಪ್ಪ, ಜಾಹ್ನವಿ ಕಾಂಚೋಡು, ತೀರ್ಥರಾಮ ಹಾಗೂ ಸಾಮಾನ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಶುಭದಾ ಎಸ್‌. ರೈ, ಸದಸ್ಯರಾಗಿ ಅಶೋಕ ನೆಕ್ರಾಜೆ, ಅಬ್ದುಲ್‌ ಗಫೂರ್‌, ವಿದ್ಯಾಲಕ್ಷ್ಮೀ ಎರ್ಮೆಟ್ಟಿ ಅವರನ್ನು ಆರಿಸಲಾಯಿತು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್‌. ರೈ, ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು.

ಸಭೆಯಿಂದ ಪರಿಹಾರ ಇಲ್ಲ 
ದಲಿತ ಮುಖಂಡ ಆನಂದ ಬೆಳ್ಳಾರೆ ಮಾತನಾಡಿ, ತಾ.ಪಂ. ನಲ್ಲಿ ನಡೆಯುವ ದಲಿತ ಕುಂದು-ಕೊರತೆ ಸಭೆಯಲ್ಲಿ ದಲಿತರ ಸಮಸ್ಯೆಗಳಿಗೆ ನ್ಯಾಯ ಸಿಗುತ್ತಿಲ್ಲ. ಮೂರು ತಿಂಗಳಿಗೊಮ್ಮೆ ಸಭೆ ನಡೆಯುವುದು ಬಿಟ್ಟರೆ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗುವುದಿಲ್ಲ ಎಂದು ಗಮನ ಸೆಳೆದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವುದೇ ಅಧಿಕಾರಿಗಳು ಇಲ್ಲ. ಸಮಾಜ ಕಲ್ಯಾಣಧಿಕಾರಿ ಅವರೇ ಪ್ರಭಾರದಲ್ಲಿದ್ದಾರೆ. ಹಾಗಾಗಿ ಆ ಇಲಾಖೆಗೆ ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಟಾಪ್ ನ್ಯೂಸ್

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.