ವಿಧಾನಸಭೆಯಲ್ಲಿ ಕೋರಂ ಕೊರತೆ ಕೊರಗು

Team Udayavani, Feb 10, 2018, 6:15 AM IST

180209kpn89.jpg

ಬೆಂಗಳೂರು : ವಿಧಾನಸಭೆಯಲ್ಲಿ ಶುಕ್ರವಾರ ಕಲಾಪದ ಆರಂಭದಲ್ಲಿ ಕೋರಂ ಕೊರತೆ ಕೊರಗು ಎಲ್ಲರನ್ನೂ ಕಾಡಿತು.ಒಂದೂ ತಾಸಿಗೂ ಹೆಚ್ಚು ಕಾಲ ಕೋರಂಗಾಗಿ ಸಚಿವರಾದಿಯಾಗಿ ಎಲ್ಲರೂ ಕಾದು ಸದಸ್ಯರ ನಿರಾಸಕ್ತಿಗೆ ಕೆಂಡಾಮಂಡಲವಾದರು.

ಕಾರ್ಯಕಲಾಪ ಪಟ್ಟಿ ಪ್ರಕಾರ ಬೆಳಿಗ್ಗೆ 10 ಗಂಟೆಗೆ ಸದನ ಆರಂಭವಾಗಬೇಕಿತ್ತು.9.50 ರಿಂದ 11.15 ರ ತನಕ ಸತತವಾಗಿ  ಬೆಲ್‌ ಶಬ್ಧಮಾಡಿದರೂ ಅಗತ್ಯ ಕೋರಂ ಸದನದೊಳಗೆ ಸೇರಿರಲಿಲ್ಲ.ನಂತರ ಶೇಕಡ 10 ರಷ್ಟು ಸದಸ್ಯರ ಕೋರಂ ಭರ್ತಿಯಾದಾಗ ಕಲಾಪ ಪ್ರಾರಂಭವಾಯಿತು.

ಪ್ರತಿಪಕ್ಷನಾಯಕ ಜಗದೀಶ್‌ ಶೆಟ್ಟರ್‌ ಕಲಾಪದ ಆರಂಭದಲ್ಲಿ ಸಚಿವರ ಗೈರು ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.ಸಚಿವರು ಸದನದಲ್ಲೂ ಇರಲ್ಲವೆಂದರೆ ಎಲ್ಲಿ ಹೋಗುತ್ತಾರೆಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಉಪಸಭಾಧ್ಯಕ್ಷರು ಸಚಿವರಾದ ಡಿ.ಕೆ ಶಿವಕುಮಾರ್‌, ರಮೇಶ್‌ ಜಾರಕಿಹೊಳಿ,ಎಸ್‌.ಎಸ್‌ ಮಲ್ಲಿಕಾರ್ಜುನ,ಸಂತೋಷ ಲಾಡ್‌,ರುದ್ರಪ್ಪ ಲಮಾಣಿ,ಶರಣ ಪ್ರಕಾಶ್‌ ಪಾಟೀಲ್‌ ಸೇರಿದಂತೆ 8 ಜನ ಸಚಿವರು ಗೈರು ಹಾಜರಾಗುವುದಕ್ಕೆ ಅನುಮತಿ ಪಡೆದಿದ್ದಾರೆಂದು ಸದನಕ್ಕೆ ಮಾಹಿತಿ ನೀಡಿದರು.ಇದಕ್ಕೆ ಶೆಟ್ಟರ್‌ ಪ್ರತಿಕ್ರಿಯಿಸಿ  ತುರ್ತು ಸಂದರ್ಭಸಚಿವರ ಗೈರು ಬಗ್ಗೆ ಅನುಮತಿ ನಿಡಬಾರದು ಎಂದು ಒತ್ತಾಯಿಸಿದರು.

ಹಿರಿಯ ಸಚಿವ ರಮೆಶ್‌ಕುಮಾರ್‌,ಶೆಟ್ಟರ್‌ ಮಾತಿಗೆ ದನಿಗೂಡಿಸಿ ಗಂಟೆಗೂ ಹೆಚ್ಚು ಹೊತ್ತು ಬೆಲ್‌ ಹೊಡೆದರೂ ಕನಿಷ್ಟ ಸಂಖ್ಯೆಯ ಸದಸ್ಯರು ಸದನಕ್ಕೆ ಬಾರದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಕೋರಂ ಗಾಗಿ ನಾನು ಒಂದು ತಾಸಿಗೂ ಹೆಚ್ಚು ಕಾಲ ಕಾದೆ. ಹೀಗೆ ಆದರೆ ಸದನದ ಗಾಂಭೀರ್ಯ ಕಳೆದುಕೊಳ್ಳುತ್ತದೆ ಆಗ ಕಲಾಪಕ್ಕೇನು ಮರ್ಯಾದೆ ಇರುತ್ತದೆ ಎಂದು ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಉಪಸಭಾಧ್ಯಕ್ಷರನ್ನು ಪ್ರಶ್ನಿಸಿದರು.ಅಗತ್ಯ ಕೋರಂ ಇಟ್ಟುಕೊಂಡು ತಾಂತ್ರಿಕವಾಗಿ ಸದನ ನಡೆಸಿದರೆ ಅದಕ್ಕೆ ಅರ್ಥವಿರುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಸಚಿವ ರಮೆಶ್‌ಕುಮಾರ್‌ ಮಾತಿಗೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಸಹಮತ ವ್ಯಕ್ತಪಡಿಸಿ ಮಾತನಾಡುತ್ತ  ನಾನು 25 ವರ್ಷಗಳಿಂದ ಸದನಕ್ಕೆ ಬರುತ್ತಿದ್ದೇನೆ ಇಂತಹ ಪರಿಸ್ಥಿತಿ ಎಂದೂ ನೋಡಿದ್ದಿಲ್ಲ.ಕೋರಂಗೆ ಅಗತ್ಯವಿರುವಷ್ಟು ಶಾಸಕರು ಅಧಿವೇಶನಕ್ಕೆ ಬರುವುದಿಲ್ಲವೆಂದರೆ ಹೇಗೆಂದು ಖೇದ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.