ಸಿಸಿಟಿವಿ ಅಳವಡಿಕೆ ನಿರೀಕ್ಷೆಯಲ್ಲಿ ಸಾರ್ವಜನಿಕರು
Team Udayavani, Feb 10, 2018, 9:40 AM IST
ಸಿದ್ದಾಪುರ: ಕುಂದಾಪುರ ತಾಲೂಕಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಗ್ರಾಮ ಸಿದ್ದಾಪುರ. ಜನ ಓಡಾಟ ನಿರಂತರವಾಗಿದ್ದರೂ ಸುರಕ್ಷತೆ ದೃಷ್ಟಿಯಿಂದ ಇಲ್ಲಿ ಸಿಸಿಟಿವಿ ಕೆಮರಾ ಮಾತ್ರ ಇಲ್ಲ. ಅಹಿತಕರ ಘಟನೆಗಳು, ಕಳ್ಳತನ ಇಲ್ಲಿ ನಡೆಯುತ್ತಿದ್ದರೂ ಈ ಬಗ್ಗೆ ಸಂಬಂಧಪಟ್ಟವರು ಇನ್ನೂ ಎಚ್ಚೆತ್ತುಕೊಂಡಿಲ್ಲ.
ಸುರಕ್ಷತೆಗೆ ಬೇಕು ಸಿಸಿಟಿವಿ ಕೆಮರಾ
ಸಿದ್ದಾಪುರ ಘಟ್ಟದ ಮೇಲಿನವರಿಗೆ ಮತ್ತು ಕೆಳಗಿನವರಿಗೆ ವ್ಯಾವಹಾರಿಕ ಪ್ರದೇಶ. ದೊಡ್ಡ ಸಂತೆ ನಡೆಯುವ ಸ್ಥಳವೂ ಹೌದು. ನೂರಾರು ವಾಹನಗಳು ರಾತ್ರಿ ಹಗಲೆನ್ನದೆ ಸಿದ್ದಾಪುರ ಮಾರ್ಗದ ಮೂಲಕವೇ ಕರಾವಳಿ-ಶಿವಮೊಗ್ಗ ಸಂಪರ್ಕಿಸುತ್ತವೆ. ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಜನ ಇಲ್ಲಿ ವ್ಯವಹಾರಕ್ಕೆ ಬಂದು ಹೋಗುತ್ತಾರೆ. ಆದ್ದರಿಂದ ಇಲ್ಲಿ ಜನಜಂಗುಳಿ ಸಾಮಾನ್ಯವಾಗಿದ್ದು, ಸಿಸಿಟಿವಿ ಕೆಮರಾ ಇಲ್ಲದ್ದರಿಂದ ಅಹಿತಕರ ಘಟನೆ ನಡೆದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವುದು ಕಷ್ಟವಾಗಿದೆ. ಈಗಾಗಲೇ ಅನೇಕ ಘಟನೆಗಳು ನಡೆದಿದ್ದರೂ ಆರೋಪಿ ಗಳ ಪತ್ತೆ ಇಂದಿಗೂ ಸಾಧ್ಯವಾಗಿಲ್ಲ.
ಪರಾರಿಯಾಗಲು ಸುಲಭ
ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೂ ಪರಾರಿಯಾಗಲು ಸಿದ್ದಾಪುರ ಸುಲಭ ಮಾರ್ಗವಾಗಿದೆ. ಇಲ್ಲಿ ಸಿಸಿಟಿವಿ ಕೆಮರಾ ಅಳವಡಿಸಿದರೆ ದಂಧೆಗಳಿಗೆ ಬ್ರೇಕ್ ಬೀಳಬಹುದು. ಇದು ಸಾರ್ವಜನಿಕರ ಬೇಡಿಕೆಯೂ ಆಗಿದೆ. ಇದಕ್ಕೆ ಸ್ಥಳೀಯಾಡಳಿತ ಸ್ಪಂದಿಸಬೇಕಾಗಿದೆ.
ದಾನಿಗಳು ಸಹಕರಿಸಿ
ಸಾರ್ವಜನಿಕರ ರಕ್ಷಣೆಗೋಸ್ಕರ ಸಿದ್ದಾಪುರದಲ್ಲಿ ಸಿ.ಸಿ. ಕೆಮರಾ ಅಳವಡಿಸುವ ಬಗ್ಗೆ ಗಮನದಲ್ಲಿದ್ದು ದಾನಿಗಳು ಸಹಕರಿಸಿದರೆ ಅದರೊಂದಿಗೆ ಸ್ಥಳೀಯಾಡಳಿತ ಸಹಕರಿಸಲಿದೆ.
– ಡಿ. ಭರತ್ ಕಾಮತ್, ಉಪಾಧ್ಯಕ್ಷರು ಗ್ರಾ. ಪಂ. ಸಿದ್ದಾಪುರ
ಅಪರಾಧ ತಡೆಗಟ್ಟಲು ಅಗತ್ಯ
ಸಾರ್ವಜನಿಕರ ಹಿತದೃಷ್ಟಿಯಿಂದ ಸಿದ್ದಾಪುರದಲ್ಲಿ ಸಿ.ಸಿ. ಕೆಮರಾ ಅಳವಡಿಸುವುದು ಉತ್ತಮ. ಇದರ ಅಳವಡಿಕೆಯಿಂದ ಅಪರಾಧ ತಡೆಗಟ್ಟಲು ಹಾಗೂ ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಇದರ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು.
– ಸುನಿಲ್ ಕುಮಾರ್, ಠಾಣಾಧಿಕಾರಿ, ಪೊಲೀಸ್ ಠಾಣೆ ಶಂಕರನಾರಾಯಣ
– ಸತೀಶ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.