ಮೇಳೈಸಿದ ಈಶ್ವರ್, ಅಲ್ಲಾ
Team Udayavani, Feb 10, 2018, 10:15 AM IST
ಮುಜಾಫರ್‌ನಗರ್: 2013ರ ಆಗಸ್ಟ್ ಹಾಗೂ ಸೆಪ್ಟೆಂಬರ್ ಅವಧಿಯಲ್ಲಿ ಹಿಂದೂ, ಮುಸ್ಲಿಂ ಘನಘೋರ ಕೋಮು ಗಲಭೆಗೆ ಕಾರಣವಾಗಿದ್ದ ಮುಜಾಫರ್‌ನಗರ್ ಜಿಲ್ಲೆಯಲ್ಲಿ ಇದೀಗ ಆ ಕರಾಳ ಘಟನೆಗಳು ಜರುಗಿ ನಾಲ್ಕು ವರ್ಷಗಳ ತರುವಾಯ ಶಾಂತಿಯ ವಾತಾವರಣ ಮೂಡುತ್ತಿದೆ. ಪೊಲೀಸರು, ಪಂಚಾಯ್ತಿಗಳ ಪ್ರಯತ್ನದಿಂದಾಗಿ, ಹೊಡೆದಾಡಿಕೊಂಡಿದ್ದ ಜಾಟ್ ಹಾಗೂ ಮುಸ್ಲಿಂ ಸಮುದಾಯಗಳು ಒಂದಾಗಿ ಬಾಳ್ವೆ ನಡೆಸಲು ಸಮ್ಮತಿಸಿದ್ದಾರೆ.
4 ವರ್ಷಗಳ ನಂತರ, ಪೊಲೀಸರು ಹಾಗೂ ಜನಪ್ರತಿನಿಧಿಗಳ ಸತತ ಪ್ರಯತ್ನದ ಫಲವಾಗಿ, ಎರಡೂ ಸಮುದಾಯಗಳು ಶಾಂತಿಯಿಂದ ಬಾಳಲು ಒಪ್ಪಿವೆ. ಈ ಹಿಂದಿನ ಅನೇಕ ಸಂಧಾನ ಸಭೆಗಳು ವಿಫಲವಾಗಿದ್ದರೂ, ಶುಕ್ರವಾರ ಮಹಾಪಂಚಾಯತ್‌ನಲ್ಲಿ ನಡೆದ ಶಾಂತಿ ಸಭೆಯಲ್ಲಿ, ಎರಡೂ ಸಮುದಾಯಗಳು ತಮ್ಮ ನಡುವಿನ ಕಹಿ ಮರೆಯಲು ನಿರ್ಧರಿಸಿದರು. ಇದರ ಸೂಚಕವಾಗಿ, ವೇದಿಕೆ ಮೇಲೆ ಆಗಮಿಸಿ ಜಾಟರು ‘ಅಲ್ಲಾಹು ಅಕ್ಬರ್’ ಎಂದು ಪ್ರಾರ್ಥಿಸಿದರೆ, ಮುಸ್ಲಿಮರು ‘ಹರ್ ಹರ್ ಮಹಾದೇವ್’ ಎಂದು ಜಯಕಾರ ಹಾಕಿ, ಶಾಂತಿಯುತ ಸಹಬಾಳ್ವೆಗೆ ಶ್ರೀಕಾರ ಹಾಕಿದ್ದಾರೆ.
ಏನಿದು ಪ್ರಕರಣ?: ಮುಜಾಫರ್‌ನಗರ್ ಹಿಂಸಾಚಾರ, ಉತ್ತರ ಪ್ರದೇಶದ ಇತಿಹಾಸದಲ್ಲೇ ಅತ್ಯಂತ ಘೋರ ಹಿಂಸಾಚಾರ ಎಂದು ಪರಿಗಣಿಸಲಾಗಿದೆ. ಶಾಮ್ಲಿ ಹಾಗೂ ಮುಜಾಫರ್‌ನಗರಗಳಲ್ಲಿ ಶುರುವಾದ ಗಲಭೆಗಳು ಪಕ್ಕದ ಕವಾಲ್, ಕುಟ್ಬಾ, ಪುರ್ ಬಾಲ್ಯಾನ್‌ಗೂ ವ್ಯಾಪಿಸಿತ್ತು. ಆ ಗಲಭೆಗಳಲ್ಲಿ 42 ಮುಸ್ಲಿಮರು, 20 ಹಿಂದೂಗಳು ಸಾವನ್ನಪ್ಪಿದ್ದರು. ಆಗ, ಹಿಂಸಾಚಾರಕ್ಕೆ ಹೆದರಿ ಅನೇಕರು ತಮ್ಮ ವಾಸಸ್ಥಳಗಳನ್ನು ಬಿಟ್ಟು ಓಡಿಹೋಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.