ಕಬಡ್ಡಿ ಪ್ಲೇಯರ್  ಆಗಬೇಕಿದ್ದ  ಹುಡುಗ ಧುಮುಕಿದ್ದು  ದೇಶ ಸೇವೆಗೆ 


Team Udayavani, Feb 10, 2018, 10:05 AM IST

10-Feb-1.jpg

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇವತ್ತು ಅವರ ಹೆಸರು ಪ್ರೊ ಕಬಡ್ಡಿಯಲ್ಲಿ ಕೇಳಿಬರುತ್ತಿತ್ತು. ಆದರೆ ಅವರ ಹಾದಿಯೇ ಬೇರೆಯಾಗಿತ್ತು. ಕಬಡ್ಡಿ ಪ್ರೀತಿಯೇ ಅವರನ್ನು ದೇಶ ಸೇವೆಗೆ  ಇಳಿಯುವಂತೆ ಮಾಡಿತ್ತು.

ಮಂಗಳೂರು: ಆತ ಕಾಲೇಜಿನಲ್ಲಿರುವಾಗಲೇ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಅದೇ ಕಬಡ್ಡಿ ಆಟವು ಆ ಹುಡುಗನನ್ನು ದೇಶ ಸೇವೆಗಿಳಿಯುವಂತೆ ಮಾಡಿತು. ಈಗ 15 ವರ್ಷಗಳ ಸಾರ್ಥಕ್ಯದೊಂದಿಗೆ ರಾಷ್ಟ್ರ ರಕ್ಷಣೆಯ ಕೈಂಕರ್ಯದಲ್ಲಿ ನಿರತರಾಗಿದ್ದಾರೆ ಬಾಳಿಲದ ರತ್ನಾಕರ್‌ ರೈ.

2004ರಲ್ಲಿ ಭಾರತೀಯ ಸೇನೆಗೆ ಸಿಪಾಯಿಯಾಗಿ ಸೇರಿದ ರತ್ನಾಕರ್‌ ದೇಶದ ವಿವಿಧೆಡೆಗಳಲ್ಲಿ ಸೇವೆಗೆ ಸೇರಿದ ಬಳಿಕ ಸಿಕಂದರಾಬಾದ್‌ನಲ್ಲಿ ಮೊದಲು ತಮ್ಮ ಕರ್ತವ್ಯ ನಿರ್ವಹಿಸಿದ ಬಳಿಕ ಅಸ್ಸಾಂ, ಅರುಣಾಚಲ ಪ್ರದೇಶ, ಚೀನಾ ಗಡಿ ಭಾಗದಲ್ಲಿ ಸೇವೆ ಸಲ್ಲಿಸಿ, ಈಗ ಜಮ್ಮು ಮತ್ತು ಕಾಶ್ಮೀರದ ರಸೋರಿ ಸೆಕ್ಟರ್‌ನಲ್ಲಿ ನಾನ್‌ ಕಮಿಶನ್ಡ್ ಆಫೀಸರ್‌ (ಮೆಕ್ಯಾನಿಕಲ್‌ ಟೆಕ್ನಿಕಲ್‌ ಎಂಜಿನಿಯರಿಂಗ್‌) ಆಗಿದ್ದಾರೆ. 
ರತ್ನಾಕರ್‌ ರೈ ಅವರ ತಂದೆ-ತಾಯಿ

ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ಬಳಿಕ ಮೂಡಬಿದಿರೆ ಎಡಪದವು ಶ್ರೀ ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಕಬಡ್ಡಿ ಆಟಗಾರರಾಗಿದ್ದ ರತ್ನಾಕರ್‌, ಕಾಲೇಜು ಹಂತದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಸುಳ್ಯದ ಹಳ್ಳಿ ಹುಡುಗ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದ ಕಬಡ್ಡಿಯೇ ಅವರನ್ನು ಮುಂದೊಂದು ದಿನ ಸೇನೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗುವಂತೆ ಮಾಡಿತ್ತು.

ಪತ್ನಿ ವರಲಕ್ಷ್ಮೀ ಶೆಟ್ಟಿ ಜತೆಗೆ.

ಪ್ರೇಮನಾಥ ಶೆಟ್ಟಿ ಪ್ರೇರಣೆ 
ಕಬಡ್ಡಿಯಲ್ಲಿ ವಿಶೇಷ ಸಾಧನೆ ಮಾಡಿದ್ದ ರತ್ನಾಕರ್‌ ಕಬಡ್ಡಿ ಪ್ಲೇಯರ್‌ ಆಗಿ ಬದುಕು ಕಂಡು ಕೊಳ್ಳಬೇಕೆಂದು ಬಯಸಿದ್ದರು. ಆದರೆ ತೀರಾ ಬಡತನದ ಕುಟುಂಬದಿಂದ ಬಂದಿರುವ ರತ್ನಾಕರ್‌ ಅವರ ಶೈಕ್ಷಣಿಕ ಬದುಕಿಗೆ ಆಧಾರವಾಗಿ ನಿಂತವರು ಪ್ರೇಮನಾಥ ಶೆಟ್ಟಿ ಕಾವು. ಪ್ರೇಮನಾಥ ಶೆಟ್ಟಿ ಅವರೇ ರತ್ನಾಕರ್‌ ಅವರ ಶಿಕ್ಷಣದ ಖರ್ಚು ವೆಚ್ಚ ಭರಿಸುತ್ತಿದ್ದರಲ್ಲದೆ, ಅವರನ್ನು ಸೈನ್ಯಕ್ಕೆ ಸೇರಿಸಬೇಕೆಂಬ ಕನಸು ಹೊಂದಿದ್ದರು. ಕಬಡ್ಡಿ ಆಟದಲ್ಲಿ ಸೈ ಎನಿಸಿಕೊಂಡಿದ್ದ ರತ್ನಾಕರ್‌ ಆ ಆಟದ ಮೂಲಕವೇ ಭಾರತೀಯ ಸೇನೆಗೆ ಆಯ್ಕೆಯಾದರು. ಹಾಗಾಗಿ ಸೈನ್ಯಕ್ಕೆ ಸೇರುವಲ್ಲಿ ಕಾವು ಪ್ರೇಮನಾಥ ಶೆಟ್ಟಿ ಅವರೇ ಪ್ರೇರಣೆ ಎಂದು ನೆನಪಿಸಿಕೊಳ್ಳುತ್ತಾರೆ ರತ್ನಾಕರ್‌ ರೈ. ಜತೆಗೆ ಬಾಳಿಲದ ಆದರ್ಶ ಫ್ರೆಂಡ್ಸ್‌ ಕ್ಲಬ್‌ನ ಪ್ರೋತ್ಸಾಹವನ್ನೂ ಅವರು ಮರೆಯುವುದಿಲ್ಲ.

ಮನೆ ಕಟ್ಟಿದ ಖುಷಿ
ರತ್ನಾಕರ್‌ ಅವರ ತಂದೆ ಪಿ. ಬಾಬು ರೈ ಮತ್ತು ತಾಯಿ ಪಿ. ಭಾಗೀರಥಿ ರೈ, ಸಹೋದರರಾದ ಸುರೇಶ್‌ ರೈ ಹಾಗೂ ನವೀನ್‌ ರೈ ಬಾಳಿಲದ ಮನೆಯಲ್ಲಿದ್ದಾರೆ. ಪತ್ನಿ ವರಲಕ್ಷ್ಮೀ ಶೆಟ್ಟಿ ಏಳು ತಿಂಗಳ ಮಗು ವರ್ಷಿತ್‌ ಶೆಟ್ಟಿ ಜತೆಗಿನ ಪುಟ್ಟ
ಸಂಸಾರ ರತ್ನಾಕರ್‌ ಅವರದ್ದು. ತೀರಾ ಬಡತನದ ಹಿನ್ನೆಲೆ ಹೊಂದಿದ್ದ ರತ್ನಾಕರ್‌, ಎಳವೆಯಿಂದಲೇ ಕಷ್ಟದಲ್ಲಿ ಬೆಳೆದು
ಬಂದವರು. ಭಾರತೀಯ ಸೇನೆಗೆ ಸೇರಿದ ಅನಂತರ ಹೊಸ ಮನೆ ಕಟ್ಟಿ ಮನೆಗೆ ಆಧಾರಸ್ಥಂಭವಾಗಿದ್ದಾರೆ. ಅದೇ ಬದುಕಿನ ಅತೀವ ಖುಷಿಯ ವಿಷಯ ಎನ್ನುತ್ತಾರೆ ಅವರು.

ತರಬೇತಿ ನೀಡುವೆ
ಸೇನೆಗೆ ಸೇರುವ ಬಗ್ಗೆ ಹಲವರಿಗೆ ಭಯ ಇರುತ್ತದೆ. ಆದರೆ ಭಯ ಪಡಬೇಕಾದ ಅಗತ್ಯವೇ ಇಲ್ಲ. ತಾಯಿ ಭಾರತಿಯ
ಸೇವೆ ಮಾಡಿದಾಗ ಸಿಗುವ ಖುಷಿ ಬೇರೆ ಯಾವುದರಿಂದಲೂ ಸಿಗದು. ಯುವಕರು ಸೇನೆ ಸೇರುವತ್ತ ಮನಸ್ಸು ಮಾಡಬೇಕು. ಸೇನೆಗೆ ಸೇರಲು ಆಸಕ್ತರಿರುವವರು ನಾನು ರಜಾ ಅವಧಿಯಲ್ಲಿ ಊರಿಗೆ ಬಂದಾಗ ನನ್ನನ್ನು ಸಂಪರ್ಕಿಸಿದರೆ ಪೂರಕ ತರಬೇತಿ ನೀಡಲೂ ಸಿದ್ಧನಿದ್ದೇನೆ ಎನ್ನುತ್ತಾರೆ ರತ್ನಾಕರ್‌ ರೈ.

ಕಬಡ್ಡಿಯಲ್ಲಿ ಮುಂದುವರಿಯಬೇಕೆಂದಿದ್ದರೂ, ದೇಶಸೇವೆಯ ಕನಸು ಎಳವೆಯಿಂದಲೇ ಇತ್ತು. ಆ ಕನಸನ್ನು ನನಸು ಮಾಡಿಕೊಂಡ ಹೆಮ್ಮೆ ನನಗೆ ಇದೆ.
– ರತ್ನಾಕರ್‌

ದೇಶ ರಕ್ಷಣೆಗೆ ಸಂಕಲ್ಪ ತೊಡಿ
ಯುವಕರು ದೇಶ ಸೇವೆಗೆ ಮುಂದಾಗಬೇಕು. ಜೀವನಕ್ಕೆ ದಾರಿಯಾಗಬೇಕು ಎಂದು ಸೇನೆಗೆ ಸೇರಬಾರದು. ನಿಜವಾಗಿ ದೇಶ ರಕ್ಷಣೆಯ ಸಂಕಲ್ಪ ತೊಟ್ಟು ಬರುವ ಮನಸ್ಸಿರಬೇಕು. ಅದೇ ಜೀವನಕ್ಕೆ ಸಾರ್ಥಕಭಾವ ಕೊಡುತ್ತದೆ.
-ರತ್ನಾಕರ್‌ ರೈ ಬಾಳಿಲ

ಆತ ಸದಾ ಮುಂದು
ಮೊದಲಿಗೆ ಸ್ವಲ್ಪ ಬೇಸರವಿತ್ತು. ಬಳಿಕ ದೇಶ ಸೇವೆಗೆ ಹೊರಟ ಮಗನ ಬಗ್ಗೆ ಹೆಮ್ಮೆ ಎನಿಸುತ್ತಿದೆ. ರಜೆಯಲ್ಲಿ ಊರಿಗೆ ಬಂದು ವಾರ್‌ ಫೀಲ್ಡ್‌ ಬಗ್ಗೆ ಎಲ್ಲ ತಿಳಿಸುವಾಗ ರೋಮಾಂಚನವಾಗುತ್ತದೆ. ಆತ ಕಬಡ್ಡಿ, ವಾಲಿಬಾಲ್‌ ಸಹಿತ ಎಲ್ಲ ಕ್ರೀಡೆಯಲ್ಲೂ ಸದಾ ಮುಂದಿರುತ್ತಿದ್ದ.
-ಪಿ. ಭಾಗೀರಥಿ ರೈ, ತಾಯಿ

ಸ್ನೇಹಿತರು ಪ್ರೊ ಕಬಡ್ಡಿಗೆ; ರತ್ನಾಕರ್‌ ದೇಶ ಸೇವೆಗೆ
ಈಗಾಗಲೇ ಪ್ರೊ ಕಬಡ್ಡಿ ಮೂಲಕ ದೇಶಾದ್ಯಂತ ಮನೆ ಮಾತಾಗಿರುವ ಸುಕೇಶ್‌ ಹೆಗ್ಡೆ, ಪ್ರಶಾಂತ್‌ ಮುಂತಾದವರು ರತ್ನಾಕರ್‌ ಅವರೊಂದಿಗೆ ಆಡುತ್ತಿದ್ದವರು. ಕಬಡ್ಡಿ ಒಡನಾಡಿಗಳೆಲ್ಲ ಕಬಡ್ಡಿಯಲ್ಲಿ ದೇಶವನ್ನು ಪ್ರತಿನಿಧಿಸಿದರೆ, ರತ್ನಾಕರ್‌ ದೇಶ ರಕ್ಷಕನಾಗಿ ಗಮನ ಸೆಳೆದಿದ್ದಾರೆ. ಸೈನಿಕನಾಗಿ ದೇಶ ಸೇವೆಗೆ ಹೋದರೂ, ಆಗಾಗ್ಗೆ ಊರಿಗೆ ಬರುವಾಗ ಸ್ನೇಹಿತರೊಂದಿಗೆ ಸೇರಿಕೊಂಡು ಕಬಡ್ಡಿ ಆಡುವುದನ್ನು ರತ್ನಾಕರ್‌ ಮರೆಯುವುದಿಲ್ಲ.

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kharge–Siddu

Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ

Waqf

Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್‌ ಬಿಸಿ!

Katapady-kambala

New Policy: ಜಾನಪದ ಕ್ರೀಡೆ ಕಂಬಳಕ್ಕೆ ಅಂತಿಮ ನಿಯಮಾವಳಿ ಸಿದ್ಧ

1-horoscope

Horosocpe: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಲಾಭ

Modi-GUJ

Statue Of Unity: ದೇಶ ವಿಭಜಿಸಲು ಕೆಲವು ಶಕ್ತಿಗಳ ಯತ್ನ: ಪ್ರಧಾನಿ ನರೇಂದ್ರ ಮೋದಿ

Hasanamabe

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing

Mangaluru: ಮನೆಯಿಂದ ನಾಪತ್ತೆಯಾದ ವಿದ್ಯಾರ್ಥಿನಿ

Court-1

Thokottu: ಮೊಹಮ್ಮದ್‌ ಸೈಫ್ವಾನ್‌ ಕೊಲೆ ಆರೋಪಿಗಳು ಖುಲಾಸೆ

Untitled-1

Mangaluru: ವೆನ್ಲಾಕ್‌ಗೆ ಬಂದಿದ್ದ ಯುವತಿ ನಾಪತ್ತೆ

dw

Panambur: ಕೂಳೂರು ನದಿಯಲ್ಲಿ ಅಪರಿಚಿತ ಶವ ಪತ್ತೆ

MNG-1

Mangaluru: ಬಸ್‌ಗಾಗಿ ತೆರಳುವಾಗ ಟೆಂಪೋ ಹರಿದು ವ್ಯಕ್ತಿ ಸ್ಥಳದಲ್ಲೇ ಮೃತ್ಯು!

MUST WATCH

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

ಹೊಸ ಸೇರ್ಪಡೆ

1

Hyderabad: ಈರುಳ್ಳಿ ಬಾಂಬ್‌ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ

2-udupi

Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kharge–Siddu

Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ

Waqf

Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್‌ ಬಿಸಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.