ಅಕ್ಷರ ದಾಸೋಹನೌಕರರ ಪ್ರತಿಭಟನೆ:ವಿದ್ಯಾರ್ಥಿಗಳ ಊಟಕ್ಕೆಪರ್ಯಾಯವ್ಯವಸ್ಥೆ


Team Udayavani, Feb 10, 2018, 10:39 AM IST

10-Feb-5.jpg

ಕಿನ್ನಿಗೋಳಿ : ಅಕ್ಷರ ದಾಸೋಹದ ನೌಕರರ ರಾಜ್ಯಾದ್ಯಂತ ಪ್ರತಿಭಟನೆಯ ಪರಿಣಾಮ ಗುತ್ತಕಾಡು ಶಾಲೆಯಲ್ಲಿ ಕ್ಯಾಟರಿಂಗ್‌ ಭಟ್‌ ಅವರಿಂದ ಊಟವನ್ನು ತರಿಸಿ ಮಕ್ಕಳಿಗೆ ಊಟ ಬಡಿಸಲಾಯಿತು ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ ತಿಳಿಸಿದ್ದಾರೆ.

ಕೆಂಚನಕೆರೆ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕಿ ಬಿಸಿಯೂಟ ತಯಾರು ಮಾಡಿ ಮಕ್ಕಳಿಗೆ ಊಟದ ವ್ಯವಸ್ಥೆ
ಮಾಡಿದ್ದಾರೆ. ಊಟ ತಯಾರಿಸಲು ಕೆಲವು ಹೊತ್ತು ಬೇಕು, ಬಳಿಕ ಪಾತ್ರೆ ತೊಳೆದು ಸ್ವಚ್ಛ ಮಾಡಲು ಸಮಯ ತಗಲುವುದರಿಂದ ಪಾಠಕ್ಕೆ ಸಮಯ ಸಿಗುತ್ತಿಲ್ಲ ಎಂದು ಶಾಲಾ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.

ಪುನರೂರು ಪ್ರಾಥಮಿಕ ಪ್ರೌಢ ಶಾಲೆ ಹಾಗೂ ಕೆಲವು ಶಾಲೆಗಳಿಗೆ ಇಸ್ಕಾನ್‌ ಸಂಸ್ಥೆಯಿಂದ ಬಿಸಿಯೂಟ ಬರುವುದರಿಂದ ಸಮಸ್ಯೆ ಆಗಿಲ್ಲ. ಕಟೀಲು ದೇವಸ್ಥಾನದ ಶಾಲೆಗಳಿಗೆ ದೇವಸ್ಥಾನದ ಬಿಸಿಯೂಟ ಇರುವುದರಿಂದ ಸಮಸ್ಯೆ ಆಗಿಲ್ಲ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.

ಕಿನ್ನಿಗೋಳಿ, ಮೂಲ್ಕಿ, ಉಳ್ಳಾಲದಲ್ಲಿ ಹೆತ್ತವರಿಂದ ಸಹಕಾರ
ಮೂಲ್ಕಿ: ನಾಲ್ಕು ದಿನಗಳಿಂದ ರಾಜ್ಯ ವ್ಯಾಪಿ ನಡೆಯುತ್ತಿರುವ ಅಕ್ಷರ ದಾಸೋಹ ಕಾರ್ಯಕರ್ತರ ಮುಷ್ಕರದ ಹಿನ್ನೆಲೆಯಲ್ಲಿ ಮೂಲ್ಕಿ ನಗರ ಪಂಚಾಯತ್‌, ಕಿಲ್ಪಾಡಿ ಮತ್ತು ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಎಲ್ಲ ಸಿಬಂದಿ ನಾಲ್ಕು ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ಮುಷ್ಕರದಿಂದ ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯ ಉಂಟಾಗದಂತೆ ಸರಕಾರದ ಶಿಕ್ಷಣ ಇಲಾಖೆಯ ಕಡಕ್‌ ಆದೇಶ ಇರುವುದರಿಂದ ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಹೆತ್ತವರ ಸಹಾಯವನ್ನು ಪಡೆದು ಯಾವುದೇ ರೀತಿಯಲ್ಲಿ ತೊಂದರೆ ಇಲ್ಲದೆ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ವ್ಯವಸ್ಥೆ ನಡೆಯುತ್ತಿದೆ ಎಂದು ವಿವಿಧ ಶಾಲೆಗಳ ಮುಖ್ಯಸ್ಥರು ತಿಳಿಸಿದ್ದಾರೆ.

ಅಕ್ಷರದಾಸೋಹ ಯೋಜನೆಯಡಿ ಮಕ್ಕಳಿಗೆ ಅಡುಗೆ ಮಾಡುತ್ತಿರುವ ಸಿಬಂದಿ ಹಾಗೂ ಸಹಾಯಕಿ ಅವರ ಸಂಘಟನೆಯ ಕರೆಯಂತೆ ಅಡುಗೆ ಕೆಲಸವನ್ನು ನಿರ್ವಹಿಸದೇ ಗೈರುಹಾಜರಿಯಾಗಿದ್ದಾರೆ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಇನ್ನೆಷ್ಟು ದಿನ ಈ ಕೆಲಸ ಮುಂದುವರಿಯಬಹುದು ಎಂದು ಯಾವುದೇ ಸೂಕ್ತವಾದ ಮಾಹಿತಿ ಇಲ್ಲ. ಆದರೆ ಸರಕಾರದ ಆದೇಶದಡಿ ತಮ್ಮ ಮಕ್ಕಳಿಗೆ ಅಡುಗೆ ಮಾಡುವ ಕೆಲಸದಲ್ಲಿ ಯಾವುದೇ ರೀತಿಯ ಉದಾಸೀನತೆ ನಮಗಿಲ್ಲ ಎಂದು ಹೆತ್ತವರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಉಳ್ಳಾಲ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ಕಾರ್ಯಕರ್ತೆಯರ ಪ್ರತಿಭಟನೆಗೆ ಉಳ್ಳಾಲಾದ್ಯಂತ ಶಾಲೆಗಳಲ್ಲಿ ಕೆಲವೆಡೆ ಶಾಲಾ ಶಿಕ್ಷಕರು ಬಿಸಿಯೂಟ ತಯಾರಿಸಿದರೆ, ಕೆಲವೆಡೆ ಶಿಕ್ಷಕರೊಂದಿಗೆ ಹೆತ್ತವರು ಸಹಕರಿಸಿದರು.

ಮಂಗಳೂರು ದಕ್ಷಿಣ ವಲಯಕ್ಕೆ ಸೇರಿರುವ ಉಳ್ಳಾಲ, ತಲಪಾಡಿ, ತೊಕ್ಕೊಟ್ಟು, ಮಂಜನಾಡಿ, ಹರೇಕಳ, ಪಾವೂರು,
ಕೊಣಾಜೆ, ಕೋಟೆಕಾರು ಸೇರಿದಂತೆ ಬಂಟ್ವಾಳ ತಾಲೂಕಿನ ಕೆಲವು ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಕಳೆದರೆಡು ದಿನಗಳಿಂದ ಗೈರುಹಾಜರಾಗಿದ್ದರು. ನಿನ್ನೆಯೂ ಶಿಕ್ಷಕರೊಂದಿಗೆ ಹೆತ್ತವರು ಸಹಕರಿಸಿದರೆ, ಶುಕ್ರವಾರವೂ ಬಿಸಿಯೂಟಕ್ಕೆ ಸಹಕರಿಸಿದರು. ಕೆಲವು ಖಾಸಗಿ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಆಗಮಿಸಿದ್ದರೆ, ಸರಕಾರಿ ಶಾಲೆಗಳ ಬಿಸಿಯೂಟ ತಯಾರಕರು ಗೈರು ಹಾಜರಾಗಿದ್ದರು. ಶಿಕ್ಷಕರು ಊಟ ತಾಯರಿಸುವುದು ಅನಿವಾರ್ಯವಾಗಿದ್ದರಿಂದ ಪಾಠಕ್ಕೆ ತೊಂದರೆಯಾಯಿತು ಎಂದ ಶಿಕ್ಷಕರೊಬ್ಬರು ತಿಳಿಸಿದರು.

ಕಿಚಡಿ, ಪಲಾವ್‌
ಕೆಲವು ಶಾಲೆಗಳಲ್ಲಿ ಗುರುವಾರ ಕಿಚಡಿ, ಪಲಾವ್‌ ಮಾಡಿ ಪದಾರ್ಥಗಳಿಂದ ಮುಕ್ತಿ ಪಡೆದರೆ, ಕೆಲವು ಶಾಲೆಗಳಲ್ಲಿ ಗಂಜಿ
ಚಟ್ನಿಯನ್ನು ನೀಡುವ ಮೂಲಕ ಶಿಕ್ಷಕರು ಹೊರೆಯನ್ನು ಕಡಿಮೆ ಮಾಡಿದರು. ಕೆಲವೆಡೆ ಶಿಕ್ಷಕಿಯರೊಂದಿಗೆ ಶಿಕ್ಷಕರೂ ಬಿಸಿಯೂಟ ತಯಾರಿಕೆಗೆ ಸಹಕರಿಸಿದರು.

ವ್ಯತ್ಯಯವಾಗಿಲ್ಲ
ಸುರತ್ಕಲ್‌: ಬಿಸಿಯೂಟ ನೌಕರರ ಮುಷ್ಕರ ಸುರತ್ಕಲ್‌ ಪರಿಸರದಲ್ಲಿ ಶುಕ್ರವಾರದಿಂದ ಆರಂಭಗೊಂಡಿದೆ. ಇಲ್ಲಿನ ಬಹುತೇಕ ಶಾಲೆಗೆ ಇಸ್ಕಾನ್‌ ಅಕ್ಷಯಪಾತ್ರೆ ಅನ್ನದಾಸೋಹದ ಜವಾಬ್ದಾರಿ ವಹಿಸಿಕೊಂಡಿದ್ದು, ಹೆಚ್ಚಿನ ವ್ಯತ್ಯಯ ಉಂಟಾಗಿಲ್ಲ. ಉಳಿದಂತೆ ಸುರತ್ಕಲ್‌ ವಿದ್ಯಾದಾಯಿನಿ, ಕುಳಾಯಿ ವೆಂಕಟ್ರಮಣ ಸಹಿತ ವಿವಿಧ ಶಾಲೆಗಳಲ್ಲಿ ಎಸ್‌ಡಿಎಂಸಿ ಸಹಕಾರದೊಂದಿಗೆ ತಾಯಂದಿರ ಸಮಿತಿ ವತಿಯಿಂದ ಆಹಾರ ತಯಾರಿಸಿ, ವಿದ್ಯಾರ್ಥಿಗಳಿಗೆ
ಉಣಬಡಿಸಲಾಯಿತು. ವಿದ್ಯಾರ್ಥಿಗಳಿಗೆ ಅನ್ನ ಬಡಿಸಲು ಶಿಕ್ಷಕರ ಸಹಿತ ಹೆತ್ತವರು ಸಹಕರಿಸಿದರು. 

ಕೇಟರರ್‌ಊಟ
ಬಜಪೆ: ಎಕ್ಕಾರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೆತ್ತವರ ಜತೆ ಶಿಕ್ಷಕರು ಸೇರಿ ಬಿಸಿಯೂಟ ತಯಾರಿಸಿದ್ದಾರೆ. ಕೆಂಜಾರು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿಸಲಾಯಿತು. ಮುಚ್ಚಾರು ಮತ್ತು ಕೊಂಪದವಿನಲ್ಲಿ ಶಾಲಾ ಮಕ್ಕಳು ಮನೆಯಿಂದ ಬುತ್ತಿ ತಂದಿದ್ದರು. ಕಿನ್ನಿಕಂಬಳ ಸರಕಾರಿ ಶಾಲೆಯಲ್ಲಿ ಮಂಗಳೂರಿನಿಂದ ಕೇಟರರ್ನಿಂದ ಊಟ ತರಿಸಲಾಯಿತು. ಮುತ್ತೂರು ಹಾಗೂ ಕುಳವೂರು ಸರಕಾರಿ ಶಾಲೆಯಲ್ಲಿ ಹೆತ್ತವರು ಅಡುಗೆ ಮಾಡಿದರು.

ಟಾಪ್ ನ್ಯೂಸ್

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

6-shivaraja

Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ

11

Kannada Rajyotsava: ನಿಂತ ನೆಲವೇ ಕರ್ನಾಟಕ!

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

Missing

Mangaluru: ಮನೆಯಿಂದ ನಾಪತ್ತೆಯಾದ ವಿದ್ಯಾರ್ಥಿನಿ

Court-1

Thokottu: ಮೊಹಮ್ಮದ್‌ ಸೈಫ್ವಾನ್‌ ಕೊಲೆ ಆರೋಪಿಗಳು ಖುಲಾಸೆ

Untitled-1

Mangaluru: ವೆನ್ಲಾಕ್‌ಗೆ ಬಂದಿದ್ದ ಯುವತಿ ನಾಪತ್ತೆ

dw

Panambur: ಕೂಳೂರು ನದಿಯಲ್ಲಿ ಅಪರಿಚಿತ ಶವ ಪತ್ತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

9

New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

8

Ranchi: ಹೇಮಂತ್‌ ಸೊರೇನ್‌ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

7-laxmi

Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.