ಸಂಚಾರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯ ಉಪಕ್ರಮ


Team Udayavani, Feb 10, 2018, 10:54 AM IST

10-Feb-6.jpg

ಮಹಾನಗರ: ಸ್ಮಾರ್ಟ್‌ ಸಿಟಿ ಮಂಗಳೂರು ನಗರಕ್ಕೆ ಕಾಡುತ್ತಿರುವ ಸಂಚಾರ ಸಮಸ್ಯೆಯನ್ನು ಸ್ಮಾರ್ಟ್‌
ಟೆಕ್ನಾಲಜಿ ಆಧಾರದಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ವಾಹನ ಚಾಲಕರಿಗೆ ದಿಕ್ಸೂಚಿ ಯಾಗಬಲ್ಲ ‘ವೇರಿಯೆಬಲ್‌ ಮೆಸೇಜ್‌
ಸೈನೇಜ್‌’ (ವಿ.ಎಂ.ಎಸ್‌.) ಎಂಬ ಈ ವ್ಯವಸ್ಥೆಯನ್ನು ಅನುಷ್ಠಾನಿಸಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ.

ಈ ಯೋಜನೆಯಂತೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಹೈಟೆಕ್‌ ಮಾದರಿಯ ಡಿಜಿಟಲ್‌ ಸೂಚನ ಫಲಕಗಳನ್ನು ಅಳವಡಿಸಿ ಅದರಲ್ಲಿ ನಗರದ ಸಂಚಾರ ವ್ಯವಸ್ಥೆ ಬಗೆಗಿನ ಮಾಹಿತಿ ಪ್ರದರ್ಶಿಸಲಾಗುತ್ತದೆ. ಇದು ಸುಮಾರು 1 ಕೋಟಿ ರೂ. ಮೊತ್ತದ ಯೋಜನೆಯಾಗಿದ್ದು, ಇದರ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

ಉದ್ದೇಶಿತ ವಿ.ಎಂ.ಎಸ್‌. ವ್ಯವಸ್ಥೆಯನ್ನು ಅಳವಡಿಸಲು ಪೊಲೀಸ್‌ ಆಯುಕ್ತರು ವಿಶೇಷ ಆಸಕ್ತಿ ಹೊಂದಿದ್ದು, ಶುಕ್ರವಾರ ಕಮಿಷನರ್‌ ಕಚೇರಿಯಲ್ಲಿ ಇದರ ಮಾದರಿ ಪ್ರದರ್ಶನ ನಡೆಯಿತು.

ಕಾರ್ಯನಿರ್ವಹಣೆ ಹೇಗೆ ?
ಡಿಜಿಟಲ್‌ ಸೂಚನ ಫಲಕವು ಸ್ಯಾಟಲೈಟ್‌ ಆಧಾರಿತವಾಗಿ ನಡೆಯುವ ಆಟೋಮ್ಯಾಟಿಕ್‌ ಸಿಸ್ಟಂ. ಇಂಟರ್‌ನೆಟ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಲಿಂಕ್‌ ಹೊಂದಿರುತ್ತದೆ. ವಾಹನ ಚಾಲಕರಿಗೆ ಈ ಸೂಚನ ಫಲಕವು ಅವರು ಸಾಗುತ್ತಿರುವ ರಸ್ತೆ, ಪ್ರಮುಖ ಜಂಕ್ಷನ್‌ಗಳಿಗಿರುವ ದೂರವನ್ನು ತಿಳಿಸುತ್ತದೆ. ಯಾವ
ಜಂಕ್ಷನ್‌ ಅಥವಾ ರಸ್ತೆಯಲ್ಲಿ ಸಂಚಾರ ದಟ್ಟಣೆಯಿದೆ, ಅಪಘಾತಗಳು ಎಲ್ಲಾದರೂ ಸಂಭವಿಸಿವೆಯೇ, ಬಂದೋ ಬಸ್ತು
ವ್ಯವಸ್ಥೆ, ಯಾವ ರಸ್ತೆ ಯಲ್ಲಿ ವಿಐಪಿಗಳ ಆಗಮನಕ್ಕಾಗಿ ಬ್ಲಾಕ್‌ ಮಾಡಲಾಗಿದೆ, ಇದಕ್ಕೆ ಯಾವ ಪರ್ಯಾಯ ರಸ್ತೆಯನ್ನು ಬಳಕೆಗೆ ಸೂಚನ ಫಲಕ ಮಾಹಿತಿಯನ್ನೂ ನೀಡುತ್ತದೆ. ಇದರಿಂದ ಟ್ರಾಫಿಕ್‌ ದಟ್ಟಣೆ ಯಲ್ಲಿ ಸಿಲುಕದೆ ನಿಗದಿತ ಸಮಯಕ್ಕೆ ಸಂಬಂಧಪಟ್ಟ ಸ್ಥಳವನ್ನು ತಲುಪಲು ವಾಹನ ಸವಾರರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಈ ತಂತ್ರಜ್ಞಾನವನ್ನು ಆವಿಷ್ಕರಿಸಿರುವ ಬೆಲ್‌ ಕಂಪೆನಿಯ ಉಪಾಧ್ಯಕ್ಷ ಆ್ಯಂಟನಿ.

ಈಗಾಗಲೇ ಮೈಸೂರಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಇದಕ್ಕೊಂದು ಮೊಬೈಲ್‌ ಆ್ಯಪ್‌ನ್ನು ತಯಾರಿಸಿದ್ದು, ಅದು ಪೊಲೀಸರಿಗೆ
ಈ ವ್ಯವಸ್ಥೆ ಕಾರ್ಯಗತಗೊಳಿಸಲು ಸಹಕಾರಿಯಾಗಲಿದೆ ಎಂದು ಆ್ಯಂಟನಿ ಹೇಳುತ್ತಾರೆ.

ಜಾಗೃತಿ, ಮಾಹಿತಿ
ಟ್ರಾಫಿಕ್‌ ಮಾಹಿತಿಯ ಜತೆಗೆ ಈ ಸೂಚನ ಫಲಕವು ವಾಹನ ಸವಾರರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗೆಗೂ ತಿಳಿಸುತ್ತದೆ. ಹವಾಮಾನ ವೈಪರೀತ್ಯ ಇತ್ಯಾದಿ ಜಾಗೃತಿ ಸಂದೇಶಗಳನ್ನು ಒದಗಿಸಲಿದೆ. ಇದರ ನಿರ್ವಹಣೆಗೆ ವೆಚ್ಚಕ್ಕೆ ಸಬಂಧಪಟ್ಟಂತೆ ವಾಣಿಜ್ಯ ಜಾಹೀರಾತು ಬಳಕೆಗೂ ಅವಕಾಶವಿದೆ ಎನ್ನುತ್ತಾರೆ ತ್ರಿ ಎಂ ಇಂಡಿಯಾ ಸಂಸ್ಥೆಯ ಟೆಕ್ನೀಷಿಯನ್‌ ಚಿಂತನ್‌.

ಏನಿದು ವಿ.ಎಂ.ಎಸ್‌.?
ಸುಮಾರು 40ರಿಂದ 50 ಅಡಿ ಎತ್ತರದಲ್ಲಿ 4.7 ಮೀಟರ್‌ ಉದ್ದ ಮತ್ತು 2 ಮೀಟರ್‌ ಅಗಲದ ಡಿಜಿಟಲ್‌ ಸೂಚನ ಫಲಕವನ್ನು ಹಂಪನಕಟ್ಟೆ, ಪಂಪ್‌ವೆಲ್‌ ಜಂಕ್ಷನ್‌ ಮತ್ತು ಕೆಪಿಟಿ ಬಳಿ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಒಂದೊಂದು ಸೂಚನ ಫಲಕಕ್ಕೆ ಅಂದಾಜು 30- 35 ಲಕ್ಷ ರೂ. ವೆಚ್ಚ ತಗುಲಲಿದೆ ಎನ್ನುತ್ತಾರೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌.

ಹಿಲರಿ ಕ್ರಾಸ್ತಾ 

ಟಾಪ್ ನ್ಯೂಸ್

12-bng

Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್‌’

ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

BJP doing election campaign on Waqf issue: Sharan Prakash Patil

Raichur: ವಕ್ಫ್‌ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ

ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್

Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್

9–karnataka-50

Kannada Sambrama: ಸುವರ್ಣ ಮಹೋತ್ಸವ ವಿಶೇಷ; 50 ವರ್ಷದ ಹರ್ಷಕ್ಕೆ 50 ಕಾರಣ

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9–karnataka-50

Kannada Sambrama: ಸುವರ್ಣ ಮಹೋತ್ಸವ ವಿಶೇಷ; 50 ವರ್ಷದ ಹರ್ಷಕ್ಕೆ 50 ಕಾರಣ

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

Missing

Mangaluru: ಮನೆಯಿಂದ ನಾಪತ್ತೆಯಾದ ವಿದ್ಯಾರ್ಥಿನಿ

Court-1

Thokottu: ಮೊಹಮ್ಮದ್‌ ಸೈಫ್ವಾನ್‌ ಕೊಲೆ ಆರೋಪಿಗಳು ಖುಲಾಸೆ

Untitled-1

Mangaluru: ವೆನ್ಲಾಕ್‌ಗೆ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12-bng

Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್‌’

11-bng

Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ

ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ

BJP doing election campaign on Waqf issue: Sharan Prakash Patil

Raichur: ವಕ್ಫ್‌ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ

ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್

Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.