ಖರ್ಚು ಭರಿಸಿ ರಸ್ತೆ ಹೊಂಡ ಮುಚ್ಚಿದ ಕ್ಲಬ್ ಸದಸ್ಯರು!
Team Udayavani, Feb 10, 2018, 12:05 PM IST
ಸುಳ್ಯ : ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಸನಿಹದಲ್ಲಿರುವ ಮಾಣಿ-ಮೈಸೂರು ರಸ್ತೆಯ ಸುಳ್ಯ ನಗರದ ಪೈಚಾರಿನಲ್ಲಿ ಹಲವು ಸಮಯಗಳಿಂದ ಹೊಂಡ ಸೃಷ್ಟಿಯಾಗಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸದ ಕಾರಣ, ಸ್ಥಳೀಯ ಕ್ಲಬ್ ಒಂದರ ಸದಸ್ಯರು ಕೈಯಾರೆ ಖರ್ಚು ಭರಿಸಿ ಹೊಂಡ ಮುಚ್ಚಿದ್ದಾರೆ!
ಬೃಹತ್ ಗಾತ್ರದ ಹೊಂಡ ಸೃಷ್ಟಿಯಾಗಿ ಹಲವು ಅಪಘಾತಗಳು ಇಲ್ಲಿ ಸಂಭವಿಸಿವೆ. ದುರಸ್ತಿಗೆ ಆಗ್ರಹಿಸಿ ಕೆಆರ್‌ಡಿಸಿಎಲ್ ಸಹಿತ ವಿವಿಧ ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಹೊಂಡದ
ಬಗ್ಗೆ ಅರಿವಿಲ್ಲದೆ ಮೇಲಿಂದ ಮೇಲೆ ಅವಘಡಗಳು ಇಲ್ಲಿ ಸಂಭವಿಸಿವೆ.
ದುರಸ್ತಿಗೆ ಮುಂದಾದ ಕ್ಲಬ್
ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿಯೇ ಸಂಚರಿಸಿದರೂ ಗಮನಿಸದಿರುವುದನ್ನು ಕಂಡು ಪೈಚಾರು ಅಸ್ತ್ರ ಸ್ಪೋರ್ಟ್ಸ್ ಮತ್ತು ಸೋಶಿಯಲ್ ಕ್ಲಬ್ ನ ಸದಸ್ಯರು ಶುಕ್ರವಾರ ತಾವೇ ದುರಸ್ತಿಗೆ ಮುಂದಾದರು. ಸ್ವತಃ ಹಣ ಖರ್ಚು ಮಾಡಿ, ಜಲ್ಲಿ, ಮರಳು ತಂದು ಕಾಮಗಾರಿ ನಡೆಸಿದರು.
ಕ್ಲಬ್‌ನ ರಫೀಕ್ ಬಿ.ಎಸ್., ಬಶೀರ್ ಆರ್.ಬಿ., ಲತೀಫ್ ಬಿ.ಎಲ್., ಶರೀಫ್ ಪಿ.ಎ., ಬಾತಿಷಾ, ನಾಸಿರ್ ಕೆ.ಎಚ್., ಅಬ್ಟಾಸ್ ಶಾಂತಿನಗರ, ಲತೀಫ್ ಬಿ.ಎ., ಸಿರಾಜ್ ಎಸ್.ಪಿ. ಹಾಗೂ ತಂಡ ಈ ಕೆಲಸ ನಿರ್ವಹಿಸಿ, ದುರಸ್ತಿಗೆ ಕ್ರಮ ಕೈಗೊಳ್ಳದ ಇಲಾಖೆ, ಜನಪ್ರತಿನಿಧಿಗಳ ವಿರುದ್ಧ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಲಬ್‌ನ ಕಾರ್ಯವನ್ನು ವಾಹನ ಸವಾರರು ಶ್ಲಾಘಿಸಿದರು.
ಗಮನ ಸೆಳೆದ ಬ್ಯಾನರ್
ದುರಸ್ತಿ ವೇಳೆ ಎರಡು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ನೇತು ಹಾಕಲಾದ ಬ್ಯಾನರ್ ಗಮನ ಸೆಳೆಯಿತು. ‘ತೆರಿಗೆ ಕಟ್ಟಿದ ವಾಹನ ಚಾಲಕರ ಶಾಪ ಜನಪ್ರತಿನಿಧಿಗಳಿಗೆ ತಟ್ಟದಿರಲೆಂದು ಈ ಸೇವೆ’ ಎಂಬ ಸಾಲು ನಿರ್ಲಕ್ಷ್ಯದ ವಿರುದ್ಧ ಆಕ್ರೋಶದ ಧ್ವನಿಯಾಗಿ ಗಮನ ಸೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.