ಚಿನ್ನದ ಹುಡುಗಿಯರ ಹೊನ್ನ ಕೃಷಿ ಕನಸು


Team Udayavani, Feb 10, 2018, 12:07 PM IST

chinnada-hudugi.jpg

ಬೆಂಗಳೂರು: ರೈತರ ಸರಣಿ ಆತ್ಮಹತ್ಯೆಗಳು ಯುವಕರನ್ನು ಕೃಷಿಯಿಂದ ವಿಮುಖಗೊಳಿಸುತ್ತಿವೆ. ಆದರೆ, ಈ ಆತ್ಮಹತ್ಯೆಗಳು ಆ ಯುವತಿಯನ್ನು ಕೃಷಿ ಶಿಕ್ಷಣಕ್ಕೆ ಕರೆತರುವಂತೆ ಮಾಡಿದವು. ಈಗ ಅದೇ ವಿದ್ಯಾರ್ಥಿನಿ ಕೃಷಿ ವಿಜ್ಞಾನ ಪದವಿಯಲ್ಲಿ “ಚಿನ್ನದ ಹುಡುಗಿ’ಯಾಗಿ ಮಿನುಗುತ್ತಿದ್ದಾಳೆ! 

ಮಿಥಿಲಾ ಹೆಗ್ಡೆ, ಆ ಚಿನ್ನದ ಹುಡುಗಿ. ಮೂಲ ಉಡುಪಿಯಾದರೂ ಹುಟ್ಟಿ, ಬೆಳೆದಿದ್ದು ಮಹಾರಾಷ್ಟ್ರದ ಮುಂಬೈ. ಬಿಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)ಗೆ ಆಯ್ಕೆ ಮಾಡಿಕೊಂಡಿದ್ದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ. ಶುಕ್ರವಾರ ವಿವಿಯ 52ನೇ ಘಟಿಕೋತ್ಸವದಲ್ಲಿ ಕುಲಾಧಿಪತಿ ವಜುಭಾಯಿ ವಾಲ ಅವರು ಮಿಥಿಲಾ ಅವರಿಗೆ ಆರು  ಚಿನ್ನದ ಪದಕಗಳು ಮತ್ತು ಒಂದು ಚಿನ್ನದ ಪದಕದ ಪ್ರಮಾಣಪತ್ರ ನೀಡಿ ಗೌರವಿಸಿದರು.  

ನಿರ್ಲಕ್ಷ್ಯವೂ ಪ್ರೇರಣೆಯಾಯ್ತು: ನಂತರ “ಉದಯವಾಣಿ’ಯೊಂದಿಗೆ ತಮ್ಮ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡ ಮಿಥಿಲಾ ಹೆಗ್ಡೆ, “ನಾನು ಎಸ್ಸೆಸ್ಸೆಲ್ಸಿ ಆಸುಪಾಸು ಇದ್ದಾಗಲೇ ವಿದರ್ಭ ರೈತರ ಸರಣಿ ಆತ್ಮಹತ್ಯೆಗಳು ನನ್ನನ್ನು ತುಂಬಾ ಕಾಡಿದವು.

ನಿತ್ಯ ನಾವು ಬದುಕಬೇಕಾದರೆ, ರೈತ ಆಹಾರ ಉತ್ಪಾದನೆ ಮಾಡಬೇಕು. ಇಷ್ಟು ಅನಿವಾರ್ಯವಾಗಿದ್ದರೂ ಯಾಕೆ ಕೃಷಿ ಕ್ಷೇತ್ರ ಇಷ್ಟೊಂದು ನಿರ್ಲಕ್ಷ್ಯಕ್ಕೊಳಪಟ್ಟಿದೆ ಎಂದು ಯೋಚನೆಗೆ ಹಚ್ಚಿತು. ಅಷ್ಟೇ ಅಲ್ಲ, ಯಾಕೆ ಎಲ್ಲರೂ ಡಾಕ್ಟರ್‌ ಅಥವಾ ಎಂಜಿನಿಯರ್‌ ಆಗಲು ಬಯಸುತ್ತಾರೆಂಬ ಪ್ರಶ್ನೆಯೂ ಕಾಡಿತು. ಇದು ನನಗೆ ಕೃಷಿ ಪದವಿಗೆ ಪ್ರೇರೇಪಿಸಿತು’ ಎಂದು ಹೇಳಿದರು. 

“ನನ್ನ ನಿರ್ಧಾರಕ್ಕೆ ಅಪ್ಪ-ಅಮ್ಮನ ಸಹಕಾರವೂ ಸಿಕ್ಕಿತು. ಅಪ್ಪ ಮುಂಬೈನ ದೂರಸಂಪರ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಮುಂದೆ ಅಹಮದಾಬಾದ್‌ನ ಐಐಎಂನಲ್ಲಿ ಎಂಬಿಎ ಮಾಡಲಿದ್ದು, ತದನಂತರ ಕಾರ್ಪೋರೇಟ್‌ ಕ್ಷೇತ್ರದಲ್ಲಿ ಸ್ವಲ್ಪ ಅನುಭವ ಪಡೆಯುತ್ತೇನೆ. ಆಮೇಲೆ ನಾನೇ ಕೃಷಿ ಉದ್ಯಮ ಆರಂಭಿಸಲು ಉದ್ದೇಶಿಸಿದ್ದೇನೆ. ಕಲಿತದ್ದೆಲ್ಲವನ್ನೂ ಕೃಷಿ ಕ್ಷೇತ್ರಕ್ಕೆ ಧಾರೆ ಎರೆಯುತ್ತೇನೆ’ ಎಂದು ತಿಳಿಸಿದರು. 

ಸಹನಾಗೆ ಅತಿ ಹೆಚ್ಚು ಚಿನ್ನ: ಮತ್ತೋರ್ವ ಚಿನ್ನದ ಹುಡುಗಿ ಸಹನಾ ಭಟ್‌. ಈ ಮೊದಲು ಡಾಕ್ಟರ್‌ ಆಗಲು ಬಯಸಿದ ಸಹನಾ ಅವರಿಗೆ ಯಾವುದೋ ಒಂದು ಕ್ಷಣದಲ್ಲಿ ಅನಿಸಿದ್ದು- “ಡಾಕ್ಟರ್‌ ಇಲ್ಲದೆ ಬದುಕಬಹುದು. ಆದರೆ, ಕೃಷಿ ಇಲ್ಲದೆ ಬದುಕುವುದು ಹೇಗೆ’ ಎಂಬ ಪ್ರಶ್ನೆ ಹುಟ್ಟಿತು. ಮರುಗಳಿಗೆಯಲ್ಲಿ ಅವರ ಗುರಿ ಬದಲಾಯಿತು. ಈಗ ಅವರು ಇಡೀ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಡಾಕ್ಟರ್‌ ಆಗ್ತೀನೆ. ಆದರೆ, ಕೃಷಿಯಲ್ಲಿ!: ಅದೇ ರೀತಿ, ಕೃಷಿ ಕುಟುಂಬದಿಂದಲೇ ಬಂದ ಚಿನ್ನದ ಹುಡುಗ ಎಂ.ಎಸ್‌. ಉದಯಕುಮಾರ್‌, “ಕೃಷಿ ವೈದ್ಯ’ನಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಎಂಬಿಬಿಎಸ್‌ ಮಾಡಲು ಹೊರಟ ಕೋಲಾರದ ಉದಯಕುಮಾರ್‌ಗೆ ಸೀಟು ಸಿಗಲಿಲ್ಲ. ಸಿಕ್ಕಿದ್ದರೂ ಆ ಶಿಕ್ಷಣದ ವೆಚ್ಚ ಭರಿಸಲು ಶಕ್ತಿಯೂ ಅವರ ಪೋಷಕರಿಗೆ ಇರಲಿಲ್ಲ.

ಇದೆಲ್ಲವನ್ನೂ ಮನಗಂಡು ಅವರು ಆಯ್ಕೆ ಮಾಡಿಕೊಂಡಿದ್ದು ಎಂಎಸ್ಸಿ (ಕೃಷಿ ಅರ್ಥಶಾಸ್ತ್ರ). ಇದರಿಂದ ಕಷ್ಟಪಟ್ಟು ಓದಿದ ಅವರು ಏಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ಈ ಸಂದರ್ಭದಲ್ಲಿ “ಉದಯವಾಣಿ’ಯೊಂದಿಗೆ ಮಾತಿಗಿಳಿದ ಅವರು, “ಕೃಷಿ ಕುಟುಂಬದಿಂದ ಬಂದ ನಾನು ಡಾಕ್ಟರ್‌ ಆಗಬೇಕೆಂದು ಮನೆಯವರೆಲ್ಲರೂ ಕನಸು ಕಂಡಿದ್ದರು.

ಆದರೆ, ಸೀಟು ಸಿಗಲಿಲ್ಲ. ಅಂದು ಸೀಟು ಸಿಗದೆ ಇರುವುದು ಒಳ್ಳೆಯದಾಯ್ತು ಅನಿಸುತ್ತಿದೆ. ಅದಕ್ಕಿಂತ ಒಳ್ಳೆಯ ಸೇವೆ ಮಾಡುವ ಅವಕಾಶ ಇಲ್ಲಿ ಸಿಗಲಿದೆ. ಕುಟುಂಬದ ಸದಸ್ಯರ ಆಸೆಯಂತೆಯೇ ಡಾಕ್ಟರ್‌ ಕೂಡ ಆಗುತ್ತೇನೆ. ಆದರೆ, ಕೃಷಿ ಡಾಕ್ಟರ್‌! ಪಿಎಚ್‌.ಡಿ ಮಾಡಿ ಪ್ರೊಫೆಸರ್‌ ಆಗುವ ಗುರಿ ಇದೆ’ ಎಂದು ಹೇಳಿದರು. 

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.