ಇಂದು ಮಣಿಪಾಲ ಸಿಲ್ವರ್ ಮ್ಯಾರಥಾನ್
Team Udayavani, Feb 11, 2018, 5:00 AM IST
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ವತಿಯಿಂದ ಸಿಂಡಿಕೇಟ್ ಬ್ಯಾಂಕ್, ಅದಾನಿ ಮತ್ತಿತರ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ “ಡ್ರಗ್ಸ್ ಮುಕ್ತ ಜೀವನ’ ಎನ್ನುವ ಧ್ಯೇಯದಡಿ ಮಣಿಪಾಲ ಸಿಲ್ವರ್ ಮ್ಯಾರಥಾನ್ ಫೆ. 11ರಂದು ನಡೆಯಲಿದೆ ಎಂದು ಮಣಿಪಾಲ್ ಮ್ಯಾರಥಾನ್ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಣಿಪಾಲ ಎಜು ಬಿಲ್ಡಿಂಗ್ನಲ್ಲಿ ಬೆಳಗ್ಗೆ 6.15ಕ್ಕೆ ಮ್ಯಾರಥಾನ್ಗೆ ಚಾಲನೆ ನೀಡಲಾಗುತ್ತದೆ. ಮಾಹೆ ಪ್ರೊ ಚಾನ್ಸಿಲರ್ ಡಾ| ಎಚ್.ಎಸ್. ಬಲ್ಲಾಳ್, ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ. 9 ಗಂಟೆಗೆ ಕೆಎಂಸಿ ಗ್ರೀನ್ಸ್ನಲ್ಲಿ ಬಹುಮಾನ ವಿತರಣೆಯಾಗಲಿದೆ. ಮ್ಯಾರಥಾನ್ನಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 8.50 ಲ.ರೂ. ಮೊತ್ತದ ಬಹುಮಾನ ನೀಡಲಾಗುತ್ತದೆ. ಸ್ಟಾರ್ಟಿಂಗ್ ಪಾಯಿಂಟ್, ಪೆರಂಪಳ್ಳಿ ಮತ್ತು ಕಿನ್ನಿಮೂಲ್ಕಿಯಲ್ಲಿ ಹೀಗೆ ಒಟ್ಟು 3 ಕಡೆ ಮ್ಯಾಟ್ನೊಂದಿಗೆ ಟೈಮಿಂಗ್ ಚಿಪ್ ಅಳವಡಿಸಲಾಗುವುದು. ಪುರುಷರು, ಮಹಿಳೆಯರು, ವಿದ್ಯಾರ್ಥಿಗಳು, ಸಿಬಂದಿ, ಮುಕ್ತ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಅದಾನಿ ಯುಪಿಸಿಎಲ್ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮ್ಯಾರಥಾನ್ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ಸ್ ಅಸೋಸಿಯೇಶನ್ ಕಾರ್ಯಾಧ್ಯಕ್ಷ ರಘುರಾಮ್ ನಾಯಕ್, ಯುಪಿಸಿಎಲ್ನ ಜಿಎಂ ಗಿರೀಶ್ ನಾವಡ, ಸಿಂಡಿಕೇಟ್ ಬ್ಯಾಂಕ್ ಎಜಿಎಂ ರಮೇಶ್ ನಾಯಕ್, ಬಾಲಕೃಷ್ಣ ಹೆಗ್ಡೆ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
ರೂಟ್ ಮ್ಯಾಪ್ ಹೀಗಿದೆ…
* ಮಹಿಳೆ ಮತ್ತು ಪುರುಷರ 21.1 ಕಿ.ಮೀ. ಹ್ಯಾಫ್ ಮ್ಯಾರಥಾನ್ ಓಟಕ್ಕೆ : ಮಣಿಪಾಲ ಎಜು ಕಟ್ಟಡದಿಂದ ಪ್ರಾರಂಭವಾಗಿ-ಕಂಟ್ರಿ ಇನ್ ಸರ್ಕಲ್-ಸಿಂಡಿಕೇಟ್ ಸರ್ಕಲ್-ಪೆರಂಪಳ್ಳಿ ರಸ್ತೆ-ತಿರುಗಿ ಕಂಟ್ರಿಇನ್-ಸಾಯಿರಾಧಾ ಗ್ರೀನ್ವ್ಯಾಲಿ-ಸೆಂಚುರಿ ಫಾರ್ಮ್-ಪೆರಂಪಳ್ಳಿ ಚರ್ಚ್-ರೈಲ್ವೇ ಸೇತುವೆ-ಗುಂಡಿಬೈಲು ಬಲಕ್ಕೆ ಅಂಬಾಗಿಲು ರಸ್ತೆ-ಅಂಬಾಗಿಲು ಎಡಕ್ಕೆ ರಾ.ಹೆ. 66-ನಿಟ್ಟೂರು-ಆಭರಣ ಮೋಟಾರ್-ಕರಾವಳಿ ಜಂಕ್ಷನ್-ಬನ್ನಂಜೆಯಲ್ಲಿ ಬಲಕ್ಕೆ-ಬ್ರಹ್ಮಗಿರಿ-ನಾಯರ್ಕೆರೆ-ಕಿನ್ನಿಮೂಲ್ಕಿ-ಬಿಗ್ಬಜಾರ್-ಉಡುಪಿ ಸರ್ವೀಸ್ ಬಸ್ ನಿಲ್ದಾಣ-ಕಿದಿಯೂರು ಹೊಟೇಲ್-ಕಲ್ಸಂಕ-ಇಂದ್ರಾಳಿಯಾಗಿ ಮಣಿಪಾಲ.
* 10 ಕಿ.ಮೀ. ಓಟ: ಮಣಿಪಾಲ ಎಜು ಕಟ್ಟಡದಿಂದ ಪ್ರಾರಂಭವಾಗಿ-ಕಂಟ್ರಿ ಇನ್ ಸರ್ಕಲ್-ಸಿಂಡಿಕೇಟ್ ಸರ್ಕಲ್-ಪೆರಂಪಳ್ಳಿ ರಸ್ತೆ-ತಿರುಗಿ ಕಂಟ್ರಿಇನ್-ಸಾಯಿರಾಧಾ ಗ್ರೀನ್ವ್ಯಾಲಿ-ಸೆಂಚುರಿ ಫಾರ್ಮ್-ಪೆರಂಪಳ್ಳಿ ಚರ್ಚ್-ಎಡಕ್ಕೆ ಬಾಳಿಗಾ ಆಸ್ಪತ್ರೆ-ಎಡಕ್ಕೆ ಸಗ್ರಿ ವೈಕುಂಠ ಬಾಳಿಗಾ ಕಾನೂನು ಕಾಲೇಜು-ಬಲಕ್ಕೆ ಎಂಜಿಎಂ ಮೈದಾನ-ಎಡಕ್ಕೆ ಎಸ್ಆರ್ಎಸ್ ಶಾಲೆ-ಉಡುಪಿ-ಮಣಿಪಾಲ ಮುಖ್ಯ ರಸ್ತೆಯಾಗಿ-ಇಂದ್ರಾಳಿ-ಮಣಿಪಾಲ.
* 5 ಕಿ.ಮೀ. ಓಟ: ಮಣಿಪಾಲ ಎಜು ಕಟ್ಟಡದಿಂದ ಪ್ರಾರಂಭವಾಗಿ-ಕಂಟ್ರಿ ಇನ್ ಸರ್ಕಲ್, ಡಿಸಿ ಆಫೀಸು ರಸ್ತೆ-ಆರ್ಟಿಒ ಆಫೀಸು-ಎಂಡ್ ಪಾಯಿಂಟ್ ರಸ್ತೆಯಾಗಿ-ತಿರುಗಿ ಆರ್ಟಿಒ-ಕಂಟ್ರಿ ಇನ್-ಚೈನಾ ವ್ಯಾಲಿ-ಸಿಂಡಿಕೇಟ್ ಸರ್ಕಲ್-ಪೋಸ್ಟ್ ಆಫೀಸು-ಮಣಿಪಾಲ ಎಜು ಕಟ್ಟಡ.
* 3 ಕಿ.ಮೀ. ಓಟ: : ಮಣಿಪಾಲ ಎಜು ಕಟ್ಟಡದಿಂದ ಪ್ರಾರಂಭವಾಗಿ-ಕಂಟ್ರಿ ಇನ್ ಸರ್ಕಲ್, ಡಿಸಿ ಆಫೀಸು ರಸ್ತೆ-ತಿರುಗಿ ಕಂಟ್ರಿ ಇನ್-ಚೈನಾ ವ್ಯಾಲಿ-ಸಿಂಡಿಕೇಟ್ ಸರ್ಕಲ್-ಪೋಸ್ಟ್ ಆಫೀಸು-ಮಣಿಪಾಲ ಎಜು ಕಟ್ಟಡ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.