ಅಂತಾರಾಷ್ಟ್ರೀಯ ತಾಂತ್ರಿಕ ಸಮ್ಮೇಳನ
Team Udayavani, Feb 11, 2018, 12:02 PM IST
ಬೆಂಗಳೂರು: ಯಲಹಂಕ ಸಮೀಪದ ರೇವಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಹಾಗೂ ಏಐಇಇ ಬೆಂಗಳೂರು ವಿಭಾಗ ಜಂಟಿ ಸಹಭಾಗಿತ್ವದಲ್ಲಿ ಶುಕ್ರವಾರ ಮತ್ತು ಶನಿವಾರ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಮತ್ತು ಸಂವಹನ ಕ್ಷೇತ್ರದ ನವೀನ ಆವಿಷ್ಕಾರಗಳ ಕುರಿತಾದ ಎರಡು ದಿನಗಳ ಅಂತಾರಾಷ್ಟ್ರೀಯ ತಾಂತ್ರಿಕ ಸಮ್ಮೇಳನ ಐಸಿಎಇಸಿಸಿ-2018 ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಾರ್ಸಿಲೋನಾ ಸ್ಪೇನ್‌ನ ರಾಮನ್ ಸ್ಕೂಲ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಕ್ಟಸ್ ಆಂಟಿನಾನೇ ಸಂಸ್ಥೆಯ ಮುಖ್ಯ ಸಂಶೋಧಕ ಡಾ. ಜೇಮ್ ಅಂಜೆರಾ ಉದ್ಘಾಟಿಸಿದರು. “ಯುವಕರು ಸಂಶೋಧನೆಯಲ್ಲಿ ಆಸಕ್ತಿ ತೋರಿದರೆ ಅದು ವಿಶ್ವವಿದ್ಯಾಲಯ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂಬ ಭಾರತರತ್ನ ಅಬ್ದುಲ್ ಕಲಾಂ ಅವರ ಅಭಿವೃದ್ಧಿ ಬಗೆಗಿನ ಕನಸಿನ ಹೇಳಿಕೆಯನ್ನು ಡಾ. ಜೇಮ್ ಅಂಜೆರಾ ಅವರು, ತಮ್ಮ ಮಾತಿನ ನಡುವೆ ಉಲ್ಲೇಖೀಸಿದರು.
ಸಮ್ಮೇಳನದ ಅಧ್ಯಕ್ಷ, ರೇವಾ ವಿವಿ ಕುಲಾಧಿಪತಿ ಡಾ. ಶ್ಯಾಮರಾಜು ಮಾತನಾಡಿ, ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಬೋಧಿಸಲು ಶಿಕ್ಷಕರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಸಂಶೋಧನೆಗಳು ನೆರವಾಗಲಿವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಐಇಇಇ ಬೆಂಗಳೂರು ವಿಭಾಗದ ಮುಖ್ಯಸ್ಥ ಸುಧೀಂದ್ರ ಕೌಶಿಕ್, ವಿವಿ ಉಪಕುಲಪತಿ ಡಾ. ಎಸ್.ವೈ. ಕುಲಕರ್ಣಿ, ವಿವಿ ಕುಲಪತಿ ಡಾ. ಎಂ. ಧನಂಜಯ, ಡಾ. ಎನ್. ರಮೇಶ್, ಡಾ. ರಾಜಶೇಖರ ಸಿ. ಬೇರಾದಾರ್, ಪ್ರೊ. ಅನುಪಮಾ, ಪ್ರೊ. ಸುಗಾಧ, ಪ್ರೊ. ಆರ್ಯಲಕ್ಷೀ, ಡಾ. ವೆಂಕಟ್ ಶಿವಾರೆಡ್ಡಿ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.