ಮಣಿಪಾಲ ಸಿಲ್ವರ್ ಮ್ಯಾರಥಾನ್ ಇಥಿಯೋಪಿಯಾ ಓಟಗಾರರಿಗೆ ಪ್ರಥಮ ಸ್ಥಾನ
Team Udayavani, Feb 12, 2018, 6:40 AM IST
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ವತಿಯಿಂದ ಸಿಂಡಿಕೇಟ್ ಬ್ಯಾಂಕ್, ಅದಾನಿ ಮತ್ತಿತರ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ “ಡ್ರಗ್ಸ್ ಮುಕ್ತ ಜೀವನ’ ಎನ್ನುವ ಧ್ಯೇಯದಡಿ ರವಿವಾರ ನಡೆದ ಮಣಿಪಾಲ ಸಿಲ್ವರ್ ಮ್ಯಾರಥಾನ್‌ನಲ್ಲಿ ಇಥಿಯೋಪಿಯಾದ ಓಟಗಾರರು ಮಹಿಳೆಯರ ಮತ್ತು ಪುರುಷರ ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಣಿಪಾಲ ಎಜು ಬಿಲ್ಡಿಂಗ್‌ನಲ್ಲಿ ಬೆಳಗ್ಗೆ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರು ಮ್ಯಾರಥಾನ್‌ಗೆ ಚಾಲನೆ ನೀಡಿದರು. ಕೆಎಂಸಿ ಗ್ರೀನ್ಸ್‌ನಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಮ್ಯಾರಥಾನ್‌ನಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್, ಸಹಕುಲಪತಿಗಳಾದ ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಪೂರ್ಣಿಮಾ ಬಾಳಿಗಾ, ಕುಲಸಚಿವ ಡಾ| ನಾರಾಯಣ ಸಭಾಹಿತ್, ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ, ಮಣಿಪಾಲ ಸಿಂಡಿಕೇಟ್ ಬಯಾಂಕ್ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ವೊಡಾಫೋನ್ ಝೋನಲ್ ಹೆಡ್ ಸಂತೋಷ್ ಕುಮಾರ್ ಪಲೂರ್, ಮಣಿಪಾಲ್ ಮ್ಯಾರಥಾನ್ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
ವರುಣ್ ಶ್ರೀಕಾಂತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮ್ಯಾರಥಾನ್ ಕಾರ್ಯದರ್ಶಿ ಡಾ| ವಿನೋದ್ ನಾಯಕ್ ವಂದಿಸಿದರು.
ಬಹುಮಾನ ವಿಜೇತರು
21.1 ಕಿ.ಮೀ. ಪುರುಷರ ಹಾಫ್ ಮ್ಯಾರಥಾನ್
18 ವರ್ಷ ಮೇಲ್ಪಟ್ಟವರು: ಮಿಕಿಯಾಸ್ ಏಮr (ಪ್ರಥಮ-ಇಥಿಯೋಪಿಯಾ), ಶಿಜು ಸಿ.ಪಿ. (ದ್ವಿತೀಯ), ಕಾಂತಿಲಾಲ್ (ತೃತೀಯ), ಹೆಟ್ರಮ್ (ಚತುರ್ಥ), ರಂಜಿತ್ ಸಿಂಗ್ (ಪಂಚಮ).
35-55 ವರ್ಷ: ಎಡಿನಾ ಮೆಕೊನೆನ್ (ಪ್ರ), ಚಂದ್ರಶೇಖರ್ ಎ. (ದ್ವಿ), ಶಿಜಿ ಎನ್.ಪಿ. (ತೃ).
56 ವರ್ಷ ಮೇಲ್ಪಟ್ಟವರು: ಸದಾನಂದನ್ ಪಿಳ್ಳೆ„.
ಮಾಹೆ ವಿದ್ಯಾರ್ಥಿಗಳು, ಸಿಬಂದಿ: ಸುದೀಪ್ ಕುಮಾರ್ (ಪ್ರ), ಮುಕುಲ್ ರಾಜ್ (ದ್ವಿ).
21.1 ಕಿ.ಮೀ. ಮಹಿಳೆಯರ ಹಾಫ್ ಮ್ಯಾರಥಾನ್
18 ವರ್ಷ ಮೇಲ್ಪಟ್ಟವರು: ಝಿನಾಶ್ ವರ್ಕ್ ಟಿನ್ಯೂಅಂಬಿ (ಪ್ರ-ಇಥಿಯೋಪಿಯಾ), ಅರ್ಚನಾ ಕೆ. (ದ್ವಿ), ಶಾಲಿನಿ ಕೆ.ಎಸ್. (ತೃ), ಬಿರ್ಟುಕಾನ್ ನಾಗೇಶ್ (ಚ), ಝಿನಾಶ್ ಬೇಕಲ್ (ಪಂ).
35-55 ವರ್ಷ: ಸವಿತಾ ಶಾಸಿŒ (ಪ್ರ), ಜ್ಯೋತಿ ಉದಯ ಶೆಟ್ಟಿ (ದ್ವಿ).
56 ವರ್ಷ ಮೇಲ್ಪಟ್ಟವರು: ಸುಲತಾ ಕಾಮತ್.
10 ಕಿ.ಮೀ. ಪುರುಷರ ಓಟ
16 ವರ್ಷ ಮೇಲ್ಪಟ್ಟವರು: ಅಮಾನುವೆಲ್ ಅಬ್ದು (ಪ್ರ), ವಿನಯ ಕುಮಾರ್ (ದ್ವಿ), ಚೇತನ್ ಜಿ.ಜೆ. (ತೃ).
35-55 ವರ್ಷ: ಸೈಫ್ ಹಾಸನ್ (ಪ್ರ), ಮಾಧವ ಸರಿಪಳ್ಳ (ದ್ವಿ), ಗಣೇಶ್ ಪೂಜಾರಿ (ತೃ).
56 ಮೇಲ್ಪಟ್ಟವರು: ರಾಮಯ್ಯನ್.
10 ಕಿ.ಮೀ. ಮಹಿಳೆಯರ ಓಟ
16 ವರ್ಷ ಮೇಲ್ಪಟ್ಟವರು: ಸಾಯ್ಲಿಮೆಂಗ್ (ಪ್ರ), ಸುಪ್ರೀತಾ ಬಿ.ಕೆ. (ದ್ವಿ), ತಿಪ್ಪವ್ವ ಸಾನಕ್ಕಿ (ತೃ).
35-55 ವರ್ಷ ಮೇಲ್ಪಟ್ಟ: ಯೂನಿಯಾ ಪನೋಮರೇವ (ಪ್ರ), ನೂಪರ್ ಕೌಶಕ್ (ದ್ವಿ), ರೆಬಾ ಪಿಲಿಪೋಶೆ (ತೃ).
56 ವರ್ಷ ಮೇಲ್ಪಟ್ಟವರು: ಅರುಣಕಲಾ ಎಸ್. ರಾವ್.
5 ಕಿ.ಮೀ. ಪುರುಷರ ಓಟ
10 ವರ್ಷ ಮೇಲ್ಪಟ್ಟವರು: ಅನಿಲ ಕುಮಾರ (ಪ್ರ), ಪ್ರಶಾಂತ್ ಕುಮಾರ್ (ದ್ವಿ), ಚಿದಾನಂದ್ (ತೃ).
35-55 ವರ್ಷ: ಅಂತೊನಿ (ಪ್ರ), ಚಂದನ್ (ದ್ವಿ).
56 ವರ್ಷ ಮೇಲ್ಪಟ್ಟವರು: ದತ್ಯಾನಂದ ನಾಯಕ್.
ಕಾರ್ಪೊರೇಟ್: ಬಿನು ಪ್ರಕಾಶ್
5 ಕಿ.ಮೀ. ಮಹಿಳೆಯರ ಓಟ
56 ವರ್ಷ ಮೇಲ್ಪಟ್ಟವರು: ಸಂಧ್ಯಾ ಕಾಮತ್.
ಕಾರ್ಪೊರೇಟ್: ಜೆನ್ಸಿ ಜೋಸೆಫ್.
ಗಮನ ಸೆಳೆದ ವಿಭಿನ್ನ ವೇಷದ ರಕ್ಷಿತ್
ವಿಭಿನ್ನ ವೇಷಭೂಷಣಗಳೊಂದಿಗೆ ಹಾಫ್ ಮ್ಯಾರಥಾನ್ ಓಡಿ 15ಕ್ಕೂ ಹೆಚ್ಚು ಗಿನ್ನಿಸ್ ವಿಶ್ವದಾಖಲೆ ಸೃಷ್ಠಿಸಿರುವ ಗುರುಪುರ ಕೈಕಂಬದ ರಕ್ಷಿತ್ ಶೆಟ್ಟಿ ಎರಡನೇ ಬಾರಿಗೆ ಮಣಿಪಾಲ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.