ತಾಂತ್ರಿಕತೆ ಅಭಿವೃದ್ಧಿಗೆ ಬಳಕೆಯಾಗಲಿ:ಪ್ರಧಾನಿ ಮೋದಿ
Team Udayavani, Feb 12, 2018, 6:00 AM IST
ದುಬೈ: “ತಾಂತ್ರಿಕ ಸಂಶೋಧನೆಗಳು ಮತ್ತು ವಿಚಾರಗಳು ಜನಸಾಮಾನ್ಯರನ್ನು ಸಬಲೀಕರಣಗೊಳಿಸಿದೆ. ಅದನ್ನು ಮಾನವರ ಸದುಪಯೋಗಕ್ಕೆ ಬಳಕೆ ಮಾಡಬೇಕೇ ಹೊರತು ವಿನಾಶಕ್ಕೆ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದುಬೈನಲ್ಲಿ ಆಯೋಜಿಸಲಾಗಿರುವ ವಿಶ್ವ ಸರ್ಕಾರಿ ಸಮ್ಮೇಳನ (ವರ್ಲ್x ಗವರ್ನ್ಮೆಂಟ್ ಸಮಿಟ್)ದಲ್ಲಿ ಪ್ರಧಾನ ಭಾಷಣ ಮಾಡಿದ ಪ್ರಧಾನಿ, ತಂತ್ರಜ್ಞಾನದ ದುರ್ಬಳಕೆ ಮೇಲೆ ನಿಗಾ ವಹಿಸಬೇಕಾಗಿದೆ. ಜಗತ್ತು ತಾಂತ್ರಿಕವಾಗಿ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದ್ದರೂ ಬಡತನ ಮತ್ತು ಅಪೌಷ್ಟಿಕತೆ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದೂ ವಿಷಾದಿಸಿದ್ದಾರೆ. “ನಾವು ಹೆಚ್ಚಿನ ಪ್ರಮಾಣದ ಹಣವನ್ನು ಬಾಂಬ್, ಕ್ಷಿಪಣಿಗಳನ್ನು ಸಿದ್ಧಪಡಿಸಲು ವಿನಿಯೋಗಿಸುತ್ತಿದ್ದೇವೆ. ಅದೇ ತಂತ್ರಜ್ಞಾನವನ್ನು ಮಾನವ ಸದ್ಬಳಕೆಗೆ ಬಳಸುವಂತಾಗಬೇಕು’ ಎಂದು ಹೇಳಿದ್ದಾರೆ.
ಆರು “ಆರ್’ ಗಳು:
“ನಾವು ಆರು ಆರ್‌ಗಳನ್ನು ಪಾಲಿಸಿದರೆ ಸಂತೋಷ ಹೊಂದಲು ಸಾಧ್ಯ. ಅವುಗಳೆಂದರೆ ರೆಡ್ನೂಸ್ (ತಗ್ಗಿಸು), ರೀಯೂಸ್ (ಮರು ಬಳಕೆ), ರೀಸೈಕಲ್ (ಪುನರುಪಯೋಗಿಸು), ರಿಕವರ್ (ಮರಳಿ ಪಡೆದುಕೊಳ್ಳುವುದು), ರೀಡಿಸೈನ್ (ಮರು ವಿನ್ಯಾಸ), ರಿಮ್ಯಾನ್ಯುಫ್ಯಾಕ್ಚರ್ (ಮರು ಉತ್ಪಾದಿಸು). ಈ ನಿಯಮಗಳನ್ನು ಪಾಲಿಸಿದಾಗ ಸಂತೋಷ ವೃದ್ಧಿಯಾಗುತ್ತದೆ’ ಎಂದಿದ್ದಾರೆ ಪ್ರಧಾನಿ.
ದೇಶಗಳು ಒಂದಾಗಬೇಕು:
ತಮ್ಮ ನೇತೃತ್ವದ ಕೇಂದ್ರ ಸರ್ಕಾರ “ಸಬ್ ಕಾ ಸಾಥ್; ಸಬ್ ಕಾ ವಿಕಾಸ್’ ಎಂಬ ನಿಯಮ ಅನುಸರಿಸುತ್ತಿದೆ. ಅದು ಕೇವಲ ಭಾರತಕ್ಕೆ ಮಾತ್ರವಲ್ಲ. ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಅನ್ವಯವಾಗುತ್ತದೆ. ಎಲ್ಲಾ ರಾಷ್ಟ್ರಗಳು ಮುಂದಾಗಿ ಸಹ್ಯ ಅಭಿವೃದ್ಧಿಯತ್ತ ಮನಸ್ಸು ಮಾಡಬೇಕು. ಏಕೆಂದರೆ ನಾವೆಲ್ಲರೂ ಪರಸ್ಪರ ಸಂಪರ್ಕ ಹೊಂದಿದ ವಿಶ್ವದಲ್ಲಿ ಬದುಕುತ್ತಿದ್ದೇವೆ. ತಾಂತ್ರಿಕವಾಗಿ ಜಗತ್ತು ಬದಲಾಗುತ್ತಿರುವಾಗ ಹೊಸ ರೀತಿಯ ಸವಾಲುಗಳು ಬರುತ್ತವೆ. ಅವುಗಳನ್ನು ಎದುರಿಸಲು ಎಲ್ಲ ದೇಶಗಳೂ ಒಂದಾಗಬೇಕು ಎಂದಿದ್ದಾರೆ.
ದೇಶದ ರೈತರ ಆದಾಯವನ್ನು 2020ರ ಒಳಗೆ ವೃದ್ಧಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಆಧಾರ್ ಜಾರಿಯಿಂದಾಗಿ ಸರ್ಕಾರಕ್ಕೆ 5 ಲಕ್ಷ ಕೋಟಿ ರೂ.ಗಳಷ್ಟು (8 ಬಿಲಿಯನ್ ಡಾಲರ್) ಉಳಿತಾಯವಾಗಿದೆ ಎಂದೂ ಹೇಳಿದ್ದಾರೆ.
ದೇಗುಲ ನಿರ್ಮಾಣಕ್ಕೆ ಪಿಎಂ ಶಂಕುಸ್ಥಾಪನೆ
ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇಗುಲಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ದುಬೈ ಒಪೇರಾ ಹೌಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಮೊದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಗುಲಗಳು ಸೌಹಾರ್ದತೆ ಮತ್ತು ಮಾನವೀಯತೆಯ ನಡುವಿನ ಸಂಬಂಧದ ವೇಗವನ್ನು ವರ್ಧಿಸುವುದಕ್ಕೆ ಕಾರಣವಾಗುತ್ತವೆ. ಈ ಅಂಶವೇ ಭಾರತವನ್ನು ಗುರುತಿಸುವಿಕೆಯ ಪ್ರಧಾನ ಅಂಶ ಎಂದಿದ್ದಾರೆ. ಇಲ್ಲಿನ ಆಡಳಿತಾಧಿಕಾರಿಗಳು ದೇಶದ ಸಾಂಸ್ಕೃತಿಕ ಇತಿಹಾಸ ಗಮನಿಸಿ ಜಮೀನು ನೀಡಿದ್ದಾರೆ. ಹೀಗಾಗಿ ಇತರರಿಗೆ ತೊಂದರೆಯಾಗದಂತೆ ದೇಗುಲದ ನಿರ್ಮಾಣಕಾರರು ಮತ್ತು ಭಕ್ತರು ಮುಂದಿನ ದಿನಗಳಲ್ಲಿ ವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.