ಪಾಕಿಸ್ಥಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಅಸ್ಮಾ ನಿಧನ
Team Udayavani, Feb 12, 2018, 8:50 AM IST
ಲಾಹೋರ್: ಮಾನವ ಹಕ್ಕುಗಳ ಐಕಾನ್, ಅಸಹಾಯಕರ ಧ್ವನಿಯೆಂದೇ ಖ್ಯಾತಿ ಗಳಿಸಿದ್ದ ಪಾಕಿಸ್ಥಾನದ ಮೊದಲ ಮಾನವ ಹಕ್ಕುಗಳ ಹೋರಾಟಗಾರ್ತಿ, ವಕೀಲೆ ಅಸ್ಮಾ ಜಹಾಂಗೀರ್ (66) ರವಿವಾರ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಬೆಳಗ್ಗೆ ಹೃದಯಾಘಾತಕ್ಕೆ ಒಳಗಾದ ಅವರನ್ನು ಲಾಹೋರ್‌ನ ಲತೀಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಸಾಮಾಜಿಕ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡಿದ್ದ ಅವರು, ರಾಜಕೀಯವಾಗಿ ಶಕ್ತಿಶಾಲಿಯಾಗಿರುವ ಪಾಕಿಸ್ಥಾನದ ಸೇನೆಯ ಕಠಿನ ವಿಮರ್ಶಕರೂ ಆಗಿದ್ದರು. ತಮಗನಿಸಿದ್ದನ್ನು ನೇರವಾಗಿ ಹೇಳುವ ಪ್ರವೃತ್ತಿಯವರಾಗಿದ್ದ ಅಸ್ಮಾ, ಮಾನವ ಹಕ್ಕುಗಳ ಸಂರಕ್ಷಣೆಗಾಗಿ ತಮ್ಮ ವೃತ್ತಿ ಜೀವನ ಪೂರ್ತಿ ಹೋರಾಡಿದ್ದರು. ಪಾಕಿಸ್ಥಾನ ಸುಪ್ರೀಂ ಕೋರ್ಟ್‌ನ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷೆಯೂ ಆಗಿದ್ದ ಅವರು, ಈ ಸ್ಥಾನ ಅಲಂಕರಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಪ್ರಜಾಪ್ರಭು ತ್ವವನ್ನು ದೃಢವಾಗಿ ನಂಬಿದ್ದ ಅವರನ್ನು ಧ್ವನಿಯಿಲ್ಲದವರ ಧ್ವನಿ ಎಂದೇ ಬಣ್ಣಿಸಲಾಗುತ್ತಿತ್ತು. ಇವರ ನಿಧನಕ್ಕೆ ಪಾಕ್ ಅಧ್ಯಕ್ಷ ಮಮೂ°ನ್ ಹುಸೇನ್, ಪ್ರಧಾನಿ ಶಾಹಿದ್ ಖಖಾನ್ ಅಬ್ಟಾಸಿ ಸಹಿತ ಅನೇಕರು ಸಂತಾಪ ಸೂಚಿಸಿದ್ದಾರೆ. ಭಾರತದಲ್ಲೂ ಬಾಲಿವುಡ್ ಗಣ್ಯರು, ಹೋರಾಟಗಾರರು ಸಹಿತ ಅನೇಕ ಗಣ್ಯರು ಅಸ್ಮಾರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.