ಕೊಡು – ಕೊಳ್ಳುವಿಕೆಗೂ ಮೀರಿದ ಸಂಬಂಧ
Team Udayavani, Feb 12, 2018, 10:50 AM IST
ದುಬೈ/ಮಸ್ಕತ್: ಯುಎಇ ಮತ್ತು ಭಾರತದ ನಡುವೆ ವಿಸ್ತೃತ, ಆಳ ಮತ್ತು ವಿಶಾಲ ಸಂಬಂಧ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಎರಡೂ ದೇಶಗಳ ನಡುವಿನ ಬಾಂಧವ್ಯ ಕೇವಲ ಮಾರಾಟ ಗಾರ ಮತ್ತು ಖರೀದಿದಾರನಂತೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರವಿವಾರ ದುಬಾೖ ಒಪೇರಾ ಹೌಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ನೇತೃತ್ವದ ಸರಕಾರ ಭಾರತವನ್ನು ವಿಶ್ವದ ಪ್ರಮುಖ ಸ್ಥಾನಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ ಎಂದರು. ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ಕನಸುಗಳನ್ನು ನನಸು ಮಾಡಲು ಹಾಲಿ ಕೇಂದ್ರ ಸರಕಾರ ಶ್ರಮಿಸಲಿದೆ. ವಿಶ್ವದಲ್ಲಿ ಅತ್ಯಂತ ಸುಲಲಿತವಾಗಿ ಬಂಡವಾಳ ಹೂಡುವ ಬಗ್ಗೆ ವಿಶ್ವ ಬ್ಯಾಂಕ್‌ನ ರಾಷ್ಟ್ರಗಳ ಸ್ಥಾನಗಳ ಪಟ್ಟಿಯಲ್ಲಿ ದೇಶದ ಸ್ಥಾನ 142ರಿಂದ 100ಕ್ಕೆ ಏರಿಕೆಯಾಗಿದೆ ಎಂದರು ಪ್ರಧಾನಿ. ಜಿಎಸ್‌ಟಿ ಮತ್ತು ಇತರ ಪ್ರಮುಖ ನಿರ್ಧಾರಗಳ ಜಾರಿ ಸೇರಿದಂತೆ ಅರ್ಥ ವ್ಯವಸ್ಥೆ ಬಲಪಡಿಸಲು ಕೈಗೊಂಡ ಕ್ರಮಗಳನ್ನು ವಿವರಿಸಿದರು. ಇದರ ಜತೆಗೆ ಸುಮಾರು 30 ಲಕ್ಷಕ್ಕೂ ಅಧಿಕ ಮಂದಿಗೆ ಯುಎಇನಲ್ಲಿ ಸುರಕ್ಷಿತ ನೆಲೆ ಒದಗಿಸಿದ್ದಕ್ಕೆ ಅವರು ಧನ್ಯವಾದ ಸಮರ್ಪಿಸಿದರು.
ಹೇಗಿರಲಿದೆ ಮೊದಲ ದೇಗುಲ?
ಏನೇನು ಇರಲಿದೆ?: ಸಂದರ್ಶಕರ ಗ್ಯಾಲರಿ, ಪ್ರಾರ್ಥನೆ ಮಾಡುವ ಹಾಲ್, ಅಧ್ಯಯನ ಕೇಂದ್ರ, ಮಕ್ಕಳಿಗೆ ಮತ್ತು ಯುವಕರಿಗೆ ಆಟವಾಡಲು ವ್ಯವಸ್ಥೆ, ಫುಡ್ ಕೋರ್ಟ್, ಪುಸ್ತಕ ಮತ್ತು ಇತರ ಮಳಿಗೆ
ಅಬುದಾಭಿಯಲ್ಲಿ ಎಲ್ಲಿ?: ದುಬೈ- ಅಬುದಾಭಿ ಶೇಖ್ ಝಯೇದ್ ಹೆದ್ದಾರಿ ಪಕ್ಕ
ನಿರ್ಮಾಣದ ಉಸ್ತುವಾರಿ: ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆ
ಸದ್ಯ ಎಷ್ಟು ದೇಗುಲಗಳು ಇವೆ?: – ಯುಎಇನಲ್ಲಿ ಎರಡು ದೇಗುಲಗಳು ಇವೆ. ಅಬುದಾಭಿ ಮತ್ತು ಇತರ ಸ್ಥಳಗಳಿಂದ ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಅಲ್ಲಿಗೆ ಬರುತ್ತಾರೆ.
ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆ : ಈ ಸಂಸ್ಥೆಗೆ 110 ವರ್ಷಗಳ ಇತಿಹಾಸವಿದೆ. 1907 ಜೂ.5ರಂದು ಈ ಸಂಸ್ಥೆ ಆರಂಭವಾಯಿತು. ಬೋಚನ್ವಾಸಿ ಅಕ್ಷರ್ ಪುರುಷೋತ್ತಮ್ ಸಂಸ್ಥಾ (ಬಿಎಪಿಎಸ್) ಸ್ವಾಮಿ ನಾರಾಯಣ ಸಂಸ್ಥೆ ಎನ್ನುವುದು ಅದರ ಪೂರ್ಣ ಹೆಸರು. ಅದರ ಪ್ರಧಾನ ಕಚೇರಿ ಇರುವುದು ಗುಜರಾತ್‌ನ ಅಹಮದಾಬಾದ್‌ನಲ್ಲಿ.
ಧಾರ್ಮಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ಟ್ರಸ್ಟ್ ಕಾರ್ಯಾಚರಿಸುತ್ತಿದೆ. ಹಿಂದೂ ಸಂಸ್ಕೃತಿಗೆ ಅನುಗುಣವಾಗಿಯೇ ದೇಗುಲ ನಿರ್ಮಾಣವಾಗಲಿದೆ ಎನ್ನುತ್ತಾರೆ ಬಿಎಪಿಎಸ್‌ನ ಟ್ರಸ್ಟ್ ಸದಸ್ಯರು. ಹೊಸದಿಲ್ಲಿಯಲ್ಲಿರುವ ದೇಗುಲ ಮಾದರಿಯಲ್ಲಿಯೇ ಇರಲಿದೆ. ಭಾರತ, ಯು.ಕೆ., ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವಾದ್ಯಂತ 1,200 ಕೇಂದ್ರಗಳಲ್ಲಿ ಈ ಸಂಸ್ಥೆ ದೇಗುಲಗಳನ್ನು ನಿರ್ಮಿಸಿ ನಿರ್ವಹಿಸುತ್ತಿದೆ. ಬೆಂಗಳೂರಿನ ರಾಜಾಜಿನಗರದ ಟೋಲ್ ಗೇಟ್‌ನಲ್ಲಿ ಇದೇ ಸಂಸ್ಥೆಯ ದೇವಾಲಯವೊಂದಿದೆ.
ಒಮನ್‌ಗೆ ಆಗಮನ
ಯುಎಇ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ ಅವರು ರವಿವಾರ ಸಂಜೆ ಒಮನ್‌ಗೆ ತಲುಪಿದ್ದಾರೆ. ಒಮನ್‌ನ ಉಪಪ್ರಧಾನಿ ಸಯ್ಯದ್ ಫಹದ್ ಬಿನ್ ಮಹೂ¾ದ್ ಅಲ್ ಸೈದ್ ಅವರು ಮಸ್ಕತ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. 2 ದಿನಗಳ ಕಾಲ ಇಲ್ಲಿರಲಿರುವ ಮೋದಿ ಅವರು ಒಮನ್‌ನ ಸುಲ್ತಾನ್ ಹಾಗೂ ಇತರೆ ನಾಯಕರನ್ನು ಭೇಟಿಯಾಗಲಿದ್ದಾರೆ. ಜತೆಗೆ, ಬಲಿಷ್ಠ ಆರ್ಥಿಕ ಮತ್ತು ಉದ್ಯಮ ಸಂಬಂಧ ಏರ್ಪಡಿಸುವ ನಿಟ್ಟಿನಲ್ಲಿ ಕೈಗಾರಿಕೋದ್ಯ ಮಿಗಳ ಜತೆಯೂ ಮಾತುಕತೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.