ಪ್ರಥಮ ಸ್ವತಂತ್ರ ಸೇನಾನಿ ಬಾಹುಬಲಿ
Team Udayavani, Feb 12, 2018, 12:20 PM IST
ಶ್ರವಣಬೆಳಗೊಳ: ತನ್ನ ದೇಶದ ಸ್ವತ್ರಂತ್ರ ಹಾಗೂ ಸ್ವಾಧೀನಕ್ಕಾಗಿ ಹೋರಾಡಿದ ಪ್ರಥಮ ಸ್ವತಂತ್ರ ಸೇನಾನಿ ಬಾಹುಬಲಿ ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ತಂದೆ ನೀಡಿದ ರಾಜ್ಯವನ್ನು ಸ್ವತಂತ್ರವಾಗಿ ಆಳಬೇಕು. ಸಹೋದರನಾಗಿ ಅಣ್ಣ ಭರತ ಚಕ್ರವರ್ತಿಗೆ ಬಾಹುಬಲಿ ತಲೆಬಾಗುತ್ತಾನೆ.
ಆದರೆ ದೇಶದ ಪ್ರಜೆಗಳನ್ನು ಅವರ ಪರಾಧೀನಕ್ಕೆ ಒಪ್ಪಿಸಲು ಇಚ್ಛಿಸುವುದಿಲ್ಲ ಎಂಬ ಮನೋಭಾವದಿಂದಾಗಿ ಅಣ್ಣನೊಂದಿಗೆ ಯುದ್ಧ ಮಾಡುವುದು ಅನಿವಾರ್ಯವಾಯಿತು. ಆಗ ಪ್ರಮುಖರೆಲ್ಲಾ ಸೇರಿ ಎರಡೂ ಕಡೆಯ ಸೈನಿಕರ ರಕ್ತದ ಹೊಳೆ, ಪ್ರಾಣಿಗಳ ಸಾವು-ನೋವಿಗೆ ಬದಲಾಗಿ ಪರಸ್ಪರ ಜಲಯುದ್ಧ, ಮಲ್ಲಯುದ್ಧ, ದೃಷ್ಟಿ ಯುದ್ಧದೊಂದಿಗೆ ಸೆಣೆಸಲು ನಿರ್ಧಾರವಾಯಿತು ಎಂದು ವಿವರಿಸಿದರು.
ಮೂರು ಯುದ್ಧದಲ್ಲೂ ಬಾಹುಬಲಿ ಜಯಿಸಿದ್ದರಿಂದ ತಾಳ್ಮೆ ಕಳೆದುಕೊಂಡು ನಿಶಸ್ತ್ರೀಕರಣ ಬದಿಗಿಟ್ಟ ಭರತ ಚಕ್ರವರ್ತಿಯು, ಇವೆಲ್ಲ ಹೇಡಿಗಳು ಮಾಡುವ ಯುದ್ಧ. ಪರಾಕ್ರಮಿ ನಾನು ಇದನ್ನೆಲ್ಲ ಏಕೆ ಒಪ್ಪಬೇಕೆಂಬ ಧೋರಣೆಯಲ್ಲಿ ತನ್ನ ಮಹಾ ಅಸ್ತ್ರ ಚಕ್ರವನ್ನು ಪ್ರಯೋಗಿಸುತ್ತಾನೆ. ಆ ಚಕ್ರವು ಬಾಹುಬಲಿಯನ್ನು ಮೂರು ಸುತ್ತು ಹಾಕಿ ಬಲಭಾಗದಲ್ಲಿ ನಿಲ್ಲುತ್ತದೆ. ಆಗ ತಲೆಬಾಗಿ ಕಣ್ಣೀರು ಹಾಕುತ್ತಾನೆ.
ಆ ಹೊತ್ತಿಗೆ ಬಾಹುಬಲಿಗೆ ವೈರಾಗ್ಯ ಆವರಿಸಿರುತ್ತದೆ ಎಂದು ಸ್ವಾಮೀಜಿ ವಿವರಿಸಿದರು. ನಂತರ ಭರತ ರಾಜ್ಯಭಾರ ಮಾಡುವಂತೆ ಹೇಳಿದಾಗ ಬಾಹುಬಲಿ ಕಿರೀಟ, ವಸ್ತ್ರಾಭರಣಗಳನ್ನು ಕಳಚಿ ಹೊರಡಲು ಅನುವಾಗುತ್ತಾನೆ. ಇಂತಹ ಕೃತ್ಯಗಳು ಕೊನೆಯಾಗಬೇಕು ಎನ್ನುವ ಬಾಹುಬಾಲಿ ರಾಜ್ಯವನ್ನು ಅಣ್ಣನಿಗೆ ಬಿಟ್ಟುಕೊಟ್ಟು ಚಕ್ರವರ್ತಿಯಾಗುವಂತೆ ಹೇಳುತ್ತಾನೆ. ಅದೊಂದು ಪರಿವರ್ತನೆಯ ಸಂದರ್ಭ ಎಂದು ಉಲ್ಲೇಖೀಸಿದರು.
ಆ ಸನ್ನಿವೇಶವನ್ನು ಪಂಪ ಮಹಾಕವಿ ಅದ್ಭುತವಾಗಿ ವರ್ಣಿಸಿದ್ದಾನೆ. ಭರತನು ಬಾಹುಬಲಿಯ ಪಾದಕ್ಕೆರಗಿ ನಮಸ್ಕರಿಸುತ್ತಾನೆ. ಇಬ್ಬರೂ ಕಣ್ಣೀರು ಹಾಕುತ್ತಾರೆ. ಅಣ್ಣನ ಕಣ್ಣೀರು ಬಾಹುಬಲಿಯ ಪಾದದ ಮೇಲೆ ಬಿದ್ದರೆ, ಬಾಹುಬಲಿಯ ಕಣ್ಣೀರು ಭರತನ ತಲೆಯ ಮೇಲೆ ಬೀಳುತ್ತದೆ. ದೀಕ್ಷೆಗೆ ಹೊರಟ ಬಾಹುಬಲಿಗೆ ಭರತ ಕಣ್ಣೀರಿನಿಂದ ಪಾದಪೂಜೆ ಮಾಡುತ್ತಾನೆ.
ದೀಕ್ಷೆಗೆ ಹೊರಡುತ್ತಿದ್ದ ಬಾಹುಬಲಿಯ ಕಣ್ಣೀರು ಭರತನ ತಲೆಯ ಮೇಲೆ ಬಿದ್ದು, ರಾಜಾಭಿಷೇಕ ಮಾಡುತ್ತಿದ್ದಾನೆಂದು ಪಂಪ ಅದ್ಭುತವಾಗಿ ಚಿತ್ರಿಸಿದ್ದಾನೆ. ಪಂಪ ಶ್ರೇಷ್ಠ ಛಾಯಾಗ್ರಾಹಕ ಎಂದರೆ ತಪ್ಪಾಗಲಾರದು. ಪಂಪನ ವೈಯಕ್ತಿಕ ಕವಿತ್ವ, ಚಿಂತನೆ ಸ್ಪಷ್ಟವಾಗುತ್ತದೆ. ಉಳಿದ ಪ್ರಾಕೃತ, ಸಂಸ್ಕೃತದಲ್ಲಿ ಇಲ್ಲದ ಸನ್ನಿವೇಶವನ್ನು ಪಂಪ ಸೃಷ್ಟಿಸಿದ್ದಾನೆ ಎಂದು ಚರಿತ್ರೆಯನ್ನು ಸ್ಮರಿಸಿದರು.
ಬಾಹುಬಲಿಯು ಈ ಚಕ್ರ ಇನ್ನು ಸಂಹಾರ ಚಕ್ರವಲ್ಲ. ಶಾಂತಿ ಚಕ್ರ, ಧರ್ಮ ಚಕ್ರವಾಗಬೇಕೆಂದು ಘೋಷಿಸಿದ. ನಂತರ 365 ದಿನ ಅನ್ನಾಹಾರ ಇಲ್ಲದೇ ಕಠೊರ ತಪಸ್ಸು ಮಾಡಿದ. ಅಚಲವಾಗಿ ನಿಂತ ಬಾಹುಬಲಿಯನ್ನು ಹಾವು, ಹುತ್ತ, ಬಳ್ಳಿಗಳು ಆವರಿಸಿದವು. ಪ್ರಪಂಚದ ಯಾವ ಧರ್ಮ, ಪಂಥ, ವರ್ಗ ಮಾತ್ರವಲ್ಲದೆ ಜೈನ ಧರ್ಮದ 24 ತೀರ್ಥಂಕರರಲ್ಲೂ ಬಾಹುಬಲಿಯಷ್ಟು ಘೋರ ತಪಸ್ಸು ಮಾಡಿದ ಮತ್ತೂಬ್ಬರಿಲ್ಲ.
ವರ್ಷದ ಬಳಿಕ ಸಿದ್ಧಿ ಲಭಿಸಿತು. ಆಕಾಶದಲ್ಲಿ ದೇಹ ತೇಲಾಡಲಾರಂಭಿಸಿತು. ಗಂಗಾ, ಸಿಂಧು ನದಿ ನೀರಿನಿಂದ ಅಭಿಷೇಕವಾಗಿ ಪುಷ್ಪ$ವೃಷ್ಠಿಯಾಯಿತು. ಅದು ಬಾಹುಬಲಿಯ ನಿಜ ಜೀವನದ ಮಹಾಮಸ್ತಕಾಭಿಷೇಕ. ನಂತರ ಅದು ಪರಂಪರೆಯಾಗಿ ನಡೆದುಕೊಂಡುಬಂದಿದೆ ಎಂದು ಪ್ರತೀತಿಯನ್ನು ಪ್ರಸ್ತಾಪಿಸಿದರು. ಭರತ- ಬಾಹುಬಲಿಯ ಆದರ್ಶವನ್ನು ಪರಿಚಯಿಸುವ ಜತೆಗೆ ಆದರ್ಶ ಬಿಂಬಿಸುವ ಕೆಲಸವನ್ನು “ತರಂಗ’ ಮಾಡಿದೆ.
ಇದಕ್ಕಾಗಿ ಮಣಿಪಾಲ್ ಮೀಡಿಯಾ ಸಮೂಹವನ್ನು ಅಭಿನಂದಿಸುತ್ತೇನೆ. ತರಂಗ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ ಪೈ ಅವರು ಆದರ್ಶ ಮಹಿಳೆ. ಸರಳ ಜೀವಿ. ಲೇಖಕಿ, ಸಂಪಾದಕರಾಗಿ ಉತ್ತಮವಾಗಿ ಸಂಸ್ಥೆಯ ಆಡಳಿತ ನಡೆಸುತ್ತಿದ್ದಾರೆ. ಜೈನ ಧರ್ಮವನ್ನು ಜಾಗೃತಗೊಳಿಸುವ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಮಹಿಳೆಯೊಬ್ಬರು ಯಾವುದೇ ಜವಾಬ್ದಾರಿ ನಿರ್ವಹಿಸಬಲ್ಲರು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದರು.
ಹಾಗೆಯೇ ಡಾ.ಯು.ಬಿ.ರಾಜಲಕ್ಷ್ಮೀ ಅವರು ಬಾಹುಬಲಿ ಹಾಗೂ ಜೈನ ಧರ್ಮ ಕುರಿತಂತೆ ಅಧ್ಯಯನ ಮಾದರಿಯಲ್ಲಿ ಹೊಸ ವಿಚಾರಗಳನ್ನು ನಿರೂಪಿಸುತ್ತಿರುವುದು ಉತ್ತಮ ಕಾರ್ಯಎಂದು ಹೇಳಿದರು. ಬಳಗಕ್ಕೆ ಅಭಿನಂದನೆ: ಮಣಿಪಾಲ್ ಮೀಡಿಯಾ ಸಮೂಹದ ತರಂಗ, ಉದಯವಾಣಿ, ತುಷಾರ, ತುಂತುರು ಉತ್ತಮವಾಗಿ ಮೂಡಿಬರುತ್ತಿದ್ದು, ಇಡೀ ಬಳಗದ ಕಾರ್ಯ ಅಭಿನಂದನೀಯ ಎಂದೂ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.