ದುಬೈ ಹಿರಿಮೆಗೆ ಮತ್ತೂಂದು ಎತ್ತರದ ಗರಿ
Team Udayavani, Feb 13, 2018, 8:15 AM IST
ದುಬೈ: ಆಧುನಿಕತೆಯನ್ನು ಹಾದು ಹೊದ್ದು ಮಲಗಿರುವ ದುಬೈ ಜಗತ್ತೇ ನಿಬ್ಬೆರಗಾಗುವಂಥ ವಾಸ್ತು ವಿನ್ಯಾಸದ ಕಟ್ಟಡ ನಿರ್ಮಾಣದಲ್ಲಿ ಎತ್ತಿದ ಕೈ. ಈಗಾಗಲೇ ಬುರ್ಜ್ ಖಲೀಫಾದಂತಹ ಕಟ್ಟಡ ನಿರ್ಮಿಸಿದ ಹಿರಿಮೆ ಹೊಂದಿರುವ ದುಬೈ, ಇದೀಗ ವಿಶ್ವದ ಅತಿ ಎತ್ತರದ ಹೋಟೆಲೊಂದನ್ನೂ ನಿರ್ಮಿಸಿ ಮತ್ತೂಮ್ಮೆ ಜಗತ್ತಿನ ಗಮನ ಸೆಳೆದಿದೆ. ಸೋಮವಾರ ಇದರ ಉದ್ಘಾಟನೆ ನೆರ ವೇರಿದೆ.
ಇದರ ಹೆಸರು “ದ ಜೆವೊರಾ ಹೋಟೆಲ್’. 1167.9 ಅಡಿ ಎತ್ತರದ ಈ ಕಟ್ಟಡದಲ್ಲಿ ಎಪ್ಪತ್ತೈದು ಅಂತಸ್ತುಗಳಿದ್ದು, ಒಟ್ಟು 528 ಐಶಾರಾಮಿ ಕೊಠಡಿ ಗಳಿವೆ. ಕಟ್ಟಡದ ಚಾವಣಿಯಲ್ಲಿ ಸ್ವಿಮ್ಮಿಂಗ್ ಪೂಲ್ ಜತೆಗೆ ಬಾರ್ ಸೌಲಭ್ಯ ವಿದೆ. ಈ ಹೋಟೆಲ್‌ನ ಪ್ರಮುಖ ಬಾಗಿಲುಗಳು, ಕಿಟಕಿಗಳ ಚೌಕಟ್ಟುಗ ಳಿಗೆ ಚಿನ್ನದ ಲೇಪನ ಮಾಡಲಾಗಿದ್ದು, ನೆಲ, ಚಾವಣಿ ಯ ಒಳ ಭಾಗ ದಲ್ಲಿ ಚಿನ್ನದ ಲೇಪನದ ಕುಸುರಿ ಕೆಲಸದ ಚಿತ್ತಾರ ಮಾಡಲಾಗಿದೆ.
ಈವರೆಗೆ ವಿಶ್ವದ ಅತಿ ಎತ್ತರದ ಹೋಟೆಲ್ ಇರುವಂಥ ಕೀರ್ತಿ ಇದ್ದಿದ್ದು ದುಬೈಗೇ. ಇಲ್ಲಿರುವ ಜೆಡಬ್ಲೂé ಮಾರಿಯಟ್ ಹೋಟೆಲ್ ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದರ ಎತ್ತರ 1164.7 ಅಡಿ. ಇದರ ಹತ್ತಿರದಲ್ಲೇ ನಿರ್ಮಾಣವಾಗಿರುವ ಜೆವೊರಾ ಹೋಟೆಲ್ ಇದೀಗ ಜೆ.ಡಬ್ಲೂ ಮಾರಿಯಟ್ ಹೋಟೆಲ್‌ನ ಪ್ರತಿಷ್ಠೆಯನ್ನು ಕಸಿದುಕೊಂಡಿದೆ.
ಇದಲ್ಲದೆ, ವಿಶ್ವದ ಅತಿ ಎತ್ತರದ ನಿರ್ಮಾಣಗಳ ಪಟ್ಟಿಯಲ್ಲಿ ಇದೀಗ ಜೆವೊರಾ, 2ನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ದುಬೈನ ಬುರ್ಜ್ ಖಲೀಫಾ ವಿರಾಜಮಾನವಾಗಿದೆ.
1167.9 ಅಡಿ ಹೋಟೆಲ್‌ನ ಒಟ್ಟು ಎತ್ತರ
100 ಅಡಿ ಐಫೆಲ್‌ಗಿಂತ ಇದರ ಎತ್ತರ
75ಅಂತಸ್ತುಗಳ ಕಟ್ಟಡ
528 ಕೊಠಡಿಗಳ ಸಂಖ್ಯೆ
20000000: 2020ರ ವೇಳೆೆ ಭೇಟಿ ನೀಡುವವರ ನಿರೀಕ್ಷಿತ ಸಂಖ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.