2 ವರ್ಷಗಳಲ್ಲಿ ದೇಶದ ಅರಣ್ಯ ಪ್ರದೇಶ ವ್ಯಾಪ್ತಿ ಹೆಚ್ಚಳ
Team Udayavani, Feb 13, 2018, 8:15 AM IST
ನವದೆಹಲಿ: ಕರ್ನಾಟಕ ಸೇರಿದಂತೆ ದೇಶದಲ್ಲಿನ ಅರಣ್ಯ ಮತ್ತು ಮರಗಳು ಬೆಳೆಯುವ ಪ್ರದೇಶದ ವ್ಯಾಪ್ತಿ ಶೇ.1ರಷ್ಟು ಅಂದರೆ 8,021 ಚದರ ಕಿ.ಮೀ. ಹೆಚ್ಚಳವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ದೇಶದ ಅರಣ್ಯ ಸ್ಥಿತಿ ಬಗ್ಗೆ ಬಿಡುಗಡೆಯಾಗುವ “ಭಾರತದ ಅರಣ್ಯಗಳ ಸ್ಥಿತಿಗತಿ ವರದಿ’ (ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್)ಯಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಡಾ.ಹರ್ಷವರ್ಧನ್ ಮತ್ತು ಸಹಾಯಕ ಸಚಿವ ಡಾ.ಮಹೇಶ್ ಶರ್ಮಾ ಸೋಮವಾರ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಈ ವರದಿಯಂತೆ ಕರ್ನಾಟಕದಲ್ಲಿ 1,101 ಚ.ಕಿ.ಮೀ. ನಷ್ಟು ಅರಣ್ಯ ವ್ಯಾಪ್ತಿ ಹೆಚ್ಚಾಗಿದ್ದು, ರಾಜ್ಯ ಎರಡನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ ಮೊದಲ ಸ್ಥಾನ ಪಡೆದಿದ್ದು, ಇಲ್ಲಿ 2,141 ಚ.ಕಿ.ಮೀ. ಅರಣ್ಯ ಹೆಚ್ಚಳವಾಗಿದೆ. ನಂತರದ ಸ್ಥಾನಗಳಲ್ಲಿ ಕೇರಳ (1,101 ಚ.ಕಿ.ಮೀ), ತೆಲಂಗಾಣ (565 ಚ.ಕಿ.ಮೀ), ಒಡಿಶಾ (885 ಚ.ಕಿ.ಮೀ) ರಾಜ್ಯಗಳಿವೆ. ಈ ವರದಿಯ ಪ್ರಮುಖ ಅಂಶವೆಂದರೆ ನೀರಿನ ಮೂಲಗಳ ಬಗ್ಗೆ ಇದೇ ಮೊದಲ ಬಾರಿಗೆ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ವರದಿಯ ಪ್ರಮುಖ ಅಂಶಗಳು
ಮುಕ್ತ ಅರಣ್ಯ (ಓಪನ್ ಫಾರೆಸ್ಟ್) ಪ್ರದೇಶದ ವ್ಯಾಪ್ತಿಯೂ ವೃದ್ಧಿ. 15 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.33ಕ್ಕಿಂತ ಹೆಚ್ಚಳ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶದಲ್ಲಿರುವ ಅರಣ್ಯ ಪ್ರದೇಶದಲ್ಲಿ ನೀರಿನ ಮೂಲಗಳು ವೃದ್ಧಿ ಬೆಳೆ ಬೆಳೆಯುವ ಪದ್ಧತಿಯಲ್ಲಿ ಅನುಸರಿಸುವ ವಿಧಾನ, ಇತರ ಜೈವಿಕ, ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಅರಣ್ಯ ಭೂಮಿಯಲ್ಲಿ ಪರಿವರ್ತನೆಯಿಂದಾಗಿ ಅರಣ್ಯ ಪ್ರಮಾಣದಲ್ಲಿ ಇಳಿಕೆ ವಿಶ್ವದಲ್ಲಿ ಅರಣ್ಯ ಪ್ರದೇಶ ವಿಸ್ತಾರದಲ್ಲಿ ಭಾರತಕ್ಕೆ ಹತ್ತನೇ ಸ್ಥಾನ.
7,08,273 ಚ.ಕಿ.ಮೀ ದೇಶದಲ್ಲಿರುವ ಒಟ್ಟು ಅರಣ್ಯ ಪ್ರದೇಶ
8,021 ಚ.ಕಿ.ಮೀ ಎರಡು ವರ್ಷಗಳಲ್ಲಿ ಹೆಚ್ಚಾದ ಅರಣ್ಯ ಪ್ರದೇಶ
8,02,088 ಚ.ಕಿ.ಮೀ ಅರಣ್ಯ ಮತ್ತು ಮರಗಳು ಸೇರಿ ಇರುವ ಪ್ರದೇಶ
1% ಹೆಚ್ಚಳವಾಗಿರುವ ಅರಣ್ಯ ಪ್ರದೇಶ
77,414 ಚ.ಕಿ.ಮೀ ಅತ್ಯಂತ ಹೆಚ್ಚು ಅರಣ್ಯ ವಿಸ್ತಾರ- ಮಧ್ಯಪ್ರದೇಶ
6,778 ಚ.ಕಿ.ಮೀ ಅರಣ್ಯ ವಿಸ್ತರಣೆ ಆಗಿರುವ ಪ್ರದೇಶ
66,964 ಚ.ಕಿ.ಮೀ 2ನೇ ಅತ್ಯಂತ ಹೆಚ್ಚು ಅರಣ್ಯ ವಿಸ್ತಾರ- ಅರುಣಾಚಲ
1,243 ಚ.ಕಿ.ಮೀ ಮರಗಳ ವ್ಯಾಪ್ತಿ ಹೆಚ್ಚಾಗಿರುವ ಪ್ರದೇಶ
55,547 ಚ.ಕಿ.ಮೀ 3ನೇ ಅತ್ಯಂತ ಹೆಚ್ಚು ಅರಣ್ಯ ವಿಸ್ತಾರ- ಛತ್ತೀಸ್‌ಗಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ
Delhi: 9 ವರ್ಷಗಳಲ್ಲೇ ಡಿಸೆಂಬರ್ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!
Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್ ಮನವಿ
ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ
Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.