ವ್ಯಾಲೆಂಟೈನ್ ಡೇ ಬದಲು ಮಹಾ ಶಿವರಾತ್ರಿ ಆಚರಿಸಿ: ಲಕ್ನೋ ವಿವಿ
Team Udayavani, Feb 13, 2018, 11:22 AM IST
ಲಕ್ನೋ : ”ಫೆ.14ರ ವ್ಯಾಲೆಂಟೈನ್ ದಿನದಂದು ಯುನಿವರ್ಸಿಟಿನಲ್ಲಿ ಕ್ಯಾಂಪಸ್‌ನಲ್ಲಿ ಯಾರೂ ಅಲೆದಾಡಬಾರದು; ಈ ಆದೇಶವನ್ನು ಪರಿಪಾಲಿಸದವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಲಕ್ನೋ ಯುನಿವರ್ಸಿಟಿ ವಿದ್ಯಾರ್ಥಿಗಳಿಗೆ ಕಟ್ಟಪ್ಪಣೆ ಹೊರಡಿಸಿದೆ.
ವ್ಯಾಲೆಂಟೈನ್ ಡೇ ಆಚರಿಸುವ ಬದಲು ಮಹಾ ಶಿವರಾತ್ರಿಯನ್ನು ಆಚರಿಸಿ ಮತ್ತು ಆ ಮೂಲಕ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ದೂರ ಇರಿ ಎಂದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದೆ.
ಕಳೆದ ಅನೇಕ ವರ್ಷಗಳಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಪ್ರಭಾವಕ್ಕೆ ಗುರಿಯಾಗಿ ಫೆ.14ರಂದು ವ್ಯಾಲೆಂಟೈನ್ ಡೇ ಆಚರಿಸುವುದು ಕಂಡು ಬಂದಿದೆ. ಆದರೆ ಈ ಬಾರಿ ಫೆ.14ರಂದು ಮಹಾ ಶಿವರಾತ್ರಿ ಪ್ರಯುಕ್ತ ರಜೆ ಸಾರಲಾಗಿದ್ದು ವಿವಿ ಬಂದ್ ಇರುತ್ತದೆ. ಹಾಗಾಗಿ ಯಾವುದೇ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಅಲೆದಾಡಕೂಡದು ಮತ್ತು ವ್ಯಾಲೆಂಟೈನ್ ಡೇ ಆಚರಿಸಬಾರದು; ಬದಲಾಗಿ ವಿದ್ಯಾರ್ಥಿಗಳು ಮಹಾ ಶಿವರಾತ್ರಿಯನ್ನು ಅಚರಿಸಬೇಕು ಎಂದು ಯುನಿವರ್ಸಿಟಿ ಹೊರಡಿಸಿರುವ ನೊಟೀಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ಫೆ.14ರ ಬುಧವಾರ ವಿವಿಗೆ ರಜೆ ಇದ್ದು ಕ್ಯಾಂಪಸ್ ಮುಚ್ಚಿರುವುದರಿಂದ ಹೆತ್ತವರು ಯಾರೂ ತಮ್ಮ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೆ ವಿವಿಗೆ ಕಳುಹಿಸಬಾರದು. ಆ ದಿನ ವಿವಿಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಾಗಲೀ ಪರೀಕ್ಷೆ, ತರಗತಿಗಳಾಗಲೀ ಇರುವುದಿಲ್ಲ ಎಂದು ನೊಟೀಸ್ ನಲ್ಲಿ ಹೆತ್ತವರಿಗೂ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.