ರಾಸಲೀಲೆ ಪ್ರಕರಣ ಪೊಲೀಸರ ಬಳಿಗೆ
Team Udayavani, Feb 13, 2018, 12:02 PM IST
ಬೆಂಗಳೂರು: ಹುಣಸಮಾರನಹಳ್ಳಿ ಮದ್ದೇವಣಪುರ ದೇವಸಂಸ್ಥಾನ ಮಠದ ಪೀಠಾಧ್ಯಕ್ಷ ದಯಾನಂದ ಸ್ವಾಮೀಜಿ ನಡೆಸಿದ್ದಾರೆ ಎನ್ನಲಾದ “ರಾಸಲೀಲೆ ಪ್ರಕರಣ’ ಕ್ಕೆ ಮತ್ತೂಂದು ಟ್ವಿಸ್ಟ್ ದೊರೆತಿದೆ.
ರಾಸಲೀಲೆ ವಿಡಿಯೋ ಕುರಿತು ಹುಟ್ಟಿಕೊಂಡ ಅಂತೆ-ಕಂತೆಗಳು, ವಿಡಿಯೋ ಬಿಡುಗಡೆ ಬಳಿಕ ಸ್ವಾಮೀಜಿ ನಾಪತ್ತೆ. ಬಳಿಕ ಮಾಧ್ಯಮಗಳ ಮುಂದೆ ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆಯಲಾಗಿದೆ ಎಂದು ಹಲವರ ವಿರುದ್ಧ ಆರೋಪ, ಈ ಎಲ್ಲಾ ಪ್ರಹಸನಗಳ ಮಧ್ಯೆಯೇ ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸ್ ತನಿಖೆ ಆರಂಭವಾಗಿದೆ.
ನಕಲಿ ರಾಸಲೀಲೆ ವಿಡಿಯೋ ಇಟ್ಟುಕೊಂಡು ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ದಯಾನಂದಸ್ವಾಮೀಜಿ ಏಳುಜನರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ವಿಡಿಯೋ ಭೀತಿಯಿಂದ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದು, ವಿಡಿಯೋಗೆ ಹೆದರಿ 90 ಲಕ್ಷ ರೂ. ಹಣ ಕಳೆದುಕೊಂಡಿರುವ ಸಂಗತಿಯನ್ನು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಈ ದೂರಿನ ಅನ್ವಯ ಸೂರ್ಯ, ಧರ್ಮೆಂದ್ರ, ಸ್ವಾಮೀಜಿಗೆ ಪರಿಚಯಸ್ಥರು ಎನ್ನಲಾದ ಹಿಮಾಚಲಪತಿ, ಮಹೇಶ, ಪ್ರವೀಣ, ಬಸವರಾಜಪ್ಪ, ಶಿವಕುಮಾರ್ ವಿರುದ್ಧ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಹಾಗೂ ವಂಚನೆ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲರ ಬಂಧನಕ್ಕೆ ಬಲೆ ಬೀಸಿದ್ದಾರೆ. ರಾಸಲೀಲೆ ಬಹಿರಂಗಗೊಂಡ ಮೂರು ತಿಂಗಳ ಬಳಿಕ ಪ್ರಕರಣ ಪೊಲೀಸರ ತನಿಖೆ ಅಂಗಳಕ್ಕೆ ಬಂದಿದ್ದು, ಪ್ರಕರಣ ಮತ್ತೂಂದು ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.
5 ಕೋಟಿ ರೂಗಳಿಗೆ ಡಿಮ್ಯಾಂಡ್: 2014ರ ಜನವರಿ 6ರಂದು ಮಠದಿಂದ ಕಾಲೇಜಿನ ಕಡೆ ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದಾಗ ಅಡ್ಡ ಹಾಕಿದ ವ್ಯಕ್ತಿಯೊಬ್ಬ, ತನ್ನ ಹೆಸರು ಸೂರ್ಯ ಎಂದು ಪರಿಚಯಿಸಿಕೊಂಡು ಮಾತನಾಡಲು ಆರಂಭಿದ್ದ. ಬಳಿಕ ಲ್ಯಾಪ್‌ಟಾಪ್ ಹೊರ ತೆಗೆದ ಆತ ಇದರಲ್ಲಿ ನೀವು ಒಬ್ಬ ಯುವತಿಯ ಜೊತೆಯಿರುವ ವಿಡಿಯೋ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿಸುತ್ತೇನೆ.
ಇದನ್ನು ಮಾಡಬಾರದು ಎಂದರೆ 5 ಕೋಟಿ ರೂ. ನೀಡಬೇಕು ಎಂದು ಬೆದರಿಸಿದ. ಈ ವೇಳೆ ನಾನು ಯಾವ ಹುಡುಗಿಯನ್ನೂ ಮೀಟ್ ಮಾಡಿಲ್ಲ, ನಕಲಿ ವಿಡಿಯೋ ಮಾಡಿಕೊಂಡು ಬೆದರಿಸುತ್ತಿದ್ದೀರಿ ಎಂದು ಆರೋಪ ನಿರಕಾರಿಸಿದೆ. ಆದರೆ, ಅಷ್ಟಕ್ಕೆ ಸುಮ್ಮನಾಗದ ಆತ ” ನೀನು ಮಠದ ಸ್ವಾಮೀಜಿ, ಈ ವಿಡಿಯೋ ಬಿಟ್ಟರೆ ಜನ ನಂಬೇ ನಂಬಾ¤ರೆ, ಇದರ ಬಗ್ಗೆ ಮತ್ತಷ್ಟು ಡಿಟೈಲ್ ಬೇಕಾದರೆ ಹಲಸೂರು ಪೊಲೀಸ್ ಠಾಣೆ ಹತ್ತಿರ ಬಾ ಎಂದು ಹೊರಟು ಹೋದ.
ಮಾರನೇ ದಿನ ಧರ್ಮೇಂದ್ರ ಎಂಬುವವನು ಪುನ: 5 ಕೋಟಿ.ರೂಗಳಿಗೆ ಡಿಮ್ಯಾಂಡ್ ಮಾಡಿದ. ನಾನು ಆರಂಭದಲ್ಲಿ ಮೂರರಿಂದ ನಾಲ್ಕು ಲಕ್ಷ ನೀಡಲು ಒಪ್ಪಿದರೂ ಮಠದ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ 45 ಲಕ್ಷ ರೂ. ಕೊಡಲು ಒಪ್ಪಿಕೊಂಡಿದ್ದೆ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಬ್ಲಾಕ್ ಮೇಲ್ ಮಾಡಿ ಹಂತ ಹಂತವಾಗಿ 90 ಲಕ್ಷ ಪಡೆದುಕೊಂಡಿದ್ದಾರೆ ಎಂದಿದ್ದಾರೆ.
ವಿಷಪ್ರಾಶನ!: ಡಿಮ್ಯಾಂಡ್ ಮಾಡಿದಾಗ ಹಣ ನೀಡಲು ಸಾಧ್ಯವಾಗದೇ ಸಾಯುವ ನಿರ್ಧಾರ ಮಾಡಿದ್ದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೆ. ಇದನ್ನು ನೋಡಿಕೊಂಡಿದ್ದ ಮಲ್ಲಿಕಾರ್ಜುನಯ್ಯ ಅವರು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಬೆದರಿಕೆ..: ಇದಾದ ಬಳಿಕ ಆರೋಪಿಗಳು ಮಠಕ್ಕೆ ಸೇರಿದ ಸರ್ವೆ ನಂಬರ್ 184ರಲ್ಲಿನ 9.5 ಎಕರೆ ಆಸ್ತಿಯನ್ನು ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಈ ವಿಚಾರ ತಿಳಿದ ಕೂಡಲೇ ನಾನು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಂಡೆ.
ಇದಾದ ಬಳಿಕ ಮತ್ತೋರ್ವ ಆರೋಪಿ ಮಹೇಶ್, 2017ರ ಅ. 10ರಂದು ಮಠದ ಕಾಲೇಜಿನ ಬಳಿ ಬಂದು ನಕಲಿ ವಿಡಿಯೋ ಇದೆ ಎಂದು ಬೆದರಿಸಿ 4 ಎಕರೆ ಜಮೀನು ಸುಬ್ಬಮ್ಮ ಎಂಬುವವರ ಹೆಸರಿಗೆ ವರ್ಗಾಯಿಸು, ಇಲ್ಲವೇ 2 ಕೋಟಿ ನೀಡು ಎಂದು ಬೆದರಿಕೆ ಹಾಕಿದ. ಈ ವಿಚಾರ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ನಾಲ್ವರು ಆರೋಪಿಗಳು ಹೆದರಿಸಿದ್ದಾರೆ ಎಂದು ಸ್ವಾಮೀಜಿ ದೂರಿನಲ್ಲಿ ಆರೋಪಿಸಿದ್ದಾರೆ.
* ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.