ಬಾಂಬ್ ಸ್ಫೋಟ:ಯೋಧ ಹುತಾತ್ಮ
Team Udayavani, Feb 14, 2018, 8:23 AM IST
ಹರಿಹರ: ರಾಜಸ್ಥಾನದ ಪೋಖಾನ್ ಸಮೀಪ ಸೇನಾ ತರಬೇತಿ ಶಿಬಿರದಲ್ಲಿ ಅಭ್ಯಾಸ ನಿರತರಾಗಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಬಾಂಬ್ ಸ್ಫೋಟದಲ್ಲಿ ಹರಿಹರದ ಯೋಧ ಅಬ್ದುಲ್ ಜಾವಿದ್ (32) ಮೃತಪಟ್ಟಿದ್ದಾರೆ. ನಗರದ ದಾವಣಗೆರೆ ರಸ್ತೆ ಲಾಲ್‌ಬೇಗ್‌ಸಾಬ್ ಬಿಲ್ಡಿಂಗ್ ಸಮೀಪದ ಗುಜರಿ ವ್ಯಾಪಾರಿ ಅಬ್ದುಲ್ ಖಾದರ್, ಫಾತಿಮಾ ಬಿ ದಂಪತಿಯ ಐವರು ಮಕ್ಕಳಲ್ಲಿ 2ನೇಯವರಾದ ಅಬ್ದುಲ್ ಜಾವಿದ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಬೆಂಗಳೂರು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನ 14ನೇ ಇಂಜಿನಿಯರ್ ರೆಜಿಮೆಂಟ್‌ನಲ್ಲಿ ನಾಯಕ್ ಆಗಿದ್ದ ಜಾವಿದ್ ಇತ್ತೀಚೆಗಷ್ಟೇ ವಿಶೇಷ ತರಬೇತಿ ಗೆಂದು ರಾಜಸ್ಥಾನದ ಪೋಖಾನ್‌ಗೆ ತೆರಳಿದ್ದರು. ಸೇನೆಯ ಅಧಿಕಾರಿಗಳು ಸೋಮವಾರ ರಾತ್ರಿ ಕುಟುಂಬದವರಿಗೆ ಕರೆ ಮಾಡಿ ಬಾಂಬ್ ಸ್ಫೋಟದಲ್ಲಿ ಜಾವಿದ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಇವರ ಪಾರ್ಥಿವ ಶರೀರ
ಜೋಧಪುರದ ಮಿಲಿಟರಿ ಆಸ್ಪತ್ರೆಯಿಂದ ವಿಮಾನದ ಮೂಲಕ ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಬರಲಿದ್ದು, ರಾತ್ರಿ ವೇಳೆಗೆ ಹರಿ
ಹರಕ್ಕೆ ತಲುಪುವ ನಿರೀಕ್ಷೆಯಿದೆ. ಗುರುವಾರ ಅಂತಿಮ ಸಂಸ್ಕಾರ ನಡೆಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan: ದರ್ಶನ್ ಜಾಮೀನು ರದ್ದತಿಗೆ ಸುಪ್ರೀಂ ಮೊರೆ ಹೋಗಲು ಸಿದ್ಧತೆ
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Session: ವಕ್ಫ್ ಜೊತೆ ಬಿಪಿಎಲ್ ಹೋರಾಟಕ್ಕೆ ಬಿಜೆಪಿ ಸಜ್ಜು
Operation Fear: ಕಾಂಗ್ರೆಸ್ ಶಾಸಕರ ಮೇಲೆ ನಿಗಾ ವಹಿಸಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.