ಒಎನ್ಜಿಸಿ ನೌಕೆ ಸ್ಫೋಟ: ಐವರ ಸಾವು
Team Udayavani, Feb 14, 2018, 9:41 AM IST
ಕೊಚ್ಚಿ/ಹೊಸದಿಲ್ಲಿ: ಕೇರಳದ ಕೊಚ್ಚಿಯ ಹಡಗು ನಿರ್ಮಾಣ ಕಟ್ಟೆಯಲ್ಲಿ ಭಾರತೀಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ)ಕ್ಕೆ ಸೇರಿದ ನೌಕೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಐವರು ಅಸುನೀಗಿ, ಮೂವರು ಗಾಯಗೊಂಡಿದ್ದಾರೆ. ಅಸುನೀಗಿದವರು ಗುತ್ತಿಗೆ ಕಾರ್ಮಿಕ ರಾಗಿದ್ದಾರೆ. ಗಾಯಗೊಂಡ ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿದ್ದು, ಈ ಪೈಕಿ ಶೇ.40ರಷ್ಟು ಸುಟ್ಟ ಗಾಯ ಗಳಾಗಿರುವ ಒಬ್ಬನ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ತನಿಖೆಗೆ ಕೇಂದ್ರ ನೌಕಾಯಾನ ಸಚಿವ ನಿತಿನ್ ಗಡ್ಕರಿ ಆದೇಶಿಸಿದ್ದಾರೆ.
ಸಾಗರ ಭೂಷಣ ನೌಕೆಯಲ್ಲಿ ಮಂಗಳವಾರ ಬೆಳಗ್ಗೆ 9.15ಕ್ಕೆ ಈ ಘಟನೆ ನಡೆದಿದ್ದು, ನಿಗಮದ ಯಾವುದೇ ಸಿಬಂದಿಗೆ ಅಪಾಯವಾಗಿಲ್ಲ. 2017ರ ಡಿ.7ರಿಂದ ನೌಕೆ ಹಡಗು ಕಟ್ಟೆಯಲ್ಲಿ ಲಂಗರು ಹಾಕಿತ್ತು. ನೌಕೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಯಾವ ಕಾರಣದಿಂದಾಗಿ ಸ್ಫೋಟ ಸಂಭ ವಿಸಿದೆ ಎನ್ನುವುದು ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಒಎನ್ಜಿಸಿ ತಿಳಿಸಿದೆ. ಘಟನೆ ನಡೆದಾಗ 11 ಮಂದಿ ಅಲ್ಲಿ ಸಿಲುಕಿ ಕೊಂಡಿದ್ದು, ನಂತರ ಅವರನ್ನು ರಕ್ಷಿಸಲಾ ಯಿತು ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಎಂ.ಪಿ.ದಿನೇಶ್ ಮಾಹಿತಿ ನೀಡಿದ್ದಾರೆ.
ನೀರಿನ ಟ್ಯಾಂಕ್ನಲ್ಲಿ ಸ್ಫೋಟ?: ದುರಸ್ತಿಯಲ್ಲಿರುವ ನೌಕೆಯ ಎದುರು ಭಾಗದಲ್ಲಿರುವ ನೀರಿನ ಟ್ಯಾಂಕ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಫೋಟದಿಂದಾಗಿ ಹೊರಸೂಸಲ್ಪಟ್ಟ ಹೊಗೆ ದೇಹದ ಒಳಕ್ಕೆ ಸೇರಿ ಸಾವು ಉಂಟಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ತನಿಖೆಗೆ ಗಡ್ಕರಿ ಆದೇಶ: ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸಚಿವ ಗಡ್ಕರಿ ತನಿಖೆಗೆ ಆದೇಶಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.