ವಧು ಪರೀಕ್ಷೆ, ಇದ್ದಿದ್ದೊಂದು ರಜೇನೂ ಹೋಯ್ತಲ್ಲೇ…
Team Udayavani, Feb 14, 2018, 11:55 AM IST
“ಸ್ವಾತಿ, ಇವತ್ತಿನ ಶಾಪಿಂಗ್ ಪ್ಲಾನ್ ಕ್ಯಾನ್ಸಲ್ ಕಣೆ, ಹುಡುಗನ ಮನೆಯವರು ಬರ್ತಿದ್ದಾರೆ ನನ್ನ ನೋಡೋಕೆ’ ಎಂದು ಒಂದೇ ಉಸಿರಿನಲ್ಲಿ ಹೇಳಿ, ವಾರ್ಡ್‌ರೋಬಿನ ಬಾಗಿಲು ತೆಗೆದು ಬಟ್ಟೆ ಹುಡುಕಲು ತೊಡಗಿದಳು ಗೆಳತಿ ನಮ್ರತಾ. “ಅಲ್ವೇ , ರಜೆ ಇಲ್ಲಾ ಅಂತಿದ್ದೆ. ಈಗ ಹುಡುಗನ್ನ ನೋಡೋಕೋಸ್ಕರ ಊರಿಗೆ ಹೋಗ್ತಿದೀಯ?’ ಎಂದೆ ಕುತೂಹಲದಿಂದ. ಅದಕ್ಕೆ ಅವಳು, “ಹುಡುಗ ಬೆಂಗಳೂರಿನÇÉೇ ಕೆಲಸದಲ್ಲಿದ್ದಾನಂತೆ. ಅವನಿಗೂ ರಜೆ ಸಿಗೋದು ಕಷ್ಟ, ನನಗೂ ರಜೆ ಇಲ್ಲ. ಹಾಗಾಗಿ ಇÇÉೇ ನಮ್ಮ ಚಿಕ್ಕಪ್ಪನ ಮನೆಗೇ ಇವತ್ತು ಬರೋಕೆ ಹೇಳಿದಾರೆ’ ಎಂದಳು.
ವಧು ಪರೀಕ್ಷೆ ಅಂದರೆ ಸೀರೆ ಉಟ್ಕೊàಬೇಕು, ತಾನೇ ಕೈಯಾರೆ ಕಾಫಿ- ಉಪ್ಪಿಟ್ಟು ಮಾಡಿಕೊಡಬೇಕು ಅಂತೆಲ್ಲಾ ಅಂದುಕೊಂಡಿದ್ದ ನಾನು, “ನಮ್ರತಾ ಸೀರೆ ಇದ್ಯಾ ನಿನ್ನ ಹತ್ರ?’ ಎಂದೆ. “ನಿಂದೊಳ್ಳೆ ಕತೆ. ಈಗೆಲ್ಲಾ ಯಾವ ಹುಡುಗಿ ಸೀರೆ ಉಟ್ಟು, ಮಲ್ಲಿಗೆ ಮುಡಿದು, ಉಗುರಿಂದ ನೆಲ ಗೀರುತ್ತಾ ಹುಡುಗನ ಮುಂದೆ ನಾಚಿ ನಿಲ್ತಾಳೆ ಹೇಳು. ನಾನಂತೂ ಚೂಡಿ ಹಾಕ್ಕೋತೀನಿ’ ಅಂದು ತನ್ನಿಷ್ಟದ ಕಡುನೀಲಿ ಚೂಡಿದಾರ್ ತೊಟ್ಟು, ಬಿಂದಾಸ್ ಆಗಿ ಚಿಕ್ಕಮ್ಮನ ಮನೆಗೆ ಹೊರಟಳು.
ನಾನು ತುಂಬಾ ಕುತೂಹಲದಿಂದ ಸಂಜೆ ಅವಳು ಬರುವುದನ್ನೇ ಕಾಯುತ್ತಿದ್ದೆ. ಸಂಜೆ ಸುಸ್ತಾಗಿ ವಾಪಸಾದ ನಮ್ರತಾಳನ್ನು, “ಏನಾಯೆ¤à ಹುಡುಗ ಒಪ್ಪಿದನಾ?’ ಕೇಳಿದೆ. ಅದಕ್ಕೆ ಅವಳು, “ಹುಡುಗನೂ ಒಪ್ಪಿದ, ಅವರ ಮನೆಯವರೂ ಒಪ್ಪಿಕೊಂಡ್ರು. ನಾನೇ ಬೇಡ ಅಂದೆ. ಅವರ ಅಮ್ಮನಿಗೆ ದುಡ್ಡಿನಾಸೆ ಜಾಸ್ತಿ. ಮದುವೇನ ಜೋರಾಗೇ ಮಾಡಿಕೊಡಬೇಕಂತೆ. ಹುಡುಗಿಗೆ ಮೈತುಂಬಾ ಬಂಗಾರದ ಜೊತೆಗೆ ಒಂದು ಸೈಟ್ ಕೊಟ್ಟರೆ ಸಾಕಂತೆ! ಇದು ವರದಕ್ಷಿಣೆ ಅಲ್ಲ, ಮುಂದೆ ನಿಮ್ಮ ಮಗಳ ಜೀವನ ಸುಖವಾಗಿರಬೇಕಲ್ಲ, ಅದಕ್ಕೆ… ಅನ್ನೋ ಮಾತು ಬೇರೆ. ಅದಕ್ಕೆ ನಾನೇ ಈ ಸಂಬಂಧ ಬೇಡ ಅಂದೆ. ಈಗಲೇ ಇಷ್ಟೊಂದು ಒರಟಾಗಿ ಮಾತಾಡೋ ಹುಡುಗಿ ನಮಗೂ ಬೇಡ ಅಂತ ಅವರೂ ಹೊರಟರು’ ಅಂದಳು.
ಅವಳ ಬಾಡಿದ ಮುಖ ನೋಡಿ, ಪಾಪ, ಸಂಬಂಧ ಕುದುರಿಲ್ಲ ಅನ್ನೋ ಬೇಜಾರಿರಬೇಕು ಅಂದುಕೊಂಡು, “ಯಾಕೇ ಬೇಜಾರಾಗ್ತಿದೆಯಾ ಕೇಳಿದೆ?’ ಅದಕ್ಕವಳು ಅಳು ಮುಖ ಮಾಡಿ, “ಹೂಂ, ಕಣೇ. ಇದ್ದಿದ್ದೊಂದು ರಜೇನೂ ಹೋಯ್ತಲ್ಲೇ. ನೀನು ನೋಡು, ನನ್ನ ಬಿಟ್ಟು ಎಷ್ಟೊಂದೆಲ್ಲಾ ಶಾಪಿಂಗ್ ಮಾಡ್ಕೊಂಡು ಬಂದಿದ್ದೀಯ’ ಎಂದಳು. ಇಬ್ಬರೂ ಜೋರಾಗಿ ನಕ್ಕೆವು.
(ವಧುಪರೀಕ್ಷೆ ಅನ್ನೋದು ಪ್ರತಿ ಹೆಣ್ಣಿನ ಬದುಕಿನಲ್ಲಿ ಸದಾ ಕಾಡುವ ದೃಶ್ಯಾವಳಿ. ಅಂಥ ಅನುಭವಗಳು ನಿಮ್ಮ ಬದುಕಿನಲ್ಲೂ ಆಗಿದ್ದರೆ, ಅದರ ಕತೆಯನ್ನು 80- 100 ಪದಗಳ ಮಿತಿಯಲ್ಲಿ ಸ್ವಾರಸ್ಯವಾಗಿ ಬರೆದು, ನಮಗೆ ಕಳುಹಿಸಿ. ಇಮೇಲ್: [email protected])
– ಸ್ವಾತಿ ಕೆ.ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.