ಎಟಿಎಂ ಹಣ ಕಳುವಿಗೆಯತ್ನಿಸಿದವನ ಬಂಧನ
Team Udayavani, Feb 14, 2018, 12:38 PM IST
ಬೆಂಗಳೂರು: ಎಟಿಎಂ ಕೇಂದ್ರದಲ್ಲಿ ಹಣ ದೋಚಲು ಯತ್ನಿಸಿದ್ದ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಠಾಣೆಯ ಹೊಯ್ಸಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಟ್ಟಿಗೆಪಾಳ್ಯ ನಿವಾಸಿ ಹರೀಶ್(35) ಬಂಧಿತ. ಆರೋಪಿ ಮಂಗಳವಾರ ನಸುಕಿನಲ್ಲಿ ಕೊಟ್ಟಿಗೆಪಾಳ್ಯದ ಆಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರವೊಂದಲ್ಲಿ ಕೃತ್ಯವೆಸಗುವಾಗ ಗಸ್ತಿನಲ್ಲಿದ್ದ ಎಎಸ್‌ಐ ರಾಜಣ್ಮ ಮತ್ತು ಪೇದೆ ಬೆಳ್ಳಿಯಪ್ಪ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಉತ್ತರಾಂಚಲ್ ಮೂಲದ ಹರೀಶ್ 10 ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ಕೊಟ್ಟಿಗೆಪಾಳ್ಯದಲ್ಲಿ ನೆಲೆಸಿ ದ್ದಾನೆ. ಸುಂಕದಕಟ್ಟೆ ಯಲ್ಲಿನ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕಟ್ಟಡಗಳಿಗೆ ಗ್ರಿಲ್ ಹಾಕುವುದು ಮತ್ತು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾನೆ.
ಸಂಚು: ಎರಡು ದಿನಗಳ ಹಿಂದೆ ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣ ಬಳಿಯ ಆಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಹಣ ತುಂಬುತ್ತಿರುವುದನ್ನು ಆರೋಪಿ ಗಮನಿಸಿದ್ದಾನೆ. ಮಂಗಳವಾರ ನಸುಕಿನ 3.30ರ ಸುಮಾರಿಗೆ ಎಟಿಎಂ ಕೇಂದ್ರಕ್ಕೆ ನುಗ್ಗಿದ ಹರೀಶ್, ಕೇಂದ್ರ ಬಾಗಿಲನ್ನು ಅರ್ಧಕ್ಕೆ ಎಳೆದುಕೊಂಡು ಸೂðಡ್ರೈವರ್, ಕಬ್ಬಿಣದ ಸರಳು ಮತ್ತು ಡ್ರಿಲ್ಲಿಂಗ್ ಮೆಷಿನ್ ಬಳಸಿ ಎಟಿಎಂ ಯಂತ್ರವನ್ನು ಬಿಚ್ಚಲು ಯತ್ನಿಸಿದ್ದಾನೆ.
ಇದೇ ವೇಳೆ ಕಾಮಾಕ್ಷಿಪಾಳ್ಯ ಠಾಣೆ ಎಎಸ್‌ಐ ರಾಜಣ್ಣ ಮತ್ತು ಪೇದೆ ಬೆಳ್ಳಿ ಯಪ್ಪ ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುತ್ತಿದ್ದರು. ಅರ್ಧಕ್ಕೆ ಬಾಗಿಲು ಮುಚ್ಚಿದ್ದು, ಎಟಿಎಂ ಕೇಂದ್ರದಲ್ಲಿ ಶಬ್ಧ ಉಂಟಾಗಿದೆ. ಇದರಿಂದ ಅನುಮಾನ ಗೊಂಡ ಸಿಬ್ಬಂದಿ ಕೂಡಲೇ ಎಟಿಎಂ
ಕೇಂದ್ರ ಪೂರ್ಣ ಬಾಗಿಲು ತೆರೆದಾಗ ಎಟಿಎಂ ಯಂತ್ರ ಬಿಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆರೋಪಿಯನ್ನು
ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಹರೀಶ್ ಸುಂಕದಕಟ್ಟೆಯಲ್ಲಿ ಬಾಡಿಗೆ ರೂಂನಲ್ಲಿ ಸ್ನೇಹಿತರೊಂದಿಗೆ ವಾಸಿ ಸುತ್ತಿದ್ದು, ಕೃತ್ಯದ ಬಗ್ಗೆ ಸ್ನೇಹಿತರಿಗೆ ಮಾಹಿತಿ ಇಲ್ಲ. ಆರೋಪಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಡ್ರಿಲ್ಲಿಂಗ್ ಮೆಷಿನ್‌ನನ್ನು ಸೋಮವಾರ ಮನೆಗೆ ತೆಗೆದುಕೊಂಡು ಹೋಗಿದ್ದ.
ಮಂಗಳವಾರ ಹಣ ದೋಚಲು ಇದೇ ಯಂತ್ರ ಬಳಸಿದ್ದಾನೆ. ಆದರೆ, ಎಟಿಎಂ ಯಂತ್ರದ ಬಿಡಿ ಭಾಗಗಳನ್ನು ತೆಗೆದರೂ ಅದರಲ್ಲಿ ರುವ ಹಣ ದೋಚಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.