ವಿಶ್ವಬಂಟರ ಸಮ್ಮಿಲನ-2018:  ಪೂರ್ವಭಾವಿ ದ್ವಿತೀಯ ಸಭೆ

Team Udayavani, Feb 14, 2018, 5:03 PM IST

1302mum12.jpg

ಮುಂಬಯಿ: ವಿಶ್ವ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಫೆ. 24ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಲಿರುವ ಒಂದು ದಿನದ ಅದ್ದೂರಿ ಕಾರ್ಯಕ್ರಮ ವಿಶ್ವ ಬಂಟ ಸಮ್ಮಿಲನ-2018 ಆಯೋಜನೆಯ ಬಗ್ಗೆ ದ್ವಿತೀಯ ಪೂರ್ವಭಾವಿ ಸಭೆಯು ಫೆ. 12ರಂದು ಸಂಜೆ ಬಂಟರ ಭವನದಲ್ಲಿ ಜರಗಿತು.

ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಉಪಸ್ಥಿತಿಯಲ್ಲಿ ಜರಗಿದ ಸಭೆಯಲ್ಲಿ ವಿಶ್ವ ಬಂಟರ ಸಮ್ಮಿಲನ -2018 ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿಚಾರ-ವಿನಿಮಯ ನಡೆಯಿತು.

ಈ ಸಂದರ್ಭದಲ್ಲಿ ಐಕಳ ಹರೀಶ್‌ ಶೆಟ್ಟಿ ಅವರು ಮಾತನಾಡಿ, ಬಂಟರ ಭವನದಲ್ಲಿ ಆಯೋಜಿಸಲ್ಪಡುವ ಯಾವುದೇ ಕಾರ್ಯಕ್ರಮಗಳು ಸಂಪೂರ್ಣ ಯಶಸ್ಸಿಗೆ  ಪಾತ್ರವಾಗುತ್ತದೆ ಎಂಬುವುದಕ್ಕೆ ಈ ಹಿಂದಿನಿಂದ ನಡೆದು ಬಂದ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ. ಫೆ. 24 ರಂದು ಜರಗಲಿರುವ ವಿಶ್ವ ಬಂಟರ ಸಮ್ಮಿಲನ-2018 ಬಂಟರ ಭವನದಲ್ಲೇ ಸಂಭ್ರಮಿಸಲಿರುವುದರಿಂದ ಇದರ ಕೀರ್ತಿ ಬಂಟರ ಸಂಘಕ್ಕೆ ಸಲ್ಲುತ್ತದೆ. ನಾನಿಂದು ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷನಾಗಿದ್ದರೂ ಬಂಟರ ಸಂಘದ ಮೇಲಿರುವ ಪ್ರೀತಿ, ಮುಂಬಯಿ ಬಂಟರ ಸಮುದಾಯದ ಬಗ್ಗೆ ನನಗಿರುವ ಗೌರವ, ವಿಶ್ವಾಸ ಎಂದೂ ಕಡಿಮೆಯಾಗದು. ಮುಂದಿನ ದಿನಗಳಲ್ಲಿ ವಿಶ್ವದ ಎಲ್ಲಾ ಬಂಟ ಸಂಘ-ಸಂಸ್ಥೆಗಳ ಬಗ್ಗೆ ಒಕ್ಕೂಟವು ಗಮನ ಹರಿಸಬೇಕಾಗಿರುವುದರಿಂದ ಎಲ್ಲಾ ಬಂಟ ಸಂಘಟನೆಗಳನ್ನು, ಬಂಟರನ್ನು ಸಮಾನ ದೃಷ್ಟಿಯಿಂದ ಕಾಣುವ ಜವಾಬ್ದಾರಿ ನನ್ನ ಮೇಲಿದೆ. ಹಾಗಾಗಿ ಯಾರೇ ಆಗಲಿ ಈ ಬಗ್ಗೆ ರಾಜಕೀಯ ತರಲು ಪ್ರಯತ್ನಿಸಿದರೆ ಅದನ್ನು ನಾನು ಸಹಿಸುವುದಿಲ್ಲ. ಮುಂಬಯಿಯಲ್ಲಿ ಆಯೋಜನೆಗೊಳ್ಳುತ್ತಿರುವ ವಿಶ್ವ ಬಂಟರ ಸಮ್ಮಿಲನ ಒಂದು ಐತಿಹಾಸಿಕ ದಾಖಲೆಯಾಗಲಿ, ಈ ಮೂಲಕ ಹೊರನಾಡು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ಬಂಟರಿಗೆ, ಬಂಟ ಕುಟುಂಬಗಳಿಗೆ ಹೆಚ್ಚಿನ ಸಹಾಯ ಸಿಗಲು ಬಂಟ ಬಾಂಧವರೆಲ್ಲರೂ ಪ್ರೋತ್ಸಾಹಿಸುತ್ತಾರೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಮಾತನಾಡಿ, ವಿಶ್ವಬಂಟ ಸಮ್ಮಿಲನ-2018 ಬಂಟರ ಭವನದಲ್ಲಿ ಜರಗುತ್ತಿರುವುದು ಮುಂಬಯಿ ಬಂಟರೆಲ್ಲರಿಗೂ ಅಭಿಮಾನದ ವಿಷಯವಾಗಿದೆ. ಸಮ್ಮೇಳನದ ಯಶಸ್ಸಿನ ಕೀರ್ತಿ ಕೇವಲ ಐಕಳ ಹರೀಶ್‌ ಶೆಟ್ಟಿ ಅವರಿಗೆ ಮಾತ್ರವಲ್ಲ ನಮ್ಮೆಲ್ಲರಿಗೂ ಸಲ್ಲುತ್ತದೆ. ಅದಕ್ಕಾಗಿ ನಾವೆಲ್ಲರೂ ಸರ್ವ ಸಿದ್ಧತೆಯಿಂದಿರೋಣ. ವಿಶ್ವದ ಬಂಟ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಬಂಟರ ಭವನಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿರುವ ಶಿಸ್ತು, ಸಂಯಮಗಳನ್ನು ಕಾಪಾಡೋಣ. ಅತಿಥಿ-ಗಣ್ಯರನ್ನು ಆದರದಿಂದ ಸ್ವಾಗತಿಸಿ, ಗೌರವಿಸೋಣ. ಅತಿಥಿ ಸತ್ಕಾರದ ಬಗ್ಗೆ ಹೆಚ್ಚಿನ ಗಮನ ನಿಡೋಣ ಎಂದು ನುಡಿದು ಸಮಾವೇಶದ ಯಶಸ್ಸಿಗೆ ಒಂದಾಗಿ ಸಹಕರಿಸೋಣ ಎಂದು ನುಡಿದರು. ಇದೇ ಸಂದರ್ಭದಲ್ಲಿ ವಿಶ್ವ ಬಂಟ ಸಮ್ಮೇಳನ-2018 ಆಮಂತ್ರಣ ಪತ್ರವನ್ನು ಪದ್ಮನಾಭ ಎಸ್‌. ಪಯ್ಯಡೆ ಲೋಕಾರ್ಪಣೆಗೊಳಿಸಿದರು.

ಬಂಟರ ಸಂಘದ ವಿಶ್ವಸ್ತ, ವಿಶ್ವ ಬಂಟ ಸಮ್ಮಿಲನದ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಸುಮಾರು 8 ವರ್ಷಗಳಷ್ಟು ಕಾಲ ಸ್ಥಗಿತಗೊಂಡಿದ್ದ ವಿಶ್ವಬಂಟರ ಸಂಘಗಳ ಒಕ್ಕೂಟವಿಂದು ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಆಯ್ಕೆಯಿಂದ ಪುನಃಶ್ಚೇತನಗೊಂಡು ಈಗಾಗಲೇ 3 ಸಭೆಗಳನ್ನು ಪೂರೈಸಿ ಕಾರ್ಯಗತಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಬಂಟ ಸಮಾಜದ ಅದೆಷ್ಟೋ ಹೆಣ್ಮಕ್ಕಳು  ವಿವಾಹವಾಗದೆ ಉಳಿದಿರುವುದು ಬಂಟರಾದ ನಮಗೆಲ್ಲರಿಗೂ ತರುವಂತಹ ವಿಚಾರವಾಗಿದೆ. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರ ಇಂತಹ ಸೇವಾ ಕಾರ್ಯದ ಚಿಂತನೆಗೆ ನಾವೆಲ್ಲರೂ ಸಹಕಾರ ನೀಡೋಣ ಎಂದು ನುಡಿದು ಶುಭಹಾರೈಸಿದರು.

ಕಾರ್ಯಕ್ರಮದ ಸಂಚಾಲಕ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರು ಮಾತನಾಡಿ, ಐಕಳ ಐಕ್ಯತಾ ಸೌಹಾದ‌ìತೆಗೆ ಪೂರಕವಾಗಲಿ. ಸಮಾಜದಲ್ಲಿ ತೀರಾ ಕೆಳಮಟ್ಟದಲ್ಲಿರುವ ಬಂಟ ಕುಟುಂಬಗಳಿಗೆ ಈ ಮೂಲಕ ಹೊಸ ಬದುಕು ಕಟ್ಟಲು ಸ್ಫೂ³ರ್ತಿ ತುಂಬಲೆಂದು ಆಶಿಸಿದರು. ಕಾರ್ಯಕ್ರಮದ ಸಮಿತಿ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ  ಮಾತನಾಡಿ, ಇದೊಂದು ಬಹುದೊಡ್ಡ ಸಾಧನೆ. ಸಮ್ಮಿಲನವು  ಯಶಸ್ಸು ಕಾಣಲೆಂದು  ಶುಭಹಾರೈಸಿದರು.

ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರು ನೇತೃತ್ವ ವಹಿಸುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿರುವುದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಅವರದ್ದು ಬಹುದೊಡ್ಡ ವ್ಯಕ್ತಿತ್ವ. ಸಂಘವು ಸದಾ ಅವರ ಬೆಂಗಾವಲಾಗಿ ನಿಲ್ಲುತ್ತದೆ ಎಂದು ಆಶ್ವಾಸನೆ ನೀಡಿದರು.

ಬಂಟರ ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ ಮಾತನಾಡಿ, ವಿಶ್ವ ಬಂಟರ ಸಂಘಗಳ ಒಕ್ಕೂಟದ ಜೀರ್ಣೋದ್ಧಾರವಾದ ಬಳಿಕ ಮೊದಲನೇ ಉತ್ಸವಕ್ಕಾಗಿ ಕಾತರಬಿದ್ದಿದ್ದೇವೆ. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಸಮ್ಮಿಲನದ ಮೂಲಕ ಬಂಟರ ಸಂಘಕ್ಕೆ ದೊಡ್ಡ ಕಿರೀಟ ತೊಡಿಸಿದ್ದಾರೆ ಎಂದರು.
ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮಾತನಾಡಿ, ಐಕಳರ ಪರಿಶ್ರಮಕ್ಕೆ ಈ ಎನೆಕ್ಸ್‌ ಸಂಕೀರ್ಣವೇ ಸಾಕ್ಷಿಯಾಗಿದೆ. ಅವರು ಹೇಳಿದ್ದನ್ನು ಮಾಡಿ ತೋರಿಸುವ ವಿಶಿಷ್ಟ ಗುಣ ಹೊಂದಿರುವುದರಿಂದ ಒಕ್ಕೂಟವನ್ನು ವಿಶ್ವ ಮಟ್ಟಕೇರಿಸುವರೆಂಬ ವಿಶ್ವಾಸವಿದೆ ಎಂದು ನುಡಿದು, ಮಹಿಳಾ ವಿಭಾಗದ ಸರ್ವರ ಸಹಕಾರದ ಭರವಸೆ ನೀಡಿದರು. ಸಂಘದ ಜೊತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ ಎಲ್ಲರು ಒಕ್ಕೂಟದ ಕಾರ್ಯಯೋಜನೆಯಲ್ಲಿ ಭಾಗಿಯಾಗಬೇಕು ಎಂದು ವಿನಂತಿಸಿದರು.

ಸಭಿಕರಲ್ಲಿ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ರಾಘು ಪಿ. ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಡಾ| ಆರ್‌. ಕೆ. ಶೆಟ್ಟಿ, ಜಗದೀಶ್‌ ಶೆಟ್ಟಿ ನಂದಿಕೂರು, ಸತೀಶ್‌ ಶೆಟ್ಟಿ, ಜಯಂತ್‌ ಪಕ್ಕಳ, ಸಿಎ ವಿಶ್ವನಾಥ್‌ ಶೆಟ್ಟಿ, ದಿವಾಕರ ಶೆಟ್ಟಿ ಇಂದ್ರಾಳಿ, ಗಿರೀಶ್‌ ಶೆಟ್ಟಿ ತೆಳ್ಳಾರ್‌, ಹರೀಶ್‌ ವಾಸು ಶೆಟ್ಟಿ, ವಿಜಯಕುಮಾರ್‌ ಶೆಟ್ಟಿ ಅವರು ಕೆಲವೊಂದು ಸಲಹೆ-ಸೂಚನೆಗಳನ್ನು ನೀಡಿದರು. ಸಮ್ಮಿಲನದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ ಅವರು ಉಪಸ್ಥಿತರಿದ್ದರು. ವಿಜಯ್‌ ಕುಮಾರ್‌ ಶೆಟ್ಟಿ ವಂದಿಸಿದರು. 

 ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು

ಟಾಪ್ ನ್ಯೂಸ್

Modi-Tour

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

BK-hariprasad

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Modi-Tour

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

BK-hariprasad

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.